ನಿಮ್ಮ ಸೌಂದರ್ಯ ಬೆಳಗಲು ಹೊಸ ದಾರಿ ನೀವೂ ಸಹ ನಿಮ್ಮ ಚರ್ಮ ಸದಾ ಸಾಫ್ಟ್ ಯಂಗ್‌ ಆಗಿರಬೇಕೆಂದು ಬಯಸುತ್ತೀರಾ....? ಹಾಗಾದರೆ ಅಗತ್ಯವಾಗಿ ಇಲ್ಲಿನ ಮಾಹಿತಿ ಗಮನಿಸಿ......

ಪ್ರತಿ ಹೆಣ್ಣೂ ತನ್ನ ಚರ್ಮ ಸದಾಸರ್ದಾ ಅತಿ ಮೃದು, ಹೊಳೆಹೊಳೆಯುವ, ಯಂಗ್‌ ಆಗಿ ನಳನಳಿಸುತ್ತಿರಬೇಕೆಂದು ಬಯಸುತ್ತಾಳೆ. ಆದರೆ ನಮ್ಮ ಯಾಂತ್ರಿಕ ಜೀವನದ ಓಡಾಟ, ಬದಲಾಗುವ ಸೀಸನ್‌, ಪರಿಸರ ಮಾಲಿನ್ಯ, ಧೂಳುಮಣ್ಣು, ಸ್ಟ್ರೆಸ್ ಇತ್ಯಾದಿಗಳಿಂದ ನಮ್ಮ ಚರ್ಮ ತನ್ನ ಕಾಂತಿ ಕಳೆದುಕೊಳ್ಳುತ್ತದೆ, ಡಲ್ ಆಗುತ್ತದೆ. ಒಮ್ಮೆ ಪಿಗ್ಮೆಂಟೇಶನ್‌, ಮತ್ತೊಮ್ಮೆ ಸುಕ್ಕು, ಇನ್ನೊಮ್ಮೆ ಡ್ರೈನೆಸ್‌ ಇತ್ಯಾದಿಗಳಿಂದ ನಮ್ಮ ಕಳಾಹೀನ ಮುಖಕಾಂತಿ ಕಂಡು ಬೇಸರ ಉಕ್ಕುತ್ತದೆ.

ಎಷ್ಟೋ ಸಲ ಹೆಂಗಸರು ಸ್ಕಿನ್‌ ಟ್ರೀಟ್‌ ಮೆಂಟ್‌ ಮಾಡಿಸಲು ಬಯಸುತ್ತಾರೆ, ಆದರೆ ಆ ಸೂಜಿಯ ಯಾತನೆ, ಕಲೆ ಉಳಿಯುವಿಕೆ ಇತ್ಯಾದಿ ನೆನೆದು ಹಿಮ್ಮೆಟ್ಟುತ್ತಾರೆ. ಈ ಭಯ ನಮ್ಮನ್ನು ಮುಂದುವರಿಯಲು ಬಿಡುವುದಿಲ್ಲ. ಆದರೆ ಇದೀಗ ಕಾಸ್ಮೆಟಿಕ್ಸ್ ನ ಹೊಸ ಟೆಕ್ನಾಲಜಿಯಿಂದಾಗಿ, ಈ ಭಯ ಇನ್ನಿಲ್ಲವಾಗಿದೆ. ಇದರ ಅತಿ ಉತ್ತಮ ಮಾದರಿಯೇ `ನೋ ನೀಡಲ್ ಮ್ಯಾಸೋಥೆರಪಿ.'

ಇದರಲ್ಲಿ ಯಾವುದೇ ಬಗೆಯ ಸೂಜಿ ಚುಚ್ಚು ಅಗತ್ಯವಿಲ್ಲ. ಇದಕ್ಕಾಗಿ ವಿನ್ಯಾಸಗೊಳಿಸಲಾದ ಒಂದು ವಿಶೇಷ ಯಂತ್ರ ಲೈಟ್‌ ಎಲೆಕ್ಟ್ರಿಕ್‌ ಕರೆಂಟ್‌ ಬಳಸುತ್ತಾ, ಮೈಕ್ರೋವೇವ್ಸ್ ನೆರವಿನಿಂದ ಚರ್ಮವನ್ನು ಬಲು ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಸೂಜಿ ಚುಚ್ಚಿ ನ್ಯೂಟ್ರಿಶನ್‌ ಒದಗಿಸುತ್ತಿದ್ದ, ಸೀರಮ್ ಆ್ಯಕ್ಟಿವ್ ‌ಇನ್‌ ಗ್ರೀಡಿಯೆಂಟ್ಸ್, ಈ ಮೂಲಕವೇ ಚರ್ಮ ಪ್ರವೇಶಿಸುತ್ತದೆ. ಹೀಗಾಗಿ ಸೂಜಿಯ ನೋವಿಲ್ಲ, ಕೆಂಪು ಗುಳ್ಳೆ ಇಲ್ಲ, ಯಾವುದೇ ಕಲೆ ಗುರುತಿಲ್ಲ, ಆದರೆ ಪರಿಣಾಮ ಮಾತ್ರ ಅಷ್ಟೇ ಉತ್ತಮ, ಹಿಂದಿನ ಸೂಜಿ ಮ್ಯಾಸೋಥೆರಪಿಯಂತೆಯೇ!

ಇದರ ಸೆಶನ್‌ ಬಲು ಆರಾಮದಾಯಕ. ಈ ಯಂತ್ರ ಬೇಕಾದ ಭಾಗದ ಮೇಲೆ ಮೃದು ಮಸಾಜ್‌ ನಂತೆ ಕೆಲಸ ಮಾಡುತ್ತದೆ. ಇದರಿಂದ ಯಾವುದೇ ಚುಚ್ಚುವಿಕೆಯ ಹಿಂಸೆ ಇಲ್ಲ, ತುಸು ಬೆಚ್ಚಗಿನ ಅನುಭವ, ರಿಲ್ಯಾಕ್ಸೇಶನ್‌ ಆಗುತ್ತದೆ. ಸುಮಾರು 25-30 ನಿಮಿಷಗಳಲ್ಲೇ ಸೆಶನ್‌ ಮುಗಿಯುತ್ತದೆ. ತಕ್ಷಣ ನೀವು ನಿಮ್ಮ ದೈನಂದಿನ ಕೆಲಸಕ್ಕೆ ಮರಳಬಹುದು. ಹೀಗಾಗಿಯೇ ಇದನ್ನು `ಲಂಚ್‌ ಟೈಂ ಟ್ರೀಟ್‌ ಮೆಂಟ್‌' ಎಂದೂ ಹೇಳುತ್ತಾರೆ. ಅಂದ್ರೆ ಆಫೀಸ್‌ ನಡುವಿನ ಲಂಚ್‌ ಟೈಮಿಗೆ ಹೋಗಿ ಸೆಶನ್ ಮುಗಿಸಿಕೊಂಡು, ಮುಖಕ್ಕೆ ಬೇಕಾದ ಕಾಂತಿ ಗಳಿಸಬಹುದು.

ಸೆಶನ್‌ ನಂತರ ವಹಿಸಬೇಕಾದ ಎಚ್ಚರಿಕೆ ಅಂದ್ರೆ, ಮೊದಲ 24 ಗಂಟೆಗಳ ಕಾಲದಲ್ಲಿ ಎಂದೂ ಮುಖವನ್ನು ಉಜ್ಜಿಕೊಳ್ಳಬಾರದು. ಬಲು ಬಿಸಿ ನೀರು ಬಳಸಿ ಮುಖ ತೊಳೆಯಬೇಡಿ. ಹೊರಗೆ ಹೊರಡುವ ಮೊದಲು ಅಗತ್ಯಾಗಿ ಸನ್‌ ಸ್ಕ್ರೀನ್‌ ಲೋಶನ್ ಹಚ್ಚಿಕೊಳ್ಳಬೇಕು. ಲೈಟ್‌ ಮಾಯಿಶ್ಚರೈಸರ್‌ ಬಳಸಿದರೂ ಒಳ್ಳೆಯದು, ಧಾರಾಳ ನೀರು ಕುಡಿಯಿರಿ. ಇದರಿಂದ ನಿಮ್ಮ ಮುಖದ ಕಾಂತಿ ಸುದೀರ್ಘ ಕಾಲ ಉಳಿಯುತ್ತದೆ.

ಈ ಟ್ರೀಟ್‌ ಮೆಂಟ್‌ ನ ಪರಿಣಾಮ ಸುದೀರ್ಘಕಾಲ ಉಳಿಯಬೇಕೆಂದರೆ, ಮನೆಯಲ್ಲಿಯೇ ಈ ಸುಲಭ ವಿಧಾನಗಳನ್ನು ಅನುಸರಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ