– ರಾಘವೇಂದ್ರ ಅಡಿಗ ಎಚ್ಚೆನ್.
ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡು ರಿಲೀಸ್ ಆಗಿದೆ. ಹೋಳಿ ಹಬ್ಬಕ್ಕೂ ಒಂದು ದಿನ ಮೊದಲು ಈ ಸಾಂಗ್ ಬಿಡುಗಡೆ ಆಗಿದ್ದು, ಗಮನ ಸೆಳೆದಿದೆ. ಈ ಹಾಡು ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಿದೆ. ಯಶ್ ಹಾಗೂ ಕಿಯಾರ ಅವರನ್ನು ಒಳಗೊಂಡ ಹಾಡು ತಬಾಹಿ ರೊಮ್ಯಾಂಟಿಕ್ ಮೆಲೊಡಿಯಾಗಿ ಈ ಹಾಡು ಬಂದಿದೆ. ಹಾಡಿನ ಸಾಹಿತ್ಯ ಕೇಳಿದರೆ ಇದೊಂದು ಪಕ್ಕಾ ರಾ-ರೊಮ್ಯಾಂಟಿಕ್ ಹಾಡೆನ್ನುವುದು ಗೊತ್ತಾಗುತ್ತದೆ. ಅದೇ ರೀತಿ ತೀರಾ ಮೆಲೊಡಿಯಾಗಿರದೆ, ತೀರಾ ಅಬ್ಬರವೂ ಅಲ್ಲದ ರೀತಿಯಲ್ಲಿ ಈ ಹಾಡು ಮೂಡಿ ಬಂದಿದೆ.
ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ವಿಶಾಲ್ ಮಿಶ್ರಾ ಸಂಗೀತ ಸಂಯೋಜನೆ ಮಾಡಿ ಹಾಡನ್ನು ಹಾಡಿದ್ದಾರೆ. ಸದ್ಯ ಲಿರಿಕಲ್ ಸಾಂಗ್ ಮಾತ್ರ ಬಿಡುಗಡೆ ಕಂಡಿದೆ.
‘ಟಾಕ್ಸಿಕ್’ ಚಿತ್ರದಲ್ಲಿ ಮ್ಯೂಸಿಕ್ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಚಿತ್ರದಲ್ಲಿ ಒಟ್ಟೂ ಆರು ಹಾಡುಗಳು ಇವೆ ಎನ್ನಲಾಗಿದೆ. ಈ ಸಿನಿಮಾಗಾಗಿ ಐದು ಸಂಗೀತ ಸಂಯೋಜಕರು ಕೆಲಸ ಮಾಡಿದ್ದಾರೆ. ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಅವರು 4 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ತನಿಷ್ಕ್ ಬಾಗ್ಜಿ ಅವರು ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಜೊತೆ ಸೇರಿ ಒಂದು ಹಾಡಿಗೆ ಸಂಗೀತ ನೀಡಿದ್ದಾರೆ. ರವಿ ಬಸ್ರೂರು ಅವರು ಒಂದು ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ತಬಾಹಿ ಪದದ ಅರ್ಥ ಏನು?
ತಬಾಹಿ ಎನ್ನುವುದು ಒಂದು ಹಿಂದಿ ಪದವಾಗಿದ್ದು ಉರ್ದು ಭಾಷೆಯಲ್ಲಿಯೂ ಈ ಪದ ಬಳಕೆ ವ್ಯಾಪಕವಾಗಿದೆ. ಈ ಪದದ ಅರ್ಥ ನಾಶ ಮಾಡುವುದು ಎನ್ನುವುದಾಗಿದೆ. ಇಷ್ಟೇ ಅಲ್ಲದೆ ನಾಶ, ನಾಶ, ವಿನಾಶ, ವಿನಾಶ ಅಥವಾ ವಿಪತ್ತು ಎನ್ನುವ ಅರ್ಥವೂ ಇದೆ. ನಾಶ ಎಂದು ಬಳಸುವಾಗ ಇಲ್ಲಿ ಅವಳು ಹೋದ ಮೇಲೆ ಅವನು ನಾಶವಾದನು ಎನ್ನುವ ರೀತಿ ಪ್ರೀತಿಯ ಭಾವದಲ್ಲಿಯೂ ಬಳಸುತ್ತದಾರೆ. ಸದ್ಯ ಟಾಕ್ಸಿಕ್ ಸಿನಿಮಾದ ಮೊದಲ ಹಾಡಿನಲ್ಲಿ ತಬಾಹಿ ಎಂದು ಹಾಡಿದ್ದು ಯಶ್ ಅಭಿಮಾನಿಗಳು ಹ್ಸೇರಿ ಪ್ರೇಕ್ಷಕರು ಹೇಗೆ ಪ್ರತಿಕ್ರಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.





