ರಾಘವೇಂದ್ರ ಅಡಿಗ ಎಚ್ಚೆನ್.

ಕೊಚ್ಚಿಯಲ್ಲಿ ‘70ನೇ ಫಿಲ್ಮ್ಫೇರ್ ಪ್ರಶಸ್ತಿದಾನ ಸಮಾರಂಭ ನಡೆದಿದೆ. 2024ರಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಝಗಮಗಿಸುವ ವೇದಿಕೆಯಲ್ಲಿ ಅವಾರ್ಡ್ ಫಂಕ್ಷನ್ ನಡೆಯಿತು. ‘ಕೋಳಿ ಎಸ್ರು’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ‘ಬಘೀರ’ ಸಿನಿಮಾದ ನಟನೆಗಾಗಿ ಶ್ರೀಮುರಳಿ ಅವರಿಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ನೀಡಲಾಯಿತು. ‘ಕೆರೆಬೇಟೆ’ ಸಿನಿಮಾದಲ್ಲಿನ ನಟನೆಗಾಗಿ ಗೌರಿಶಂಕರ್ ಅವರು ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ) ಪ್ರಶಸ್ತಿ ಪಡೆದುಕೊಂಡರು. ಅಂಕಿತಾ ಅಮರ್ ಅವರಿಗೆ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕಾಗಿ ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ) ಪ್ರಶಸ್ತಿ ಸಿಕ್ಕಿದೆ. ‘ಬ್ಲಿಂಕ್’ ಚಿತ್ರಕ್ಕಾಗಿ ಗೋಪಾಲಕೃಷ್ಣ ದೇಶಪಾಂಡೆ ಅವರು ಅತ್ಯುತ್ತಮ ಪೋಷಕ ನಟ ಪಶಸ್ತಿ ಪಡೆದರು. ‘ಭೀಮ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಪ್ರಿಯಾ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ.
70ನೇ ಫಿಲ್ಮ್ ಫೇರ್ ಪ್ರಶಸ್ತಿ ಪಡೆದವರ ಪಟ್ಟಿ: ಅತ್ಯುತ್ತಮ ಸಿನಿಮಾ: ಶಾಖಾಹಾರಿ (ನಿರ್ದೇಶನ: ಸಂದೀಪ್ ಸುಂಕದ್) ಅತ್ಯುತ್ತಮ ನಿರ್ದೇಶಕ: ಪೃಥ್ವಿ ಕೋಣನೂರು (ಹದಿನೇಳೆಂಟು) ಅತ್ಯುತ್ತಮ ನಿನಿಮಾ: ವಿಮರ್ಶಕರ ಆಯ್ಕೆ- ಬ್ಲಿಂಕ್ (ನಿರ್ದೇಶನ: ಶ್ರೀನಿಧಿ ಬೆಂಗಳೂರು) ಅತ್ಯುತ್ತಮ ಸಂಗೀತ: ಅರ್ಜುನ್ ಜನ್ಯ (ಕೃಷ್ಣಂ ಪ್ರಣಯ ಸಖಿ)
ಅತ್ಯುತ್ತಮ ಹೊಸ ನಟಿ: ಬಿಂಧು ಶಿವರಾಮ್ (ಕೆರೆಬೇಟೆ) ಅತ್ಯುತ್ತಮ ಹೊಸ ನಟ: ಸಮರ್ಜಿತ್ ಲಂಕೇಶ್ (ಗೌರಿ) ಅತ್ಯುತ್ತಮ ಹಿನ್ನೆಲೆ ಗಾಯಕಿ: ಶ್ರುತಿ ಪ್ರಹ್ಲಾದ (ಹಿತ್ತಲಕ ಕರಿಬ್ಯಾಡ) ಅತ್ಯುತ್ತಮ ಹಿನ್ನೆಲೆ ಗಾಯಕ: ಜಸ್ಕರಣ್ ಸಿಂಗ್ (ದ್ವಾಪರ ದಾಟುತ) ಅತ್ಯುತ್ತಮ ಗೀತರಚನೆ: ನಾಗೇಂದ್ರ ಪ್ರಸಾದ್ (ದ್ವಾಪರ ದಾಟುತ)
ಅತ್ಯುತ್ತಮ ನಟ: ಶ್ರೀಮುರಳಿ (ಬಘೀರ) ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ (ಕೋಳಿ ಎಸ್ರು) ಅತ್ಯುತ್ತಮ ಪೋಷಕ ನಟಿ: ಪ್ರಿಯಾ (ಭೀಮ) ಅತ್ಯುತ್ತಮ ಪೋಷಕ ನಟ: ಗೋಪಾಲಕೃಷ್ಣ ದೇಶಪಾಂಡೆ (ಬ್ಲಿಂಕ್) ಅತ್ಯುತ್ತಮ ನಟ: ವಿಮರ್ಶಕರ ಆಯ್ಕೆ- ಗೌರಿಶಂಕರ್ (ಕೆರೆಬೇಟೆ) ಅತ್ಯುತ್ತಮ ನಟಿ: ವಿಮರ್ಶಕರ ಆಯ್ಕೆ- ಅಂಕಿರಾ ಅಮರ್ (ಇಬ್ಬನಿ ತಬ್ಬಿದ ಇಳೆಯಲಿ)

filmfare
ತೆಲುಗು, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳ ಪಟ್ಟಿ
0ನೇ ಫಿಲ್ಮ್‌ಫೇರ್ ಪ್ರಶಸ್ತಿ (2024)  ಪಡೆದ ತೆಲುಗು, ತಮಿಳು, ಮಲಯಾಳಂ ಮತ್ತು ತಮಿಳು ಸಿನಿಮಾಗಳ ಪಟ್ಟಿ ಇಲ್ಲಿದೆ.
ತೆಲುಗು
ಅತ್ಯುತ್ತಮ ಸಿನಿಮಾ: ಪುಷ್ಪ 2: ದಿ ರೂಲ್ ಅತ್ಯುತ್ತಮ ನಿರ್ದೇಶಕ: ಸುಕುಮಾರ್ (ಪುಷ್ಪ 2: ದಿ ರೂಲ್) ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪ 2: ದಿ ರೂಲ್) ಅತ್ಯುತ್ತಮ ನಟಿ: ನಿವೇತಾ ಥಾಮಸ್ (35 ಚಿನ್ನ ಕಥಾ ಕಾದು) ಅತ್ಯುತ್ತಮ ಪೋಷಕ ನಟ: ಅಮಿತಾಬ್ ಬಚ್ಚನ್ (ಕಲ್ಕಿ 2898 AD) ಅತ್ಯುತ್ತಮ ಸಂಗೀತ ನಿರ್ದೇಶಕ: ದೇವಿ ಶ್ರೀ ಪ್ರಸಾದ್ (ಪುಷ್ಪ 2: ದಿ ರೂಲ್)
ತಮಿಳು
ಅತ್ಯುತ್ತಮ ಸಿನಿಮಾ: ಅಮರನ್ ಅತ್ಯುತ್ತಮ ನಿರ್ದೇಶಕ: ಪಿ.ಎಸ್. ವಿನೋತ್ ರಾಜ್ (ಕೊಟ್ಟುಕ್ಕಾಲಿ) ಮತ್ತು ರಾಜಕುಮಾರ್ ಪೆರಿಯಸಾಮಿ (ಅಮರನ್) ಅತ್ಯುತ್ತಮ ನಟ: ಶಿವಕಾರ್ತಿಕೇಯನ್ (ಅಮರನ್) ಅತ್ಯುತ್ತಮ ನಟಿ: ಸಾಯಿ ಪಲ್ಲವಿ (ಅಮರನ್) ಅತ್ಯುತ್ತಮ ಪೋಷಕ ನಟ: ಕಾರ್ತಿ (ಮೆಯ್ಯಳಗನ್) ಅತ್ಯುತ್ತಮ ಸಂಗೀತ: ಜಿ.ವಿ. ಪ್ರಕಾಶ್ ಕುಮಾರ್ (ಅಮರನ್)
ಮಲಯಾಳಂ
ಅತ್ಯುತ್ತಮ ಸಿನಿಮಾ: ಮಂಜುಮ್ಮೇಲ್ ಬಾಯ್ಸ್ ಅತ್ಯುತ್ತಮ ನಿರ್ದೇಶಕ: ರಾಹುಲ್ ಸದಾಶಿವನ್ (ಬ್ರಮಯುಗಂ) ಅತ್ಯುತ್ತಮ ನಟ: ಮಮ್ಮೂಟ್ಟಿ (ಬ್ರಮಯುಗಂ) ಅತ್ಯುತ್ತಮ ನಟಿ: ಉರ್ವಶಿ (ಉಳ್ಳೊಳುಕ್ಕು) ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ಪೃಥ್ವಿರಾಜ್ ಸುಕುಮಾರನ್ (ಆಡುಜೀವಿತಂ) ಅತ್ಯುತ್ತಮ ಸಂಗೀತ: ಸುಶಿನ್ ಶ್ಯಾಮ್ (ಆವೇಶಂ)
ಬಾಲಿವುಡ್
ಅತ್ಯುತ್ತಮ ಸಿನಿಮಾ: ಲಾಪತಾ ಲೇಡೀಸ್ ಅತ್ಯುತ್ತಮ ನಿರ್ದೇಶಕ: ಕಿರಣ್ ರಾವ್ (ಚಿತ್ರ: ಲಾಪತಾ ಲೇಡೀಸ್) ಅತ್ಯುತ್ತಮ ನಟ: ಕಾರ್ತಿಕ್ ಆರ್ಯನ್ (ಚಂದು ಚಾಂಪಿಯನ್) ಮತ್ತು ಅಭಿಷೇಕ್ ಬಚ್ಚನ್ (ಐ ವಾಂಟ್ ಟು ಟಾಕ್) ಅತ್ಯುತ್ತಮ ನಟಿ: ಆಲಿಯಾ ಭಟ್ (ಜಿಗ್ರಾ) ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ರಾಜ್‌ಕುಮಾರ್ ರಾವ್ (ಶ್ರೀಕಾಂತ್) ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ಪ್ರತಿಭಾ ರಂತ (ಲಾಪತಾ ಲೇಡೀಸ್) ಅತ್ಯುತ್ತಮ ಪೋಷಕ ನಟ: ರವಿ ಕಿಶನ್ (ಲಾಪತಾ ಲೇಡೀಸ್) ಅತ್ಯುತ್ತಮ ಪೋಷಕ ನಟಿ: ಛಾಯಾ ಕದಮ್ (ಲಾಪತಾ ಲೇಡೀಸ್) ಜೀವಮಾನ ಸಾಧನೆ ಪ್ರಶಸ್ತಿ: ಜೀನತ್ ಅಮಾನ್ ಮತ್ತು ಶ್ಯಾಮ್ ಬೆನಗಲ್ (ಮರಣೋತ್ತರ)

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ