ಬಿಹಾರದ ಮೊದಲ ಮಹಿಳಾ ಐಪಿಎಸ್‌ ಅಧಿಕಾರಿ ಪೊಲೀಸ್‌ ಸೇವೆಯಲ್ಲಿ ಮುನ್ನಡೆಯಲು, ಶಿಸ್ತು ಕಾಯ್ದುಕೊಳ್ಳುವುದು ಅತ್ಯಗತ್ಯ. ನಿಮ್ಮ ಕೆಲಸಕ್ಕೆ ಸದಾ ಬೆಲೆ ಕೊಡಿ....

ಐಪಿಎಸ್‌ ಅಧಿಕಾರಿ ಮಂಜರಿ ಜಾರೂಹಾರ್‌ ರವರ ಜೀವನ ಎಂತಹವರಿಗಾದರೂ ಸ್ಛೂರ್ತಿ ನೀಡಬಲ್ಲದು. ಮೂಲತಃ ಬಿಹಾರದವರಾದ ಮಂಜರಿ ಜಾರೂಹಾರ್‌ ಮದುವೆಯ ನಂತರ ತಮ್ಮ ಅತ್ತೆಮನೆಯಲ್ಲಿ ಬಹಳಷ್ಟು ನೋವುಗಳನ್ನು ಅನುಭವಿಸಬೇಕಾಯಿತು. ಅದೆಲ್ಲದರ ಹೊರತಾಗಿಯೂ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ಬಿಹಾರದ ಮೊದಲ ಮಹಿಳಾ ಐಪಿಎಸ್‌ ಅಧಿಕಾರಿ ಮತ್ತು ದೇಶದ ಐದನೇ ಮಹಿಳಾ ಐಪಿಎಸ್‌ ಅಧಿಕಾರಿಯಾಗಿ ಹೊರಹೊಮ್ಮಿದರು.

ನೀವು ಪಾಟ್ನಾ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಆನರ್ಸ್‌ ಪಡೆದಿದ್ದೀರಿ. ನಿಮ್ಮ ಶಿಕ್ಷಣ ನೀವು ಐಪಿಎಸ್‌ ಅಧಿಕಾರಿಯಾಗಲು ಹೇಗೆ ಸಹಾಯ ಮಾಡಿತು?

ನೀವು ಏನು ಓದುತ್ತೀರಿ ಎಂಬುದು UPSC ಯಂತಹ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ನೀವು ಹೇಗೆ ಕಾರ್ಯ ನಿರ್ವಹಿಸುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ.

ನಾನು UPSCಗೆ ತಯಾರಿ ನಡೆಸಲು ಪ್ರಾರಂಭಿಸಿದಾಗ, ನನಗೆ ಏನು ಓದಬೇಕು ಅಥವಾ ಯಾವುದರ ಮೇಲೆ ಗಮನಹರಿಸಬೇಕು ಎಂಬುದು ತಿಳಿದಿರಲಿಲ್ಲ. ಪರೀಕ್ಷೆಗೆ ಒಂದು ರೂಪುರೇಷೆ ಇರುತ್ತದೆ. ಅದಕ್ಕಾಗಿ, ನಾನು ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ನನ್ನ ಕುಟುಂಬದ ಜನರಿಂದ ಸಹಾಯವನ್ನು ಕೋರಿದೆ. ಆ ಸಮಯದಲ್ಲಿ ದೆಹಲಿಯ ಕರೋಲ್ ‌ಬಾಗ್‌ ನಲ್ಲಿರುವ ರಾವ್ ಸ್ಟಡಿ ಸರ್ಕಲ್ ನ ರಾವ್ ‌ಸಾಹೇಬ್‌ ರಿಂದ ನನಗೆ ಸಾಕಷ್ಟು ಬೆಂಬಲ ದೊರಕಿತು. ಅವರು ಪಠ್ಯಕ್ರಮದ ಹೊರತಾಗಿಯೂ ಅಧ್ಯಯನ ಮಾಡುವ ಸಲಹೆಗಳನ್ನು ಹೇಗೆ ನೀಡಿದ್ದರೋ, ನಾನು ಅದನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿದೆ. ಆ ಸಮಯದಲ್ಲಿ, UPSCಗೆ ತಯಾರಿ ನಡೆಸುವಾಗ, ನಾನು ದೆಹಲಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಆನರ್ಸ್‌ ನಲ್ಲಿ ಪದವಿಯನ್ನು ಸಹ ಪೂರ್ಣಗೊಳಿಸಿದೆ. ನನ್ನ ಕಾಲೇಜು ಪಠ್ಯಕ್ರಮ ಮತ್ತು UPSC ಇಂಗ್ಲಿಷ್‌ ಪಠ್ಯಕ್ರಮ ಬಹುತೇಕ ಒಂದೇ ಆಗಿರುವುದರಿಂದ ಇದು ನನಗೆ ತುಂಬಾ ಸಹಾಯಕವಾಯಿತು.

UPSC ನಂತಹ ಕಠಿಣ ಪರೀಕ್ಷೆಗೆ ತಯಾರಿ ನಡೆಸುವಾಗ ಎದುರಾಗು ದೊಡ್ಡ ಸವಾಲು ಯಾ ಇದು ತುಂಬಾ ಕಷ್ಟಕರವಾದ ಪರೀಕ್ಷೆ. ನನ್ನ ಕುಟುಂಬ ಸದಾ ನನ್ನ ಬೆಂಬಲಕ್ಕೆ ನಿಂತಿತು. ನಾನು ಮನಸ್ಸಿಟ್ಟು ಓದಲು ಬಹಳ ಪ್ರೋತ್ಸಾಹ ನೀಡಿದರು. ಈ ಬಗ್ಗೆ ನನಗೆ ಬಹಳ ಖುಷಿ ಇದೆ. ನಾನು ದೃಢ ಸಂಕಲ್ಪ ಹೊಂದಿದ್ದ ಬಗ್ಗೆ ನನಗೆ ಸಂತೋಷವಿದೆ. ನನ್ನ ನಿರ್ಧಾರದ ಬಗ್ಗೆ ನನಗೆ ಎಂದಿಗೂ ಸಂದೇಹವಿರಲಿಲ್ಲ. ನಾನು ಅಂತಹ ಸವಾಲಿನ ಪರೀಕ್ಷೆಗೆ ತಯಾರಿ ನಡೆಸಲು ಏಕೆ ಪ್ರಾರಂಭಿಸಿದೆ ಎಂದು ನನಗೆ ಎಂದಿಗೂ ಅನ್ನಿಸಲಿಲ್ಲ. ಹೌದು, ಅದು ಕಠಿಣ ಮತ್ತು ಬಹಳಷ್ಟು ಕಠಿಣ! ತುಂಬಾ ಪರಿಶ್ರಮದ ಅಗತ್ಯವಿದೆ ಎಂದು ನನಗೆ ತಿಳಿದಿತ್ತು. ಅದನ್ನು ನಾನು ಮಾಡಿದೆ.

ನಾನು ದಿನಕ್ಕೆ 16 ಗಂಟೆಗಳ ಕಾಲ ಅಧ್ಯಯನ ಮಾಡಿದೆ. ಈ ಪರೀಕ್ಷೆಗೆ ಅಥವಾ ಜೀವನದ ಯಾವುದೇ ಪರೀಕ್ಷೆಗೆ ಶಿಸ್ತು ಬಹಳ ಮುಖ್ಯ. ಬಾಲ್ಯದಿಂದಲೇ ನನ್ನನ್ನು ಬಹಳ ಶಿಸ್ತಿನಿಂದ ಬೆಳೆಸಲಾಗಿತ್ತು. ನಾವು ಮೂವರು ಸಹೋದರಿಯರಿದ್ದು, ನಮಗೆ ನಮ್ಮ ದೈನಂದಿನ ದಿನಚರಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಲು ಕಲಿಸಲಾಗಿತ್ತು. ಈ ಪಾಠವನ್ನು ಮನೆಯಲ್ಲಿಯೇ ನಮ್ಮಲ್ಲಿ ಬೆಳೆಸಲಾಯಿತು ಮತ್ತು ಅದು ನನಗೆ ಬಹಳ ಸಹಾಯಕವಾಯಿತು ಎಂದು ಸಾಬೀತಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ