ಸೋಲಾರ್‌ ಉದ್ಯಮದಲ್ಲಿ ಚಿರಪರಿಚಿತವಾದ ಹೆಸರು

ಇಂದಿಗೂ ಸಹ ಅನೇಕ ಮಹಿಳೆಯರು ಕುಟುಂಬದ ಜವಾಬ್ದಾರಿಗಳಿಂದಾಗಿ ತಮ್ಮ ವೃತ್ತಿ ಜೀವನವನ್ನು ತ್ಯಜಿಸುತ್ತಾರೆ……

ಇಂದು ಕೆಲವು ಮಹಿಳೆಯರು ತಮ್ಮ ಅಸಾಧಾರಣ ಪ್ರತಿಭೆ ಹಾಗೂ ಕಠಿಣ ಪರಿಶ್ರಮದ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಪುರುಷ ಪ್ರಧಾನವೆಂದು ಪರಿಗಣಿಸಲ್ಪಟ್ಟ ಕ್ಷೇತ್ರದಲ್ಲಿ, ಇಂದು  ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಋತು ಲಾಲ್ ‌ನಂಥ ಒಬ್ಬ ಪ್ರವರ್ತಕರು. ತಮ್ಮ ಸಂಶೋಧನೆಯನ್ನು ಮುಂದುವರಿಸುವ ಬಯಕೆಯಿಂದ ಪ್ರೇರಿತರಾಗಿ, ಸಸ್ಯಶಾಸ್ತ್ರದಲ್ಲಿ ಪದವಿ ಪಡೆದರು. ಎಂಬಿಎ ಮುಗಿಸಿದ ನಂತರ, ಸೌರಶಕ್ತಿ ಉದ್ಯಮದಲ್ಲಿ ಪ್ರಮುಖ ವ್ಯಕ್ತಿ ಎನಿಸಿಕೊಂಡರು.

ಋತು ಲಾಲ್ ‌ರ ಜೀವನ ಪಯಣ, ಅವರ ಶಿಕ್ಷಣ, ವೃತ್ತಿ ಆಯ್ಕೆಗಳು ಮತ್ತು ಯಶಸ್ಸಿನ ಕುರಿತ ಅರ್ಥಪೂರ್ಣ ಸಂಭಾಷಣೆ ನಡೆಸುವ ಮೂಲಕ, ವಿದ್ಯಾರ್ಥಿಗಳ ವೃತ್ತಿಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ತರಬಹುದಾದ ಕೆಲವು ಅಂಶಗಳನ್ನು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಪ್ರಸ್ತುತಪಡಿಸಲು ನಾವು ಬಯಸುತ್ತೇವೆ.

ನಿಮ್ಮ ಕುಟುಂಬ ಹಾಗೂ ಬಾಲ್ಯದ ಬಗ್ಗೆ ತಿಳಿಸಬಹುದೇ?

ನಾನು ಒಂದು ವಿಭಕ್ತ ಕುಟುಂಬದಲ್ಲಿ ಬೆಳೆದೆ. ನನ್ನ ತಂದೆ ನಾಗರಿಕ ಸೇವೆಯಲ್ಲಿದ್ದರು. ಹಾಗಾಗಿ ಆಗಾಗ್ಗೆ ಅವರಿಗೆ ಬೇರೆ ಬೇರೆ ಕಡೆ ವರ್ಗಾವಣೆಯಾಗುತ್ತಿತ್ತು. ಆದ್ದರಿಂದ, ಬಾಲ್ಯದಲ್ಲಿ ನಾನು ಸಿಕ್ಕಿಂ, ಕೋಲ್ಕತ್ತಾ ಮತ್ತು ದೆಹಲಿಯ ಅನೇಕ ವಿಭಿನ್ನ ಪರಿಸರಗಳಲ್ಲಿ ಬೆಳೆದೆ. 1980ರ ದಶಕದಲ್ಲಿ ನನ್ನನ್ನು ಬೇರೆಡೆಗೆ ಸೆಳೆಯಲು ಯಾವುದೇ ದೂರದರ್ಶನ ಅಥವಾ ಬೇರೆ ಯಾವುದೇ ಆಯ್ಕೆಗಳೂ ಇರಲಿಲ್ಲ.

ಹಾಗಾಗಿ, ನಾಲ್ಕನೇ ವಯಸ್ಸಿನಿಂದಲೇ ನಾನು ಓದುವ ಅಭ್ಯಾಸವನ್ನು ಬೆಳೆಸಿಕೊಂಡೆ. ಅದು ನನ್ನ ಕಲ್ಪನೆಗೆ ಉತ್ತೇಜನ ನೀಡಿತು. ನನಗೆ ಅಗಾಥಾ ಕ್ರಿಸ್ಟಿ ಎಂದರೆ ಬಹಳ ಇಷ್ಟ. ಅಮರ ಚಿತ್ರಕಥಾ, ಆರ್ಚೀ ಮತ್ತು ಟೆನ್ಟಿನ್‌ ನಂತಹ ಕಾಮಿಕ್ಸ್ ಗಳೂ ಬಹಳ ಇಷ್ಟವಾಗಿದ್ದವು.

ನಿಮ್ಮ ವಿದ್ಯಾಭ್ಯಾಸದ ಬಗ್ಗೆ ತಿಳಿಸುವಿರಾ?

ಆ ಸಮಯದಲ್ಲಿ ನಾನು ಏನು ಮಾಡಬೇಕೆಂದು ನನಗೆ ಖಂಡಿತವಾಗಿಯೂ ತಿಳಿದಿರಲಿಲ್ಲ. ಆದರೆ ನಾನು ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದೆ. ಆದ್ದರಿಂದ ನಾನು ವಿಜ್ಞಾನವನ್ನು ಆರಿಸಿಕೊಂಡೆ. ನನಗೆ ಜೀವಶಾಸ್ತ್ರ ಇಷ್ಟವಾಯಿತು. ನಂತರ, ಹೆಚ್ಚಿನ ಅಧ್ಯಯನದ ವಿಷಯಕ್ಕೆ ಬಂದಾಗ, ನನಗೆ ಭೌತಶಾಸ್ತ್ರ ಅಷ್ಟೊಂದು ಇಷ್ಟವಾಗುತ್ತಿರಲಿಲ್ಲ ಎಂಬುದು ನನಗೆ ಅರ್ಥವಾಯಿತು. ಆದ್ದರಿಂದ ಎಂಜಿನಿಯರಿಂಗ್‌ ಪರೀಕ್ಷೆಗಳಿಗೆ ಅಧ್ಯಯನ ಮಾಡುವುದು ಅರ್ಥಹೀನವಾಗಿತ್ತು. ನನಗೆ ವಿಜ್ಞಾನ ಒಂದು ವಿಷಯವಾಗಿ ಇಷ್ಟವಾಗಿತ್ತು. ಆದರೆ ಅದು ನನ್ನ ವೃತ್ತಿಜೀವನದ ಗುರಿಯಾಗಿರಲಿಲ್ಲ. ನನಗೆ ವೈದ್ಯಕೀಯದಲ್ಲೂ ಆಸಕ್ತಿ ಇರಲಿಲ್ಲ. ನಾನು ಎಂಬಿಬಿಎಸ್‌ ಪಠ್ಯಪುಸ್ತಕಗಳನ್ನು ಕಂಠಪಾಠ ಮಾಡಿದ್ದೆ ಮತ್ತು ಯಾವುದೇ ಶಸ್ತ್ರಚಿಕಿತ್ಸೆಯನ್ನೂ ಪರಿಗಣಿಸಲಿಲ್ಲ. ಇತಿಹಾಸ ಮತ್ತು ಪತ್ರಿಕೋದ್ಯಮದಂತಹ ಕೆಲವು ವೃತ್ತಿ ಆಯ್ಕೆಗಳನ್ನು ನಾನು ಪರಿಗಣಿಸಿದೆ. ಆದಾಗ್ಯೂ ನನ್ನ ಒಲವು ವಿಜ್ಞಾನದ ಕಡೆಗೆ ಉಳಿಯಿತು. ಆದರೆ ನಾನು ವೈದ್ಯೆಯಾಗಲು ಬಯಸುವುದಿಲ್ಲ ಎಂದು ಆಗ ನನಗೆ ಸ್ಪಷ್ಟವಾಗಿತ್ತು.

ಹಾಗಾಗಿ ಆ ಸಮಯದಲ್ಲಿ ಸಸ್ಯಶಾಸ್ತ್ರ ವಿಜ್ಞಾನದಲ್ಲಿ ಬಳಕೆಗೆ ಬಂತು, ನಾನು ನನ್ನ ಎಂಬಿಎ ಪದವಿ ಪಡೆದಿದ್ದೆ. ಏಕೆಂದರೆ ಆ ಸಮಯದಲ್ಲಿ ನನ್ನ ಅನೇಕ ಸ್ನೇಹಿತರು ಅದನ್ನು ಮಾಡುತ್ತಿದ್ದರು. ನಂತರ ನಾನು ಫೈನಾನ್ಸ್ ಹಾಗೂ ಮಾರ್ಕೆಟಿಂಗ್‌ ನಲ್ಲಿ ಎಂಬಿಎ ಗಳಿಸಿದೆ. ಹಾಗಾಗಿ, ನಾನು ಬ್ಯಾಂಕ್‌ ಗಳು ಮತ್ತು ಎಫ್‌ಎಂ ಸಿಜಿ ಕಂಪನಿಗಳಲ್ಲಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದೆ. ಲಭ್ಯವಿದ್ದ ಪ್ರತಿಯೊಂದು ಉದ್ಯೋಗಕ್ಕೂ ಅರ್ಜಿ ಸಲ್ಲಿಸಿದೆ. ಸ್ವಲ್ಪ ಸಮಯದ ನಂತರ, ನಾನು ಸ್ಮಿತ್‌ ಕ್ಲೈನ್‌ ಬೀಚಮ್ ಎಂಬ ಹಣಕಾಸು ಕಂಪನಿಗೆ ಸೇರಿಕೊಂಡೆ. ಹೌಲಿಂಕ್ಸ್ ನಂತಹ ಬ್ರಾಂಡ್‌ ಗಳು ಇದ್ದವು. ಅದು ನನ್ನ ಮೊದಲ ಕೆಲಸವಾಗಿತ್ತು. ನಾನು ರಾಜಕೋಶ್ ಮತ್ತು ಹಣಕಾಸು ಇಲಾಖೆಗೆ ಸೇರಿದೆ. ಎರಡು ವರ್ಷಗಳಲ್ಲಿ, ಅವರು ನನ್ನಲ್ಲಿ ಬಲವಾದ ಸಮಾಲೇಚನಾ ಕೌಶಲ್ಯವನ್ನು ಕಂಡಿದ್ದರಿಂದ, ನಾನು ಕಾರ್ಯತಂತ್ರದ ಸೋರ್ಸಿಂಗ್‌ ಮತ್ತು ಸಂಗ್ರಹಣೆಗೆ ಬದಲಾಯಿಸಿದರು. ನನ್ನ ಸಮಾಲೋಚನಾ ಕೌಶಲ್ಯಗಳು ಅತ್ಯುತ್ತಮವಾಗಿದ್ದವು.

saur-urja

ನಿಮ್ಮ ವೃತ್ತಿ ಜೀವನದ ತಿರುವುಗಳು ಹೇಗಿದ್ದವು?

ನನ್ನ ಸ್ಥಾನದಲ್ಲಿನ ಬದಲಾವಣೆಯಿಂದ ನಾನು ಸಂತೋಷವಾಗದ ಒಂದು ಸಮಯವಿತ್ತು. ನಾನು ನನ್ನ ಮೇಲಧಿಕಾರಿಯೊಂದಿಗೆ, `ನನ್ನನ್ನು ಖರೀದಿದಾರಿಗೆ ಏಕೆ ಹಾಕಿದ್ದಾರೆ?’ ಎಂಬ ಬಗ್ಗೆ ಚರ್ಚಿಸಿದೆ. `ನನಗೆ ಅಲ್ಲಿನ ಜನಸಂದಣಿ ಇಷ್ಟವಿಲ್ಲ,’ ಎಂದೂ ತಿಳಿಸಿದೆ. ನಂತರ ಅವರು ನನಗೆ ಆ ಕೆಲಸವನ್ನು ಒಮ್ಮೆ ಮಾಡಿ ನೋಡುವಂತೆ ಸಲಹೆ ನೀಡಿದರು. ನನಗೆ ಅದು ಇಷ್ಟವಾಗದಿದ್ದರೆ, ನಾನು ಹಿಂದೆ ಮಾಡುತ್ತಿದ್ದ ಕೆಲಸಕ್ಕೆ ಹಿಂದಿರುಗಬಹುದು ಮತ್ತು ಆ ಕೆಲಸ ಈಗ ಜಾಗತಿಕ ಮಟ್ಟದಲ್ಲಿ ಹೋಗುತ್ತದೆ. ನಾನು ಉನ್ನತ ಮಟ್ಟದಲ್ಲಿ ಬೆಳೆಯುತ್ತಿದ್ದರೆ, ಇದನ್ನು ನಾನು ಒಂದು ಹೆಜ್ಜೆ ಮುಂದಿಡುವ ಪ್ರಯತ್ನವೆಂದು ಪರಿಗಣಿಸಬೇಕು ಎಂದರು. ನಾನು ಅವರ ಮಾತನ್ನು ಕೇಳಿದೆ. ತರುವಾಯ ನನಗೆ ನನ್ನ ಸಂಗ್ರಹಣಾ ವೃತ್ತಿ ಬಹಳ ಇಷ್ಟವಾಗತೊಡಗಿತು.

ಸ್ವಲ್ಪ ಸಮಯದ ನಂತರ ಸೋಲಾರ್‌ ಸ್ಟಾರ್ಟ್‌ ಅಪ್‌ ಹುಟ್ಟಿಕೊಂಡಿತು. ಅದರ ಸ್ಥಾಪಕ ಸಂಜೀವ್ ‌ನನಗೆ ಪರಿಚಿತರಾಗಿದ್ದರು. ನಾವು ಸ್ನೇಹಿತರ ಮೂಲಕ ಭೇಟಿಯಾಗಿ ಸೋಲಾರ್‌ ಸ್ಟಾರ್ಟ್‌ ಅಪ್‌ ಬಗ್ಗೆ ಪ್ರಸ್ತಾಪಿಸಿದೆ. ನಾನು ಮಾತ್ರವಲ್ಲದೆ, ನನ್ನ ಪತಿ ಕೂಡ ಒಂದು ಪ್ರಸ್ತಾಪವನ್ನು ತಯಾರಿಸಿ ಪ್ರಸ್ತುತಪಡಿಸಿದರು. ಅದು ಅವರಿಗೆ ಬಹಳ ಇಷ್ಟವಾಯಿತು. ನಾವು ಕಂಪನಿಯಲ್ಲಿ ಸಣ್ಣ ಹೂಡಿಕೆ ಮಾಡಿದೆ. ಆದರೆ ನನಗೆ ಆ ಸ್ಟಾರ್ಟ್‌ ಅಪ್‌ ಒಂದು ವ್ಯವಹಾರ ಕಲ್ಪನೆಯಾಗಿ ಹೆಚ್ಚು ಇಷ್ಟವಾಯಿತು. ಹಾಗಾಗಿ ನಾನು ಅವರ ಬಳಿಗೆ ಹೋಗಿ, `ಸಂಜೀವ್‌, ನನಗೆ ನವೀಕರಿಸಬಹುದಾದ ಶಕ್ತಿ ಅಥವಾ ಸೌರಶಕ್ತಿಯ ಬಗ್ಗೆ ಏನೂ ತಿಳಿದಿಲ್ಲ,’ ಎಂದು ಹೇಳಿದೆ.

ವಿದ್ಯುತ್‌ ಅಳತೆಯ ಘಟಕ ಯಾವುದು ಎಂಬುದುನ್ನು ನಾನು ಮರೆತಿದ್ದೇನೆ. ಆದರೆ ನಾನು ಅದನ್ನು ಒಪ್ಪಿಕೊಳ್ಳಲು ಬಯಸುತ್ತೇನೆ. ನಾನು ಇಲ್ಲಿ ವ್ಯಾವಹಾರಿಕ ಪಾತ್ರವನ್ನು ವಹಿಸಬಲ್ಲೆ. ನಂತರ ಅವರು,  `ನಾವು ಈಗ ನಿಮಗೆ ಹಣ ನೀಡಲು ಸಾಧ್ಯವಿಲ್ಲ,’ ಎಂದರು. ಅದಕ್ಕೆ ನಾನು, `ಸರಿ’ ಎಂದೆ. ಮೊದಲು ನಾವು ಪ್ರಾರಂಭಿಸೋಣ ಎಂದುಕೊಂಡೆ. ಆ ಸಮಯದಲ್ಲಿ ವ್ಯಾಪಾರ ಕೇಂದ್ರ ಒಂದೇ ಕೋಣೆಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ನಾಲ್ಕು ಜನರಿದ್ದರು. ಇಬ್ಬರು ಸಂಸ್ಥಾಪಕರು, ಒಬ್ಬ ತಾಂತ್ರಿಕ ವ್ಯಕ್ತಿ ಮತ್ತು ಒಬ್ಬ ಹಣಕಾಸು ವ್ಯಕ್ತಿ ಇದ್ದರು. ಆ ಸಮಯದಲ್ಲಿ ನಾನು ನನ್ನ ಚಿಕ್ಕ ಮಗುವಿನೊಂದಿಗೆ ಒಬ್ಬಂಟಿಯಾಗಿ ವಾಸಿಸುತ್ತಿದ್ದೆ.

ನಾನು ನನ್ನ ವೃತ್ತಿಯನ್ನೂ ನಿರ್ವಹಿಸುತ್ತಿದ್ದೆ. ನನ್ನ ಕೆಲಸವನ್ನೂ ತುಂಬಾ ಇಷ್ಟಪಟ್ಟೆ. ನನಗೆ ಇತರ ಕ್ಷೇತ್ರಗಳ ಬಗ್ಗೆ ಜ್ಞಾನವಿತ್ತು. ಆದರೆ ಆ ಸಮಯದಲ್ಲಿ ಸೋಲಾರ್‌ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ. ಆದರೆ ನಾನು ಅದನ್ನು ಕಲಿಕೆಯ ಅವಕಾಶವಾಗಿ ತೆಗೆದುಕೊಂಡು ಸೌರಶಕ್ತಿ ಗ್ರಾಹಕರು, ತಂತ್ರಜ್ಞಾನದ ಬಗ್ಗೆ ಎಲ್ಲವನ್ನೂ ಅರಿಯುತ್ತಾ ಹೋದೆ. ಗ್ರಾಹಕರು, ತಂತ್ರಜ್ಞಾನ, ಉದ್ಯಮ, ಸಮಸ್ಯೆ, ಸವಾಲುಗಳು ಒಂದು ದೇಶವಾಗಿ ನಾವು ಏನು ಮಾಡಬೇಕು? ಎದುರಾಗುವ ಅಪಾಯಗಳೇನು? ಅವುಗಳನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾ ಹೋದೆ.

ಮಹಿಳೆಯ ಕೆಲಸದೊತ್ತಡ ಹಾಗೂ ಸವಾಲುಗಳನ್ನು ನೀವು ಹೇಗೆ ನೋಡುತ್ತೀರಿ?

ಉದ್ಯಮ ಎಂಬುದು ಪುರುಷ ಪ್ರಾಬಲ್ಯ ಹೊಂದಿದೆ ಎಂಬುದನ್ನು ನಾನು ಗಮನಿಸಿದ್ದೇನೆ. ಇಲ್ಲಿ ಮಹಿಳಾ ಸಿಇಒಗಳು ಹಾಗೂ ಸಿಎಕ್ಸ್ ಒಗಳು ಬಹಳ ಕಡಿಮೆ ಇದ್ದಾರೆ. ನಾನು ಇಲ್ಲಿ ಮಹಿಳೆಯರಿಗಾಗಿ ಹಲವಾರು ಉಪಕ್ರಮಗಳನ್ನು ಸಹ ನಡೆಸಿಕೊಟ್ಟಿದ್ದೇನೆ. ಸೋಲಾರ್‌ ಉದ್ಯಮ, ಅದರ ಹೊರಗೆ ಹಾಗೂ ಅಷ್ಟೊಂದು ಸ್ಥಾಪಿತವಾಗಿಲ್ಲದ ಕೆಲವು ನಿರ್ವಹಣಾ ಸಂಸ್ಥೆಗಳಿಗೆ ನಾನು ಸಲಹೆಗಾರಳಾಗಿ ಸೇವೆ ಸಲ್ಲಿಸಿದ್ದೇನೆ. ಇಂದು ಕಂಪನಿ ಮತ್ತು ಕೈಗಾರಿಕೆಗಳು ಲಿಂಗತಾರತಮ್ಯ ಹೋಗಲಾಡಿಸಲು, ಸಮಾನತೆ ತರುವ ವಾತಾವರಣ ಸೃಷ್ಟಿಸುತ್ತ ಹೆಚ್ಚು ಗಮನಹರಿಸುತ್ತಿವೆ. ಆದಾಗ್ಯೂ, ದುಃಖಕರ ಸಂಗತಿಯೆಂದರೆ ಮಹಿಳೆಯರು ಇನ್ನೂ ಅಲ್ಪಸಂಖ್ಯಾತರಾಗಿಯೇ ಉಳಿದಿದ್ದಾರೆ.

ಮಹಿಳೆಯರಿಗೆ ಇನ್ನೂ ಯಾವ ಸೌಲಭ್ಯಗಳು ಸಿಗಬೇಕು ಎಂದು ನೀವು ಬಯಸುತ್ತೀರಿ?

ಇಂದಿಗೂ ಸಹ ಬಹುತೇಕ ಮಹಿಳೆಯರು ಕುಟುಂಬದ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ತಮ್ಮ ವೃತ್ತಿಜೀವನವನ್ನು ತ್ಯಜಿಸುತ್ತಾರೆ. ಮಕ್ಕಳು, ಕುಟುಂಬ ಮತ್ತು  ವಯಸ್ಸಾದ ಪೋಷಕರ ಹೊರೆ ಅವರ ಮೇಲೆ ಬೀಳುತ್ತದೆ. ಇಂದು ಅನೇಕ ಕಛೇರಿಗಳು ಹೊಂದಿಕೊಳ್ಳುವ ಸಮಯವನ್ನು ನೀಡುತ್ತವೆ ಹಾಗೂ ಕೆಲವು ಮನೆಯಿಂದ ಕೆಲಸ ಮಾಡುವ ಆಯ್ಕೆಗಳನ್ನು ಸಹ ನೀಡುತ್ತವೆ. ಆದರೆ ಹೆಚ್ಚಿನ ಉದ್ಯೋಗಗಳು ಈ ಸೌಲಭ್ಯವನ್ನು ಹೊಂದಿಲ್ಲ. ಇದರಿಂದಾಗಿ ಮಹಿಳೆಯರು ಹಿಂದೆ ಸರಿಯಬೇಕಾಗುತ್ತದೆ.

ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರಿ ಉದ್ಯೋಗಗಳು ಮಹಿಳೆಯರಿಗೆ ಗಮನಾರ್ಹ ಬೆಂಬಲ ನೀಡುತ್ತ ಹೆಜ್ಜೆ ಹಾಕಿವೆ. ಹಾಗಾದರೆ ಪ್ರೈವೇಟ್‌ ಸೆಕ್ಟರ್‌ ಈ ರೀತಿಯ ಮನೆಯಿಂದ ಕೆಲಸ ಮಾಡುವ ವಿಧಾನವನ್ನು ಏಕೆ ಅಳವಡಿಸಿಕೊಳ್ಳಬಾರದು? ಇಂದಿಗೂ ಪ್ರೈವೇಟ್‌ ಸೆಕ್ಟರ್‌ ಗಳಲ್ಲಿ ಮನೆಯಿಂದ ಕೆಲಸ ಮಾಡುವ ಅಭ್ಯಾಸಗಳು ಮಹಿಳೆಯರಿಗೆ ಸಮಸ್ಯೆಗಳನ್ನೇ ಹೆಚ್ಚಾಗಿ ಸೃಷ್ಟಿಸುತ್ತವೆ.

ನಿಮ್ಮ ಐಚ್ಚಿಕ ವಿಷಯಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಿ. ನಿಮಗೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದು ಇನ್ನೂ  ಕಷ್ಟಕರವೆನಿಸಿದರೆ, ಅದನ್ನು ಬೇಗನೆ ಬದಲಾಯಿಸಿ. ಏಕೆಂದರೆ ಅಂತಹ ತಪ್ಪುಗಳನ್ನು ನಂತರ ಸರಿಪಡಿಸಲು ಸಾಧ್ಯವಾಗುವುದಿಲ್ಲ.

ಈ ಸ್ಪರ್ಧಾತ್ಮಕ  ಯುಗದಲ್ಲಿ ಸ್ಪರ್ಧಾತ್ಮಕ ಮನೋಭಾವ ಮಾತ್ರ ಯಶಸ್ಸಿಗೆ ಕಾರಣವಾಗುತ್ತದೆ. ಎಂಬಿಎಗೆ ಸೇರುವ ಮೊದಲು, ನಿಮ್ಮ ಅಧ್ಯಯನ ಮುಗಿದ ನಂತರ ನೀವು ಯಾವ ರೀತಿಯ ವೃತ್ತಿಜೀವನ ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ.

ನೀವು ಮುಗಿಸಿದ ನಂತರ ಸ್ಟಾರ್ಟ್‌ ಅಪ್‌ ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಆರ್ಥಿಕವಾಗಿ ಸದೃಢರಾಗಿರುವುದು ಮುಖ್ಯ. ಇದಕ್ಕಾಗಿ, ಮೊದಲು ಉದ್ಯೋಗಕ್ಕೆ ಸೇರುವುದು ಅತ್ಯಗತ್ಯ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ