ಹರಕಿಯ ಸ್ಥಾಪಕಿ ಮತ್ತು ಸಿಇಓ

``ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ, ನಾಯಕತ್ವ ಮತ್ತು ಆರ್ಥಿಕ ಮುನ್ನಡೆಯ ಪ್ರಮುಖ ಧ್ವನಿ.''

ಬಿಸ್ನೆಸ್ಅಚೀವರ್ಅವಾರ್ಡ್

ನೇಹಾ ಬಗಾರಿಯಾ ಕರ್ನಾಟಕದ ಬೆಂಗಳೂರಿನಲ್ಲಿ ನೆಲೆಸಿರುವ ಪ್ರಸಿದ್ಧ ಉದ್ಯಮಿ. ಯುನೈಟೆಡ್‌ ಸ್ಟೇಟ್ಸ್ ನ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ (ವಾರ್ಟನ್‌ ಸ್ಕೂಲ್‌) ದ್ವಿಪದವಿ ಪಡೆದಿದ್ದಾರೆ. ನೇಹಾ ಭಾರತದ ಅತಿದೊಡ್ಡ  ಚಾಲಿತ ಕೆರಿಯರ್‌ ಎಂಗೇಜ್ ಮೆಂಟ್‌ ಪ್ಲಾಟ್‌ ಫಾರ್ಮ್ (ಮೊದಲು ಜಾಬ್ಸ್ ಫಾರ್‌ ಹರ್‌)ಯ ಸ್ಥಾಪಕಿ ಹಾಗೂ ಸಿಇಓ. ಇದನ್ನು ವಿಶೇಷವಾಗಿ ಮಹಿಳೆಯರಿಗಾಗಿಯೇ ಸ್ಥಾಪಿಸಲಾಗಿದೆ.

ನೇಹಾ ತಾಯಿಯಾದ 3.6 ವರ್ಷಗಳ ವೃತ್ತಿ ಜೀವನದ ವಿರಾಮ ತೆಗೆದುಕೊಂಡ ನಂತರ ಈ ಪ್ಲಾಟ್‌ ಫಾರ್ಮ್ ಕಲ್ಪನೆಯನ್ನು ಹೊರತಂದರು. ಆ ಸಮಯದಲ್ಲಿ ಭಾರತದಲ್ಲಿ ಲಕ್ಷಾಂತರ ಮಹಿಳೆಯರು ಮಕ್ಕಳನ್ನು ಹೆರುವುದು ಅಥವಾ ಕುಟುಂಬದ ಜವಾಬ್ದಾರಿಗಳಿಂದಾಗಿ ತಮ್ಮ ಉದ್ಯೋಗ ತೊರೆದು ನಂತರ ಕೆಲಸಕ್ಕೆ ಮರಳಲು ಬಹಳ ತೊಂದರೆ ಎದುರಿಸುತ್ತಾರೆ ಎಂಬುದನ್ನು ಅರಿತುಕೊಂಡರು. ಈ ಆಲೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡ ನೇಹಾ, 2015ರಲ್ಲಿ ಜಾಬ್ಸ್ ಫಾರ್‌ ಹರ್‌ ನ್ನು ಸ್ಥಾಪಿಸಿದರು. ಇದನ್ನು ಈಗ ಎಂದು ಕರೆಯಾಗುತ್ತದೆ. ಇಂದು 4 ಮಿಲಿಯನ್‌ ಗಿಂತಲೂ ಹೆಚ್ಚು ಮಹಿಳೆಯರಿಗೆ ನೆಲೆಯಾಗಿದೆ ಮತ್ತು 15 ಸಾವಿರಕ್ಕೂ ಹೆಚ್ಚು ಕಂಪನಿಗಳು ವೇದಿಕೆಯ ಮೂಲಕ ವೈವಿಧ್ಯತೆ, ತರಬೇತಿ ಮತ್ತು ಮಹಿಳಾ ನಾಯಕತ್ವ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಇದು ಉದ್ಯೋಗಗಳನ್ನು ಕಲ್ಪಿಸುವುದು ಮಾತ್ರವಲ್ಲದೆ, ಕೌಶಲ್ಯಾಭಿವೃದ್ಧಿ ಕೋರ್ಸ್‌ ಗಳು, ಮಾರ್ಗದರ್ಶನ, ನೆಟ್ ವರ್ಕಿಂಗ್‌ ಮತ್ತು ವೃತ್ತಿಪರ ಬೆಳವಣಿಗೆಯ ಅವಕಾಶಗಳನ್ನು ಸಹ ನೀಡುತ್ತದೆ.

ಆಸಕ್ತಿದಾಯಕ ಪ್ರಯಾಣ

ನೇಹಾ ಪ್ರಯಾಣ ಬಹಳ ಆಸಕ್ತಿದಾಯಕವಾಗಿತ್ತು. ಅವರು ತಮ್ಮ ವೃತ್ತಿ ಜೀವನವನ್ನು ಭಾರತಕ್ಕೆ ಅಡ್ವಾನ್ಸ್ಡ್ ಪ್ಲೇಸ್‌ ಮೆಂಟ್‌ (ಎಪಿ) ಕಾರ್ಯಕ್ರಮವನ್ನು ತಂದ ಪ್ಯಾರಾಗಾನ್‌ ಕಂಪನಿಯೊಂದಿಗೆ ಪ್ರಾರಂಭಿಸಿದರು. ನಂತರ ಅವರು ತಮ್ಮ ಕುಟುಂಬದ ಬಯೋಫಾರ್ಮಾಸ್ಯುಟಿಕಲ್ ಕಂಪನಿಯಾದ ಕೆಮ್ ವೆಲ್ ‌ನಲ್ಲಿ ವ್ಯವಹಾರ ತಂತ್ರ ಮತ್ತು ಮಾರ್ಕೆಟಿಂಗ್‌ ನ ಮೇಲ್ವಿಚಾರಣೆ ಮಾಡಲು ತೆರಳಿದರು. ಆದಾಗ್ಯೂ ಕೆಲವು ವರ್ಷಗಳ ಕಾಲ ವಿರಾಮ ತೆಗೆದುಕೊಂಡ ನಂತರ, ಮಹಿಳೆಯರು ಮತ್ತೆ ವೃತ್ತಿ ಜೀವನಕ್ಕೆ ಮರಳುವುದು ಕಷ್ಟ ಎಂದು ಅರಿತುಕೊಂಡರು. ಇದೇ ಸ್ಥಾಪನೆಗೆ ಕಾರಣವಾಯಿತು.

ಆರಂಭದಲ್ಲಿ ನೇಹಾ ಕೇವಲ ಐದು ಮಹಿಳೆಯರ ತಂಡದೊಂದಿಗೆ ತಮ್ಮ ಮನೆಯ ಟೆರೇಸ್‌ ಮೇಲೆ ಈ ಕೆಲಸವನ್ನು ಪ್ರಾರಂಭಿಸಿದರು. ಇಂದು, 100ಕ್ಕೂ ಹೆಚ್ಚು ಜನರ ತಂಡವನ್ನು ಹೊಂದಿದ್ದು, ಅಮೆಝಾನ್‌, ಆ್ಯಕ್ಸೆಂಚರ್‌, ಕ್ಯಾಪ್ಜೆಮಿನಿ ಮತ್ತು ಮಿಂತ್ರಾದಂತಹ ಪ್ರಮುಖ ಕಂಪನಿಗಳು ಇದರ ಗ್ರಾಹಕರಾಗಿದ್ದಾರೆ. ಕಂಪನಿಯ ಮಾದರಿಯು ಸಹ ಆಸಕ್ತಿದಾಯಕವಾಗಿದೆ. ಮಹಿಳೆಯರಿಗೆ ಈ ಪ್ಲಾಟ್‌ ಫಾರ್ಮ್ ಸಂಪೂರ್ಣ ಉಚಿತವಾಗಿರುತ್ತದೆ. ಆದರೆ ಕಂಪನಿಗಳು ನೇಮಕಾತಿ ಮತ್ತು ಪ್ರತಿಭಾ ಸೇವೆಗಳಿಗೆ ಪಾವತಿಸುತ್ತವೆ.

ಇಲ್ಲಿಯವರೆಗೆ, ಸಂಸ್ಥೆಯು ಕಾರಿ ಕ್ಯಾಪಿಟಲ್, 360 ಒನ್‌ ಅಸೆಟ್‌ ಮತ್ತು ಹಲವಾರು ಏಂಜಲ್ ಹೂಡಿಕೆದಾರರಿಂದ ಸುಮಾರು 4 ಮಿಲಿಯನ್‌ ಹಣವನ್ನು ಸಂಗ್ರಹಿಸಿದೆ. ಮಹಿಳೆಯರಿಗೆ ಉದ್ಯೋಗವನ್ನು ಒದಗಿಸುವುದು ಮಾತ್ರವಲ್ಲದೆ, ಅವರ ವೃತ್ತಿ ಜೀವನವನ್ನು ಮರು ರೂಪಿಸುವುದು ಮತ್ತು ಸಮಾನ ಸಮಾಜವನ್ನು ನಿರ್ಮಿಸುವುದು ಕಂಪನಿಯ ಧ್ಯೇಯವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ