ಪುರುಷ ಪ್ರಧಾನವಾದ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಸಾಕು ಅಯ್ಯೋ ಖರ್ಚು ಹೆಚ್ಚಾಯಿತು ಎನ್ನುತ್ತಾರೆ. ಅದರಲ್ಲೂ ಮೂರು ಹೆಣ್ಣು ಮಕ್ಕಳು ಇಬ್ಬರು ಅವಳಿ ಜವಳಿ ಮಕ್ಕಳು ಎಂದರೆ ಸಾಕು ಆ ತಂದೆಯ ಜೀವನ ಬರೀ ಮಕ್ಕಳ ಲಾಲನೆ ಪಾಲನೆ ಮದುವೆ ಬಾಣಂತನ ಮೊಮ್ಮಕ್ಕಳ ನಾಮಕರಣದಲ್ಲೇ ಕಳೆದು ಹೋಗುತ್ತದೆ ಎಂದು ಮೂಗು ಮುರಿಯುವವರೇ ಹೆಚ್ಚು.  ಆದರೆ ಇಲ್ಲೊಬ್ಬ ಸಾಮಾನ್ಯ ಟ್ರಕ್ ಚಾಲಕನ ಕುಟುಂಬ. ಮೂರು ಹೆಣ್ಣುಮಕ್ಕಳು. ಆರ್ಥಿಕವಾಗಿ ದೊಡ್ಡ ಅನುಕೂಲಗಳಿಲ್ಲ. ಮಕ್ಕಳ ಕ್ರೀಡಾ ತರಬೇತಿಗೆ ಖರ್ಚು ಮಾಡುವಷ್ಟು ಆದಾಯವೂ ಇಲ್ಲ. ಆದರೆ ಕನಸು ಮಾತ್ರ ದೊಡ್ಡದಾಗಿತ್ತು. ಆ ಕನಸಿಗೆ ರೆಕ್ಕೆ ಕೊಟ್ಟದ್ದು ತಂದೆ-ತಾಯಿಯ ತ್ಯಾಗ, ಹೆಣ್ಣುಮಕ್ಕಳ ಪರಿಶ್ರಮ ಮತ್ತು ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತ ಅವಳಿ ಸಹೋದರಿಯರ ಅಪರೂಪದ ಬಾಂಧವ್ಯ.

ಇದು ತಮಿಳುನಾಡಿನ ಕೊಯಮತ್ತೂರಿನ ರಾಮರಾಜ್ ಕುಟುಂಬದ ಕಥೆ. ಈ ಕುಟುಂಬದ ಅವಳಿ ಸಹೋದರಿಯರಾದ ವಿಥ್ಯಾ ರಾಮರಾಜ್ ಮತ್ತು ನಿತ್ಯಾ ರಾಮರಾಜ್ ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅದರಲ್ಲೂ 2026ರ ಏಷ್ಯನ್ ಕ್ರೀಡಾಕೂಟದಲ್ಲಿ ವಿಥ್ಯಾ ಮೂರು ಪದಕಗಳನ್ನು ಗೆದ್ದು, ಪಿ.ಟಿ. ಉಷಾ ಅವರ 42 ವರ್ಷಗಳ ರಾಷ್ಟ್ರೀಯ ದಾಖಲೆಯನ್ನು ಮುರಿದಿರುವುದು ಈ ಕುಟುಂಬದ ಕಥೆಯನ್ನು ಇನ್ನಷ್ಟು ವಿಶೇಷವಾಗಿಸಿದೆ.

ಕೊಯಮತ್ತೂರಿನ ಸಾಮಾನ್ಯ ಕುಟುಂಬದಿಂದ ಏಷ್ಯನ್ ಕ್ರೀಡಾಕೂಟದ ವೇದಿಕೆಗೆ

ವಿಥ್ಯಾ ಮತ್ತು ನಿತ್ಯಾ ಕೊಯಮತ್ತೂರಿನ ಸಮೀಪದ ಮೀನಾಕ್ಷಿಪುರಂ ಪ್ರದೇಶದಲ್ಲಿ ಬೆಳೆದವರು. ಅವರ ತಂದೆ ರಾಮರಾಜ್ ಮೊದಲು ಗುತ್ತಿಗೆ ಕೃಷಿ ಮಾಡುತ್ತಿದ್ದರು. ನಂತರ ಖಾಸಗಿ ಸಂಸ್ಥೆಯಲ್ಲಿ ಟ್ರಕ್ ಚಾಲಕರಾಗಿ ಕೆಲಸ ಆರಂಭಿಸಿದರು. ತಾಯಿ ಮೀನಾಕುಮಾರಿ ಕುಟುಂಬವನ್ನು ನೋಡಿಕೊಳ್ಳುತ್ತಾ ಹೆಣ್ಣುಮಕ್ಕಳ ಭವಿಷ್ಯದ ಬಗ್ಗೆ ದೊಡ್ಡ ಕನಸು ಕಂಡವರು. ಈ ದಂಪತಿಗೆ ಮೂವರು ಹೆಣ್ಣುಮಕ್ಕಳು. ಹಿರಿಯ ಮಗಳು ಸತ್ಯಾ ವಿವಾಹವಾಗಿದ್ದಾರೆ. ಮಧ್ಯದ ಮಗಳು ವಿಥ್ಯಾ ಮತ್ತು ಕಿರಿಯ ಮಗಳು ನಿತ್ಯಾ ಅವಳಿ ಸಹೋದರಿಯರು. ಆರ್ಥಿಕ ಸಂಕಷ್ಟದ ನಡುವೆಯೂ ತಂದೆ-ತಾಯಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಖಾಸಗಿ ಶಾಲೆಯ ಶುಲ್ಕವನ್ನು ದೀರ್ಘಕಾಲ ಭರಿಸಲು ಸಾಧ್ಯವಾಗದ ಕಾರಣ, ಹೆಣ್ಣುಮಕ್ಕಳನ್ನು ಸರ್ಕಾರಿ ನೆರವಿನ ಶಾಲೆಗೆ ಸೇರಿಸಲಾಯಿತು. ಅವರ ಜೀವನದಲ್ಲಿ ಮಹತ್ವದ ತಿರುವು ಬಂದದ್ದು ಶಾಲೆಯಲ್ಲಿದ್ದಾಗ.

ಶಿಕ್ಷಕರೊಬ್ಬರ ಸಲಹೆ ಬದಲಿಸಿದ ಬದುಕು

ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ವಿಥ್ಯಾ ಮತ್ತು ನಿತ್ಯಾ ಅವರ ಓಟದ ಸಾಮರ್ಥ್ಯವನ್ನು ಗಮನಿಸಿದರು. ಕ್ರೀಡೆಯಲ್ಲಿ ಉತ್ತಮ ಭವಿಷ್ಯವಿದೆ ಎಂದು ಪೋಷಕರಿಗೆ ತಿಳಿಸಿದರು. ತಾಯಿ ಆ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡರು. ಹೆಣ್ಣುಮಕ್ಕಳಿಗೆ ಕ್ರೀಡಾ ತರಬೇತಿ ಕೊಡಿಸುವುದು ಕುಟುಂಬಕ್ಕೆ ಆರ್ಥಿಕವಾಗಿ ಕಷ್ಟವಾಗಿತ್ತು. ಆದ್ದರಿಂದ ಅವರನ್ನು ತಮಿಳುನಾಡಿನ  Sports Development Authority of Tamil Nadu ಕ್ರೀಡಾ ವಸತಿನಿಲಯಕ್ಕೆ ಸೇರಿಸಲಾಯಿತು. ಅಲ್ಲಿ ಶಿಕ್ಷಣದ ಜೊತೆಗೆ ಕಠಿಣ ಅಥ್ಲೆಟಿಕ್ಸ್ ತರಬೇತಿಯೂ ದೊರೆಯಿತು. ಅಲ್ಲಿಂದ ಆರಂಭವಾದ ಓಟ ಮುಂದೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ವೇದಿಕೆಗೆ ತಲುಪಿತು.

ಇಬ್ಬರೂ ಒಂದೇ ರೀತಿಯವರು, ಆದರೆ ಓಟದ ಹಾದಿ ಸ್ವಲ್ಪ ವಿಭಿನ್ನ

ವಿಥ್ಯಾ ಮತ್ತು ನಿತ್ಯಾ ಅವರನ್ನು ನೋಡಿದರೆ ಯಾರು ಯಾರು ಎಂದು ಗುರುತಿಸುವುದೇ ಕಷ್ಟ. 2023ರ ಏಷ್ಯನ್ ಕ್ರೀಡಾಕೂಟದ ಸಂದರ್ಭದಲ್ಲಿ ಅವರನ್ನು ಭೇಟಿಯಾದ ಪತ್ರಕರ್ತರಿಗೂ ಇದೇ ಅನುಭವವಾಗಿತ್ತು. ಸಹೋದರಿಯರೇ ಅವರನ್ನು ಗುರುತಿಸುವ ಸುಲಭ ಮಾರ್ಗವನ್ನೂ ಹೇಳಿದ್ದರು. ವಿಥ್ಯಾ ಕಿವಿಯಲ್ಲಿ ಎರಡು ಸ್ಟಡ್‌ಗಳನ್ನು ಧರಿಸುತ್ತಾರೆ; ನಿತ್ಯಾ ಅವರ ನೆತ್ತಿಯಲ್ಲಿ ಸಣ್ಣ ಮಚ್ಚೆಯಿದೆ.  ಇಬ್ಬರೂ ಅಥ್ಲೀಟ್‌ಗಳು. ಆದರೆ ಸ್ಪರ್ಧೆಯ ವಿಭಾಗದಲ್ಲಿ ಸ್ವಲ್ಪ ವ್ಯತ್ಯಾಸವಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ