ರಾಜ್ಯ ಸರ್ಕಾರವೇ ಅಂಬ್ಯುಲೆನ್ಸಗಳ ಕೇಂದ್ರಿಕೃತ ನಿರ್ವಹಣಾ ವ್ಯವಸ್ಥೆಯನ್ನು `112′ ಅಡಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದ್ದು, 3 ತಿಂಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಹೇಳಿದ್ದಾರೆ.

ವಿಧಾನ ಪರಿಷತ್‌ ಪ್ರಶ್ನೋತ್ತರ ಕಲಾಪದಲ್ಲಿ ಟಿ.ಎನ್. ಜವರಾಯಿಗೌಡ ಅವರು ಅಂಬ್ಯುಲೆನ್ಸ್ ವ್ಯವಸ್ಥೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಂಬ್ಯುಲೆನ್ಸ್​ಗಳ ತ್ವರಿತ ಹಾಗೂ ಪರಿಣಾಮಕಾರಿ ಸೇವೆ ಒದಗಿಸುವ ನಿಟ್ಟಿನಲ್ಲಿ `112′ ಎಂಬ ಕೇಂದ್ರಿಕೃತ ನಿರ್ವಹಣಾ ವ್ಯವಸ್ಥೆಯನ್ನು ಸರ್ಕಾರವೇ ವಹಿಸಿಕೊಳ್ಳಲಿದೆ. ಈ ನೂತನ ವ್ಯವಸ್ಥೆ 3 ತಿಂಗಳಲ್ಲಿ ಅನುಷ್ಠಾನವಾಗುವ ಸಾಧ್ಯತೆ ಇದ್ದು ತಾಂತ್ರಿಕತೆಯ ಅಳವಡಿಕೆಯ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಅದೇ ರೀತಿ ಅಂಬ್ಯುಲೆನ್ಸ್‌ ಪೂರಕ ಸಿಬ್ಬಂದಿಗಳ ನೇಮಕಾತಿಯನ್ನೂ ಸಹ ಸರ್ಕಾರ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಿದೆ. ಅಂಬ್ಯುಲೆನ್ಸ್‌ಗಳ ಕೊರತೆ ರಾಜ್ಯದಲ್ಲಿ ಇಲ್ಲ, ಆರೋಗ್ಯ ಕವಚ ವ್ಯಾಪ್ತಿಯಲ್ಲಿ 715 ಹಾಗೂ ರಾಜ್ಯದ 1 ಸಾವಿರ ಒಟ್ಟಾರೆಯಾಗಿ 1715 ಅಂಬ್ಯುಲೆನ್ಸ್‌ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚುವರಿಯಾಗಿ 262 ಅಂಬ್ಯುಲೆನ್ಸ್ ಖರೀದಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಪಾಟೀಲ್ ಹೇಳಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ