ಭಾರತದ ಮಹಿಳಾ ಕ್ರಿಕೆಟ್ ತಂಡದ ತಾರೆ ಜೆಮಿಮಾ ರೊಡ್ರಿಗಸ್ ಅವರನ್ನು ಮಹಿಳಾ ಪ್ರೀಮಿಯರ್ ಲೀಗ್ (WPL) 2026 ಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್‌ (DC) ತಂಡದ ಹೊಸ ನಾಯಕಿಯನ್ನಾಗಿ ನೇಮಿಸಲು ಸಜ್ಜಾಗಿದ್ದಾರೆ.

WPL 2026ರ ಹರಾಜಿಗೂ ಮುನ್ನ ಫ್ರಾಂಚೈಸಿ ಈ ಬ್ಯಾಟ್ಸ್‌ಮನ್‌ರನ್ನು 2.2 ಕೋಟಿ ರೂ.ಗೆ ಉಳಿಸಿಕೊಂಡಿದೆ. ನಾಲ್ಕನೇ ಆವೃತ್ತಿಯ ಪಂದ್ಯಾವಳಿ ಜನವರಿ 8 ರಿಂದ ಪ್ರಾರಂಭವಾಗಲಿದೆ.

ಈ ವರ್ಷದ ಆರಂಭದಲ್ಲಿ ಮೆಗಾ ಹರಾಜಿಗೆ ಮುಂಚಿತವಾಗಿ ಬಿಡುಗಡೆಯಾದ ಮೆಗ್ ಲ್ಯಾನಿಂಗ್ ಅವರಿಂದ ರೊಡ್ರಿಗಸ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಡಿಸಿ ಇಲ್ಲಿಯವರೆಗೆ ಮೂರು ಬಾರಿಯೂ ರನ್ನರ್-ಅಪ್ ಆಗಿದ್ದು, ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ವಿಫಲವಾಗಿದೆ ಎಂದು ಕ್ರಿಕ್​ಬಜ್​ ತಿಳಿಸಿದೆ.

‘ನಮಗೆ ಭಾರತೀಯ ನಾಯಕಿ ಬೇಕು ಎಂಬುದು ಸ್ಪಷ್ಟ. ನಾವು ಈಗಾಗಲೇ ನಿರ್ಧರಿಸಿದ್ದೇವೆ’ ಎಂದು ಡಿಸಿ ಸಹ-ಮಾಲೀಕರಾದ ಪಾರ್ಥ ಜಿಂದಾಲ್ ಅವರು ಡಬ್ಲ್ಯುಪಿಎಲ್ 2026ರ ಹರಾಜಿನ ನಂತರ ಹೇಳಿದ್ದರು.

ಇಲ್ಲಿಯವರೆಗೆ, ಜೆಮಿಮಾ 27 ಡಬ್ಲ್ಯುಪಿಎಲ್ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಅವರು 28.16ರ ಸರಾಸರಿಯಲ್ಲಿ 507 ರನ್ ಗಳಿಸಿದ್ದಾರೆ. 2025ರ ಏಕದಿನ ವಿಶ್ವಕಪ್‌ನಲ್ಲಿ ಅವರ ವಿರೋಚಿತ ಪ್ರದರ್ಶನವು ಭಾರತವು ಟ್ರೋಫಿಯನ್ನು ಎತ್ತುವಲ್ಲಿ ಸಹಾಯ ಮಾಡಿತು.

ಡಿಸಿ ರಿಟೆನ್ಷನ್ ಮಾಡಿಕೊಂಡವರ ಪಟ್ಟಿ

ಜೆಮಿಮಾ ರೋಡ್ರಿಗಸ್ – ₹2.22 ಕೋಟಿ

ಶೆಫಾಲಿ ವರ್ಮಾ – ₹2.22 ಕೋಟಿ

ಅನ್ನಾಬೆಲ್ ಸುತರ್‌ಲ್ಯಾಂಡ್ – ₹2.22 ಕೋಟಿ

ಮಾರಿಜಾನ್ ಕಾಪ್ – ₹2.22 ಕೋಟಿ

ನಿಕ್ಕಿ ಪ್ರಸಾದ್ – ₹50 ಲಕ್ಷ

ಡಬ್ಲ್ಯುಪಿಎಲ್ 2026ಕ್ಕೆ ಡಿಸಿ ತಂಡ : ಜೆಮಿಮಾ ರೋಡ್ರಿಗಸ್, ಶೆಫಾಲಿ ವರ್ಮಾ, ಅನ್ನಾಬೆಲ್ ಸುತರ್‌ಲ್ಯಾಂಡ್, ಮಾರಿಜಾನ್ ಕಾಪ್, ನಿಕ್ಕಿ ಪ್ರಸಾದ್, ಲಾರಾ ನೋಲ್ವಾರ್ಟ್, ಚಿನೆಲ್ಲೆ ಹೆನ್ರಿ, ಶ್ರೀ ಚರಣಿ, ಸ್ನೇಹಾ ರಾಣಾ, ಲಿಜೆಲ್ ಲೀ (ವಿಕೆಟ್ ಕೀಪರ್), ದಿಯಾ ಯಾದವ್, ತನಿಯಾ ಭಾಟಿಯಾ (ವಿಕೆಟ್ ಕೀಪರ್), ಮಮತಾ ಮಡಿವಾಳ (ವಿಕೆಟ್ ಕೀಪರ್), ನಂದಿನಿ ಶರ್ಮಾ, ಲೂಸಿ ಹ್ಯಾಮಿಲ್ಟನ್, ಮಿನ್ನುಮಣಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ