ಆಟದ ಮೈದಾನದಿಂದ ಬೆಳ್ಳಿ ಪರದೆಯವರೆಗಿನ ಪಯಣ

ಇಂದಿನ ಅಧುನಿಕ ತರುಣಿಯರು ಕೇವಲ ಕನಸಷ್ಟೇ ಕಾಣುವುದಿಲ್ಲ, ಅದನ್ನು ನನಸಾಗಿಸುವ ಪ್ರಯತ್ನ ನಡೆಸುತ್ತಾರೆ! ಇಂಥದ್ದೇ ಹುಡುಗಿ ಪ್ರಾಚೀ, ತನ್ನಲ್ಲಿ ಅಡಗಿದ್ದ ಪ್ರತಿಭೆಯನ್ನು ಹೊರತರಲು ಇನ್ನಿಲ್ಲದ ಕಷ್ಟಗಳನ್ನು ಎದುರಿಸಿ, ಇತರರಿಗೆ ಮಾರ್ಗದರ್ಶಿ ಆಗಿದ್ದಾಳೆ.....

ಪ್ರಾಚೀ ತೆಹ್ಲಾನ್‌ ಎಂದರೆ ಆಟದ ಮೈದಾನದಿಂದ ಹಿಡಿದು ಬೆಳ್ಳಿ ಪರದೆಯವರೆಗೂ ನೀವು ಗಮನಿಸಬಹುದು. ಈಕೆಯ ಪಯಣ ಆರಂಭಗೊಂಡದ್ದು ಭಾರತೀಯ ನೆಟ್‌ ಬಾಲ್ ‌ತಂಡದಿಂದ. ಅಲ್ಲಿ ಆಕೆ ದೇಶದ ಪ್ರತಿನಿಧಿ ಮಾತ್ರ ಆಗಿರಲಿಲ್ಲ, ಬದಲಿಗೆ ಕಾಮನ್‌ವೆಲ್ತ್‌ಗೇಮ್ಸ್ ನಂಥ ದೊಡ್ಡ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಈ ಆಟಗಳು ಆಕೆಗೆ ಕೇವಲ ಗೆಲುವನ್ನಷ್ಟೇ ಕಲಿಸಲಿಲ್ಲ, ಪ್ರತಿಯೊಂದು ಸ್ಥಿತಿಯಲ್ಲೂ ಕಷ್ಟಸಹಿಷ್ಣುತೆ, ಸಿಡಿದೆದ್ದು ನಿಲ್ಲುವುದನ್ನು ಕಲಿಸಿದೆ.

ಇಂಥ ಕ್ರೀಡಾಕ್ಷೇತ್ರದಲ್ಲಿ ಸೈ ಎನಿಸಿಕೊಂಡ ನಂತರ ಈಕೆಗೆ ಮತ್ತೊಂದು ತಿರುವು ನೀಡಿದ್ದು ಸಿನಿಮಾ ಕ್ಷೇತ್ರ. ಕಳೆದ 8 ವರ್ಷಗಳಲ್ಲಿ ಈಕೆ ಹಲವಾರು ಭಾಷೆಗಳ ಚಿತ್ರಗಳಲ್ಲಿ ದುಡಿದಿದ್ದಾರೆ, ಟಿವಿ ಶೋ ನೀಡಿದ್ದಾರೆ. ಒಬ್ಬ ನುರಿತ ಕಲಾವಿದೆಯಾಗಿ ಈಕೆ ತನ್ನನ್ನು ತಾನು ಎಲ್ಲಾ ಬಗೆಯ ಪಾತ್ರಗಳಲ್ಲೂ ಪರಕಾಯ ಪ್ರವೇಶ ಪಡೆದಿದ್ದಾರೆ. ಅದು ಐತಿಹಾಸಿಕ, ಸಾಮಾಜಿಕ, ಪತ್ತೇದಾರಿ, ಆ್ಯಕ್ಷನ್ ಭರಿತ ಮಾರಾಮಾರಿ, ಹೃದಯಸ್ಪರ್ಶಿ ಮಾರ್ಮಿಕ ಚಿತ್ರಗಳಿರಲಿ ಎಲ್ಲದರಲ್ಲೂ ಸೈ ಎನಿಸಿದ್ದಾರೆ. ಈಗ ಆಕೆಯ ಕಣ್ಣೋಟ ಹಾಲಿವುಡ್‌ ಕಡೆಗಿದೆ!

ಈಕೆಯ ಕಥೆ ಇಷ್ಟಕ್ಕೇ ಮುಗಿಯುವುದಿಲ್ಲ. ಆಕೆ ಒಬ್ಬ ಸೋಶಿಯಲ್ ಎಂಟರ್‌ ಪ್ರೆನ್ಸೋರ್‌ ಕೂಡ ಹೌದು. `ಪ್ರಾಚೀ ತೆಹ್ಲಾನ್‌' ಫೌಂಡೇಶನ್‌ ಮೂಲಕ ಈಕೆ ಹೆಂಗಸರ ಸಶಕ್ತೀಕರಣದ ಹೋರಾಟ ನಡೆಸುತ್ತಾ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದುಡಿಯುತ್ತಿದ್ದಾರೆ. ಈಗ ಈಕೆ ಆಟೋಟದ ಚಟುವಟಿಕೆ ಹಾಗೂ ಟೂರ್ನಮೆಂಟ್ಸ್ ನ್ನು ಸಹ, ತನ್ನ ಫೌಂಡೇಶನ್ನಿನ ಭಾಗವಾಗಿಸಿಕೊಳ್ಳಲು ಹೊರಟಿದ್ದಾರೆ. ಆ ಮೂಲಕ ಮುಂದಿನ ಪೀಳಿಗೆಗೆ ಉನ್ನತ ಮಾರ್ಗದರ್ಶನ ನೀಡುತ್ತಿದ್ದಾರೆ.

ಸಿನಿಮಾ ಕುರಿತು ತನಗಿರುವ ಅತಿಯಾದ ಅಭಿಮಾನಕ್ಕೆ ಒಂದು ಹೊಸ ದಿಕ್ಕು ತೋರಿಸಲೆಂಬಂತೆ ಆಕೆ ತನ್ನ ಪ್ರೊಡಕ್ಷನ್‌ ಹೌಸ್ ಸಹ ಪ್ರಾರಂಭಿಸಿಕೊಂಡಿದ್ದಾರೆ. ಜೀವನದ ಪ್ರತಿ ಕ್ಷಣವನ್ನೂ ಎಂಜಾಯ್‌ ಮಾಡಬೇಕೆಂಬುದೇ ಆಕೆಯ ಪ್ರಾಕ್ಟಿಕಲ್ ಫಿಲಾಸಫಿ. ಆಕೆಗೆ ಕಾದಂಬರಿ ಓದುವುದು, ಹೊಸ ಜಾಗಗಳಿಗೆ ಪ್ರವಾಸ ಹೊರಡುವುದು ಎಂದರೆ ಹಿಗ್ಗು! ಅದರಲ್ಲೂ ಬೆಟ್ಟ ಗುಡ್ಡಗಳ ಪರ್ವತಾರೋಹಣ, ವೈಲ್ಡ್ ಲೈಫ್‌ ಫೋಟೋಗ್ರಫಿ ಬಲು ಅಚ್ಚುಮೆಚ್ಚು.

ಕ್ರೀಡೆಯಿಂದ ನಟನೆಯತ್ತ ಪಯಣ

ಈ ಕಥೆ 2016 ರಂದು. ಆಗ ಆಕೆ ಕನ್ಸಲ್ಟೆಂಟ್‌ ಆಗಿ ದುಡಿಯುತ್ತಿದ್ದರು. ಆಟದ ಮೈದಾನದಿಂದ ಹಿಡಿದು ಕಾರ್ಪೊರೇಟ್‌ ವರ್ಡ್ ವರೆಗೂ ಪ್ರಯಾಣ ಬೆಳೆಸಿದ್ದರು. ಇದ್ದಕ್ಕಿದ್ದಂತೆ ಒಂದು ದಿನ ತಮ್ಮ FB‌ನಲ್ಲಿ ಒಂದು ಸಂದೇಶ ಗಮನಿಸಿದರು. ಈ ಪೇಜ್‌ ನ್ನು ಅbರು ತಮ್ಮ ಸ್ಟೋರ್ಟ್ಸ್ ಕೆರಿಯರ್‌ ಗೆಂದೇ ಮೀಸಲಿಟ್ಟಿದ್ದರು.

ಆ ಸಂದೇಶ ಟಿವಿ ಇಂಡಸ್ಟ್ರಿಯ ಒಂದು ದೊಡ್ಡ `ದಿಯಾ ಔರ್‌ ಬಾತಿ ಹಂ' ತಂಡದಿಂದ ಬಂದಿತ್ತು. ಅವರು ಈಕೆಯನ್ನು ಆರ್ಝೂ ರಾಠಿ ಪಾತ್ರಕ್ಕಾಗಿ ಕೇಳಿದರು. ಈ ಶೋನಲ್ಲಿ ಈಕೆಗೆ ಒಂದು ಪ್ಯಾರೆಲ್‌ ಲೀಡ್‌ ರೋಲ್ ‌ದೊರಕಿತು. ತಾನು ಮುಂದೊಂದು ದಿನ ಕ್ಯಾಮೆರಾ ಎದುರಿಸಿ ನಟಿಸುವೆ ಎಂದು ಆಕೆ ಕನಸು ಕಂಡವರಲ್ಲ. ಆ ಸ್ಕ್ರಿಪ್ಟ್ ಓದಿ, ತನಗಾಗಿಯೇ ಈ ಪಾತ್ರ ರಚಿಸಲಾಗಿದೆ ಎಂದು ಭಾವಿಸಿ, ತನ್ನೊಳಗಿನ ಪ್ರತಿಭೆ ಹೊರಬರಲು ದಾರಿ ಮಾಡಿಕೊಂಡರು. ಇನ್ನೇನು? ಇದ್ದ ಅನುಕೂಲಕರ ನೌಕರಿ ಬಿಟ್ಟು, ತನ್ನ ಹೊಸ ಕನಸನ್ನು ನನಸಾಗಿಸಿಕೊಳ್ಳಲು ಹೊರಟೇಬಿಟ್ಟರು. ಈ ರೀತಿ ಆಕೆಯ ನಟನೆಯ ಪ್ರಯಾಣ ಶುರುವಾಯಿತು. ಆಟದ ಮೈದಾನದಿಂದ ಬೆಳ್ಳಿ ಪರದೆವರೆಗೂ ಈ ಪ್ರಯಾಣ ಎಷ್ಟು ಅನಪೇಕ್ಷಿತವಾಗಿತ್ತೋ, ಅಷ್ಟೇ ರೋಮಾಂಚಕ ಆಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ