ಶಿರಾ-ಹಿರಿಯೂರು ರಾಷ್ಟ್ರೀಯ ಹೆದ್ದಾರಿ ಅಪಘಾತ ಪ್ರಕರಣದಲ್ಲಿ ಬೆಂಗಳೂರಿನಿಂದ ದಾಂಡೇಲಿಗೆ ಪ್ರವಾಸ ಹೊರಟ್ಟಿದ್ದ 40 ಶಾಲಾ ಮಕ್ಕಳು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್‌ ಬಸ್ ಪಕ್ಕದಲ್ಲೇ ಸಾಗುತ್ತಿತ್ತು. ದೀಢರನೇ ಡಿವೈಡರ್ ದಾಟಿ ಬಂದ ಕಂಟೈನರ್ ಲಾರಿ ಸೀ ಬರ್ಡ್ ಬಸ್‌ಗೆ ಗುದ್ದಿದ ಪರಿಣಾಮ ಸೀಬರ್ಡ್‌ ಬಸ್ ಶಾಲಾ ಮಕ್ಕಳಿದ್ದ ಬಸ್‌ಗೆ ತಾಗಿದೆ. ಸೀಬರ್ಡ್‌ ಬಸ್‌ಗೆ ಡಿಕ್ಕಿಯಾದ ರಭಸಕ್ಕೆ ಮುಖ್ಯರಸ್ತೆಯ ಪಕ್ಕದಲ್ಲಿದ್ದ ತಡೆಗೋಡೆಯ ಬ್ಯಾರಿಕೇಡ್‌ಗೆ ಗುದ್ದಿದ ಶಾಲಾ ಮಕ್ಕಳಿದ್ದ ಬಸ್ ಸೀದ ಮುಖ್ಯರಸ್ತೆಯಿಂದ ಸರ್ವೀಸ್ ರಸ್ತೆಗೆ ಬಂದು ನಿಂತಿದೆ.

ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ. ಶಾಲಾ ಮಕ್ಕಳಿದ್ದ ಬಸ್ ನ ಡ್ರೈವರ್ ಇದ್ದ ಭಾಗಕ್ಕೆ ತಾಗಿದ ಪರಿಣಾಮ ಡ್ರೈವರ್ ತಲೆಗೆ ಸ್ವಲ್ಪ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ