– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಅಮೃತ ಅಂಜನ್
ನಿರ್ದೇಶನ: ಜ್ಯೋತಿರಾವ್ ಮೋಹಿತ್
ನಿರ್ಮಾಣ: ಲೋಕೇಶ್ ನಾಗಪ್ಪ
ತಾರಾಗಣ: ಸುಧಾಕರ್ ಗೌಡ, ಪಾಯಲ್ ಚಂಗಪ್ಪ, ಗೌರವ್ ಶೆಟ್ಟಿ, ನವೀನ್ ಡಿ ಪಡೀಲ್ ಶ್ರೀಭವ್ಯ ಹಾಗೂ ಮಧುಮತಿ ಮುಂತಾದವರು.
ರೇಟಿಂಗ್: 3/5
ಲವ್ ಮಾಡಿ ಬ್ರೇಕ ಅಪ್ ಆದರೆ ನೀವು ಅವರಿಗಾಗಿ ಖರ್ಚು ಮಾಡಿದ ಹಣವನ್ನು ವಾಪಾಸ್ ಕೊಟ್ಟು ಹೋಗಬೇಕು ಎನ್ನೋದು “ಅಮೃತ ಅಂಜನ” ಚಿತ್ರದ ಒನ್ ಲೈನ್ ಎನ್ನಬಹುದು. ಲವ್ ಮಾಡಿದ ಹುಡುಗಿಯರು ವ್ ಹೆಸರಲ್ಲಿ ಬಾಯ್ ಫ್ರೆಂಡ್ ಹತ್ತಿರ ಅದು ಬೇಕು ಇದು ಬೇಕು ಅಂತ ಕಾಸ್ಲಿ ಗಿಫ್ಟ್ ಗಳು ತೆಗೆಸಿಕೊಂಡು, ಹೋಟೆಲ್ ಪಬ್ ಅಂತ ಚನ್ನಾಗಿ ಹಣ ಖಾಲಿ ಮಾಡಿ ನಂತರ ಸಣ್ಣ ಸಣ್ಣ ವಿಷಯಕ್ಕೆಲ್ಲಾ ಬ್ರೇಕಪ್ ಅಂತ ಹೊರಟು ಹೋಗೋದು ಸಾಮಾನ್ಯವಾಲ್ಲವೆ? ಆಗೆಲ್ಲಾ ಹುಡುಗನ ಹತ್ತಿರ ಹಣ ಇದೆಯೆ ಇಲ್ಲವೆ ಎನ್ನೋದನ್ನು ಅವರು ಯಾವತ್ತೂ ಗನನಿಸುವುದಿಲ್ಲ. ಹುಡುಗರು ಹುಡುಗಿ ಮುಂದೆ ಹಣ ಇಲ್ಲ ಅಂತ ಹೇಳಿಕೊಂಡರೆ ಮರ್ಯಾದೆ ಹೋಗುತ್ತೆ ಅಂತ ಅವರಿವರ ಹತ್ತಿರ, ಸ್ನೇಹಿತರ ಜೊತೆ ಸಾಲ ತಂದು ತಂದೆ ತಾಯಿಯರಿಗೆ ಸುಳ್ಳು ಹೇಳಿ ಹಣ ಸಿದ್ದಪಡಿಸಿ ಹುಡುಗಿಯರ ಮನಸ್ಸನ್ನ ಖುಷಿ ಪಡಿಸ್ತಾರೆ. ಆದರೆ ಬ್ರೇಕ್ ಅಪ್ ಅನ್ನೋ ನೆಪದಲ್ಲಿ ಹುಡುಗಿಯರು ದೂರವಾಗಬೇಕಾದರೆ ಆ ಹಣವನ್ನೆಲ್ಲಾ ಹಿಂತಿರುಗಿಸಿ ಹೋಗಬೇಕು ಎನ್ನುವುದನ್ನು “ಅಮೃತ ಅಂಜನ” ಚಿತ್ರ ಹೇಳುತ್ತದೆ.

ಕಥಾನಾಯಕ ಕಾಲೇಜಿನಲ್ಲಿ ಓದುವಾಗ ಅಕಸ್ಮಾತ್ತಾಗಿ ಪರಿಚಯವಾಗುವ ನಾಯಕಿ ಉರಿ (ಪಾಯಲ್ ಚಂಗಪ್ಪ) ಯೊಂದಿಗೆ ಆಕಸ್ಮಿಕ ಪರಿಚಯವಾಗಿ, ಪರಿಚಯ ಪ್ರೀತಿಯಾಗಿ, ಅದು ಕಂಡಿಷನಲ್ ಲವ್, ಮೊದಲ ದಿನವೇ ನಾಯಕಿ ಹುಟ್ಟಿದ ದಿನಾಂಕ, ಹೆಸರು, ಆಧಾರ್ ಕಾರ್ಡ್ ನಂ ಎಲ್ಲಾ ತೆಗೆದುಕೊಂಡು ಪೇಪರ್ ಮೇಲೆ ಪ್ರೀತಿಗಾಗಿ ಅಗ್ರಿಮೆಂಟಿಗೆ ಸಹಿ ಪಡೆದು ನಂತರ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಡುತ್ತಾಳೆ. ಆದರೆ ಆ ಗ್ರೀನ್ ಸಿಗ್ನಲ್ ಅವನ ಪಾಲಿಗೆ ಏನೆಲ್ಲಾ ತೊಂದರೆಗಳನ್ನು ತಂದು ಕೊಡುತ್ತದೆ, ಪ್ರೇಯಸಿಯ ಆಸೆಗಳನ್ನು ಈಡೇರಿಸಲು ಏನೆಲ್ಲಾ ಕಷ್ಟ ಪಡುತ್ತಾನೆ. ಸಣ್ಣ ಸಣ್ಣ ವಿಷಯಕ್ಕೂ ಮುನಿಸಿಕೊಂಡು ಉರಿದು ಬೀಳುವ ನಾಯಕಿ ಉರಿಗೆ ಹೇಗೆ ಬುದ್ಧಿ ಕಲಿಸುತ್ತಾನೆ ಎಂದು ತಿಳಿಯಲು ನೀವು ಅಮೃತಾಂಜನ್ ಚಿತ್ರ ನೋಡಬೇಕು.
ಪ್ರೀತಿಸಿ ಬ್ರೇಕ್ ಅಪ್ ಮಾಡಿಕೊಳ್ಳುವ ಯುವಕ ಯುವತಿಯರಿಗೆ ಚಿತ್ರದಲ್ಲಿ ಪಾಠ ಕಲಿಸುವ ತಂತ್ರವನ್ನು ನಿರ್ದೇಶಕರು ಚನ್ನಾಗಿ ಹೇಳಿದ್ದಾರೆ.. ಚಿತ್ರ ಪ್ರಾರಂಭದಿಂದ ಕೊನೆಯವರೆಗೂ ನಗುವಿನ ಹಂದರದಲ್ಲಿ ಸಾಗುತ್ತದೆ. ಹಾಸ್ಯಮಯ ಚಿತ್ರವೊಂದು ಹೇಗೆ ಇರಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ಮೂಡಿಬಂದಿರುವ ಚಿತ್ರ ಎನ್ನಬಹುದು.ಇದಕ್ಕೆ ಮುಖ್ಯ ಕಾರಣವೆಂದರೆ ಈ ಸಿನಿಮಾದ ಸಂಭಾಷಣೆ ಎಂದರೆ ಅದು ತಪ್ಪಲ್ಲ. ಹಾಗೆಂದು ಇದು ಕೇವಲ ಹಾಸ್ಯಚಿತ್ರವಲ್ಲ. ಮಕ್ಕಳು ಕೌಟುಂಬಿಕವಾಗಿ ಪಾಲಿಸಬೇಕಾದ ಅಂಶಗಳೇನು ಎನ್ನುವುದನ್ನು ಸಂದೇಶವಾಗಿ ನೀಡಲಾಗಿದೆ. ಸಿನಿಮಾದಲ್ಲಿ ಅಪ್ಪ ಮಗನ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದು ತಂದೆಯ ತ್ಯಾಗವನ್ನು ಮನಮಿಡಿಯುವಂತೆ ತೋರಿಸಲಾಗಿದೆ. ಯೂಟ್ಯೂಬ್ ವಾಹಿನಿಯಲ್ಲಿ ನಿರ್ದೇಶಕರಾಗಿ ಜನಪ್ರಿಯರಾಗಿರುವ ಜ್ಯೋತಿರಾವ್ ಮೋಹಿತ್ ಈ ಬಾರಿ ಬೆಳ್ಳಿ ಪರದೆಯ ಮೇಲೆಯೂ ಅಷ್ಟೇ ಆಕರ್ಷಕವಾದ ಸಿನಿಮಾ ನೀಡಿದ್ದಾರೆ.
ನಾಯಕನ ಪಾತ್ರದಲ್ಲಿ ಅಭಿನಯಿಸಿರುವ ಸುಧಾಕರ್ ಗೌಡ ಹಾಗೂ ಪಾಯಲ್ ಚಂಗಪ್ಪ ಇಬ್ಬರು ಈ ಕಥೆಯನ್ನು ಹೆಗಲ ಮೇಲೆ ಹೊತ್ತು ನಡೆಸಿದ್ದರೆ ಉಳಿದೆಲ್ಲಾ ಪಾತ್ರವರ್ಗ , ಎಲ್ಲಾ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಸುಮಂತ್ ಆಚಾರ್ಯ ರವರ ಛಾಯಾಗ್ರಹಣ ಹಾಗೂ ರೋಹಿತ್ ಸೋವೆರ್ ರವರ ಸಂಗೀತ ಉತ್ತಮವಾಗಿದೆ. . ಕಿರಣ್ ಕುಮಾರ್ ಕಥೆಗೆ ಸೂಕ್ತ ರೀತಿಯಲ್ಲಿ ಎಡಿಟಿಂಗ್ ಮಾಡಿದ್ದಾರೆ..





