–  ರಾಘವೇಂದ್ರ ಅಡಿಗ ಎಚ್ಚೆನ್.

ಬೆಂಗಳೂರು, 6 ಸೆಪ್ಟೆಂಬರ್ 2026: ಬೆಂಗಳೂರಿನ ಫ್ಯಾಷನ್ ಕ್ಯಾಲೆಂಡರ್ನಲ್ಲಿ ಸೆಪ್ಟೆಂಬರ್ 5 ರ ಶನಿವಾರ ಅಭೂತಪೂರ್ವ ಮತ್ತು ಅವಿಸ್ಮರಣೀಯವಾದ ಸಮಾರಂಭಕ್ಕೆ ಫೀನಿಕ್ಸ್ ಮಾರ್ಕೆಟ್ ಸಿಟಿ ಸಾಕ್ಷಿಯಾಯಿತು. ಇಲ್ಲಿ ಖ್ಯಾತ ಫ್ಯಾಷನ್ ತಜ್ಞರಾದ ಪ್ರಸಾದ್ ಬಿಡ್ಡಪ್ಪ ಅವರ ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ 2026 ರ ಗ್ರಾö್ಯಂಡ್ ಫಿನಾಲೆಗೆ ಫೀನಿಕ್ಸ್ ಮಾರ್ಕೆಟ್ ಸಿಟಿ ಒಂದು ಭವ್ಯವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಿತು. ಮಾಡೆಲಿಂಗ್ ಕ್ಷೇತ್ರದಲ್ಲಿ ಪ್ರತಿಭೆಗಳನ್ನು ಗುರುತಿಸಿ, ಬೆಳೆಸುವ ಪ್ರಸಾದ್ ಬಿಡ್ಡಪ್ಪ ಅವರ 40 ವರ್ಷಗಳ ಪರಂಪರೆಯನ್ನು ಸಂಭ್ರಮಿಸುವ ಈ ವಿಶೇಷ ಸಂಜೆ, ಉದಯೋನ್ಮುಖ ಮಾಡೆಲ್ಗಳು, ಪ್ರಮುಖ ಫ್ಯಾಷನ್ ಮತ್ತು ಲೈಫ್ಸ್ಟೈಲ್ ಬ್ರ್ಯಾಂಡ್ಗಳು ಹಾಗೂ ಸೆಲೆಬ್ರಿಟಿಗಳ ಉಪಸ್ಥಿತಿಯಲ್ಲಿ ಫ್ಯಾಷನ್, ಆತ್ಮವಿಶ್ವಾಸ ಮತ್ತು ಹೊಸ ಪ್ರತಿಭೆಗಳ ಅದ್ಧೂರಿ ಸಂಭ್ರಮವಾಗಿ ಮೂಡಿಬಂದಿತು.

2026 ರ ಆವೃತ್ತಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಂಗಳೂರಿನಾದ್ಯAತ ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ 3,000ಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊAಡಿದ್ದರು. ಆಡಿಷನ್ ಮತ್ತು ಸ್ಕಿçÃನಿಂಗ್ ಪ್ರಕ್ರಿಯೆಯ ನಂತರ, ಫ್ಯಾಷನ್ ಲೋಕದ ತಜ್ಞರ ಮಾರ್ಗದರ್ಶನದಲ್ಲಿ ಗ್ರ್ಯಾಂಡ್ ಫಿನಾಲೆ ರಿಹರ್ಸಲ್ಗಾಗಿ 60 ಫೈನಲಿಸ್ಟ್ಗಳನ್ನು ಆಯ್ಕೆ ಮಾಡಲಾಯಿತು.

1001797814

2026ರ ಆವೃತ್ತಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಂಗಳೂರಿನಾದ್ಯAತ ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ 3,000ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದರು. ಆಡಿಷನ್ಗಳು ಮತ್ತು ಸ್ಕ್ರೀನಿಂಗ್ ಪ್ರಕ್ರಿಯೆಯ ನಂತರ, ಗ್ರ್ಯಾಂಡ್ ಫಿನಾಲೆಯ ರಿಹರ್ಸಲ್ಗಾಗಿ 80 ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು. ಇವರಿಗೆ ಪ್ರಸಾದ್ ಬಿಡ್ಡಪ್ಪ, ಕೆವಿನ್ ಆಲಿವರ್, ರ್ರಿ ದಬಾಸ್, ಶಮ್ಶೇರ್ ಸಿಂಗ್ ರಾಣಾ, ನಯನಿಕಾ ಚಟರ್ಜಿ, ಅನಿಲ್ ಹೊಸಮನಿ, ಜುಡಿತ್ ಬಿಡ್ಡಪ್ಪ, ನಿಕೋಸ್ ನಾರ್ಕಿಸ್ಸೋಸ್, ಪೂಣಚ್ಚ ಮತ್ತು ರಾಹುಲ್ ಸೇರಿದಂತೆ ಫ್ಯಾಷನ್ ಕ್ಷೇತ್ರದ ಖ್ಯಾತ ತಜ್ಞರು ಗ್ರೂಮಿಂಗ್ ಹಾಗೂ ತರಬೇತಿ ನೀಡಿದರು.

ಗ್ರ್ಯಾಂಡ್ ಫಿನಾಲೆಯಲ್ಲಿ ಪರಿಮಳ ಮತ್ತು ಕುಶಾಲ್ ಅವರು ರನ್ವೇ ವಿಜೇತರಾಗಿ ಹೊರಹೊಮ್ಮಿದರು. ತೇಜಲ್ ಮತ್ತು ಪ್ರಥಮ್ ಪ್ರಿಂಟ್ ವಿಭಾಗದ ವಿಜೇತರಾದರು. ಜಾಕಿ ಸಹಯೋಗದಲ್ಲಿ ನಡೆದ ಬಾಡಿ ವಿಭಾಗದಲ್ಲಿ ತನಿಷಾ ಮತ್ತು ಅಜಯ್ ವಿಜೇತರಾದರು. ಅನಾನಿಕಾ ಮತ್ತು ಸುಮಿತ್ ಕ್ರಿಯೇಟರ್ ವಿಭಾಗದಲ್ಲಿ ಆಗಿ ಜಯಗಳಿಸಿದರೆ, ಡಾ. ಕರಿಷ್ಮಾ ಏಸ್ಥೆಟಿಕ್ಸ್ಸ್ ಸಹಯೋಗದ ಸ್ಕಿನ್ & ಹೇರ್ ವಿಭಾಗದಲ್ಲಿ ಡಿಯಾನ್ನೆ ಮತ್ತು ಕೀತ್ ವಿಜೇತರಾದರು. ಹಿವಾಡೋ ಸಹಯೋಗದ ಗ್ರೂಮ್ಡ್ ವಿಭಾಗದಲ್ಲಿ ಪ್ರಕೃತಿ ಮತ್ತು ಅಥರ್ವ ವಿಜೇತರಾದರು. ಮಿಹಿಕಾ ಮತ್ತು ಡಾ. ರಾಹುಲ್ ಬಾಲಿವುಡ್ ವಿಭಾಗದಲ್ಲಿ, ವೃದಿ ಮತ್ತು ರಾಹುಲ್ ಎಲ್. ಸ್ಯಾಂಡಲ್ವುಡ್ ವಿಭಾಗದಲ್ಲಿ ಹಾಗೂ ಶಮಿತಾ ಮತ್ತು ತ್ರಿಶೂಲ್ ಟಿವಿ ವಿಭಾಗದಲ್ಲಿ ವಿಜೇತರಾದರು. ಗ್ರೇಟಾ ಮತ್ತು ಹಿಮಜಾ ಅವರು ವಿಶೇಷ ಪ್ರಶಂಸೆಗೆ ಪಾತ್ರರಾದರು.

1001797816

ಗ್ರ್ಯಾಂಡ್ ಫಿನಾಲೆಗೆ ಮುನ್ನ ಫೈನಲಿಸ್ಟ್ಗಳಿಗೆ ರನ್ವೇ ವಾಕ್, ಪೋಸಿಂಗ್, ಕೊರಿಯೋಗ್ರಫಿ, ಸ್ಟೈಲಿಂಗ್, ಪ್ರೆಸೆಂಟೇಶನ್, ಥಿಯೇಟರ್ ಮತ್ತು ಆಕ್ಟಿಂಗ್, ಫೋಟೋಗ್ರಫಿ ಹಾಗೂ ಮಾಡೆಲಿಂಗ್ ಸೈಕಾಲಜಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖ ಉದ್ಯಮ ತಜ್ಞರಿಂದ ತೀವ್ರ ತರಬೇತಿ ಮತ್ತು ಗ್ರೂಮಿಂಗ್ ನೀಡಲಾಯಿತು.

ಸಹಯೋಗಿ ಫ್ಯಾಷನ್ ಮತ್ತು ಲೈಫ್ಸ್ಟೈಲ್ ಬ್ರ್ಯಾಂಡ್ಗಳಾದ ಸೂಪರ್ಡ್ರೆöÊ(Suಠಿeಡಿಜಡಿಥಿ), ಲೆವಿಸ್ (ಐevi’s), ಮ್ಯಾಂಗೋ(ಒಚಿಟಿgo), ಹುಂಕೆಮೊಲ್ಲರ್ (ಊuಟಿಞemöಟಟeಡಿ), ಜಾಕಿ (ಎoಛಿಞeಥಿ), Uತರುಣಿ ಮತ್ತು ಮೋಹನ್ಲಾಲ್ (ಖಿಚಿಡಿuಟಿi ಚಿಟಿಜ ಒohಚಿಟಿಟಚಿಟ) ತಮ್ಮ ವಿಭಿನ್ನ ಕಲೆಕ್ಷನ್ಗಳನ್ನು ಪ್ರದರ್ಶಿಸುವ ಮೂಲಕ ರನ್ವೇಯನ್ನು ಆಕರ್ಷಕ ಫ್ಯಾಷನ್ ವೇದಿಕೆಯನ್ನಾಗಿ ಪರಿವರ್ತಿಸಿದರು. ಸಮಕಾಲೀನ ಫ್ಯಾಷನ್ ಮತ್ತು ವೈವಿಧ್ಯಮಯ ಶೈಲಿಗಳ ಅದ್ಭುತ ಸಂಯೋಜನೆ ಪ್ರೇಕ್ಷಕರ ಗಮನ ಸೆಳೆಯಿತು.

ಸಂಜೆಯ ಗ್ಲಾಮರ್ಗೆ ಮತ್ತಷ್ಟು ಮೆರುಗು ನೀಡಿದ ರನ್ನವಿಜಯ್ ಸಿಂಘಾ ಅವರು ಗ್ರ್ಯಾಂಡ್ ಫಿನಾಲೆಯಲ್ಲಿ ಶೋಸ್ಟಾಪರ್ ಆಗಿ ಭಾಗವಹಿಸಿ, ತಮ್ಮ ಸ್ಟಾರ್ ಪವರ್ನಿಂದ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದರು. ಬೆಂಗಳೂರಿನ ಉದಯೋನ್ಮುಖ ಮಾಡೆಲಿಂಗ್ ಪ್ರತಿಭೆಗಳನ್ನು ಹಾಗೂ ಹೊಸ ತಲೆಮಾರಿನ ಫ್ಯಾಷನ್ ಅಭಿಮಾನಿಗಳ ಕನಸುಗಳು ಮತ್ತು ಆಶಯಗಳನ್ನು ಸಂಭ್ರಮಿಸಿದ ಈ ಸಂಜೆ, ಫ್ಯಾಷನ್ ಲೋಕದಲ್ಲಿ ಮತ್ತೊಂದು ಸ್ಮರಣೀಯ ಅಧ್ಯಾಯವಾಗಿ ಮೂಡಿಬಂದವು.

ಮಾಲ್ ಆಫ್ ಏಷ್ಯಾದ ಸೆಂಟ್ರಲ್ ಡೈರೆಕ್ಟರ್ ಮತ್ತು ಮಾರ್ಕೆಟಿಂಗ್ (ದಕ್ಷಿಣ ಮತ್ತು ಪುಣೆ) ನಿರ್ದೇಶಕಿ ರಿತು ಮೆಹ್ತಾ ಅವರು ಮಾತನಾಡಿ, “ಫೀನಿಕ್ಸ್ ಮಾರ್ಕೆಟ್ಸಿಟಿ ಯಾವಾಗಲೂ ಫ್ಯಾಷನ್, ಸಂಸ್ಕೃತಿ, ಮನರಂಜನೆ ಮತ್ತು ನಗರದ ಚೈತನ್ಯಭರಿತ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಅನುಭವಗಳನ್ನು ಸೃಷ್ಟಿಸುವಲ್ಲಿ ನಂಬಿಕೆ ಇಟ್ಟುಕೊಂಡಿದೆ. ಪ್ರಸಾದ್ ಬಿಡ್ಡಪ್ಪ ಅವರ ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ನೊAದಿಗೆ ನಮ್ಮ ಸಹಭಾಗಿತ್ವವೂ ಇದೇ ದೃಷ್ಟಿಕೋನದ ಸಹಜ ವಿಸ್ತರಣೆಯಾಗಿದೆ. ಈ ವರ್ಷದ ಆವೃತ್ತಿಗೆ ದೊರೆತ ಅದ್ಭುತ ಪ್ರತಿಕ್ರಿಯೆ ಮತ್ತು ಗ್ರ್ಯಾಂಡ್ ಫಿನಾಲೆಯಲ್ಲಿ ನಾವು ಕಂಡ ಉತ್ಸಾಹವು ಬೆಂಗಳೂರಿನಲ್ಲಿ ಇರುವ ಅಪಾರ ಯುವ ಪ್ರತಿಭೆಯ ಸ್ಪಷ್ಟ ಸಾಕ್ಷಿಯಾಗಿದೆ. ಮಹತ್ವಾಕಾಂಕ್ಷೆಯ ಮಾಡೆಲ್ಗಳಿಗೆ ವೇದಿಕೆಯನ್ನು ಒದಗಿಸುವುದರಲ್ಲಿ ನಾವು ಸಂತೋಷಪಡುತ್ತೇವೆ. ಇಲ್ಲಿ ಅವರು ಸ್ಪಾಟ್ಲೈಟ್ ಅನುಭವಿಸಬಹುದು, ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬಹುದು ಮತ್ತು ತಮ್ಮ ಕನಸುಗಳತ್ತ ಮಹತ್ವದ ಮೊದಲ ಹೆಜ್ಜೆ ಇಡಬಹುದು. ಈ ಉದಯೋನ್ಮುಖ ಪ್ರತಿಭೆಗಳು ಮುಂದಿನ ದಿನಗಳಲ್ಲಿ ಬೆಳೆಯುತ್ತಾ ಫ್ಯಾಷನ್ ಮತ್ತು ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುವುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ’’ ಎಂದರು.

ಮಾಲ್ಸ್ (ದಕ್ಷಿಣ ಮತ್ತು ಪುಣೆ)ಯ ಅಧ್ಯಕ್ಷ ಗಜೇಂದ್ರ ಸಿಂಗ್ ಅವರು ಮಾತನಾಡಿ, “ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ 2026 ಬೆಂಗಳೂರಿನ ಚೈತನ್ಯಭರಿತ ಫ್ಯಾಷನ್ ಪರಿಸರ ವ್ಯವಸ್ಥೆ ಮತ್ತು ನಗರದಿಂದ ಹೊರಹೊಮ್ಮುತ್ತಿರುವ ಅಸಾಧಾರಣ ಪ್ರತಿಭೆಯ ಸಂಭ್ರಮವಾಗಿದೆ. ಫೀನಿಕ್ಸ್ ಮಾರ್ಕೆಟ್ಸಿಟಿಯಲ್ಲಿ ಫ್ಯಾಷನ್, ಸಂಸ್ಕೃತಿ, ಪ್ರತಿಭೆ ಮತ್ತು ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಅವಕಾಶಗಳನ್ನು ಸೃಷ್ಟಿಸಲು ನಾವು ಹೆಮ್ಮೆಪಡುತ್ತೇವೆ. ಜೊತೆಗೆ, ಮಹತ್ವಾಕಾಂಕ್ಷೆಯ ಮಾಡೆಲ್ಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ಫ್ಯಾಷನ್ ಉದ್ಯಮದ ಶಕ್ತಿಯನ್ನು ನೇರವಾಗಿ ಅನುಭವಿಸಲು ಅವಕಾಶ ನೀಡುತ್ತಿದ್ದೇವೆ. ಈ ವರ್ಷದ ಸ್ಪರ್ಧೆಗೆ ದೊರೆತ ಪ್ರತಿಕ್ರಿಯೆ ಹಾಗೂ ಫೈನಲಿಸ್ಟ್ಗಳ ಪ್ರತಿಭೆಯ ಮಟ್ಟವು ಹೊಸ ಪೀಳಿಗೆಯ ಪ್ರತಿಭೆಗಳ ಮಹತ್ವಾಕಾಂಕ್ಷೆಗೆ ಸಾಕ್ಷಿಯಾಗಿದೆ. ಭಾರತೀಯ ಫ್ಯಾಷನ್ ಕ್ಷೇತ್ರದಲ್ಲಿ ಹೊಸ ಮುಖಗಳನ್ನು ಗುರುತಿಸಿ, ಅವರಿಗೆ ಮಾರ್ಗದರ್ಶನ ನೀಡುವ ಪ್ರಸಾದ್ ಬಿಡಾಪಾ ಅವರ ಪರಂಪರೆಯನ್ನು ಮುಂದುವರಿಸುವ ವೇದಿಕೆಯ ಭಾಗವಾಗಿರುವುದು ನಮಗೆ ಸಂತೋಷದ ಸಂಗತಿಯಾಗಿದೆ’’ ಎಂದು ಹರ್ಷ ವ್ಯಕ್ತಪಡಿಸಿದರು.

2026ರ ಆವೃತ್ತಿಯು ಭಾರತೀಯ ಫ್ಯಾಷನ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹಲವು ಮುಖಗಳನ್ನು ಪತ್ತೆಹಚ್ಚಿ, ರೂಪಿಸುವಲ್ಲಿ ಪ್ರಸಾದ್ ಬಿಡ್ಡಪ್ಪ ಅವರು ಕಳೆದ ನಾಲ್ಕು ದಶಕಗಳಿಂದ ನಡೆಸಿಕೊಂಡು ಬಂದಿರುವ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಅವರ ಮಾಡೆಲಿಂಗ್ ವ್ಯವಸ್ಥೆಯೊಂದಿಗೆ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಜಾನ್ ಅಬ್ರಹಾಂ, ಡಿನೋ ಮೊರಿಯಾ, ಜಾಕ್ಲಿನ್ ಫರ್ನಾಂಡಿಸ್, ಮೇಧಾ ರಾಣಾ ಮತ್ತು ನಿಧಿ ಅಗರವಾಲ್ ಸೇರಿದಂತೆ ಹಲವು ಪ್ರಮುಖ ಹೆಸರುಗಳು ಸಂಪರ್ಕ ಹೊಂದಿವೆ.

ಕೇವಲ ಪ್ರಶಸ್ತಿಯಲ್ಲದೆ, ವಿಜೇತರಿಗೆ ‘ದಿ ಬಿಡ್ಡಪ್ಪ ಅಡ್ವಾಂಟೇಜ್’ ಎಂಬ ವಿಶೇಷ ಅವಕಾಶವೂ ದೊರೆಯಲಿದೆ. ಇದರ ಅಡಿಯಲ್ಲಿ ಪ್ರಸಾದ್ ಬಿಡ್ಡಪ್ಪ ಮಾಡೆಲ್ಸ್ ಸಂಸ್ಥೆಯೊAದಿಗೆ ಒಂದು ವರ್ಷದ ವಿಶೇಷ ಒಪ್ಪಂದ, ಮಾರ್ಗದರ್ಶನ, ಗ್ರೂಮಿಂಗ್, ಪೋರ್ಟ್ಫೋಲಿಯೊ ಅಭಿವೃದ್ಧಿ ಹಾಗೂ ಬಿಡ್ಡಪ್ಪ ಅವರ ಫ್ಯಾಷನ್ ಮತ್ತು ಮಾಡೆಲಿಂಗ್ ನೆಟ್ವರ್ಕ್ ಮತ್ತು ಪ್ರಮುಖ ವೇದಿಕೆಗಳಿಗೆ ಪ್ರವೇಶದ ಅವಕಾಶ ದೊರೆಯಲಿದೆ.

ಅದ್ಭುತ ರನ್ವೇ, ಉದಯೋನ್ಮುಖ ಪ್ರತಿಭೆಗಳು, ಪ್ರಮುಖ ಫ್ಯಾಷನ್ ಬ್ರ್ಯಾಂಡ್ಗಳು ಮತ್ತು ಸೆಲೆಬ್ರಿಟಿಗಳ ಉಪಸ್ಥಿತಿಯೊಂದಿಗೆ ಫೀನಿಕ್ಸ್ ಮೆಗಾ ಮಾಡೆಲ್ ಹಂಟ್ 2026, ಮಾಡೆಲಿಂಗ್ ಕ್ಷೇತ್ರದ ಮುಂದಿನ ಪೀಳಿಗೆಯ ಪ್ರತಿಭೆಯನ್ನು ಸಂಭ್ರಮಿಸಿತು. ಇದೇ ವೇಳೆ, ಭಾರತೀಯ ಫ್ಯಾಷನ್ಗಾಗಿ ಹೊಸ ಮುಖಗಳನ್ನು ಗುರುತಿಸಿ, ರೂಪಿಸುವ ಪ್ರಸಾದ್ ಬಿಡಾಪಾ ಅವರ ನಾಲ್ಕು ದಶಕಗಳ ಪರಂಪರೆಯನ್ನು ಮುಂದುವರಿಸಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ