3 ದಿನಗಳ ಚಿಂತೆ ಬಿಡಿ ಇದರ ಸುಲಲಿತ ಬಳಕೆ ಭಾರತದಲ್ಲಿ ಇನ್ನೂ ಮಾಮೂಲಿ ಆಗಿಲ್ಲ. ಆದರೆ ನಮ್ಮ ಹೆಂಗಸರಿಗ ಇದು ಎಷ್ಟು ಮಹತ್ವಪೂರ್ಣ ಎಂದು ವಿವರವಾಗಿ ತಿಳಿಯೋಣವೇ……?

ದೈನಂದಿನ ಪತ್ರಿಕೆಗಳ ವರದಿಯ ಪ್ರಕಾರ, 75% ಸ್ಯಾನಿಟರಿ ಪ್ಯಾಡ್ಸ್ ಅತ್ಯಗತ್ಯ, ಟಿಕ್ನಿಕಲ್ ರಿಕ್ವೈರ್‌ ಮೆಂಟ್ಸ್ ಗೆ ತಕ್ಕಂತೆ ತಯಾರಾಗುತ್ತಿಲ್ಲವಂತೆ. ಇದರಿಂದ ಮೂತ್ರದ ಸೋಂಕು, ಯೂಟಿರಸ್‌ ಇನ್‌ ಫೆಕ್ಷನ್‌, ಗರ್ಭಾಶಯದ ಕ್ಯಾನ್ಸರ್‌ ವರೆಗೂ ಅಪಾಯ ತಪ್ಪಿದ್ದಲ್ಲ. ಯಾವುದು ಸುರುಕ್ಷಿತವೋ, ಅದು ಬಲು ದುಬಾರಿ. ಕೆಲವೊಂದು ಇಡೀ ದಿನದ ರಕ್ಷಣೆ ಬಗ್ಗೆ ಹೇಳಿದರೆ, ಕೆಲವು ಕೇವಲ 1 ರಾತ್ರಿ ಹೊತ್ತಿನ ರಕ್ಷಣೆ ಬಗ್ಗೆ ಮಾತ್ರ ಖಾತ್ರಿ ಕೊಡುತ್ತವೆ. ಹೀಗಾಗಿ 5-6 ಗಂಟೆಗಳ ನಂತರ ಇನ್ನು ಬದಲಿಸಬೇಕಾದ ಅನಿವಾರ್ಯತೆ ಇರುತ್ತದೆ.

ಇತ್ತೀಚಿನ ವರದಿ ಪ್ರಕಾರ, ಇಡೀ ದೇಶದಲ್ಲಿ ಕೇವಲ ಶೇ.12 ರಷ್ಟು ಭಾರತೀಯ ಹೆಂಗಸರು ಮಾತ್ರವೇ ಇಂಥ ಸುರಕ್ಷಿತ ಪ್ಯಾಡ್ಸ್ ಬಳಸುತ್ತಿದ್ದಾರೆ. ಒಬ್ಬ ಹೆಣ್ಣು ತನ್ನ ಜೀವನದಲ್ಲಿ ಸರಾಸರಿ 125-150 ಕಿಲೋ ಟ್ಯಾಂಪನ್‌, ಪ್ಯಾಂಡ್‌, ಅಪ್ಲಿಕೇಟರ್‌ ಇತ್ಯಾದಿ ಬಳಸಲು ಸಾಧ್ಯವಾಗುತ್ತದೆ. ಪ್ರತಿ ತಿಂಗಳೂ ಭಾರತದಲ್ಲಿ 43.3 ಕೋಟಿಗಳಷ್ಟು ಇಂಥ ಪದಾರ್ಥ ಕಸದ ವಿಲೇವಾರಿಗೆ ಬರುತ್ತದೆ. ಇದರಲ್ಲಿ ಬಹುತೇಕ ನದಿತೀರ, ಲ್ಯಾಂಡ್‌ ಪಿಲ್ ಯಾ ಸೀಲೇಜ್‌ ಸಿಸ್ಟಮ್ ಗಳಲ್ಲಿ ತುಂಬಿ ಹೋಗುತ್ತವೆ. ಏಕೆಂದರೆ ಇನ್ನು ಸುವ್ಯವಸ್ಥಿತವಾಗಿ ಡಿಸ್‌ ಪೋಸ್‌ ಮಾಡುವ ವ್ಯವಸ್ಥೆಯೂ ಇಲ್ಲ, ಇಂಥವನ್ನು ಬೇರ್ಪಡಿಸುವ ಸರ್ಕಾರಿ ಸಿಬ್ಬಂದಿ, ಕೈಯಿಂದ ಅದನ್ನು ಮಾಡಲು ಅಸಹ್ಯ ಪಟ್ಟುಕೊಳ್ಳುತ್ತಾರೆ. ಹಾಗೇ ಅವನ್ನು ಬೇರ್ಪಡಿಸಿ ಸುಟ್ಟುಬಿಡುವುದೇ ಸರಿಯಾದ ಕ್ರಮ. ಈ ಸರ್ಕಾರಿ ವಿಭಾಗದ ಕಾರ್ಯ ನಿರ್ವಹಣೆಯ ಪ್ರಕಾರ ಇದು ಅತ್ಯಗತ್ಯ. ಆದರೆ ಎಷ್ಟು ಮಾತ್ರ ಇವೆಲ್ಲ ಕ್ರಮವಾಗಿ ನಡೆಯುತ್ತದೆ?

ಮೆನ್ಸ್ಟ್ರುಯೆಲ್ ಕಪ್ಬಳಕೆ ಏಕೆ ಕಡಿಮೆ?

ಎಲ್ಲಕ್ಕೂ ಪ್ರಮುಖ ಕಾರಣ ಎಂದರೆ ನಮ್ಮ ದೇಶದ ಸಹಸ್ರಾರು ಹೆಂಗಸರಿಗೆ ಇದರ ಬಗ್ಗೆ ಏನೇನೂ ಗೊತ್ತಿಲ್ಲ. ಹೆಂಗಸರಿಗೆ ತಮ್ಮ ದೇಹದ ರಚನೆ, ಗುಪ್ತಾಂಗಗಳ ಸ್ವಚ್ಛತೆ ಶುಭ್ರತೆಯ ಕುರಿತು ವಹಿಸಬೇಕಾದ ಎಚ್ಚರಿಕೆ ಇವುಗಳ ಕಡೆ ಗಮನವಿಲ್ಲ. ಇಂದಿಗೂ ನಮ್ಮ ಸಮಾಜದಲ್ಲಿ ಸಿಡಿ ಹಾಕಿಸುವುದರ ಪ್ರಚಲನೆ ಇದ್ದೇ ಇದೆ. ಹುಡುಗಿ ಋತುಮತಿ ಆಗುವ ಮೊದಲೇ ಇದರ ಟ್ರಯಲ್ ಕುರಿತು ಹಳ್ಳಿಗಳಲ್ಲಿ ಸುದ್ದಿ ಕೇಳಿಬರುತ್ತದೆ. ಆದರೆ ಮುಟ್ಟಿನ ದಿನಗಳಲ್ಲಿ ಸ್ರಾವ ಇದ್ದಾಗ ಮಾತ್ರವೇ ಸರ್ವಿಕ್ಸ್ ಮೃದು ಹಾಗೂ ಫ್ಲೆಕ್ಸಿಬಲ್ ಆಗಬಲ್ಲದು, ಆಗ ಇದನ್ನು ಸುಲಭವಾಗಿ ಹಾಕಿಸಬಹುದು. ಉಳಿದ ದಿನಗಳಲ್ಲಿ ಇದು ಅತಿ ಕಷ್ಟಕರ.

ಸರಿಯಾದ ಆಕಾರದ ಕಪ್‌ ನ ಆಯ್ಕೆಯೂ ಸಮಸ್ಯೆಯೇ. ಇದು ಹೆಣ್ಣಿನ ವಯಸ್ಸು, ಎಂಥ ಪ್ರಸವ (ನಾರ್ಮಲ್, ಸಿಝೇರಿಯನ್‌, ವ್ಯಾಸೆಕ್ಷನ್‌) ಎಂಬುದರ ಮೇಲೆ ಅವಲಂಬಿತ. ಆರಂಭದ 1,2,3ನೇ ಸೈಕ್ಸ್‌ ನಲ್ಲಿ ಸರಿಯಾದ ಅನುಭವ ಇಲ್ಲದಿದ್ದಾಗ, ಇದರ ಬಳಕೆ ತುಸು ಕಠಿಣಕರ ಎನಿಸುತ್ತದೆ. ಈ ಕಾರಣದಿಂದಲೇ ಬಹುತೇಕ ಹೆಂಗಸರು ಇದರ ಬಳಕೆ ತ್ಯಜಿಸುತ್ತಾರೆ. ಆದರೆ ಸರಿಯಾದ ಬಳಕೆಯಿಂದ ಯಾವುದೇ ಹಾನಿ ಇಲ್ಲ. ಕಪ್ಸ್ ನ ತಪ್ಪು ಬಳಕೆ, ಹೈಜೀನ್‌ ಕುರಿತು ನಿರ್ಲಕ್ಷ್ಯ, ಚೂಪಾದ ದೊಡ್ಡ ಉಗುರು, ಬಲವಂತವಾಗಿ ಇದನ್ನು ಅಳವಡಿಸಿಕೊಳ್ಳುವ ಪ್ರಯತ್ನ, ಅನುಪಯುಕ್ತ ಸೈಜ್‌ ನ ಕಪ್ಸ್ ಇತ್ಯಾದಿಗಳಿಂದಾಗಿ ಯೋನಿಯಲ್ಲಿ ಉರಿ, ನವೆ, ಕಡಿತ, ತುರಿಕೆ ಅಥವಾ ಅಳವಡಿಕೆ ನಂತರ ಪೆಲ್ವಿಕ್‌ ಭಾಗದಲ್ಲಿ ನೋವು ಉಂಟಾಗಬಹುದು. ಈ ಕಾರಣದಿಂದಲೂ ಎಷ್ಟೋ ಹುಡುಗಿಯರು ಇದನ್ನು ತ್ಯಜಿಸುತ್ತಾರೆ. ನಮ್ಮ ದೇಶದಲ್ಲಿ ಮೆನ್‌ ಸ್ಟ್ರುಯೆಲ್ ‌ಕಪ್‌ ನ ಬಳಕೆ ಇನ್ನೂ ಮಾಮೂಲಿ ಆಗಿಲ್ಲ. ಹಳ್ಳಿಗಳನ್ನು ಬಿಟ್ಟುಬಿಡಿ, ಹೋಬಳಿ ತಾಲ್ಲೂಕುಗಳಿಂದ ದೊಡ್ಡ ನಗರಗಳವರೆಗಿನ ಹೆಂಗಸರು ಇದರ ಬಳಕೆಯಲ್ಲಿ ಹಿಂದುಳಿದಿದ್ದಾರೆ.

ಇದರ ಬಳಕೆಯ ಲಾಭಗಳು

ಎಲ್ಲಕ್ಕಿಂತ ಮುಖ್ಯ ಲಾಭ ಎಂದರೆ, ಸುದೀರ್ಘ ಬಾಳಿಕೆ (ಸರಿಯಾದ ಕ್ರಮದಲ್ಲಿ ಬಳಸಿದರೆ 8-10 ವರ್ಷ!) ಬರುತ್ತದಾದ್ದರಿಂದ ಇತರ ಪ್ಯಾಡ್‌, ಟ್ಯಾಂಪನ್‌ ಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚು ಲಾಭಕಾರಿ. ಜೊತೆಗೆ ಹಲವು ಬಗೆಯ ಸೋಂಕಿನಿಂದಲೂ ಇದು ರಕ್ಷಿಸುತ್ತದೆ. ಸ್ಯಾನಿಟರಿ ಪ್ಯಾಡ್ಸ್, ಟ್ಯಾಂಪನ್‌ ತರಹ ಇದು ಹೈ ಅಬ್ಸಾರ್ಬೆಂಟ್‌ ಮೆಟೀರಿಯಲ್ ಅಲ್ಲದ ಕಾರಣ, ಇದು ಯೋನಿಯ ಸಹಜ Ph ಮಟ್ಟವನ್ನು ಹಾನಿ ಮಾಡದು. ಇದರಿಂದ ಟಾಕ್ಸಿಕ್‌ ಶಾಕ್‌ ಸಿಂಡ್ರೋಂನ ಅಪಾಯ ಇಲ್ಲ. ಇದರಿಂದಾಗಿ ಆಸುಪಾಸಿನ ಚರ್ಮದಲ್ಲಿ ರಾಶೆಸ್‌, ತರಚುವಿಕೆ, ಗೀಚುವಿಕೆ, ಕಟ್ಸ್, ಸೋಂಕು ಇತ್ಯಾದಿ ಯಾವ ಭಯವೂ ಇಲ್ಲ. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ 89% ಹೆಂಗಸರು ಮುಟ್ಟಿನ ದಿನಗಳ ಸ್ವಚ್ಛತೆ ಶುಭ್ರತೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಗರದ ಕಡೆ ಸಹ ಕೂಲಿಕಾರರು, ಕಾರ್ಮಿಕರು, ಬಡ ಗುಡಿಸಲ ಹೆಂಗಸರು ಯಾವುದೋ ಹಳೆ ಬಟ್ಟೆ, ಬೂದಿ, ಮಣ್ಣು ಬಳಸಿ ಇದರ ನಿವಾರಣೆಗೆ ಯತ್ನಿಸುತ್ತಾರೆ. ಉತ್ತಮ ಶುಭ್ರ ಕಾಟನ್‌ ಬಟ್ಟೆಯ ಬಳಕೆಯೂ ಕಂಡುಬರದು. ಇಂಥವರಿಗೆ ಪ್ಯಾಡ್‌, ಮೆನ್‌ ಸ್ಟ್ರುಯೆಲ್ ‌ಕಪ್‌ ಬಗ್ಗೆ ಏನು ಹೇಳುವುದು? ಇವರುಗಳು ನಿಧಾನವಾಗಿ ಅವನ್ನು ಅಳವಡಿಸಿಕೊಳ್ಳಬೇಕಷ್ಟೆ.

ಜೊತೆಗೆ ಹೆಚ್ಚಿನ ಸ್ರಾವವುಳ್ಳವರು, ದುಬಾರಿ ಪ್ಯಾಡ್ಸ್ ಯಾ ಟ್ಯಾಂಪನ್‌ ಗಾಗಿ ಖುರ್ಚು ಮಾಡಲಾಗದವರು ಮುಂತಾದವರಿಗಾಗಿ ಇದು ಹೆಚ್ಚು ಸೂಕ್ತ. ಕೇವಲ ಖರ್ಚು ಉಳಿಸುವುದು ಮಾತ್ರವಲ್ಲದೆ, ಇತರ ವಿಧದಲ್ಲಿಯೂ ಲಾಭಕಾರಿ. ಒಂದು ಸಲದ ಅಳವಡಿಕೆಯ ನಂತರ ನೀವು ಸ್ರಾವದ ಕುರಿತು ಚಿಂತಿಸಬೇಕಿಲ್ಲ. ಶೌಚ, ಸ್ನಾನದ ಟೈಮಲ್ಲಿ ಇದನ್ನು ಹೊರ ತೆಗೆಯಬೇಕಿಲ್ಲ. ಈಜು, ರೈಡಿಂಗ್‌, ಆಟೋಟಗಳು, ಜಿಗಿತ ಇತ್ಯಾದಿ ಎಲ್ಲದಕ್ಕೂ ಮಹಿಳಾ ಕ್ರೀಡಾಪಟುಗಳು ಸಲೀಸಾಗಿ ಇದನ್ನು ಬಳಸಬಹುದು. ಈ ಕಪ್ಸ್ ಲೀಕೇಜ್ ಪ್ರೂಫ್‌ ಆಗಿರುತ್ತವೆ.

ಎಲ್ಲಕ್ಕಿಂತ ಇದರ ದೊಡ್ಡ ಪ್ರಯೋಜನವೆಂದರೆ, ಇದ್ನು ಸುಲಭವಾಗಿ ಖಾಲಿ ಮಾಡಿ, ಶುದ್ಧ ನೀರಲ್ಲಿ ತೊಳೆದು ಪುನಃ ಬಳಸಬಹುದಾಗಿದೆ.

iStock-1292946572

ಎಂಥ ಕಪ್ಸರಿ?

ನಿಮ್ಮ ಬಟ್ಟೆ, ಫುಟ್‌ ವೇರ್ಸ್‌ ತರಹವೇ ಕಪ್ಸ್ ನದು ಸ್ಟಾಂಡರ್ಡ್‌ ಫಿಕ್ಸ್ ಸೈಜ್‌ ಅಂತೇನಿಲ್ಲ. ಸ್ಮಾಲ್, ಮೀಡಿಯಂ, ಲಾರ್ಜ್‌ ಸೈಜ್ ಹೆಸರಿನಲ್ಲಿ ಪ್ರತಿ ಕಂಪನಿಯೂ ಇನ್ನು ಬಿಡುಗಡೆ ಮಾಡಿವೆ.

ಹಾರ್ಡ್‌ ರಿಮ್ ಇರುವಂಥ ಕಪ್‌ ಆರಿಸಿ. ಫ್ಲೋಗಿಂತ ಹೆಚ್ಚಾಗಿ ಫಿಟಿಂಗ್‌ ನ್ನು ಇದರ ಸೈಜ್‌ ಅವಲಂಬಿಸಿದೆ. ಹಾರ್ಡ್‌ ರಿಮ್ ಇರುವ ಕಪ್‌ ಸುಲಭವಾಗಿ ಲೀಕ್‌ ಆಗದು. ಒಳಸರಿದು ಓಪನ್‌ ಆಗಲು ಹಾಗೂ ಹೊರತೆಗೆಯಲು ಸಹ ಸರಳವಾಗಿರುತ್ತವೆ. ಹೈಸ್ಕೂಲ್ ಹುಡುಗಿಯರು ಸಾಫ್ಟ್ ರಿಮ್ ವುಳ್ಳ ಸ್ಮಾಲ್ ಕಪ್‌ ನಿಂದ ಇದರ ಬಳಕೆ ಆರಂಭಿಸಬಹುದು. 25ಕ್ಕಿಂತ ಕಡಿಮೆ ವಯಸ್ಸಿನವರು, ಸಹಜ ಪ್ರಸವ ಆಗದ ಮಹಿಳೆಯರು ಸಹ ಸ್ಮಾಲ್ ಸೈಜ್‌ ನಿಂದ ಆರಂಭಿಸಬೇಕು.

30+ನ ಹೆಂಗಸರು, ಸಹಜ ಪ್ರಸವದವರು, ಅತ್ಯಧಿಕ ಫ್ಲೋವುಳ್ಳವರು ಮೀಡಿಯಂ ಯಾ ಲಾರ್ಜ್‌ ಸೈಜ್‌ ಬಳಸಬೇಕು.

ನಿಮಗೆ ಯಾವುದೇ ಬಗೆಯ ಅಲರ್ಜಿ, ಮೆಡಿಕಲ್ ಸಮಸ್ಯೆ ಇರದಿದ್ದರೆ, ಮೊದಲು ಕಡಿಮೆ ಬೆಲೆಯ ಕಪ್ಸ್ ನಿಂದ ಆರಂಭಿಸಬೇಕು. ಇವು ರೂ.200-500ರ ಒಳಗೆ ಲಭ್ಯ. ಒಮ್ಮೆ ಅಭ್ಯಾಸ ಆಗಿಹೋದರೆ, ನಂತರ ಉತ್ತಮ ಬ್ರಾಂಡ್‌ ನ ತುಸು ದುಬಾರಿಯದನ್ನು ಟ್ರೈ ಮಾಡಬಹುದು. ಇವು ಸುಲಭವಾಗಿ 10-15 ವರ್ಷ ಬಾಳಿಕೆ ಬರುತ್ತವೆ. ರೂ. 2,500-3,000 ಆಗಬಹುದು.

ಬಳಸುವ ವಿಧಾನ

ನೀವು ಟ್ಯಾಂಪನ್‌ ಬಳಸುತ್ತೀರಾದರೆ ಇದು ಬಹುತೇಕ ಹಾಗೆಯೇ ಇರುತ್ತದೆ. ಪೆಲ್ವಿಕ್‌ ಮಸಲ್ಸ್ ನ್ನು ಬಿಲ್ ಕುಲ್ ‌ಸಡಿಲ ಬಿಡಿ. ಕಪ್‌ ನ ರಿಮ್ ನ್ನು (ಮೇಲುಭಾಗದ ತುಸು ಗಟ್ಟಿಯಾದುದು) ನೀರು ಅಥವಾ ವಾಟರ್‌ ಬೇಸ್ಡ್ ಲ್ಯೂಬ್ರಿಕೆಂಟ್‌ ಬಳಸಿ, ಸರಿಯಾದ ಆಕಾರಕ್ಕೆ ಮಡಿಸಿರಿ, ನಿಧಾನವಾಗಿ ಒಳಗೆ ಅಳವಡಿಸಿಕೊಳ್ಳಿ. ಆಗ ಇದು ಹೊರಗೆ ಕಾಣಿಸದು. ಒಳಗಿನ ವ್ಯಾಕ್ಯೂಂನಿಂದ ಲೀಕ್ ಆಗಲಿಕ್ಕೂ ಬಿಡದು.

ಸಾಮಾನ್ಯವಾಗಿ ಇದನ್ನು 8-12 ಗಂಟೆಗಳಿಗೊಮ್ಮೆ ಹೊರತೆಗೆದು ಶುಚಿಗೊಳಿಸಬೇಕು ಎನ್ನುತ್ತಾರೆ. ಸೇಫ್ಟಿ ದೃಷ್ಟಿಯಿಂದ, 7-8 ಗಂಟೆಗಳಿಗೆ ಒಮ್ಮೆ ಹೊರತೆಗೆದು ಖಾಲಿ ಮಾಡಬೇಕು. ಇದಕ್ಕಾಗಿ ಎಲ್ಲಕ್ಕಿಂತ ಮೊದಲು ಕಪ್‌ ನ ಬೇಸ್‌ ನ್ನು ಬೆರಳ ತುದಿಯಲ್ಲಿ ಹಿಡಿದು, ಸಕ್ಷನ್‌ ಪ್ರೆಶರ್‌ ಮುರಿದು, ನಿಧಾನವಾಗಿ ಕೆಳಭಾಗದ ಕಡೆಗೆ ಹೊರಗೆ ಎಳೆಯಿರಿ. ಇದನ್ನು ಗಡಿಬಿಡಿಯಲ್ಲಿ, ಅವಸರದಲ್ಲಿ ಮಾಡಲು ಹೋಗಬಾರದು. ಆರಂಭದಲ್ಲಿ ಶಾಲೆ, ಕಾಲೇಜು, ಆಫೀಸ್‌, ಪಬ್ಲಿಕ್‌ ಟಾಯ್ಲೆಟ್‌ ಗಳಲ್ಲಿ ಇದನ್ನು ಶುಚಿಗೊಳಿಸಲು ಹೋಗದಿರಿ. ಇದನ್ನು ಮನೆಯಲ್ಲೇ ಬಳಸಬೇಕಷ್ಟೆ.

ಹೊರತೆಗೆದು ಇದನ್ನು ಖಾಲಿ ಮಾಡಿದ ನಂತರ, ಶುದ್ಧ ನೀರಿನಿಂದ ತೊಳೆಯಬೇಕು. ಯಾವುದೇ ಡಿಸ್‌ ಇನ್‌ ಫೆಕ್ಟೆಂಟ್‌ ನ ಸೀದಾ ಪ್ರಯೋಗವನ್ನು ಕಪ್‌ ಯಾ ಗುಪ್ತಾಂಗದ ಮೇಲೆ ಮಾಡಿಕೊಳ್ಳಬಾರದು. ಯೂಟ್ಯೂಬ್‌ ನಲ್ಲಿ ಇದನ್ನು ಮಾಡುವುದು ಹೇಗೆ ಎಂಬ ವಿಡಿಯೋ ನೋಡಿ, ಸರಿಯಾಗಿ ತಿಳಿದು ನಂತರ ಪ್ರಯೋಗಿಸಿ.

ಕಿವಿ ಮಾತು

ಮೆನ್‌ ಸ್ಟ್ರುಯೆಸ್ ‌ಕಪ್‌ ಬಲು ಕಂಫರ್ಟೆಬಪಲ್. ಇದರ ಬಳಕೆಯೂ ಕಷ್ಟವಲ್ಲ. ಇದನ್ನು ಬಳಸಲು ತುಸು ಪ್ರಾಕ್ಟೀಸ್‌ ಇರಬೇಕಷ್ಟೆ. ಇದಕ್ಕೆ ಅಡ್ಜಸ್ಟ್ ಆಗಲು ನಿಮಗೆ ಕನಿಷ್ಠ 3 ತಿಂಗಳಾದರೂ ಬೇಕು. ಇದರ ಬಳಕೆಯಿಂದ ಮುಟ್ಟಿನ ದಿನಗಳ ನಿಮ್ಮೆಲ್ಲ ಬಗೆಯ ಚಿಂತೆ, ಗುರುತು/ಕಲೆ, ರಾಶೆಸ್‌, ಪ್ಯಾಡ್ಸ್ ನ ದುಷ್ಪ್ರಭಾವ, ದುಬಾರಿ ಖರ್ಚು ಇರಲ್ಲ. ಇದು ಪರಿಸರಸ್ನೇಹಿಯೂ ಹೌದು.

ಡಾ. ನಯನಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ