ಸರಸ್ವತಿ*

ಸ್ಯಾಂಡಲ್ ವುಡ್ ಕಂಡಂಥ ಅಪರೂಪದ ಮೋಹಕ ತಾರೆ ರಮ್ಯಾ.. ಉಳಿದೆಲ್ಲ ನಾಯಕಿಯರಿಗಿಂತ ಡಿಫರೆಂಟ್.‌ ಸಿನಿಮಾ ರಂಗ ಈ ನಟಿಯನ್ನು ಆರಿಸಿಕೊಂಡಿತೇ ವಿನಹ ನಟಿಯಾಗಬೇಕೆಂದು ಆಸೆ ಪಟ್ಟು ಹೋದವರಲ್ಲ.

ನೇರಮಾತಿನ ಹುಡುಗಿಯಾಗಿ ಮಿಂಚಿದ ರಮ್ಯಾ ಮೊದಲ ಸಿನಿಮಾನೇ ರಾಜ್ ಕುಮಾರ್ ಅವರ ಬ್ಯಾನರಿನಿಂದ ಪರಿಚಿತಳಾದಳು..ಲಕ್ಕಿ ಸ್ಟಾರ್ ಎನಿಸಿಕೊಂಡಳು.. ಕಥೆಗೆ,ತಾನು ಮಾಡಬೇಕಿರುವ ಪಾತ್ರದ ಬಗ್ಗೆ ಹೆಚ್ಚಿನ ಗಮನ ಕೊಡುತ್ತಾ ಒಳ್ಳೊಳ್ಳೆ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡ ರಮ್ಯಾ ಅಮೃತ ಧಾರೆ ಚಿತ್ರದ ಮೂಲಕ ನಾಯಕಿ ಪ್ರಧಾನ ಚಿತ್ರಗಳಿಗೆ ಫಿಕ್ಸ್ ಆದಳು. ಕನ್ನಡದ ಎಲ್ಲಾ ಹೀರೋಗಳ ಜೊತೆ ನಟಿಸಿದರೂ ತಾನು ಮಾಡಬೇಕಿರುವ ಪಾತ್ರದ ಬಗ್ಗೆ ಹೆಚ್ಚು ಗಮನ ಕೊಡುತ್ತಾ ಬಂದಳು. ಅಭಿ ಚಿತ್ರದಿಂದ ಶುರುವಾದ ತಾರಾ ವೃತ್ತಿ ಎಕ್ಸ್ ಕ್ಯೂಸ್ಮಿ, ಜೊತೆ ಜೊತೆಯಲಿ,ಅರಸು, ಗೌರಮ್ಮ,ರಂಗ ಎಸ್ ಎಸ್ ಎಲ್ ಸಿ, ಸಂಜು ವೆಡ್ಸ್ ಗೀತಾ,

ಜಸ್ಟ್ ಮಾತ್ ಮಾತಲ್ಲಿ, ಆರ್ಯನ್, ಮುಂತಾದ ಚಿತ್ರಗಳು ಲಿಸ್ಟ್ ಗೆ ಸೇರಿದವು. ರಾಜಕೀಯ ಪ್ರವೇಶ ಅಲ್ಲಿಯೂ ಗೆಲುವು ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದಳು..

ಒಂದಷ್ಟು ದಿನ ಬಣ್ಣದ ಲೋಕದಿಂದ ದೂರ ಸರಿದಿದ್ದ ರಮ್ಯಾ ಮತ್ತೆ ಲೈಮ್ ಲೈಟಿಗೆ ಬಂದು ಸಖತ್ ಮಿಂಚುತ್ತಿದ್ದಾಳೆ..ಈ ತಾರೆ ಯಾವಾಗ ಬಣ್ಣ ಹಚ್ಚುತ್ರಾರೋ.. ಸಿನಿಮಾದಲ್ಲಿ ನಟಿಸುತ್ತಾರೋ ಎಂದು ಆಕೆಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದೇ ನವೆಂಬರ್ 29ರಂದು ರಮ್ಯಾ ಬರ್ತ್ಡೇ. ಗುಡ್ ನ್ಯೂಸ್ ಬರಬಹುದೇ.

ಹ್ಯಾಪಿ ಬರ್ತ್ ಡೇ ರಮ್ಯಾ*

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ