ರಾಮಾಯಣದ ಪ್ರಕಾರ, ಸೀತೆಯ ಹುಡುಕಾಟದ ಸಮಯದಲ್ಲಿ ಹನುಮಂತನು ರಾವಣನ ಅಡುಗೆಮನೆಯನ್ನು ಪ್ರವೇಶಿಸಿದಾಗ, ರಾವಣನ ಎಂಜಲು ತಟ್ಟೆಯನ್ನು ನೋಡಿ ಅವನ ಸಾವು ಹತ್ತಿರದಲ್ಲಿದೆ ಎಂದು ಹನುಮಂತನಿಗೆ ಅರ್ಥವಾಯಿತು. ಏಕೆಂದರೆ ರಾವಣನು ತನ್ನ ತಟ್ಟೆಯಲ್ಲಿ ಮೊಸರನ್ನು ಎಂಜಲು ಬಿಟ್ಟಿದ್ದನು.
ಊಟದಲ್ಲಿ ಎಂಜಲು ಬಿಡುವವರ ಆಯಸ್ಸು ಕ್ಷೀಣಿಸುತ್ತಾ ಹೋಗುತ್ತದೆ. ಬಹುಶಃ ಇದೇ ಕಾರಣಕ್ಕಾಗಿ ನಮ್ಮ ಪೂರ್ವಜರು ಊಟವಾದ ನಂತರ ತಟ್ಟೆಗೆ ನೀರು ಹಾಕಿ, ಉಳಿದ ಅನ್ನದ ಕಣಗಳನ್ನು ಕಲಕಿ ಕುಡಿಯುತ್ತಿದ್ದರು.
**ವಿದ್ವಾಂಸರ ಪ್ರಕಾರ:** ತಟ್ಟೆಯಲ್ಲಿ ಆಹಾರವನ್ನು ವ್ಯರ್ಥ ಮಾಡುವುದು ಅನ್ನಪೂರ್ಣೇಶ್ವರಿ ಮತ್ತು ಲಕ್ಷ್ಮಿ ದೇವಿಗೆ ಮಾಡುವ ಅಪಮಾನವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ಆರ್ಥಿಕ ಪರಿಸ್ಥಿತಿ ದುರ್ಬಲಗೊಳ್ಳುತ್ತದೆ, ಅಷ್ಟೇ ಅಲ್ಲದೆ ಮನೆಗೆ ಬರುವ ಲಕ್ಷ್ಮೀಯು ಮುನಿಸಿಕೊಂಡು ಹೊರಟು ಹೋಗುತ್ತಾಳೆ.
**ಮಕ್ಕಳ ಮೇಲೆ ಪ್ರಭಾವ:** ಊಟವನ್ನು ಎಂಜಲು ಮಾಡುವ ಮಕ್ಕಳು ಓದಿನಲ್ಲಿ ಹಿಂದುಳಿಯುತ್ತಾರೆ. ಮನಸ್ಸು ಮೆಲ್ಲನೆ ಓದಿನಿಂದ ಸಂಪೂರ್ಣವಾಗಿ ವಿಮುಖವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಮೊದಲ ಬಾರಿಗೆ ಅವರು ಎಷ್ಟು ತಿನ್ನಬಲ್ಲರೋ ಅಷ್ಟನ್ನೇ ಬಡಿಸಿ.
**ಗ್ರಹ ದೋಷಗಳು:** ತಟ್ಟೆಯಲ್ಲಿ ಆಹಾರವನ್ನು ಉಳಿಸುವುದರಿಂದ ಶನಿ ದೇವನ ಕೋಪಕ್ಕೆ ತುತ್ತಾಗಬೇಕಾಗಬಹುದು. ಇದರೊಂದಿಗೆ ಚಂದ್ರನ ಅಶುಭ ದೃಷ್ಟಿಯೂ ವ್ಯಕ್ತಿಯ ಜೀವನದ ಮೇಲೆ ಬೀಳತೊಡಗುತ್ತದೆ. ಚಂದ್ರನ ಅಶುಭ ಪ್ರಭಾವದಿಂದಾಗಿ ಮಾನಸಿಕ ಕಾಯಿಲೆಗಳು ಕೂಡ ವ್ಯಕ್ತಿಯನ್ನು ಆವರಿಸಿಕೊಳ್ಳಬಹುದು.
ಇದಲ್ಲದೆ, ನೀವು ಪ್ರಯಾಣದ ಸಮಯದಲ್ಲಿ ಎಂಜಲು ಆಹಾರವನ್ನು ಎಸೆದರೆ, ನಿಮ್ಮ ಕೆಲಸಗಳು ಎಂದಿಗೂ ಪೂರ್ಣಗೊಳ್ಳುವುದಿಲ್ಲ ಅಥವಾ ಆಗುವ ಕೆಲಸಗಳು ಕೂಡ ಕೆಡಲು ಪ್ರಾರಂಭಿಸುತ್ತವೆ.
ತಟ್ಟೆಯಲ್ಲಿ ಆಹಾರವನ್ನು ವ್ಯರ್ಥ ಮಾಡುವುದರಿಂದ ವ್ಯಕ್ತಿಯು ಪಾಪದ ಭಾಗಿಯಾಗುತ್ತಾನೆ. ಆದ್ದರಿಂದ ತಟ್ಟೆಯಲ್ಲಿ ಎಷ್ಟು ಬೇಕೋ ಅಷ್ಟನ್ನೇ ಹಾಕಿಕೊಳ್ಳಬೇಕು ಮತ್ತು ಆಹಾರವು ಎಂದಿಗೂ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಯಾವುದೋ ಕಾರಣದಿಂದ ಆಹಾರ ಉಳಿದುಹೋದರೆ, ಕೈಮುಗಿದು ಅನ್ನಪೂರ್ಣೇಶ್ವರಿಯ ಬಳಿ ಕ್ಷಮೆ ಕೇಳಿ.
**ತುಂಬಾ ಒಳ್ಳೆಯ ಮಾತು:** *”ತಿನ್ನಿ ಮಣದಷ್ಟು, ಬಿಡಬೇಡಿ ಕಣದಷ್ಟು”*
*”ಅಷ್ಟೇ ಹಾಕಿ ತಟ್ಟೆಯಲ್ಲಿ”*
*”ವ್ಯರ್ಥವಾಗಿ ಹೋಗದಿರಲಿ ಚರಂಡಿಯಲ್ಲಿ”*

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ