ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್, ಕನ್ನಡಿಗರ ಫೇವರಿಟ್ ಬುಲ್ ಬುಲ್, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟ ಟಾಪ್ ಹೀರೋಯಿನ್ ರಚಿತಾ ರಾಮ್, ಕನ್ನಡ ಚಿತ್ರರಂಗದ ಸ್ಟಾರ್ ನಟರೆಲ್ಲರ ಜೊತೆ ನಟಿಸಿ ಸೈ ಎನಿಸಿಕೊಂಡ ರಚ್ಚು, ಸ್ಟೈಲ್ ಕೊಟ್ರೆ ಸಾಕು ಫ್ಯಾನ್ಸ್ ಗೆ ಅದೇ ಸ್ವರ್ಗ. ಹೈಟ್ ಸ್ವಲ್ಪ ಕಡಿಮೆ ಆದ್ರೂ ಕೂಡ ಈ ಅಟ್ರಾಕ್ಟಿವ್ ಕಣ್ಣೋಟಕ್ಕೆ ಬಿದ್ದು ಹೋಗದವರೇ ಇಲ್ಲ. ಅದೆಂಥದ್ದೇ ಪಾತ್ರ ಕೊಟ್ಟರೂ ಪರಕಾಯ ಪ್ರವೇಶ ಮಾಡೋ ಈ ಗುಳಿ ಕೆನ್ನೆಯ ಚೆಲುವೆ ಈಗಂತೂ ಸಿಕ್ಕಾಪಟ್ಟೆ ಬ್ಯುಸಿ. ಹೀಗಾಗೇ ಅದೆಷ್ಟೋ ಜನ ಲವ್ ಯು ರಚ್ಚು ಅಂತಾ ಹೇಳಿದ್ರೂ, `ನೋ ಲವ್.... ನೋ ಮ್ಯಾರೇಜ್' ಅಂತ ಸಿಂಗಲ್ ಆಗೇ ಹ್ಯಾಪಿ ಆಗಿದ್ದಾರೆ. ಸದ್ಯಕ್ಕೀಗ `ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮೀ ಆರ್ ಹೇಟ್ ಮೀ, ಅಯೋಗ್ಯ-2, ಸಂಜು ವೆಡ್ಸ್ ಗೀತಾ-2, ಕಲ್ಟ್, ರಾಚಯ್ಯ ಹಾಗೂ ಕೂಲಿ' ಸಿನಿಮಾಗಳಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ.
ತುಪ್ಪದ ಬೆಡಗಿ ರಾಗಿಣಿ ಈಗ ವ್ಯಾಂಪಾ?
ಕನ್ನಡ ಚಿತ್ರರಂಗದ ಹಾಟ್ ಬ್ಯೂಟಿ ರಾಗಿಣಿ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ತಮ್ಮ ಬೋಲ್ಡ್ ಅವತಾರದಿಂದಲೇ ಸ್ಯಾಂಡಲ್ ವುಡ್ ನಲ್ಲಿ ರಾಗಿಣಿಗೆ ಸಖತ್ ಡಿಮ್ಯಾಂಡ್ ಶುರುವಾಗಿದೆ. ಇತ್ತೀಚೆಗಂತೂ ರೆಡ್ ಗೌನ್, ಹಾಫ್ ಟಾಪ್ ಬಾಟಮ್ ಜೀನ್ಸ್ ಮತ್ತು ಬ್ಲ್ಯಾಕ್ ಡ್ರೆಸ್ ನಲ್ಲಿ ತಮ್ಮ ಡಿಫರೆಂಟ್‌ಫೋಟೋ ಶೂಟ್ ನಿಂದೀ ಪಡ್ಡೆ ಹೈಕಳ ಮೈ ಬಿಸಿ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನ `ತುಪ್ಪದ ಬೆಡಗಿ' ಅಂತಾನೇ ಕರೆಸಿಕೊಳ್ಳೋ ನಟಿ ರಾಗಿಣಿ ಸದ್ಯ ಕನ್ನಡ ಹಾಗೂ ಪರಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 2009ರಲ್ಲಿ `ವೀರ ಮದಕರಿ' ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟು ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ರಿಲೀಸ್ ಆಗಲಿರುವ `ಸಂಜು ವೆಡ್ಸ್ ಗೀತಾ-2' ನಲ್ಲಿ ನಟ ಶ್ರೀನಗರ ಕಿಟ್ಟಿಗೆ ವ್ಯಾಂಪ್ ಆಗಿ ಕಾಣಿಸಿಕೊಂಡಿದ್ದಾರೆ.

ಕನ್ನಡದಿಂದ ತೆಲುಗಿಗೆ ಹಾರಿದ ಶ್ರೀಲೀಲಾ
ಕನ್ನಡದ `ಕಿಸ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಯುವನಟಿ ಶ್ರೀಲೀಲಾ ಸದ್ಯ ಬಹುಬೇಡಿಕೆಯ ನಟಿ. `ಕಿಸ್' ಜೊತೆ ನಟ ಶ್ರೀಮುರಳಿಯ `ಭರಾಟೆ' ಮತ್ತು `ಬೈಟು ಲವ್' ಚಿತ್ರಗಳಲ್ಲಿ ನಟಿಸಿದ ಬಳಿಕ ಶ್ರೀಲೀಲಾ ಅಬ್ಬರಿಸಿದ್ದು, ಮಿಂಚಿದ್ದು ತೆಲುಗು ಚಿತ್ರರಂಗದಲ್ಲಿ. ಮಾಸ್ ರಾಜ ರವಿತೇಜ ಜೊತೆ `ಧಮಾಕಾ' ಮಾಡಿದ ಈ ಸುಂದರಿಯ ನಟನೆಗೆ ಹಾಗೂ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗೋಗಿದ್ದಾರೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ `ಗುಂಟೂರು ಕಾರಂ' ಚಿತ್ರದ ಹಾಡಿನಲ್ಲಿ ಮೈಚಳಿ ಬಿಟ್ಟು ಕುಣಿದಿದ್ದೇ ತಡ, ಬ್ಯಾಕ್ ಟು ಬ್ಯಾಕ್ ಅಂಥದ್ದೇ ಆಫರ್ ಗಳು ಬಂದವು. ಇದೀಗ ನಟ ಅಲ್ಲು ಅರ್ಜುನ್ ನಟನೆಯ `ಪುಷ್ಪ-2' ಚಿತ್ರದ ಕಿಸ್ಸಿಕ್ ವಿಶೇಷ ಹಾಡಿನ ಅಬ್ಬರದಿಂದ ಟಾಲಿವುಡ್ ನಲ್ಲಿ ಶ್ರೀಲೀಲಾಳ ಹಾವಾ ಜೋರಾಗಿದೆ. ಬೆಂಗಳೂರಿನಲ್ಲೇ ಎಂಬಿಬಿಎಸ್ ಮಾಡಲು ಸಣ್ಣ ಗ್ಯಾಪ್ ತೆಗೆದುಕೊಂಡ ಬಳಿಕ ಸಖತ್ ಸ್ಪೀಡ್ ನಲ್ಲಿದ್ದಾರೆ. ಇದೀಗ ನಟ ನಾಗಚೈತನ್ಯರ ಮಾಸ್ ಸಿನಿಮಾಗೆ ನಾಯಕಿ ಆಗಿದ್ದು, ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕುತ್ತಿದ್ದಾರೆ. ಮಾದಕತೆಯ ಕಣ್ಣುಗಳು, ಮುಗ್ಧತೆಯ ನಗುವಿನಿಂದಲೇ ಅಟ್ರ್ಯಾಕ್ಟ್ ಮಾಡ್ತಿರೋ ಶ್ರೀಲೀಲಾ ಸೌತ್ ಇಂಡಿಯಾದ ನಂಬರ್ ಒನ್ ನಟಿ ಆಗಿದ್ದಾರೆ.





