ಹಿಂಸಕ ಮಕ್ಕಳು ಅಸಹಾಯಕ ಪೇರೆಂಟ್ಸ್
ಬಿಬಿಸಿಯ ಒಂದು ವರದಿಯ ಪ್ರಕಾರ, ಇದೀಗ ಅಲ್ಲಿನ ಪೇರೆಂಟ್ಸ್ ದೊಡ್ಡ ಸಂಖ್ಯೆಯಲ್ಲಿ ಸೆಲ್ಫ್ ಡಿಫೆನ್ಸ್ ಕ್ಲಾಸೆಸ್ ಸೇರುತ್ತಿದ್ದಾರೆ. ಈ ಪೇರೆಂಟ್ಸ್ ತಮ್ಮ ಮಕ್ಕಳನ್ನು ಗೂಂಡಾ, ಕಳ್ಳಕಾಕರು, ಲಫಂಗರಿಂದ ರಕ್ಷಿಸಲಿಕ್ಕಲ್ಲ...... ತಮ್ಮನ್ನು ತಾವು, ತಾವೇ ಹೆತ್ತ ಮಕ್ಕಳಿಂದ ರಕ್ಷಿಸಿಕೊಳ್ಳಲು ಇದಕ್ಕೆ ಮೊರೆಹೋಗುತ್ತಿದ್ದಾರೆ. ಯೂರೋಪ್, ಅಮೆರಿಕಾ ಇತರ ದೇಶಗಳ ತರಹ, ಮಕ್ಕಳು ಹೆತ್ತವರ ವಿರುದ್ಧ ಗೂಂಡಾಗಿರಿ ಮಾಡುವುದು ಬಹಳ ಹೆಚ್ಚುತ್ತಿದೆ. ಪಾಪ, ಈ ಪೇರೆಂಟ್ಸ್ ಇದಕ್ಕಾಗಿ ಪೊಲೀಸರ ಸಹಾಯ ಪಡೆಯುವ ಹಾಗೂ ಇಲ್ಲ, ಕಣ್ಣೆದುರೇ ಮಕ್ಕಳು ಕಂಬಿ ಎಣಿಸುವಂತಾದರೇ ಆ ಸಂಕಟವನ್ನೂ ಕಣ್ಣಾರೆ ಕಾಣಬೇಕಲ್ಲ....? ಹಾಗೆಂದು ನಮ್ಮಲ್ಲಿ ಮಾತ್ರ ಪೇರೆಂಟ್ಸ್ ಮಕ್ಕಳ ವಿಷಯದಲ್ಲಿ ಬಲು ಸುರಕ್ಷಿತರು ಅಂತೇನಲ್ಲ. ಆದರೆ ನಮ್ಮಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿ ಹೊರಬರುವುದೇ ಇಲ್ಲ. ಇಂಗ್ಲೆಂಡ್ ನಲ್ಲಿ ಒಬ್ಬಾಕೆ ತನ್ನ ಬಹುಮಹಡಿ ಕಟ್ಟಡದ ಸೆಲ್ಫ್ ಡಿಫೆನ್ಸ್ ಎಕ್ಸ್ ಪರ್ಟ್ ಡೋರ್ ಮ್ಯಾನ್ ನಿಂದ (ಕಾಲುಗಾರ) ಸಹಾಯ ಕೇಳಿದಾಗ ಈ ವಿಷಯ ಬಯಲಾಯಿತು. ನಿಧಾನವಾಗಿ ಆತನ ಬಳಿ ಇನ್ನಷ್ಟು ಮತ್ತಷ್ಟು ಗ್ರಾಹಕರು ಬರತೊಡಗಿದರು.
ಲಂಡನ್ನಿನ ಪೇರೆಂಟಲ್ ಎಜುಕೇಶನ್ ಗ್ರೋಥ್ ಒಂದು ಸಣ್ಣ ಸಂಸ್ಥೆಯಾಗಿದ್ದು, ಹೀಗೆ ಮಕ್ಕಳಿಂದ ಸಂತ್ರಸ್ತ ಪೇರೆಂಟ್ಸ್ ಗೆ ನೀಡುವ ಸಲಹೆ ಎಂದರೆ, ಸೆಲ್ಫ್ ಡಿಫೆನ್ಸ್ ಕಲಿಯಿರಿ. ಹೀಗಾಗಿ 3 ವರ್ಷಗಳಲ್ಲಿ ಇದರ ಗ್ರಾಹಕರು 3 ಪಟ್ಟು ಹೆಚ್ಚಿದ್ದಾರೆ. ನಮ್ಮಲ್ಲಿ ಇಂಥ ಪ್ರಕರಣ ಎಲ್ಲೊ ಅಲ್ಲೊಂದು ಇಲ್ಲೊಂದು ಮಾತ್ರ ಹೊರಬರುತ್ತವೆ. ಕುಡುಕ, ನಶಾಕೋರ ಮಕ್ಕಳು ಬೇಕೆಂದೇ ಹೆತ್ತವರನ್ನು ಗೋಳಾಡಿಸುತ್ತಾರೆ, ಹಣ ಕೀಳುತ್ತಾರೆ, ಆಸ್ತಿ ಮಾರಬೇಕೆಂದು ಬಲವಂತದ ರುಜು ಮಾಡಿಸುತ್ತಾರೆ. ಅಪರೂಪಕ್ಕೆ 1-2 ಕಡೆ ಚೈಲ್ಡ್ ಮರ್ಡರ್ಸ್ ಸಹ ನಡೆದಿವೆ.
ಇಂಥ ಹಿಂಸಕ ಮಕ್ಕಳಿಂದ ಪಾರಾಗುವುದು ಒಂದು ಪವಾಡವೇ ಸರಿ. ಇಂದಿನ ಕಿಶೋರರು ಇಂಥ ದುರಭ್ಯಾಸ ರೂಢಿಸಿಕೊಂಡರೆ ಸ್ವಾತಂತ್ರ್ಯ ಸ್ವೈರತೆಯಾಗಿ, ಕಷ್ಟಪಟ್ಟು ಗಳಿಸಿದ ಹಣವನ್ನು ಅನ್ಯಾಯವಾಗಿ ಉಡಾಯಿಸುತ್ತಾರೆ. ತಂದೆಯ ದುಷ್ಕೃತ್ಯಗಳಿಂದ ತಾಯಿಯನ್ನು ಕಾಪಾಡಿಕೊಳ್ಳಲೆಂದು ಕಿಶೋರರು ತಂದೆಯ ಕೊಲೆ ಮಾಡುವುದು ಮಾಮೂಲಿ. ಆದರೆ ಕಾರಣವಿಲ್ಲದೆ ಮುಗ್ಧ ಪೋಷಕರು ಇಂಥ ಪಾಪಿ ಮಕ್ಕಳಿಂದ ಶೋಷಣೆಗೆ ಗುರಿಯಾದರೆ ಕಾಪಾಡುವವರು ಯಾರು?
ಜನರನ್ನು ಸಮಾಜ ಒಂದೇ ಎಂದು ಭಾವಿಸುತ್ತದೆ. ಹೊರಗಿನ ಜನ ಮನೆಯ ಒಬ್ಬರನ್ನು ಆಕ್ರಮಿಸಿದರೂ, ಇಡೀ ಮನೆ ಒಂದಾಗಿ ಅಂಥವರ ವಿರುದ್ಧ ಹೋರಾಡುತ್ತದೆ. ಅಂದರೆ ಮನೆಯ ಅಂತಃಕಲಹ ಮನೆಗಷ್ಟೇ ಸೀಮಿತವಾಗಿರುತ್ತದೆ. ಆದರೆ ತಪ್ಪು ಬೆಳೆಸುವಿಕೆ, ಹಠಮಾರಿ ಮಕ್ಕಳು, ಸೋಲೊಪ್ಪದ ಪೇರೆಂಟ್ಸ್ ಮಧ್ಯೆ ಸಂಘರ್ಷ ಎಂದೂ ತಪ್ಪದು, ಅನೇಕ ಸಮಸ್ಯೆಗಳಿಗೆ ದಾರಿ ಮಾಡುತ್ತದೆ.
ಇಂದಿನ ಕಿಶೋರರು ಹಿಂದಿನವರಿಗಿಂತ ಸರ್ವಂತ್ರ ಸ್ವತಂತ್ರರು. ತಮ್ಮ ಪ್ರತಿಷ್ಠೆಗಾಗಿ ಪೇರೆಂಟ್ಸ್ ಅವರಿಗೆ ಧಾರಾಳ ಪಾಕೆಟ್ ಮನಿ ನೀಡಿ ನೀಡಿ ಅವರಿಗೆ ಕೊಂಬು ಮೂಡಿಸುತ್ತಾರೆ. ತಮ್ಮ ಬಿಝಿ ಶೆಡ್ಯೂಲ್ ನಡಿ ಮಕ್ಕಳ ಕಡೆ ಗಮನ ಹರಿಸಲಾಗದು, ಅವರು ಬೇಕಾದ್ದು ತಿಂದುಂಡು ನೆಮ್ಮದಿಯಾಗಿರಲಿ ಎಂಬುದು ಇವರ ಗುರಿ. ಈ ಮಕ್ಕಳ ಕೈಗೆ ದುಬಾರಿ ಐಫೋನ್ ಬಂದಿರುತ್ತದೆ. ಅದರಲ್ಲಿ ಹಿಂಸೆಯ ವೈಭವೀಕರಣ ಕಂಡು ಅವರು ಪ್ರಭಾವಿತರಾಗದೆ ಇರುತ್ತಾರೆಯೇ? ಹಿಂಸಾಚಾರದ ಮತ್ತೊಂದು ಪ್ರತಿರೂಪವೇ ವಿಡಿಯೋ ಗೇಮ್ಸ್. ಕೊಂದವನೇ ವಿಜೇತ ಎಂಬ ಸಲಹೆ ನೀಡುತ್ತದೆ. ಮಕ್ಕಳ ಸೈಕಾಲಜಿಗೆ ಮೊದಲಿನಿಂದ ಹಿಂಸೆ ಕಲಿಸಲಾಗುತ್ತದೆ. ಪುರಾಣ ಪುಣ್ಯಕಥೆಗಳಲ್ಲಿನ ಯುದ್ಧದ ಪ್ರಭಾವದಿಂದ ಇವರು ಹೀಗಾಗುತ್ತಾರೆ.





