ಹಲವಾರು ನಿರ್ದೇಶಕರ ಜತೆ ಕೆಲಸ ಮಾಡಿ ಅನುಭವ ಪಡೆದ ವೇದಗುರು ಅವರು ಇದೇ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿರುವ, ಕೃಷ್ಣ ಅಜೇಯ್ ರಾವ್ ನಾಯಕನಾಗಿ ಅಭಿನಯಿಸಿರುವ ಚಿತ್ರ ‘ರಾಧೇಯ’ ಇದೇ ಶುಕ್ರವಾರ (21-11-25) ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿದೆ.

ಕೀರ್ತಿ ಚಾಹ್ನಾ ಸಿನಿಮಾ ಕಾರ್ಖಾನೆ ಮೂಲಕ ವೇದ್ ಗುರು ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಕೃಷ್ಣ ಅಜೇಯ್ ರಾವ್ ಹಾಗೂ ಸೋನಾಲ್ ಮಂತೆರೋ ಚಿತ್ರದ ನಾಯಕ -ನಾಯಕಿಯಾಗಿ ಅಭಿನಯಿಸಿದ್ದಾರೆ.

ಮಹಾಭಾರತದ ಕರ್ಣನ ಇನ್ನೊಂದು ಹೆಸರು ‘ರಾಧೇಯ’. ಕರ್ಣನ ಸಾಕು ತಾಯಿ ರಾಧಾ ಆಗಿದ್ದರಿಂದ, ಕರ್ಣನಿಗೆ ರಾಧೇಯ ಎಂದೂ ಕರೆಯುತ್ತಾರೆ. ಕರ್ಣನಲ್ಲಿದ್ದ ತ್ಯಾಗದ ಗುಣ ನಾಯಕನಿಗಿರೋದ್ರಿಂದ ಚಿತ್ರಕ್ಕೆ ಆ ಹೆಸರನ್ನಿಡಲಾಗಿದೆ.
ಇದೊಂದು ಲವ್ ಜಾನರ್ ಚಿತ್ರವಾದರೂ ಬೇರೆಯದೇ ರೀತಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.

ನಾಯಕ ರಾಧೇಯ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ. ಅದಕ್ಕಾಗಿ ಆತ ಏನೆಲ್ಲಾ ಅಡ್ಡಿ, ಆತಂಕಗಳನ್ನು ಎದುರಿಸಿ ಗೆದ್ದು ಬರುತ್ತಾನೆ ಎಂಬುದನ್ನು ಲವ್ ಸ್ಟೋರಿಯೊಂದಿಗೆ ನಿರ್ದೇಶಕರು ಹೇಳಿದ್ದಾರೆ. ಜೈಲಿನಲ್ಲಿರುವ ವ್ಯಕ್ತಿಯೊಬ್ಬನ ಕ್ಯಾರೆಕ್ಟರ್ ಸುತ್ತ ಈ ಚಿತ್ರದ ಕಥೆ ಸಾಗಲಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ.
ಸೋನಾಲ್ ಮಾಂಟೆರೋ ಅವರು ಲೋಕಲ್ ಚಾನೆಲ್ ನ ಕ್ರೈಮ್ ರಿಪೋರ್ಟರ್ ಆಗಿ ನಟಿಸಿದ್ದಾರೆ.

ಈ ಚಿತ್ರಕ್ಕೆ ವಿಯಾನ್ (ಸ್ಯಾಂಡಿ) ಅವರ ಸಂಗೀತ ಸಂಯೋಜನೆ, ರಮ್ಮಿ ಅವರ ಛಾಯಾಗ್ರಹಣ, ಸುರೇಶ್ ಆರ್ಮುಗಂ ಅವರ ಸಂಕಲನವಿದೆ. ಫಾರೆಸ್ಟ್ ನಿರ್ಮಾಪಕ ಕಾಂತರಾಜು ಅವರು ಚಿತ್ರವನ್ನು ರಿಲೀಸ್ ಮಾಡುತ್ತಿದ್ದ





