ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ। ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಸಾಹಿತಿ ಬಾನು ಮುಷ್ತಾಕ್ ಪುಷ್ಪ ನಮನ ಸಲ್ಲಿಸಿದ್ದು ಇದೀಗ ವಿವಾದಕ್ಕೆ ತಿರುಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ರಾಜ್ಯ ದಲಿತ ಸಂಘರ್ಷ ಸಮಿತಿ, ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾಪನದ ವತಿಯಿಂದ ಆಯೋಜಿಸಿದ್ದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲು ಬಾನು ಮುಷ್ತಾಕ್ ಮುಂದಾದಾಗ ಸಂಘಟಕರು ಚಪ್ಪಲಿ ಬಿಟ್ಟು ಬರುವಂತೆ ಮನವಿ ಮಾಡಿದರು.
ಆದರೆ ಬಾನು ಮುಷ್ತಾಕ್ ಅದಕ್ಕೆ ಒಪ್ಪಲಿಲ್ಲ. ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಪ್ಪಲಿ ಹೊಲೆಯುವುದು ನಮ್ಮ ವೃತ್ತಿ. ಚಪ್ಪಲಿ ನಮ್ಮ ಮನೆ ದೇವರು ಎಂದು ಸರ್ಮಥಿಸಿಕೊಂಡಿದ್ದಾರೆ. ಅದು ನಮ್ಮ ಅಸ್ಮಿತೆಯ ಸಂಕೇತ. ನಾವು ಚಪ್ಪಲಿ ಹೊಲಿಯುವವರು. ನಮಗೆ ಅದರ ಬಗ್ಗೆ ಅಪಾರ ಗೌರವವಿದೆ ಎಂದು ಸಮರ್ಥನೆ ನೀಡಿದ್ದಾರೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





