ನಮ್ಮ ದೇಶದಲ್ಲಿ ಈ ಹಿಂದೆ ಮಕ್ಕಳಿರಲವ್ವಾ ಮನೆ ತುಂಬಾ ಎಂಬ ಗಾದೆ ಮಾತಿತ್ತು. ಮದುವೆಯಲ್ಲಿ ನವ ದಂಪತಿಗಳಿಗೆ ಹರಸುವಾಗ ವರುಷದೊಳಗೇ ಮುದ್ದಾದ ಹಸುಕಂದನು ಮಡಲಲಿ ನಗುತಿರಲಿ ಎಂದು ಹಾರೈಸುತ್ತಿದ್ದವರು, ಭಾರತದಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ನಿಯಂತಿಸುವ ಸಲುವಾಗಿಯೇ.

ನಮ್ಮ ದೇಶದಲ್ಲಿ 1952 ರಲ್ಲೇ ಕುಟುಂಬ ಯೋಜನೆಗಾಗಿ ರಾಷ್ಟ್ರೀಯ ಕಾರ್ಯಕ್ರಮವನ್ನು ಪ್ರಾರಂಭಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಹೀಗೆ ಕುಟುಂಬ ಕಲ್ಯಾಣ ಯೋಜನೆ ದೇಶದಲ್ಲಿ ಜಾರಿಗೆ ಬಂದ ಕೂಡಲೇ, ದೇಶದ ಜನಸಂಖ್ಯಾ ಸ್ಪೋಟವನ್ನು ತಡೆಯುವ ಉದ್ದೇಶದಿಂದ ಆರತಿಗೊಬ್ಭಳು ಮಗಳು, ಕೀರ್ತಿಗೊಬ್ಬ ಮಗ ಎನ್ನುವ ಧ್ಯೇಯ ವಾಕ್ಯವನ್ನು ಪಠಿಸತೊಡಗಿದರು. ನಂತರದ ವರ್ಷಗಳಲ್ಲಿ ಹೆಚ್ಚುತ್ತಿರುವ ಬೆಲೆಗಳಿಂದ ಮಕ್ಕಳನ್ನು ಸಾಕುವುದೇ ಕಷ್ಟ ಎನಿಸಿದಾಗ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹೆಣ್ಣಾಗಲೀ, ಗಂಡಾಗಲೀ ಮಕ್ಕಳೊಂದೇ ಇರಲಿ ಎನ್ನುವಂತಾಯಿತು. ಇತ್ತೀಚೆಗೆ ಸುಖಃ ಸಂಸಾರ ನಡೆಸಲು ಗಂಡ ಹೆಂಡತಿ ಇದ್ದರೆ ಸಾಕು ಮಕ್ಕಳೇಕೆ ಬೇಕು? ಎನ್ನುವ ಮನಸ್ಥಿತಿಗೆ ಬಂದಿದ್ದರೂ, ಇನ್ನೂ  ಈ ದೇಶದ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಏನೂ ಎಂದು ಅರಿಯಲು ಮುಂದಾದಾಗ, ದೇಶಕ್ಕಿಂತಲೂ ನಮಗೆ ಧರ್ಮವೇ ಮುಖ್ಯ ಎಂದು ದೇಶದ ಕಾನೂನನ್ನೇ ಧಿಕ್ಕರಿಸಿ, ಇನ್ನೂ ತುಂಬಿ ತುಳುಕುತ್ತಿರುವ ಬಡತನದಿಂದ ಕೂಡಿದ ಅಜ್ಞಾನ, ಮೌಢ್ಯಯುತ ಧಾರ್ಮಿಕ ಶ್ರದ್ಧೆ, ಅಪಕ್ವ ಚಾಪಲ್ಯತೆ ಮುಂತಾದ ಕಾರಣಗಳು ಜನಸಂಖ್ಯೆಯ ಏರಿಕೆ ನಿರಂತರವಾಗಿ ಏರುಮುಖದತ್ತಲೇ ಇರುವಂತೆ ಮಾಡಿರುವುದು ನಿಜಕ್ಕೂ ನಮ್ಮ ದೇಶದ ಅಭಿವೃದ್ಧಿಗೆ ಕಳಕವಳಕಾರಿಯಾಗಿದೆ.

ಇವೆಲ್ಲದರ ನಡುವೆ, ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಯಾವುದೇ ಬೇಧ ಭಾವವಿಲ್ಲದೇ, ಇಬ್ಬರಿಗೂ ಸರಿ ಸಮಾನತೆಯ ಬಗ್ಗೆ ಮಾತನಾಡುತ್ತಿರುವ ಸಂಧರ್ಭದಲ್ಲಿಯೇ ಇನ್ನೂ ಪುರುಷ ಪ್ರಧಾನವ ಮನಸ್ಥಿತಿಯ ಹರಿಯಾಣದ ಫತೇಹಾಬಾದ್ ಜಿಲ್ಲೆಯ ಭುನಾ ಪ್ರದೇಶದ ಧನಿ ಭೋಜರಾಜ್ ಗ್ರಾಮದ  ಸಂಜಯ್ ಕುಮಾರ್ ಮತ್ತು ಸುನೀತಾ ಅವರು 2007 ರಲ್ಲಿ ವಿವಾಹವಾಗಿ ಕಳೆದ 19 ವರ್ಷಗಳಲ್ಲಿ  ಗಂಡು ಮಗುವಿನಾಸೆಗಾಗಿ ಸರಾಸರಿ ವರ್ಷಕ್ಕೊಂದು ಮೇಲಿಂದ ಮೇಲೆ ಹೆಣ್ಣು ಮಕ್ಕಳನ್ನು ಹೆರುತ್ತಾ ಅಂತಿಮವಾಗಿ ತಮ್ಮೂರಿಂದ  50 ಕಿ.ಮೀ ದೂರವಿರುವ  ಉಚ್ಚನಾ ಪಟ್ಟಣದ ಜಿಂದ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ೨೦೨೬ರ  ಜನವರಿ 3 ರಂದು ಆಸ್ಪತ್ರೆಗೆ ದಾಖಲಾಗಿ, ಮಾರನೇ ದಿನ ಜನವರಿ 4 ರಂದು  ಹತ್ತು ಹೆಣ್ಣು ಮಕ್ಕಳ ನಂತರ 11ನೇ ಮಗುವಾಗಿ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ವಿಚಿತ್ರವಾದ ಧಾಖಲೆಗೆ ಪಾತ್ರರಾಗಿರುವುದಲ್ಲದೇ, ಆ ಮಗುವಿನ ತಂದೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿ  ಎಲ್ಲರ  ಗಮನವನ್ನು ಸೆಳೆಯುವಂತಾಗಿದೆ.

ಮಗುವಿನ ತಂದೆ ಸಂಜಯ್ ಕುಮಾರ್ 38 ವರ್ಷದ ದಿನಗೂಲಿ ಕಾರ್ಮಿಕನಾಗಿದ್ದು, ಯೂಟ್ಯೂಬರ್ ಕುಸುಮ್ ಗೋಯತ್ ಅವರೊಂದಿಗೆ ಮಾತನಾಡುತ್ತಾ, ನಮಗೆ ಗಂಡು ಮಗು ಬೇಕಿತ್ತು ಮತ್ತು ನಮ್ಮ ಹೆಣ್ಣುಮಕ್ಕಳಿಗೂ ಸಹಾ ಸಹೋದರನನ್ನು ಹಂಬಲಿಸಿದ್ದರು ಹಾಗಾಗಿ ಸತತವಾಗಿ 10 ಹೆಣ್ಣು ಮಕ್ಕಳ ನಂತರ ಈಗ ಹನ್ನೊಂದನೇ ಮಗುವಾಗಿ ಗಂಡು ಮಗು ಹುಟ್ಟುವ ಮೂಲಕ ತಮ್ಮ ಮತ್ತು ತಮ್ಮ ಹೆಣ್ಣು ಮಕ್ಕಳ ಆಸೆ ಈಡೇರಿದ್ದು ಅವರ ಹತ್ತು ಅಕ್ಕಂದಿರು ತಮ್ಮ ಮಗನಿಗೆ ದಿಲ್ಖುಷ್ (ಮನಸ್ಸಂತೋಷ) ಎಂದು ಹೆಸರಿಸಿದ್ದಾರೆ ಎಂದು  ತಿಳಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ