ಖುಷಿಯ ರಂಗು : ನಮ್ಮಲ್ಲಿ ಈ ವರ್ಷದ ಹೋಳಿ ಬಣ್ಣದ ಎರಚಾಟದ ಸಡಗರ ಮುಗಿಯಿತು. ಆದರೆ ವಿಶ್ವದ ಎಷ್ಟೋ ದೇಶಗಳಲ್ಲಿ ಹೋಳಿಯಂಥ ಬಣ್ಣದ ಎರಚಾಟದ ಸಂಭ್ರಮ ಇನ್ನೂ ನಡೆಯುತ್ತಲೇ ಇದೆ. ಅದರಲ್ಲೂ ಥೈಲೆಂಡ್‌ ನ ನ್ಯೂ ಇಯರ್‌ ಡೇ ಏಪ್ರಿಲ್ ‌ನಲ್ಲಿ (ನಮ್ಮ ಯುಗಾದಿ ಸಂದರ್ಭ!) ನಡೆಯಿತು. ಆ ದೇಶಾದ್ಯಂತ ಪ್ರತಿ ಅಂಗಡಿ ಮುಂಗಟ್ಟಿನ ಎದುರು ಡ್ಯಾನ್ಸ್, ಮ್ಯೂಸಿಕ್‌ ಅಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತು. ಇದರಿಂದ ಗ್ರಾಹಕರು ಸಿಕ್ಕಾಪಟ್ಟೆ ಹುಚ್ಚೆದ್ದು ತಾವು ಜೊತೆಗೆ ಕೈಗೂಡಿಸುವರು. ಈ ಹಬ್ಬ ಯಾವುದೇ ಧಾರ್ಮಿಕ ಬಂಧನಕ್ಕೆ ಒಳಪಟ್ಟಿಲ್ಲ. ಇದು ಸಾಮೂಹಿಕವಾಗಿ ಸಂತಸ, ಖುಷಿ ಹಂಚಿಕೊಳ್ಳು ಸಂದರ್ಭ. ವಿಡಂಬನೆ ಎಂದರೆ ನಮ್ಮಲ್ಲಿ ವೋಟ್‌ ಬ್ಯಾಂಕಿಂಗ್‌ ಗೋಸ್ಕರ ಇದರ ರಾಜಕಾರಣ ಪ್ರಬಲವಾಗಿದೆ.

isa-guti-rrez-3

ಪ್ರತಿಭೆ ಮುಖ್ಯವೋ ಕಂದಾಚಾರವೋ? : ಅಮೆರಿಕಾದ ವೈಶಿಷ್ಟ್ಯ ಇರುವುದೇ, ಅದು ವಿಶ್ವದ ಯಾವುದೇ ಮೂಲೆಯಲ್ಲಿನ ಪ್ರತಿಭೆಯನ್ನು ಗುರುತಿಸಿ ತನ್ನ ತೋಳ್ತೆಕ್ಕೆಗೆ ಎಳೆದುಕೊಳ್ಳುತ್ತದೆ. ಈಗ ಈ ಚಿತ್ರದಲ್ಲಿನ ತರುಣಿ ಗುಟರೇಜ್‌ ಳ ಕೇಸ್‌ ನೋಡಿ, ದ. ಅಮೆರಿಕಾದ ಕೊಲಂಬಿಯಾ ಅರ್ಜೆಂಟೈನಾ ಮೂಲದ ಈಕೆ, ನಟನೆ ಕಲಿಯಲೆಂದು ಅಮೆರಿಕಾದ ವಾಶಿಂಗ್‌ ಟನ್‌ ಗೆ ಬಂದಿಳಿದಳು. ಇದೀಗ ಆಕೆಗೆ ಹಾಲಿವುಡ್‌ ನಲ್ಲಿ ಉತ್ತಮ ಅವಕಾಶ ಸಿಗುತ್ತಿದೆ. ಈಕೆಯ `ಟ್ರೂ ಲವ್’ ಚಿತ್ರ ರಿಲೀಸ್‌ ಆಗಿದೆ, ನಿಧಾನವಾಗಿ ವಿಶ್ವದೆಲ್ಲೆಡೆ ಹರಡಿಕೊಂಡಿದೆ. ಇದಾದ ನಂತರ `ರಾಂಗ್‌ ಹೋಲ್‌’ OTT ಸರಣಿಯಲ್ಲೂ ಮಿಂಚುತ್ತಿದ್ದಾಳೆ. ಇದರ 12 ಕಂತು ಈಗಾಗಲೇ ಪ್ರಸಾರಗೊಂಡಿದೆ. ನಮ್ಮಲ್ಲಂತೂ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಯಾವುದೇ ಇನ್ನೂ ಸ್ವಾಗತಿಸುವುದಿಲ್ಲ. 1983ರ `ಗಾಂಧಿ’ ಚಿತ್ರದಲ್ಲಿ ನಟಿಸಿದ್ದ ಬೆನ್‌ ಕಿಂಗ್‌ ಸ್ಲೇಗೂ ಬಾಲಿವುಡ್‌ ನಲ್ಲಿ ಅವಕಾಶ ಸಿಗುವುದಿಲ್ಲ, ಆದರೆ ಆತ ನಮ್ಮ ರಾಷ್ಟ್ರಪಿತನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದರು. ಕಂದಾಚಾರ ನಮ್ಮವರ ರಕ್ತದಲ್ಲಿ ಭಲೇ ಕರಗತ!

henson-headshot

ಕೆಲಸದಲ್ಲಿ ದಮ್ ಅಂದ್ರೆ ಹೀಗಿರಬೇಕು : ನಮ್ಮಲ್ಲಿ ಇಲ್ಲಿ ಅನಗತ್ಯ ಸಾಮಗ್ರಿಗಳನ್ನು ಕೊಳ್ಳಲು ರದ್ದಿಯನ್ನು ತಾನಾಗಿ ಮನೆಮನೆಗೆ ಬಂದು ಒಂದಿಷ್ಟು ದುಡ್ಡು ಕೊಟ್ಟು ಎಲ್ಲವನ್ನೂ ಕೊಂಡುಹೋಗುವಂತೆ, ಅಮೆರಿಕಾದಲ್ಲಿ ಅವರವರ ಮನೆಯ ಇಂಥ ಕಸ (ಜಂಕ್‌)ನ್ನು ಹೊರಗೆಸೆಯಲು, ತಾವೇ ದುಡ್ಡು ಕೊಡಬೇಕು! ಕೆಲವರಂತೂ ಈ ಕೆಲಸದಲ್ಲಿ ಎಕ್ಸ್ ಪರ್ಟ್ಸ್ ಎನಿಸುತ್ತಾರೆ. ಉದಾ : ಕಾಲೇಜ್‌ ಹಂಕ್ಸ್ ಕಂಪನಿಯ ಫ್ರಾಂಚೈಸಿ ಪಡೆದ ಈ ಆರೇನ್‌ ಕುಟುಂಬವನ್ನೇ ಗಮನಿಸಿ. ಈ ಜನ ಜಂಕ್‌ ನ್ನು ನೀಟಾಗಿ ಪ್ಯಾಕ್‌ ಮಾಡಿ ಹೊರಗೆ ಸಾಗಿಸುತ್ತಾರೆ, ಆ ಮನೆ/ಕಂಪನಿ ನೀಟಾಗಿ ಕಂಗೊಳಿಸುವಂತೆ ಮಾಡಿ ಹೋಗುತ್ತಾರೆ! ಅಮೆರಿಕಾದಲ್ಲಿ ತಮ್ಮ ಮನೆಯ ಸಾಮಗ್ರಿಗಳನ್ನು ಹೊರಗೆಸೆದರೆ, ಅದನ್ನು ಎತ್ತಿಕೊಳ್ಳುವವರು ಒಬ್ಬರಾದರೂ ಇದ್ದರೆ ಕೇಳಿ! ಬದಲಿಗೆ ಎಸೆದರ ಮನೆಗೆ ತಕ್ಷಣ ಸರ್ಕಾರಿ ದಂಡ ಬೀಳುತ್ತದೆ. ನಮ್ಮ ದೇಶದಲ್ಲೂ ದಿನೇದಿನೇ ಜಂಕ್‌ ಬಿಸಾಡುವಿಕೆ ಎಷ್ಟು ಹೆಚ್ಚಿದೆ ಎಂದರೆ, ಅದಕ್ಕೆ ದಂಡ ಕಟ್ಟಬೇಕಾದೀತು. ದೆಹಲಿಯಲ್ಲೂ ನೀವು 15 ವರ್ಷಗಳ ಹಳೆ ಗಾಡಿಯನ್ನು ಬೇಕೆಂದೇ ಬಳಸದೆ ಮನೆ ಮುಂದಿಟ್ಟಿದ್ದರೆ, ಅದಕ್ಕೆ ಫೈನ್‌ ಕಟ್ಟಲೇಬೇಕು.

memorabilia

ಧಂಧೆ ಎಂದಿದ್ದರೂ ಧಂಧೆಯೇ  : ಸ್ಪೋರ್ಟ್ಸ್ ಇವೆಂಟ್ಸ್ ಕುರಿತು ಜನರಲ್ಲಿ ದಟ್ಟವಾದ ಹುಚ್ಚುತನ ಎಷ್ಟು ಹೆಚ್ಚಿದೆ ಎಂದರೆ, ಧರ್ಮದ ಪಿತ್ತ ನೆತ್ತಿಗೇರಿದಂತೆಯೇ! ಕ್ರೀಡಾಪಟು ಅಥವಾ ಆಯಾ ಕ್ರೀಡೆಗೆ ಸಂಬಂಧಿಸಿದ ಸಾಮಗ್ರಿ ಸಂಗ್ರಹಿಸಿ, ಅದನ್ನು ಅಲ್ಲಿ ಇಲ್ಲಿ ತುಸು ರಿಪೇರಿ ಮಾಡಿ, ಮಾರಾಟ ಅಥವಾ ಲಿಲಾವು ಮಾಡುವ ಧಂಧೆ ಬಲು ಜೋರಾಗಿದೆ. ಇಸ್ತಾಂಬುಲ್ ನಲ್ಲಿ ಇಸ್ಲಾಮಿ ಪ್ರವರ್ತಕರ ವಸ್ತುಗಳ ದೊಡ್ಡ ಸಂಗ್ರಹಾಲಯ ಹಾಗೂ ಕಾಶ್ಮೀರದಲ್ಲಿ ಹಝರತ್‌ ಬಲ್ ಇರುವಂತೆ, ವಿದೇಶಗಳಲ್ಲಿ ಫುಟ್‌ ಬಾಲ್ ‌ಹುಚ್ಚು ಅತಿ ಹೆಚ್ಚು. ಫುಟ್‌ ಬಾಲಿಗರ ಕೋಟ್‌ ಜೆರ್ಸಿ, ಟೆನಿಸ್‌ ಪ್ಲೇಯರ್‌ ನ ಚಡ್ಡಿ, ಕ್ರಿಕೆಟರ್‌ ನ ಕೊಳಕು ಕರ್ಚೀಫ್‌…. ಇತ್ಯಾದಿ ಸಂಗ್ರಹಿಸಿ ಲಿಲಾವಿಗೆ ಬಿಡುತ್ತಾರೆ. ಅಮೆರಿಕಾದ 999 ಕ್ಲಾಕ್ಟಿಬಲ್ ಎಂಬ ಕಂಪನಿ, ಇಂಥವನ್ನು ರಾಶಿ ರಾಶಿ ಸಂಗ್ರಹಿಸಿ ಮಾರಾಟ, ಹರಾಜು ಮಾಡುತ್ತವೆ. ಅಲ್ಲಿನ ಗ್ಲಾಮರಸ್‌ ಡ್ಯಾನ್ಸರ್‌ ಗಳ ಸ್ಯಾನಿಟರಿ ಪ್ಯಾಡ್‌, ಟ್ಯಾಂಪೂನ್‌ ಗಳಿಗೂ ಹೀಗೇ ಹೆಚ್ಚಿನ ಬೇಡಿಕೆಯಂತೆ… ಅಲ್ಲಿನ ಸಮಾಜಕ್ಕೆ ಒಂದು ಎರಡಕ್ಕೆ ಸಂಬಂಧಿಸಿದ ವಸ್ತುಗಳು ಎಂದೂ ಅಸಹ್ಯಕರಲ್ಲ.

priyal-doshi-couture

ಹಣದ ಜೊತೆಗೆ ಹೆಸರೂ ಕೂಡಿದಾಗ : ಭಾರತೀಯ ಮೂಲದ ಪ್ರಿಯಾ ಜೋಶಿ ಇದೀಗ ನ್ಯೂಯಾರ್ಕ್‌ ನಲ್ಲಿ ಲೆವ್ ‌ಸೆಟ್ಡೀ ಇರಬಹುದು, ಆಕೆಯ ಫ್ಯಾಷನ್‌ ಡಿಸೈನಿಂಗ್‌ ಕಲೆಕ್ಷನ್‌ ವಿಶ್ವದೆಲ್ಲೆಡೆ ಗುರುತಿಸಲ್ಪಡುತ್ತಿದೆ! ಈಕೆ ಈ ಸಲದ ಅಂತಾರಾಷ್ಟ್ರೀಯ ಮಟ್ಟದ `ಮಿಲಾನ್‌ ಫ್ಯಾಷನ್‌ ವೀಕ್‌’ನಲ್ಲೂ ಮಿಂಚಿದ್ದೇ ಮಿಂಚಿದ್ದು! ಪ್ರಿಯಾ ಜೋಶಿ ದೇಶಿ ಲೆಹಂಗಾ ಡಿಸೈನ್ಸ್ ಮಾತ್ರವಲ್ಲದೆ, ವಿದೇಶೀಯ ಯೂರೋಪಿಯನ್‌ ಡ್ರೆಸೆಸ್‌ ನಲ್ಲೂ ಭಾರಿ ಹೆಸರು ಮಾಡುತ್ತಿದ್ದಾಳೆ, ಇಲ್ಲಿಂದ ಆಕೆಗೆ ಅಂತಾರಾಷ್ಟ್ರೀಯ ಬೇಡಿಕೆ ಹೆಚ್ಚಿತು. ನಮ್ಮಲ್ಲಿ ಭಾರತೀಯ ಡಿಸೈನರ್ಸ್‌ ಲೆಹಂಗಾಗಳಿಂದ ಧಾರಾಳ ದುಡ್ಡು ಮಾಡುತ್ತಿದ್ದು, ವೆಸ್ಟರ್ನ್‌ ಡಿೖಸನ್ಸ್ ಬಗ್ಗೆ ಚಿಂತಿಸುವುದಿಲ್ಲ.

patricia-vega-(1)

ಯಾರ ವಿರುದ್ಧ ಹೋರಾಡುವುದು….? : ವಿಶ್ವದೆಲ್ಲೆಡೆಯ ಟೀನೇಜರ್‌ ಪೇರೆಂಟ್ಸ್ ಮಕ್ಕಳ ಬಗ್ಗೆ ಸದಾ ಟೆನ್ಶನ್‌ ಹೊಂದಿರುತ್ತಾರೆ. ಏಕೆಂದರೆ ಇದು ಪೀಳಿಗೆಯ ಅಂತರದ (ಜನರೇಶನ್‌ ಗ್ಯಾಪ್‌) ಸಮಸ್ಯೆ. ಪಿಟ್ರಿಷಿಯಾ ವೇಗಾ ಎಂಬಾಕೆ ತನ್ನ ಹೊಸ `ಕನೆಕ್ಷನ್‌ ಬೈ ಡಿಸೈನ್‌’ ಪುಸ್ತಕದಲ್ಲಿ ಅತಿ ವಿವರವಾಗಿ, ಯುವ ಪೀಳಿಗೆಗೆ ಕಿವಿಮಾತು ಹೇಳಿದ್ದಾರೆ. ಈ ವಿಷಯದ ಕುರಿತಾಗಿ ಬರೆಯದವರೇ ಇಲ್ಲ. ಬಾಲ್ಯದಿಂದ ಮೊಬೈಲ್ ‌ನ ಗುಲಾಮರಾದ ಮಕ್ಕಳು ಟೀನೇಜ್‌ ಗೆ ಬಂದಾಗ ಅದರಿಂದ ದೂರವಾಗುತ್ತಿಯೇ? ಆಯಾ ಮೊಬೈಲ್‌ ಕಂಪನಿಗಳು ತಮ್ಮ ಲಾಭಕ್ಕಾಗಿ ಮಕ್ಕಳ ಭವಿಷ್ಯ ಮಸುಕಾಗಿಸಿವೆ. ಹೀಗಿರುವಾಗ ಇಂಥ ಘಟಾನುಘಟಿ ಲೇಖಕಿಯರು ಏನು ಬರೆದರೆ ತಾನೇ ಏನಂತೆ? ಏನಾದರೂ ಹೋರಾಡಬೇಕಿದ್ದರೆ ಇಂಥ ಮೊಬೈಲ್ ಟೆಕ್‌ ಕಂಪನಿಗಳ ವಿರುದ್ಧ ಹೋರಾಡಬೇಕು. ಆದರೆ ಮಸೀದಿ, ಮಂದಿರ, ಚರ್ಚುಗಳೇ ಇದರ ಕಪಿಮುಷ್ಟಿಗೆ ಸಿಲುಕಿರುವಾಗ ಸಾಧಾರಣ ತಾಯಿ ತಂದೆ ಏನು ತಾನೇ ಮಾಡಲು ಸಾಧ್ಯ?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ