ಆರು ಗಜದ ಸೀರೆಯ ಜೊತೆ ರಿಚ್‌ ಗ್ರಾಂಡ್‌ ಅನುಭವ ಒದಗಿಸುವ ಈ ಸೀರೆಗಳ ಬೆಡಗು ಗಮನಿಸಿ!  ದೀಪಾವಳಿಗಾಗಿ ನಿಮಗಾಗಿ ತನೇರಾ ಬ್ರಾಂಡ್‌ ಪ್ರಸ್ತುತಪಡಿಸುತ್ತಿದೆ, ಪರಿಸರದ ಪಂಚಭೂತಗಳಿಂದ ಪ್ರೇರಿತ ಪ್ಯೂರ್‌ ಸಿಲ್ಕ್ ನಿಂದ ತಯಾರಾದ ಅಪ್ಪಟ ಕೈಮಗ್ಗದ ಡಿಸೈನಿನ ಸೀರೆಗಳು

ಭೂಮಿ ಫಲವತ್ತತೆ, ವಿಕಾಸ, ಪ್ರಗತಿ, ಅಭಿವೃದ್ಧಿ, ಪೋಷಣೆಯ ಪ್ರತೀಕದ ರೂಪದಲ್ಲಿ ಹೆಣ್ಣನ್ನು ಇಲ್ಲಿ ವ್ಯಾಖ್ಯಾನಿಸಲಾಗಿದೆ. ಸಿಲ್ಕ್ ಕಾಟನ್‌, ಟಸರ್‌, ಮುರ್ಶಿದಾಬಾದ್‌ ಸಿಲ್ಕ್ ನಲ್ಲಿ ರೂಪುಗೊಂಡ ಈ ಸೀರೆಗಳು, ಸಸ್ಯ ಸಂಕುಲ, ಪ್ರಾಣಿಗಳಿಂದ ಪ್ರೇರಿತಗೊಂಡಿವೆ. ಇವುಗಳ ಮೇಲೆ ಬ್ಲಾಕ್‌ ಪ್ರಿಂಟ್‌ ನ ಪಾರಿಜಾತ ಚಿತ್ರ ಹಾಗೂ ಕಸೂತಿ ಮೂಲಕ, ಹಸಿರಿನ ಸಿರಿಯನ್ನು ಚಿತ್ರಿಸಲಾಗಿದೆ. ಕೈಮಗ್ಗದ ಈ ಚಿತ್ರಗಳು ಅತ್ಯಾಕರ್ಷಕವಾಗಿದ್ದು, ಇದರ ಆಧುನಿಕ ಚಿತ್ತಾಕರ್ಷಕ ವಿನ್ಯಾಸ, ಈ ಸೀರೆಗಳನ್ನು ಹಬ್ಬಗಳಿಗೆ ಪರ್ಫೆಕ್ಟ್ ಆಯ್ಕೆ ಆಗಿಸಿವೆ!

Fashion-B

ಅಗ್ನಿ ಅಗ್ನಿಯ ಉಗ್ರಭಾವದಿಂದ ಓತಪ್ರೋತವಾದ ಈ ಸೀರೆಗಳು ಲಗ್ಶುರಿ ಮುರ್ಶಿದಾಬಾದ್‌ ಸಿಲ್ಕ್, ಟಸರ್‌, ಟಿಶ್ಯು ಸಿಲ್ಕ್ ನಿಂದ ರೂಪುಗೊಂಡಿವೆ. ಈ ಸೀರೆಗಳು ಪ್ರತಿನಿತ್ಯದ ಬದಲಾವಣೆ, ನವೀನ ಆಲೋಚನೆ, ಸಾಹಸದ ಪ್ರತೀಕ. ಕೈಗಳಿಂದಲೇ ಪೇಂಟ್ ಮಾಡಲಾದ ಈ ಚಿತ್ರಗಳು ಹಾಗೂ ಬ್ಯೂಟಿಪುಲ್ ಕಸೂತಿಗಳಿಂದ ಹೊಳೆಹೊಳೆಯುವ ಜರಿ ಹಾಗೂ ಸೀಕ್ವೆನ್ಸ್ ಸ್ಟೈಲ್ ‌ನಲ್ಲಿ ಅಗ್ನಿಯನ್ನು ದರ್ಶಿಸುತ್ತದೆ. ಆಧುನಿಕ ಹೆಣ್ಣಿನ ಗಟ್ಟಿ ಮನೋಬಲಕ್ಕೆ ದ್ಯೋತಕವಾದ ಈ ಸೀರೆ ತನ್ನ ಫೆಂಟಾಸ್ಟಿಕ್‌ ಕಟ್‌ ವರ್ಕ್‌, ಪ್ರಿಂಟೆಡ್‌ ಪ್ಯಾಟರ್ನ್‌ ಜೊತೆ ಆಕೆಗೆ ಮುನ್ನಡೆಯುವ ಆತ್ಮವಿಶ್ವಾಸ ತುಂಬುತ್ತದೆ.

ಜಲ ಜಲ ಅಂದ್ರೆ ನೀರು, ಇದರ ಪ್ರವಾಹದ ಓಘದಿಂದ ಪ್ರೇರಿತ ಹಸಿರು, ನೀಲಿ ಬಣ್ಣದ ಈ ಕೈಮಗ್ಗದ ಸೀರೆಗಳು ಸಿಲ್ಕ್ ಕಾಟನ್‌, ಟಸರ್‌ ಸಿಲ್ಕ್ ಹಾಗೂ ಟಿಶ್ಶೂ ಸಿಲ್ಕ್ ನಿಂದ ರೂಪುಗೊಂಡಿವೆ. ಕೈಗಳ ಪೇಂಟ್‌ ನಿಂದ ಈ ವಿನ್ಯಾಸದಲ್ಲಿ ಮಳೆಹನಿಗಳು, ನೀರಿನ ಅಲೆಗಳು, ತೇಲಾಡುವ ಮೀನು, ಅರಳಿದ ತಾವರೆ ಇತ್ಯಾದಿಗಳನ್ನು ಹಬ್ಬದ ವಿಶೇಷ ವಿನ್ಯಾಸಕ್ಕೆ ಒಪ್ಪುವಂತೆ ರೂಪಿಸಲಾಗಿದೆ.

Fashion-C

ಆಕಾಶ ಇಡೀ ಬ್ರಹ್ಮಾಂಡ ಪೂರ್ತಿ ಹರಡಿರುವ ಆಕಾಶದಿಂದ ಪ್ರೇರಿತ ಈ ಸೀರೆಗಳು ಟಿಶ್ಯು, ಟಸರ್‌, ಮುರ್ಶಿದಾಬಾದ್‌ ಸಿಲ್ಕ್ ನಂಥ ಫ್ಯಾಬ್ರಿಕ್ಸ್ ನಿಂದ ರೂಪುಗೊಂಡಿವೆ. ಇವು ಇಂದಿನ ಆಧುನಿಕ ನಾರಿಯ ಅನಂತ ಭಾವನೆಗಳ ಪ್ರತೀಕ! ಕಸೂತಿ, ಹ್ಯಾಂಡ್ ಪೇಂಟಿಂಗ್‌ ನಿಂದ ಸುಶೋಭಿತ ಈ ಸೀರೆ ಡಿಸೈನ್‌ ತನ್ನ ಒಡಲಲ್ಲಿ ಮೋಡ, ಕಟ್‌ ವರ್ಕ್‌, ಚಂದ್ರ, ನಕ್ಷತ್ರಗಳನ್ನು ತುಂಬಿಕೊಂಡಿದೆ. ರಾತ್ರಿಯ ಆಕಾಶ ಬಣ್ಣದ ಗಾಂಭಿರ್ಯದಿಂದ ಸೀಕ್ವೆನ್ಸ್ ರೂಪದಲ್ಲಿ ವಿನ್ಯಾಸಗೊಳಿಸಲ್ಪಟ್ಟ ಈ ಸೀರೆಗಳು, ದೀಪಾವಳಿಯ ಸಡಗರಸಂಭ್ರಮ ಹೆಚ್ಚಿಸಲು ಪೂರಕವಾಗಿವೆ.

ವಾಯು ವಾಯು ಅಂದ್ರೆ ಗಾಳಿಯಂತೆ ಹಗುರ ಈ ಬ್ರೀದೆಬಲ್ ಲೈಟ್‌ ವೆಯ್ಟ್ ಸೀರೆಗಳು! ಹೀಗಾಗಿ ಇವು ಗಾಳಿಯ ಪ್ರತೀಕ. ಇವು ತಮ್ಮ ಸಟ್‌ ಶೇಡ್ಸ್, ಗಾಳಿಯಂಥ ಫ್ಯಾಬ್ರಿಕ್ಸ್ ಆದ ಟಿಶ್ಯು ಸಿಲ್ಕ್, ಆರ್ಗೆನ್ಝಾ, ಸಿಲ್ಕ್ ಕಾಟನ್‌, ಮುರ್ಶಿದಾಬಾದ್‌ ಸಿಲ್ಕ್ ನಿಂದ ತಯಾರಾಗಿವೆ. ಇವು ಇಂದಿನ ಆಧುನಿಕ ಹೆಣ್ಣಿಗೆ ಅಂದಿನ ರಾಜಕಳೆ ತಂದುಕೊಡುತ್ತದೆ. ಸಸ್ಯ ಸಂಕುಲ, ಪ್ರಾಣಿ, ಡೆಂಡೋಲಿಯನ್‌ಹೂ, ಸ್ಪೈರ್‌ ಪ್ಯಾಟರ್ನ್‌ ನಲ್ಲಿ ದಿ ಮೋಸ್ಟ್ ಬ್ಯೂಟಿಫುಲ್ ಆಗಿ ಸಿಂಗರಿಸಲಾಗಿದೆ. ನೂಲಿನ ಕಸೂತಿ, ಸೀಕ್ವೆನ್ಸ್ ಎಂಬ್ರಾಯಿಡರಿ ಜೊತೆಗೂಡಿ ಈ ಸೀರೆಗಳು ಪ್ರಕೃತಿಯನ್ನು ದರ್ಶಿಸುತ್ತವೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ