ರಾಘವೇಂದ್ರ ಅಡಿಗ ಎಚ್ಚೆನ್.

ಹಲವು ಚಿತ್ರಗಳ ನಿರ್ದೇಶಕರಾಗಿ ಕನ್ನಡ ಚಿತ್ರರಂಗದ ಹೆಸರಾಂತ ನಟ, ನಿರ್ದೇಶಕ ಎನಿಸಿಕೊಂಡ ರಾಧಾಕೃಷ್ಣ ಪಲ್ಲಕ್ಕಿ ಅವರ ಬೆಂಬಲದಿಂದ ಹೊಸ ಪ್ರತಿಭೆಗಳು ತಾವು ಕಿರುಚಿತ್ರಗಳನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಹೀಗೆ ತಯಾರಾದ ಎರಡು ಕಿರುಚಿತ್ರಗಳಾದ “ನಿಯತಿ” ಮತ್ತು “ಡ್ರೀಮ್ಸ್” ಇತ್ತೀಚೆಗೆ ಬೆಂಗಳೂರಿನಲ್ಲಿ ಆಯ್ದ ಪ್ರೇಕ್ಷಕರ ಮುಂದೆ ಪ್ರದರ್ಶಿತವಾಗಿತ್ತು.
ಹಾರರ್ ಥ್ರಿಲ್ಲರ್ ಜಾನರಿನ “ನಿಯತಿ” ಕಿರುಚಿತ್ರವನ್ನು ಸಂದೀಪ್ ರಾಮಚಂದ್ರ ನಿರ್ದೇಶಿಸಿದ್ದು ಅವರೇ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ. ವಿಜಯ ಜಿ. ಇದಕ್ಕೆ ಬಂಡವಾಳ ತೊಡಗಿಸಿದ್ದರೆ ಹೆಸರಾಂತ ಸಂಗೀತ ನಿರ್ದೇಶಕ ಆರ್.ಎಸ್. ಗಣೇಶ್ ನಾರಾಯಣನ್ ಈ ಕಿರುಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ರಚನ್ ಪುನೀತ್, ಗಿರೀಶ್ ಎನ್ ಅವರುಗಳ ಛಾಯಾಗ್ರಹಣ ಈ ಕಿರುಚಿತ್ರಕ್ಕಿದೆ. ಇನ್ನೂ ವಿಶೇಷ ಎಂಡರೆ ಡಾ. ಪ್ರೀತಿ ಅಶೋಕ್ ಅವರು ರಚಿಸಿದ ಹಾಡೊಂದು ಈ ಕಿರುಚಿತ್ರದಲ್ಲಿದ್ದು ವೀಕ್ಷಕರ ಮನ ಗೆಲ್ಲುತ್ತದೆ.

IMG-20260227-WA0043

ಇನ್ನು “ಡ್ರೀಮ್ಸ್” ಎನ್ನುವ ಇನ್ನೊಂದು ಕಿರಿಚಿತ್ರಕ್ಕೆ ಸುವರ್ಣ ರಾಯ್ಕರ್ ಬಂಡವಾಳ ತೊಡಗಿಸಿದ್ದರೆ ಯಶವಂತ್ ರಾಯ್ಕರ್ ನಿರ್ದೇಶನ ಮಾಡಿದ್ದಾರೆ. ಅದ್ವಿಕ್ ಎಸ್. ವರ್ಮ ಹಿನ್ನೆಲೆ ಸಂಗೀತ ಇದಕ್ಕಿದ್ದು ಶಶಿರ್ ಶರುಂಗೇರಿ ಹಗೂ ಅಶ್ವತ್ಥ್ ಪೂಜಾರಿ ಛಾಯಾಗ್ರಹಣವಿದೆ.
ಕಿರುಚಿತ್ರ ಪ್ರದರ್ಶನದ ನಂತರ ನಿರ್ದೇಶಕರಾದ ರಾಧಾಕೃಷ್ಣ ಪಲ್ಲಕ್ಕಿ ಅವರು ಸೇರಿದಂತೆ ಗಣ್ಯರು ಹೊಸ ತಮ್ಡಗಳಿಗೆ ಶುಭ ಹಾರೈಸಿದರು.  ನಿರ್ದೇಶಕ್ರುಗಳಾದ ಸಂದೀಪ್ ರಾಮಚಂದ್ರ ಹಾಗೂ ಯಶವಂತ್ ಅವರುಗಳು ತಾವು ಶ್ರಮವಹಿಸಿ ತಯಾರಿಸಿದ ಈ ಕಿರುಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಅಗತ್ಯವಿದೆ, ಇನ್ನೂ ಹೆಚ್ಚು ಜನರಿಗೆ ಇದನ್ನು ತಲುಪಿಸಿ ಹಾಗೂ ನಮ್ಮ ಮುಂದಿನ ಯೋಜನೆಗಳಿಗೆ ಸಹಕರಿಸಿ ಎಂದು ಮನವಿ ಮಾಡಿದರು. ಅಲ್ಲದೆ ಕಿರುಚಿತ್ರದ ಕಲಾವಿದರು, ತಂಡದ ಸದಸ್ಯರು ಸಹ ಮಾದ್ಯಮವನ್ನು ಉದ್ದೇಶಿಸಿ ಮಾತನಾಡಿದರು.
ಇದೇ ವೇಳೆ ರಾಧಾಕೃಷ್ಣ ಪಲ್ಲಕ್ಕಿ ಅವರಿಗೆ ಇತ್ತೀಚೆಗೆ ಡಾಕ್ಟರೇಟ್ ಪದವಿ ಸಿಕ್ಕಿರುವ ಕಾರಣ ಕಿರುಚಿತ್ರ ತಂಡದ ಸದಸ್ಯರು ಅವರನ್ನು ಸನ್ಮಾನಿಸಿ ಗೌರವ ಸಲ್ಲಿಸಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ