Sj*

ನಟ ಕೋಮಲ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ “ರೋಲೆಕ್ಸ್” ಚಿತ್ರದ ಶೀರ್ಷಿಕೆ ಈಗ “ರಿಲ್ಯಾಕ್ಸ್” ಎಂದು ಬದಲಾಗಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಜೆಸ್ಸಿ ಗಿಫ್ಟ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ನಿರ್ಮಾಪಕ ಅಂಬಟಿ ಮಧು ಮೋಹನ್ ಅವರೆ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಹಾಡುಗಳನ್ನು ಬಿಡುಗಡೆ ಮಾಡಿ ಮಾತನಾಡಿದ ನಿರ್ಮಾಪಕ ಅಂಬಟಿ ಮಧು ಮೋಹನ್, “ರಿಲ್ಯಾಕ್ಸ್” ಹಾಡುಗಳು ಬಹಳ ಸುಮಧುರವಾಗಿ ಮೂಡಿಬಂದಿದೆ. ಜೆಸ್ಸಿ ಗಿಫ್ಟ್ ಅವರ ಸಂಗೀತ ನಿರ್ದೇಶನದ ಈ ಚಿತ್ರದ ಹಾಡುಗಳನ್ನು ಸುಪ್ರಸಿದ್ಧ ಗಾಯಕ – ಗಾಯಕಿಯರು ಹಾಡಿದ್ದಾರೆ. ಆಂದ್ರ ಪ್ರದೇಶದಲ್ಲೂ ಈ ಚಿತ್ರದ ಹಾಡುಗಳಿಗೆ ಜನರು ಮನ ಸೋತ್ತಿದ್ದಾರೆ. ಕೋಮಲ್ ಕುಮಾರ್, ಸೋನಾಲ್ ಮೊಂತೆರೊ, ವಿನೋದ್ ಪ್ರಭಾಕರ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಅದ್ಭುತವಾಗಿದೆ. ಅಕ್ಟೋಬರ್ 30ರಂದಿ ನಮ್ಮ ಚಿತ್ರ ತೆರೆಗೆ ಬರುತ್ತಿದೆ. ಎಲ್ಲರೂ ಪ್ರೋತ್ಸಾಹ ನೀಡಿ ಎಂದರು‌.

relax

ನಿರ್ದೇಶಕ ಶ್ರೀನಿವಾಸ್ ಮಂಡ್ಯ ಮಾತನಾಡಿ, “ರೋಲೆಕ್ಸ್” ಎಂದು ಆರಂಭವಾದ ಈ ಚಿತ್ರ ಈಗ “ರಿಲ್ಯಾಕ್ಸ್” ಎಂದು ಹೆಸರು ಬದಲಿಸಿಕೊಂಡಿದೆ. ಆಂಧ್ರಪ್ರದೇಶದ ಆಂಧ್ರಪ್ರದೇಶ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಹಾಗೂ ಪ್ರಸ್ತುತ ಈ ಚಿತ್ರದ ನಿರ್ಮಾಪಕರಾಗಿರುವ ಅಂಬಟಿ ಮಧುಮೋಹನ್ ಅವರು ಯಾವುದೇ ಕೊರತೆ ಬಾರದ ಹಾಗೆ ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿದೆ. ಹೆಸರಾಂತ ಗಾಯಕ – ಗಾಯಕಿಯರ ಕಂಠಸಿರಿಯಲ್ಲಿ ಹಾಡುಗಳು ಮೂಡಿಬಂದಿದೆ. ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಾಹಕ ರಾಕೇಶ್ ತಿಲಕ್ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯವೈಖರಿ ಹಾಗೂ ಕೋಮಲ್ ಕುಮಾರ್, ಸೋನಾಲ್ ಮೊಂತೆರೊ, ವಿನೋದ್ ಪ್ರಭಾಕರ್ ಹೀಗೆ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಕೂಡ ಬಹಳ ಚೆನ್ನಾಗಿದೆ. ಒಂದೊಳ್ಳೆ ಚಿತ್ರ ಇದೇ ಅಕ್ಟೋಬರ್ 30ಕ್ಕೆ ನಿಮ್ಮ ಮುಂದೆ ಬರಲಿದೆ. ನೋಡಿ ಹಾರೈಸಿ ಎಂದರು.

ನಟ ಕೋಮಲ್‌ ಕುಮಾರ್ ಮಾತನಾಡಿ, “ರೋಲೆಕ್ಸ್” ಶೀರ್ಷಿಕೆ ಇಟ್ಟಾಗ ನಾನು ಹೇಳಿದ್ದೆ. ಯಾವುದಾದರೂ ಬ್ರ್ಯಾಂಡ್ ಒಂದರ ಹೆಸರಿಟ್ಟರೆ ಮುಂದೆ ತೊಂದರೆಯಾಗಬಹುದು ಅಂತ. “ರಿಲ್ಯಾಕ್ಸ್” ನಮ್ಮ ಚಿತ್ರದ ಅಡಿಬರಹವಾಗಿತ್ತು. ಈಗ ಅದೇ ಚಿತ್ರದ ಶೀರ್ಷಿಕೆ ಆಗಿರುವುದು ಸೂಕ್ತವಾಗಿದೆ. ನಾನು ಬಹಳ ವರ್ಷಗಳ ನಂತರ ಈ ಜಾನರ್ ನ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಅಂಬಟಿ ಮಧು ಮೋಹನ್ ಅವರು ಈ ಚಿತ್ರಚಿತ್ರವನ್ನು ಬಹಳ ಪ್ರೀತಿಯಿಂದ ನಿರ್ಮಿಸಿದ್ದಾರೆ. ಶ್ರೀನಿವಾಸ್ ಮಂಡ್ಯ ನಿರ್ದೇಶನ, ತಂತ್ರಜ್ಞರ ಕಾರ್ಯವೈಖರಿ ಹಾಗೂ ಕಲಾವಿದರ ಅಭಿನಯ ಎಲ್ಲವೂ ಚೆನ್ನಾಗಿದೆ. ನೋಡುಗರಿಗೆ ಬೇಕಾಗಿರುವ ಎಲ್ಲಾ ಅಂಶಗಳಿರುವ ಈ ಚಿತ್ರ ಅಕ್ಟೋಬರ್ 30 ರಂದು ನಿಮ್ಮ ಮುಂದೆ ಬರಲಿದೆ ಎಂದರು.

ನಟಿ ಸೋನಾಲ್ ಮೊಂತೆರೊ ಮಾತನಾಡಿ, ನಿರ್ಮಾಪಕರು ಇಡೀ ಚಿತ್ರೀಕರಣದ ಸಮಯದಲ್ಲಿ ಮಗಳ ರೀತಿ ನೋಡಿಕೊಂಡಿದ್ದಾರೆ. ಇಡೀ ತಂಡ ಕುಟುಂಬದ ರೀತಿ ಇತ್ತು. ಇದೇ ಮೊದಲ ಬಾರಿಗೆ ಕೋಮಲ್‌ ಕುಮಾರ್ ಅವರ ಜೊತೆ ನಟನೆ ಮಾಡಿದ್ದೇನೆ. ಅವರ ಜೊತೆ ಕೆಲಸ ಮಾಡಿದ್ದು ಕಲಿಕೆಗೆ ಸಹಕಾರಿಯಾಗಿದೆ. ಮತ್ತೆ ಅವರ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು

ಕಾರ್ಯಕಾರಿ ನಿರ್ಮಾಪಕ ಮುರುಳಿ ಕೃಷ್ಣ,

ಛಾಯಾಗ್ರಾಹಕ ರಾಕೇಶ್ ತಿಲಕ್, ಸಂಕಲನಕಾರ ಅರವಿಂದ‌ ರೆಡ್ಡಿ , ಕ್ರಿಯೇಟಿವ್ ಹೆಡ್ ರಾಜೇಶ್ ವರ್ಮ ಸೇರಿದಂತೆ ಮುಂತಾದ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ