ಸೀನ : ನನ್ನ ಹೆಂಡತಿಗೆ ಸಂಗೀತದ ಬಗ್ಗೆ ಬಹಳಷ್ಟು ತಿಳಿವಳಿಕೆ ಇದೆ. ಆದರೆ ಹಾಡಲು ಹೋಗುವುದಿಲ್ಲ.

ವೆಂಕ : ಬಹಳ ಪುಣ್ಯ ಮಾಡಿದ್ದೀಯಪ್ಪ ನೀನು. ನನ್ನ ಹೆಂಡತಿಗೆ ಸಂಗೀತದ ಗಂಧಗಾಳಿಯೂ ಗೊತ್ತಿಲ್ಲ. ಆದರೂ ಕರ್ಣಕಠೋರವಾಗಿ ಹಾಡ್ತಾನೇ ಇರ್ತಾಳಪ್ಪ.....!

ಪತಿ ಬಹಳ ಪ್ರೀತಿಯಿಂದ ತನ್ನ ಪತಿಯನ್ನು ರಮಿಸುತ್ತಾ ಹೇಳಿದಳು, ``ಡಿಯರ್‌, ನಾವಿಬ್ಬರೂ ಪ್ರತಿ ಜನ್ಮದಲ್ಲೂ ಹೀಗೇ ಪರಸ್ಪರ ಭೇಟಿಯಾಗುತ್ತಾ ಒಂದಾಗಿ, ಹೀಗೆ ಪ್ರೀತಿ ಮಾಡುತ್ತಿರೋಣ.....''

ಪತಿ ದೀರ್ಘ ನಿಟ್ಟುಸಿರು ಬಿಡುತ್ತಾ, ``ಅದೆಲ್ಲ ಸರಿ ಬಿಡು. ನೀನು ಈ ಜನ್ಮದಲ್ಲಿ ನೀನು ನನ್ನನ್ನು ಬಿಟ್ಟರೆ ತಾನೇ ನಾವು ಮುಂದಿನ ಜನ್ಮದಲ್ಲಿ ಮತ್ತೆ ಭೇಟಿ ಆಗಲು ಸಾಧ್ಯ.....?''

ಗಂಡನ  ಸೂಕ್ಷ್ಮವಾದ ಮಾತುಗಳನ್ನು ಪಳಗಿದ ಹೆಂಡತಿ ಹೇಗೆ ಅರ್ಥ ಮಾಡಿಕೊಳ್ಳುತ್ತಾಳೆ ಎಂಬುದಕ್ಕೆ ಇಲ್ಲಿದೆ ನೋಡಿ ಸ್ಯಾಂಪಲ್ :

ಮಹೇಶ್‌ : ಡಾರ್ಲಿಂಗ್‌.... ಸಂಜೆ ಹೊತ್ತು, ಮಳೆ ಜೋರಾಗಿ ಬರ್ತಿದೆ, ಮತ್ತೆ ವಾತಾವರಣ ಬಹಳ ತಂಪಾಗಿದೆ. ಮತ್ತೆ......

ಸರಳಾ : ಈಗ ಇಲ್ಲದ್ದನ್ನೆಲ್ಲ ಯೋಚಿಸಬೇಡಿ. ಮನೆಯಲ್ಲಿ ಮೊದಲೇ ಕಡಲೆಹಿಟ್ಟಿಲ್ಲ, ಈರುಳ್ಳಿ ಬೆಲೆ ನೋಡಿದ್ರೆ ಗಗನಕ್ಕೇರಿದೆ. ಇವತ್ತು ಕೆಲಸದ ನಿಂಗಿ ಚಕ್ಕರ್‌, ನಾನೇ ರಾಶಿ ಪಾತ್ರೆ ಉಜ್ಬೇಕು!

ಮಹೇಶ : ಸರಿ ಬಿಡು, ಮತ್ತೆ......

ಸರಳಾ : ಗೊತ್ತಾಯ್ತು.... ಗೊತ್ತಾಯ್ತು.... ಮಳೆಯಿಂದ ಚಳಿ ಜಾಸ್ತಿ ಆಗಿದೆ. ಹಾಗೇ ಒಂದು ಗ್ಲಾಸ್‌, ಸ್ವಲ್ಪ ಐಸ್‌ ಹಾಕಿಕೊಂಡು ಅಂತ ತಾನೇ? ಅದೆಲ್ಲ ಕಟ್ಟಿಟ್ಟು ಬಿಡಿ. ಮಕ್ಕಳು ದೊಡ್ಡವರಾದರು, ಈಗ ಟ್ಯೂಷನ್‌ ನಿಂದ ಬರುವ ಹೊತ್ತಾಯ್ತು. ಅವರ ಮುಂದೆ ಈ ಅವತಾರಗಳು ಬೇಡವೇ ಬೇಡ!

ಮಹೇಶ್‌ : ಹೋಗ್ಲಿ ಸ್ವೀಟಿ.... ನೀನೀಗ ಸ್ವಲ್ಪ ಫ್ರೀ ಮಾಡ್ಕೋ....

ಸರಳಾ : ಹೇಳಿದ್ನಲ್ಲ.... ಯಾವುದಕ್ಕೂ ಟೈಂ ಇಲ್ಲ! ನನ್ನ ಕಡೆ ನೋಡ್ಲೇಬೇಡಿ, ಆಗಿನಿಂದ ಒಂದೇ ಸಮ ತಲೆನೋವು, ಬಹಳ ಸುಸ್ತಾಗಿದೆ!

ನೀತಿ : ಪಾಪ, ಶೋಷಿತ ಪತಿ ಬೇರೆಲ್ಲಿಗೆ ಹೋಗಬೇಕು?

ಹೀಗೊಂದು ಬೊಂಬಾಟ್‌ ಗಝಲ್!

ಬಹಳ ದಿನಗಳ ನಂತರ ಗಿರಿಜಾ ತವರುಮನೆಗೆ ಹೋಗಿದ್ದಳು. ಅಡುಗೆ ಬಾರದ ಗಂಡನಿಗೆ ಫೋನಿನಲ್ಲಿ ಹೀಗೆ ಮೆಸೇಜ್‌ಕಳುಹಿಸಿದಳು : `ನನ್ನ ಪ್ರೇಮವನ್ನು ನಿಮ್ಮ ಹೃದಯದಲ್ಲಿ ಹುಡುಕಿಕೊಳ್ಳಿ ಚಪಾತಿಗೆ ಸರಿಯಾಗಿ ಹಿಟ್ಟು ಕಲಸಿಕೊಳ್ಳಿ! ಅಸಲಿ ಪ್ರೇಮ ದೊರೆತಾಗ ಅದನ್ನು ಕಳೆಯಬಾರದು, ಈರುಳ್ಳಿ ಹೆಚ್ಚುವಾಗ ಕಣ್ಣೀರು ಸುರಿಸಬಾರದು!

ಎಂದೋ ಒಮ್ಮೆ ನನ್ನ ಮೇಲೆ ಕೋಪಗೊಂಡ್ರಿ ತಪ್ಪಿಲ್ಲ, ಆಲೂ ಬೇಯದಿದ್ರೆ ಎಂದೂ ಪಲ್ಯ ರುಚಿಸಲ್ಲ!

ಜೊತೆಗೂಡಿ ನಾವು ಸಂತೋಷ ಹಂಚಿಕೊಳ್ಳೋಣ, ಟೊಮೇಟೊ ಮಾತ್ರ ಸಣ್ಣದಾಗಿ ಹೆಚ್ಚಿಕೊಳ್ಳೋಣ!

ಜನ ನಮ್ಮ ಪ್ರೇಮ ಕಂಡು ಅಸೂಯೆ ಪಟ್ಟಾರು, ಅಕ್ಕಿ ಬಹಳ ಬೆಂದು ಮುದ್ದೆ ಆದೀತು, ಹುಷಾರು!

ನನ್ನ ಗಝಲ್ ಹಿಡಿಸಿತೇ.... ನೀವೇ ಹೇಳಿ, ಅಡುಗೇಲಿ ಉಪ್ಪು ಕಡಿಮೆಯಾದ್ರೆ ಅಡ್ಜಸ್ಟ ಮಾಡ್ಕೊಳ್ಳಿ!'

ಗಿರಿಜಾ ಗಂಡ ಉಮಾಪತಿ ಸಾಮಾನ್ಯದವನೇ? ಕಿಲಾಡಿಯಂತೆ ತಾನೂ ಉತ್ತರ ನೀಡಿದ :

`ನಿನ್ನ ಈ ಪ್ರೇಮಾನುರಾಗ ನನ್ನ ಮನ ಮುಟ್ಟಿತು, ಪಕ್ಕದ್ಮನೆ ಪಂಕಜಾ ನೀಡಿದ ಅಡುಗೆ ಕಳೆಗಟ್ಟಿತು!'

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ