– ರಾಘವೇಂದ್ರ ಅಡಿಗ ಎಚ್ಚೆನ್.

ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಇದೀಗ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ರನ್ಯಾ ರಾವ್‌ಗೆ ಚಿನ್ನದ ಬಿಸ್ಕೆಟ್ ನೀಡಿದ್ದಾಗಿ ಒಪ್ಪಿಕೊಂಡಿರುವ ಆಕೆಯ ಆಪ್ತ, ಡಿಆರ್‌ಐ (DRI) ಅಧಿಕಾರಿಗಳ ಶೋಕಾಸ್ ನೋಟಿಸ್ ಬಳಿಕ ಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ರನ್ಯಾಗೆ ನೇರ ಹೊಣೆ ಹೊರಿಸಲು ಮುಂದಾಗಿದ್ದಾನೆ.

ಡಿಆರ್‌ಐ ನೋಟಿಸ್‌ಗೆ ಬೆದರಿದ ಆರೋಪಿತ, ಕೋರ್ಟ್ ಮುಂದೆ ತಪ್ಪೊಪ್ಪಿಗೆಯ ನೆಪದಲ್ಲಿ ತನ್ನ ವಾದ ಮಂಡಿಸಿದ್ದಾನೆ. “ನಾನು ರನ್ಯಾ ರಾವ್‌ಗೆ ಚಿನ್ನದ ಬಿಸ್ಕೆಟ್ ನೀಡಿದ್ದು ನಿಜ. ಆದರೆ ಚಿನ್ನ ನೀಡಿದ್ದು ದುಬೈನಲ್ಲಿ. ಆದ್ದರಿಂದ ನನ್ನ ಮೇಲೆ ದುಬೈ ಕಾನೂನು ಅನ್ವಯವಾಗಬೇಕು. ಭಾರತದ ಕಾನೂನು ನನಗೆ ಅನ್ವಯಿಸುವುದಿಲ್ಲ” ಎಂದು ಹೇಳಿದ್ದಾನೆ.

ಇದರ ಜೊತೆಗೆ, “ನಾನು ಭಾರತದಲ್ಲಿ ಯಾವುದೇ ಅಕ್ರಮ ವ್ಯವಹಾರ ನಡೆಸಿಲ್ಲ. ಚಿನ್ನವನ್ನು ಮಾರಾಟ ಮಾಡಲು ಅಥವಾ ಭಾರತದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ” ಎಂದು ತನ್ನನ್ನು ಸಮರ್ಥಿಸಿಕೊಂಡಿದ್ದಾನೆ.

ಅಷ್ಟೇ ಅಲ್ಲದೆ, “ನಾನು ನೀಡಿದ ಚಿನ್ನವನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಿದ್ದು ರನ್ಯಾ ರಾವ್. ಆದ್ದರಿಂದ ಭಾರತೀಯ ಕಾನೂನು ಆಕೆಗೆ ಮಾತ್ರ ಅನ್ವಯವಾಗಬೇಕು. ನನ್ನನ್ನು ಈ ಪ್ರಕರಣದಿಂದ ಮುಕ್ತಗೊಳಿಸಬೇಕು” ಎಂದು ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾನೆ.

ಆರೋಪಿತನ ಈ ಹೇಳಿಕೆ ಪ್ರಕರಣದ ತನಿಖೆಗೆ ಹೊಸ ಆಯಾಮ ನೀಡಿದ್ದು, ರನ್ಯಾ ರಾವ್‌ಗೆ ಆಪ್ತನಿಂದಲೇ ದೊಡ್ಡ ಹಿನ್ನಡೆಯಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ