Sj*

AK 47″, “ಲಾಕಪ್ ಡೆತ್”, ” ಕಲಾಸಿಪಾಳ್ಯ”, “ಹುಚ್ಚ” ಸೇರಿದಂತೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನದ ನೂತನ ಚಿತ್ರ “ಜಿಲ್ಲಾಧಿಕಾರಿ”. ” ಡೆಡ್ಲಿ ಸೋಮ” ಸೇರಿದಂತೆ ಅನೇಕ ಚಿತ್ರಗಳ ಮೂಲಕ ಜನರ ಮನ ಗೆದ್ದಿರುವ ಆದಿತ್ಯ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಈ ನೂತನ ಚಿತ್ರದ ಘೋಷಣೆಯಾಗಿದೆ.

ಈ ನೂತನ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ಮೊದಲವಾರ ಆರಂಭವಾಗಲಿದೆ. ಇದೊಂದು ಪಕ್ಕಾ ಮಾಸ್ ಹಾಗೂ ಕಮರ್ಷಿಯಲ್ ಚಿತ್ರವಾಗಿದ್ದು, ಕೆಲವು ನೈಜ ಘಟನೆಗಳು ಈ ಚಿತ್ರದ ಕಥೆಗೆ ಸ್ಪೂರ್ತಿ ಎನ್ನುತ್ತಾರೆ ನಿರ್ದೇಶಕ ಓಂಪ್ರಕಾಶ್ ರಾವ್.

adhikari

OPR ಪಿಕ್ಚರ್ಸ್ ಲಾಂಛನದಲ್ಲಿ ಲಲಿತಮ್ಮ ಹಾಗೂ ಸುಶೀಲ(ತಿಪಟೂರು) ಅರ್ಪಿಸುತ್ತಿರುವ ಈ ಚಿತ್ರವನ್ನು ಉಮೇಶ್ ಸಕ್ಕರೆನಾಡು ನಿರ್ಮಾಣ ಮಾಡುತ್ತಿದ್ದಾರೆ. ರವಿಕುಮಾರ್ ಛಾಯಾಗ್ರಹಣ ಹಾಗೂ ವಿ.ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಡೆನ್ನಿಸಾ ಪ್ರಕಾಶ್ ಕಥೆ ಬರೆದಿದ್ದಾರೆ. ಆದಿತ್ಯ ಅವರಿಗೆ ನಾಯಕಿಯಾಗಿ ರೂಪ ಸಿದ್ದಗಂಗಾ ನಟಿಸುತ್ತಿದ್ದಾರೆ. ರೂಪ ಅವರಿಗೆ ಇದು ಚೊಚ್ಚಲ ಚಿತ್ರ, ರಾಕ್ಲೈನ್ ವೆಂಕಟೇಶ್, ಭಾಸ್ಕರ್ ಶೆಟ್ಟಿ, ಯಶಸ್ ಅಭಿ, ಸ್ಮಿತಾ, ಸ್ವರ ಬಿ, ಅಚ್ಯುತಕುಮಾರ್, ರಂಗಾಯಣ ರಘು, ಅವಿನಾಶ್, ಸ್ವಸ್ತಿಕ್ ಶಂಕರ್, ಚಿತ್ರಾ ಶೆಣೈ, ಸುಧಾ ಬೆಳವಾಡಿ ಉಮೇಶ್ ಸಕ್ಕರೆನಾಡು, ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ