–  ರಾಘವೇಂದ್ರ  ಅಡಿಗ ಎಚ್ಚೆನ್.

ತಂತ್ರಜ್ಞಾನ ವಲಯ, ಜಾಗತಿಕ ಸಾಮರ್ಥ್ಯ ಕೇಂದ್ರಗಳು ಮತ್ತು ವಿಸ್ತರಿಸುತ್ತಿರುವ ಉದ್ಯೋಗಾವಕಾಶಗಳ ಬೆಂಬಲದಿಂದ ಬೆಂಗಳೂರಿನ ವಸತಿ ರಿಯಲ್ ಎಸ್ಟೇಟ್ ಮಾರುಕಟ್ಟೆಯು ವೃತ್ತಿಪರರು ಮತ್ತು ಕುಟುಂಬಗಳಿಂದ ನಿರಂತರ ಬೇಡಿಕೆಯನ್ನು ಸೆಳೆಯುತ್ತಿದೆ. ಪಡೆಯುತ್ತಿದೆ. ಅಲ್ಲದೆ, ಮೆಟ್ರೋ ವಿಸ್ತರಣೆ ಮತ್ತು ಸುಧಾರಿಸುತ್ತಿರುವ ಸಂಪರ್ಕ ವ್ಯವಸ್ಥೆಯು ವಸತಿ ಪ್ರದೇಶಗಳ ಆಯ್ಕೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತಿದೆ.
ದಿ ಟೈಮ್ಸ್ ಆಫ್ ಇಂಡಿಯಾ ವತಿಯಿಂದ ನವೆಂಬರ್ 21 ಮತ್ತು 22, 2026ರಂದು ಆಯೋಜಿಸಲಾಗಿರುವ ‘ಎಸ್‌.ಬಿ.ಐ ಹೋಮ್ ಲೋನ್ಸ್ ಪ್ರಸ್ತುತಪಡಿಸುವ ಟೈಮ್ಸ್ ಪ್ರಾಪರ್ಟಿ ಮೆಗಾ ಪ್ರಾಪರ್ಟಿ ಎಕ್ಸ್‌ಪೋ’ದಲ್ಲಿ 30ಕ್ಕೂ ಹೆಚ್ಚು ಪ್ರಮುಖ ಡೆವಲಪರ್‌ ಗಳು ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೇಳವು ಎರಡೂ ದಿನಗಳಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಥಳೀಯ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ. ಪ್ರವೇಶ ಉಚಿತವಾಗಿರುತ್ತದೆ.
ಮನೆ ಖರೀದಿಸಲು ಇಚ್ಛಿಸುವವರಿಗೆ ಅಪಾರ್ಟ್‌ಮೆಂಟ್‌ ಗಳು, ವಿಲ್ಲಾಗಳು ಮತ್ತು ನಿವೇಶನಗಳನ್ನು ವೀಕ್ಷಿಸಲು, ಡೆವಲಪರ್‌ ಗಳನ್ನು ನೇರವಾಗಿ ಭೇಟಿ ಮಾಡಲು ಹಾಗೂ ಲಭ್ಯವಿರುವ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆಯಲು ಈ ಎಕ್ಸ್‌ಪೋ ಒಂದು ಅನುಕೂಲಕರ ವೇದಿಕೆಯನ್ನು ಒದಗಿಸಲಿದೆ. ಒಂದೇ ಸ್ಥಳದಲ್ಲಿ ಹಲವಾರು ಡೆವಲಪರ್‌ಗಳು ಇರುವುದರಿಂದ, ಸಂದರ್ಶಕರು ವಿವಿಧ ಆಯ್ಕೆಗಳನ್ನು ಹೋಲಿಸಿ ನೋಡಬಹುದು, ತಮ್ಮ ಆದ್ಯತೆಗಳ ಬಗ್ಗೆ ಚರ್ಚಿಸಬಹುದು ಮತ್ತು ತಮ್ಮ ಅಗತ್ಯ ಹಾಗೂ ಬಜೆಟ್‌ಗೆ ಸರಿಹೊಂದುವ ಆಸ್ತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

1002016839
ಗೃಹ ಸಾಲದ ಕುರಿತು ಮಾರ್ಗದರ್ಶನ ನೀಡಲು, ಸಾಲ ಪಡೆಯುವ ಅರ್ಹತೆಯನ್ನು ವಿವರಿಸಲು ಮತ್ತು ಸಂದರ್ಶಕರಿಗೆ ವಿವಿಧ ಹಣಕಾಸು ಆಯ್ಕೆಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುವಂತೆ ಎಸ್‌.ಬಿ.ಐ ತಂಡವು ಸ್ಥಳದಲ್ಲೇ ಲಭ್ಯವಿರಲಿದೆ. ಆಸ್ತಿ ಆಯ್ಕೆಗಳು ಮತ್ತು ಹಣಕಾಸಿನ ನೆರವನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಮೂಲಕ, ಮನೆ ಖರೀದಿದಾರರು ತಮ್ಮ ಮನೆ ಖರೀದಿಯ ಕುರಿತು ಸೂಕ್ತ ಮತ್ತು ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಎಕ್ಸ್‌ಪೋ ಸಹಾಯ ಮಾಡುತ್ತದೆ.
“ಇಲ್ಲಿಗೆ ಭೇಟಿ ನೀಡಿದಾಗ, ಜನರು ನಿರೀಕ್ಷಿಸುವುದು ಸೂಕ್ತ ಹಣಕಾಸು ಸಲಹೆಯನ್ನು. ನಾವು ಅದನ್ನೇ ಇಲ್ಲಿ ಒದಗಿಸಲಿದ್ದೇವೆ,” ಎಂದು ಎಸ್‌.ಬಿ.ಐ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ದೀಪಕ್ ಕೌಶಿಕ್ ಹೇಳುತ್ತಾರೆ. ವಿವಿಧ ಬಜೆಟ್‌ ಗಳ ವ್ಯಾಪ್ತಿಯಲ್ಲಿರುವ ಆಯ್ಕೆಗಳನ್ನು ಹೋಲಿಸಿ ನೋಡುವ ಅವಕಾಶದ ಕುರಿತು ಒತ್ತಿ ಹೇಳಿದ ಅವರು, “ನಿಮಗೆ ಯಾವುದು ಸೂಕ್ತವಾದ ಮನೆ ಎಂಬುದನ್ನು ನೀವೇ ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದು,” ಎಂದು ಹೇಳುತ್ತಾರೆ.
ಮೊದಲ ಬಾರಿಗೆ ಮನೆ ಖರೀದಿಸಲು ಯೋಚಿಸುತ್ತಿರುವವರು ಹಾಗೂ ದೊಡ್ಡದಾದ ಆಸ್ತಿ ಅಥವಾ ಮತ್ತೊಂದು ಮನೆಯನ್ನು ಖರೀದಿಸಲು ಎದುರು ನೋಡುತ್ತಿರುವವರಿಗೂ ಈ ಎಕ್ಸ್‌ಪೋ ಸೂಕ್ತ ವೇದಿಕೆಯಾಗಲಿದೆ. ಇನ್ನೂ ತಮ್ಮ ಆಯ್ಕೆಗಳನ್ನು ಪರಿಶೀಲಿಸುತ್ತಿರುವ ಸಂದರ್ಶಕರು ಸಹ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಲಭ್ಯವಿರುವ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಹಣಕಾಸಿನ ಅಗತ್ಯಗಳ ಕುರಿತು ಚರ್ಚಿಸಲು ಇಲ್ಲಿ ಅವಕಾಶ ಪಡೆಯಲಿದ್ದಾರೆ.
ಎಕ್ಸ್‌ಪೋದ ಭಾಗವಾಗಿ ತಜ್ಞರ ಸಂವಾದ ಕಾರ್ಯಕ್ರಮವನ್ನೂ ಆಯೋಜಿಸಲಾಗಿದ್ದು, ಇದರಲ್ಲಿ ಎಸ್‌.ಬಿ.ಐ ಉಪ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯಾಚರಣಾ ಅಧಿಕಾರಿ ಸಹದೇವನ್ ರಾಧಾಕೃಷ್ಣನ್, ಎಸ್‌.ಬಿ.ಐ ನೆಟ್‌ವರ್ಕ್ 1ರ ಪ್ರಧಾನ ವ್ಯವಸ್ಥಾಪಕ ತಪನ್ ಶರ್ಮಾ, ಅನರಾಕ್, ಕಾರ್ಯನಿರ್ವಾಹಕ ನಿರ್ದೇಶಕ ಡಾ. ಪ್ರಶಾಂತ್ ಠಾಕೂರ್, ಎಸ್‌.ಜೆ.ಆರ್ ಪ್ರೈಮ್‌ಕಾರ್ಪ್ ಸಿಒಒ ಎಬ್ಬಿಲಿ ಬಸವಕುಮಾರ್, ಅರಾಟ್ ಸಿಇಒ ಅಮಿತ್ ವರ್ಣೇಕರ್ ಮತ್ತು ತತ್ವಂ ಗ್ರೂಪ್ ಸಹಾಯಕ ನಿರ್ದೇಶಕ ಶ್ರೇಯಸ್ ಯಡಾಲಂ ಅವರು ಪಾಲ್ಗೊಳ್ಳಲಿದ್ದಾರೆ.
ಈ ಎಕ್ಸ್ಪೋದಲ್ಲಿ  ನೋಬ್ರೋಕರ್ ‘ಪವರ್ಡ್ ಬೈ’ ಪ್ರಾಯೋಜಕತ್ವದ ಬೆಂಬಲ ನೀಡಿದೆ. ಎಸ್‌.ಜೆ.ಆರ್ ಪ್ರೈಮ್‌ಕಾರ್ಪ್ ಮತ್ತು ನಿಕೂ ಹೋಮ್ಸ್ ಪ್ಲಾಟಿನಂ ಪ್ರಾಯೋಜಕರಾಗಿದ್ದು, ಹ್ಯಾಬುಲಸ್ ಹಾಗೂ ಅರಾಟ್ ಗೋಲ್ಡ್ ಪ್ರಾಯೋಜಕರಾಗಿ ಕೈಜೋಡಿಸಿವೆ. ಅಂತೆಯೇ, ಕೆಎನ್‌ಎಸ್ ಇನ್ಫ್ರಾ, ತತ್ತ್ವಂ ಮತ್ತು ಕಾಸಾಗ್ರಾಂಡ್ ಸಂಸ್ಥೆಗಳು ಸಿಲ್ವರ್ ಪ್ರಾಯೋಜಕರಾಗಿ ಈ ಕಾರ್ಯಕ್ರಮಕ್ಕೆ ಸಾಥ್ ನೀಡಿವೆ.
ನವೆಂಬರ್ 21 ಮತ್ತು 22 ರಂದು ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿರುವ ಈ ಪ್ರದರ್ಶನಕ್ಕೆ ಮನೆ ಖರೀದಿದಾರರು ಮತ್ತು ಆಸ್ತಿ ಆಕಾಂಕ್ಷಿಗಳನ್ನು ಆಹ್ವಾನಿಸಲಾಗಿದೆ. https://timespropertyexpo.in/ ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಿ ಮತ್ತು ಇಂದೇ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಎಸ್‌.ಬಿ.ಐ ಎಲ್‌.ಎಚ್‌.ಒ (SBI LHO) ನಲ್ಲಿ ನಡೆಯುತ್ತಿರುವ ಈ ಪ್ರದರ್ಶನಕ್ಕೆ ಭೇಟಿ ನೀಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ