ಎಸ್.ಜೆ.
‘ಹೃದಯ ಸಮುದ್ರ ಕಲಕಿ…ʼ ಸೇರಿದಂತೆ ಕನ್ನಡದಲ್ಲಿ ಹಲವು ಜನಪ್ರಿಯ ಗೀತೆಗಳಿಗೆ ಸಂಗೀತ ಸಂಯೋಜಿಸಿರುವ ಎಸ್.ಪಿ. ವೆಂಕಟೇಶ್ (ಸಂಗೀತ ರಾಜ), ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ೭೧ ವರ್ಷ ವಯಸ್ಸಾಗಿತ್ತು. ೧೯೫೫ರಲ್ಲಿ ಚೆನ್ನೈನಲ್ಲಿ ಜನಿಸಿದ ವೆಂಕಟೇಶ್, ಮಲಯಾಳಂ, ತೆಲುಗು, ಬಂಗಾಲಿ, ಹಿಂದಿ, ಕನ್ನಡ, ಒರಿಯಾ ಮುಂತಾದ ಭಾಷೆಗಳಲ್ಲಿ ಸೇರಿದಂತೆ ೧೮೦ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕನ್ನಡದಲ್ಲಿ ಅವರು ʼಅಶ್ವಮೇಧʼ, ʼಪ್ರೇಮ ಯುದ್ಧʼ, ʼಶರವೇಗದ ಸರದಾರʼ ಮುಂತಾದ ಹಲವು ಚಿತ್ರಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. ಅವರ ಅಂತ್ಯಕ್ರಿಯೆ ನಾಳೆ ಚೆನ್ನೈನಲ್ಲಿ ನಡೆದಿದೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





