ಎಂಪವರ್ಮೆಂಟ್‌ ಥ್ರೂ ಎಂಟರ್‌ ಟೇನ್ಮೆಂಟ್‌ ಆನ್‌ ಸ್ಕ್ರೀನ್‌ಆಫ್‌ ಸ್ಕ್ರೀನ್‌ ಬಾಲಿವುಡ್‌ ನಲ್ಲಿ ದಿನೇದಿನೇ ಹೊಸ ಸ್ಟಾರ್‌ ಗಳ ಉದಯ ಆಗುತ್ತಲೇ ಇರುತ್ತದೆ, ಹಾಗೇ ಕಣ್ಮರೆಯೂ ಆಗಿಹೋಗುತ್ತಾರೆ. ಇಲ್ಲಿ ಸತತ 25 ವರ್ಷಗಳಿಂದ ಅಂಟಿಕೊಂಡಿರುವುದು ಅಂದ್ರೆ ಸುಮ್ಮನಲ್ಲ! ಬಾಲಿವುಡ್‌ ನಲ್ಲಿ ಕೇವಲ ತನ್ನ ನಟನೆಯನ್ನು ದಮ್ ನಿಂದಲೇ ತಿಲೋತ್ತಮಾ ತನ್ನ ಐಡೆಂಟಿಟಿ ಪಡೆದರು. ಜೊತೆಗೆ ಈಕೆ ಫಿಲ್ಮಂ ಫೇರ್‌ ಮಾತ್ರವಲ್ಲದೆ, ಅನೇಕ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ. ಈಕೆಯ ತವರು ಕೋಲ್ಕತಾ, ಇವರ ತಂದೆ ವಾಯುಸೇನೆಯಲ್ಲಿ ಉನ್ನತ ಅಧಿಕಾರಿ ಆಗಿದ್ದರು.

ಇಂದು ಈಕೆ ಒಬ್ಬ ಜನಪ್ರಿಯ ನಟಿಯಾಗಿ ಗುರುತಿಸಲ್ಪಡುತ್ತಾರೆ. ಈಕೆ ಮೀರಾ ನಾಯರ್‌ ರ `ಮಾನ್‌ ಸೂನ್‌ ವೆಡ್ಡಿಂಗ್‌’ ಚಿತ್ರದಲ್ಲಿ 2001ರಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿದ್ದರು. ಅಲ್ಲಿಂದ ಈಕೆ ಸತತ ಹಿಂದಿ ಚಿತ್ರಗಳಲ್ಲಿ ನಟಿಸತೊಡಗಿದರು. `ತಿತಲೀ, ಸಮಯ್‌ಕೇ ಛಾಯಾ, ಬೂಂದ್‌, ತಾಲೀ, ಶಾಂಘೈ, ಸಾಹಸಿ ಛೋರಿ, ಪತ್ರ, ನಯನತಾರಾ ಕಾ ಹಾರ್‌, ಬುಧಿಯಾ ಸಿಂಗ್‌ ಬಾರ್ನ್‌ ಟು ರನ್‌, ಗಂಜ್‌ ಮೇ ಏಕ್‌ ಮೌತ್‌, ಮಂಟೋ, ರಾಹ್‌ ಗೀರ್‌, ಧೀತ್‌ ಪತಂಗೆ, ಲಸ್ಟ್ ಸ್ಟೋರಿಸ್‌, ದರ್ಪಣ್‌, ಶ್ಯಾಡೋಬಾಕ್ಸ್’ ಹೀಗೆ 2025ರವರೆಗೂ ಸತತ ಪಾತ್ರ ಗಿಟ್ಟಿಸುವುದು ಸುಲಭದ ಮಾತಲ್ಲ.

ಟಿವಿ ಮತ್ತು OTT ಚಿತ್ರಗಳವರೆಗೂ ತಿಲೋತ್ತಮಾ ಒಂದು ಡ್ರಮಾಟಿಕ್‌ ಚಿತ್ರ `ಸರ್‌’ನಲ್ಲಿ ಹೌಸ್‌ ಲೈಫ್‌ ಪಾತ್ರ ವಹಿಸಿದ್ದಾರೆ. ಈ ಸರ್ವಶ್ರೇಷ್ಠ ನಟನೆಗಾಗಿ ಈಕೆಗೆ ಫಿಲ್ಮಂ ಫೇರ್‌ ಕ್ರಿಟಿಕ್ಸ್ ಅವಾರ್ಡ್‌ ಬಂದಿದೆ. ಸಿನಿಮಾ ಮಾತ್ರವಲ್ಲದೆ, ಟಿವಿ ಮತ್ತು OTT ಪ್ಲಾಟ್ ಫಾರ್ಮ್ ನಲ್ಲೂ ಈಕೆ ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡಿದ್ದಾರೆ. `ಎ ಡೆತ್‌ ಇನ್‌ ದಿ ಗಂಜ್‌, ಲಸ್ಟ್ ಸ್ಟೋರಿಸ್‌’ ಜೊತೆ ಜೊತೆಯಲ್ಲಿ ಟಿವಿ ಸೀರೀಸ್‌ `ದಿಲ್ಲಿ ಕ್ರೈಂ, ದಿ ನೈಟ್‌ ಮ್ಯಾನೇಜರ್‌, ಪಾತಾಳ ಲೋಕ್‌’ನಂಥ ಜನಪ್ರಿಯ ಸೀರೀಸ್‌ ನಲ್ಲಿ ಕಾಣಿಸಿಕೊಂಡು ಕಿರುತೆರೆಯಿಂದಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಈಕೆ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನ ವಿದ್ಯಾರ್ಥಿನಿ. ನಟನೆಯಲ್ಲಿ ಅಭಿರುಚಿ ಬೆಳೆಸಿಕೊಂಡ ಕಾರಣ, ಈಕೆ ಅರವಿಂದ್ ಗೌಡರ ಅಸ್ಮಿತಾ ಥಿಯೇಟರ್‌ ಗ್ರೂಪ್‌ ಸೇರಿದರು. ತಿಲೋತ್ತಮಾ ನ್ಯೂಯಾರ್ಕ್‌ ಯೂನಿವರ್ಸಿಟಿ ಥಿಯೇಟರ್‌ ನಲ್ಲಿ ಮಾಸ್ಟರ್ ಪ್ರೋಗ್ರಾಂಗಾಗಿ ಅಲ್ಲಿಗೆ ಹೋದರು. ಈ ಮಧ್ಯೆ ಆಕೆಗೆ ಅಮೆರಿಕನ್‌ ಜೇಲಿನಲ್ಲಿ ಕೊಲೆಗಾರ ದೋಷಿಗಳಿಗೆ ಥಿಯೇಟರ್‌ ಆ್ಯಕ್ಟಿಂಗ್ ಕಲಿಸುವ ಅವಕಾಶ ಸಿಕ್ಕಿತು. ಈಕೆಗೆ ಇದು ಜೀವಮಾನವಿಡೀ ಮರೆಯಲಾಗದ ಅನುಭವ. ಮಾಸ್ಟರ್ಸ್‌ ಪಡೆದ ನಂತರ, ಆಕೆ ಮುಂಬೈಗೆ ಮರಳಿ, ಬಾಲಿವುಡ್‌ ನ ಖಾಯಂ ಸದಸ್ಯೆ ಆದರು.

ಪರಿಶ್ರಮಕ್ಕೆ ದೊರೆತ ಪ್ರತಿಫಲ

2018ರಲ್ಲಿ ಈಕೆಯ `ಗಂಜ್‌ ಮೇ ಏಕ್‌ ಮೌತ್‌’ ಚಿತ್ರ ಫಿಲ್ಮಂ ಫೇರ್‌ ಪ್ರಶಸ್ತಿ ಗಳಿಸಿತು. ಮುಂದೆ 2021ರಲ್ಲಿ ಈಕೆ `ಮಹೋದಯ್‌’ ಚಿತ್ರಕ್ಕಾಗಿ ಅತ್ಯುತ್ತಮ ನಟಿ (ಕ್ರಿಟಿಕ್ಸ್) ಅವಾರ್ಡ್‌ ಪಡೆದರು. 2023ರಲ್ಲಿ `ದಿ ನೈಟ್‌ ಮ್ಯಾನೇಜರ್‌’ ಚಿತ್ರಕ್ಕಾಗಿ ಫಿಲ್ಮಂ ಫೇರ್‌ ನ OTT ಪ್ರಶಸ್ತಿ ಸಹ ಪಡೆದರು. 2023ರಲ್ಲಿ `ದಿಲ್ಲಿ ಕ್ರೈಂ’ ಚಿತ್ರಕ್ಕಾಗಿ ಸರ್ವಶ್ರೇಷ್ಠ ನಟಿ ಎನಿಸಿದರು.

ಬಾಲಿವುಡ್‌ ನಲ್ಲಿ ನ್ಯಾಪೋಟಿಸಂ ಒಂದು ಕಹಿ ಸತ್ಯವೇ ಸರಿ. ಈ ಕಾರಣ ಎಷ್ಟೋ ಹೊಸಬರು, ಅತ್ಯುತ್ತಮ ಕಲಾವಿದರೂ ಸಹ ವರ್ಷಗಟ್ಟಲೆ ಸ್ಟ್ರಗಲ್ ಮಾಡುತ್ತಾ ಇದ್ದುಬಿಡುತ್ತಾರೆ. ಯಾರಿಗೆ ಫಿಲ್ಮಿ ಬ್ಯಾಕ್‌ ಗ್ರೌಂಡ್‌ ಇರುತ್ತದೋ, ಅವರು ಶ್ರಮಪಡದೆ ಅವಕಾಶ ಗಿಟ್ಟಿಸುತ್ತಾರೆ. ಈಕೆಗಂತೂ ಬಾಲಿವುಡ್‌ ನಲ್ಲಿ ಯಾವ ಗಾಡ್‌ ಫಾದರ್‌ ರಕ್ಷೆಯೂ ಇರಲಿಲ್ಲ. ಬಾಲಿವುಡ್‌ ನಲ್ಲಿ ಈಕೆಗೆ ಏನೇ ಯಶಸ್ಸು ಸಿಕ್ಕಿರಲಿ, ಅದು ಕೇವಲ ಇವರ ನಟನೆಯ ಮೆರಿಟ್‌ ನಿಂದ ಮಾತ್ರ! ಇಂದು ತಿಲೋತ್ತಮಾ ತನ್ನ ಪರಿಶ್ರಮದ ಕಾರಣ, ನಾಳಿನ ಆಧುನಿಕ ಯುವತಿಯರಿಗೆ ಬಹುದೊಡ್ಡ ಪ್ರೇರಣಾ ಮೂಲವಾಗಿದ್ದಾರೆ. ಈಕೆ ಅಂಥವರಿಗೆ ಒಂದು ಇನ್‌ ಸ್ಪಿರೇಶನ್‌, ಹೀಗಾಗಿ ಗೃಹಶೋಭಾ ಇವರಿಗೆ `ಇನ್‌ ಸ್ಪೈರ್‌ ಅವಾರ್ಡ್ಸ್’ ಇತ್ತು ಸನ್ಮಾನಿಸಿದೆ. ಇದು ಈಕೆಗೆ ನಿಜ ಅರ್ಥದಲ್ಲಿ ಸಂದ ಮೋಟಿವೇಶನ್ ಎನ್ನುತ್ತಾರೆ.

ಶಕೀಲ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ