- ರಾಘವೇಂದ್ರ ಅಡಿಗ ಎಚ್ಚೆನ್.
ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್ಸಿಟಿಯಲ್ಲಿ ಮೂರು ತಿಂಗಳ ಕಾಲ ಅದ್ದೂರಿ ಅನುಭವಗಳು, ಅದ್ಭುತ ಮನರಂಜನಾ ಕಾರ್ಯಕ್ರಮಗಳು, ಮನಮೋಹಕ ಕಲಾತ್ಮಕ ಸ್ಥಾಪನೆಗಳು, ಫ್ಯಾಷನ್, ಆಹಾರ, ಶಾಪಿಂಗ್ ಹಾಗೂ ಜೀವನದ ಸವಿಯನ್ನು ಹೆಚ್ಚಿಸುವ ಅನೇಕ ವಿಶೇಷ ಆಕರ್ಷಣೆಗಳ ಸಂಭ್ರಮ.
ಬೆಂಗಳೂರು, 10 ಅಕ್ಟೋಬರ್ 2026: ಬೆಂಗಳೂರಿನಲ್ಲಿ ಹೆಸರಾಂತ ಐಷಾರಾಮಿ ಶಾಪಿಂಗ್, ಭೋಜನ ಮತ್ತು ಮನರಂಜನಾ ತಾಣವಾಗಿರುವ ಫೀನಿಕ್ಸ್ ಮಾರ್ಕೆಟ್ಸಿಟಿ ಇಂದು ‘ಫೀನಿಕ್ಸ್ ಫೆಸ್ಟಿವಲ್ 2026’ ಅನ್ನು ಪ್ರಾರಂಭಿಸಿದೆ. ಮೂರು ತಿಂಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ಅಭೂತಪೂರ್ವ ಶಾಪಿಂಗ್, ಸಂಗೀತ, ಫ್ಯಾಷನ್, ಆಹಾರ ಮತ್ತು ಮನರಂಜನೆಯ ಸಂಭ್ರಮ ಮನೆಮಾಡಲಿದೆ. ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ನಡೆಯಲಿರುವ ಈ ಉತ್ಸವವು ಗ್ರಾಹಕರಿಗೆ ಶಾಪಿಂಗ್, ಐಷಾರಾಮಿ ಫ್ಯಾಷನ್, ಆಹಾರ, ಮನರಂಜನೆ ಹಾಗೂ ವಿಶಿಷ್ಟ ಅನುಭವಗಳನ್ನು ಒಂದೇ ವೇದಿಕೆಯಲ್ಲಿ ಒಗೂಡಿಸಲಿದೆ. ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಹಬ್ಬದ ಋತುವನ್ನು ಸಂಭ್ರಮಿಸಲು ಸಂದರ್ಶಕರಿಗೆ ಹಲವು ವಿಭಿನ್ನ ಅವಕಾಶಗಳನ್ನು ಒದಗಿಸಲಿದೆ.

ಇಂದು ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್ಸಿಟಿಯಲ್ಲಿ ಬಾಲಿವುಡ್ ನಟ ಹರ್ಷವರ್ಧನ್ ರಾಣೆ ಅವರು ಈ ಫೀನಿಕ್ಸ್ ಫೆಸ್ಟಿವಲ್ 2026ಕ್ಕೆ ಚಾಲನೆ ನೀಡಿದರು. ಅವರ ಉಪಸ್ಥಿತಿಯೊಂದಿಗೆ ಉತ್ಸವದ ಸಂಭ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು. ಭಾರತೀಯ ಸಂಪ್ರದಾಯಗಳು, ಸಮಕಾಲೀನ ಮನರಂಜನೆ ಮತ್ತು ವಿಭಿನ್ನ ಅನುಭವಗಳನ್ನು ಒಂದೇ ವೇದಿಕೆಯಲ್ಲಿ ಒಗೂಡಿಸುವ ಈ ಉತ್ಸವವು ಬೆಂಗಳೂರಿನ ಜನರಿಗೆ ವಿಶೇಷ ಸಂಭ್ರಮವನ್ನು ನೀಡಲಿದೆ.
‘ಬೆಳಕಿನ ಪಯಣ’ (A Journey of Light) ಎಂಬ ವಿಷಯ ವಸ್ತುವಿನಡಿ ರೂಪುಗೊಂಡಿರುವ ದೀಪಾವಳಿ ಅಲಂಕಾರವು ಸಾಂಪ್ರದಾಯಿಕ ಭಾರತೀಯ ವಿನ್ಯಾಸಗಳನ್ನು ಆಧುನಿಕ ಬೆಳಕಿನ ವಿನ್ಯಾಸದ ಮೂಲಕ ಹೊಸ ರೀತಿಯಲ್ಲಿ ಅನಾವರಣಗೊಳಿಸುತ್ತದೆ. ಇಕತ್ ಜವಳಿ ವಿನ್ಯಾಸದಿಂದ ಪ್ರೇರಿತವಾದ ವಿಶೇಷ ಆಕೃತಿಗಳು ಆಕರ್ಷಕವಾದ ಒಂದು ಅನುಭವಾತ್ಮಕ ಚಕ್ರವ್ಯೂಹವನ್ನು ಸೃಷ್ಟಿಸಿವೆ. ಮತ್ತೊಂದೆಡೆ, ಪ್ರಕಾಶಮಾನವಾದ ವಜ್ರಾಕೃತಿಗಳು ಪ್ರತ್ಯೇಕ ಬೆಳಕಿನ ಬಿಂದುಗಳು ಒಂದಾಗಿ ಸೇರಿ ದೊಡ್ಡದಾದ ಸಾಪೂಹಿಕ ಪ್ರಕಾಶವನ್ನು ರೂಪಿಸುವುದನ್ನು ಸಂಕೇತಿಸುತ್ತವೆ.
ಸಾಂಪ್ರದಾಯಿಕ ರಂಗೋಲಿ ವಿನ್ಯಾಸಗಳಿಂದ ಸ್ಫೂರ್ತಿ ಪಡೆದಿರುವ ಈ ಕಲಾತ್ಮಕ ಸ್ಥಾಪನೆಯು ಭಾರತೀಯ ಸಾಂಪ್ರದಾಯಿಕ ವಿನ್ಯಾಸ ಶೈಲಿಯನ್ನು ಆಧುನಿಕ ಬೆಳಕಿನ ವಿನ್ಯಾಸದೊಂದಿಗೆ ಸಂಯೋಜಿಸಿದೆ. ಇದು ಬೆಳಕು, ಬಣ್ಣ ಮತ್ತು ಸಂಸ್ಕೃತಿಯ ಸಮೃದ್ಧ ಅನುಭವವನ್ನು ನೀಡುತ್ತದೆ. ಈ ಸ್ಥಾಪನೆಯೊಳಗಿನ ಸಂದರ್ಶಕರು ಹೆಜ್ಜೆ ಹಾಕುತ್ತಾ ಸಾಗಿದಂತೆ, ಅವರೂ ಈ ಬೆಳಕಿನ ಪಯಣದ ಭಾಗವಾಗುತ್ತಾರೆ. ಪ್ರತಿಯೊಂದು ಸ್ಥಳವೂ ಬೆಳಕು, ಬಣ್ಣ ಮತ್ತು ವಿನ್ಯಾಸಗಳ ಹೊಸ ಸಂಯೋಜನೆಯನ್ನು ಅನಾವರಣಗೊಳಿಸುವ ಮೂಲಕ ವಿಶಿಷ್ಟ ಅನುಭವವನ್ನು ಒದಗಿಸುತ್ತದೆ.

ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಕೇಂದ್ರ ನಿರ್ದೇಶಕಿ ಹಾಗೂ ದಕ್ಷಿಣ ಭಾರತ ಮತ್ತು ಪುಣೆ ವಲಯದ ಮಾರ್ಕೆಟಿಂಗ್ ನಿರ್ದೇಶಕಿ ರಿತು ಮೆಹ್ತಾ ಅವರು ಮಾತನಾಡಿ, “ಹಬ್ಬದ ಋತುವನ್ನು ವಿಶೇಷವಾಗಿಸುವ ಪ್ರತಿಯೊಂದು ಅಂಶದ ಸಂಭ್ರಮವೇ ಫೀನಿಕ್ಸ್ ಫೆಸ್ಟಿವಲ್. ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಒಂದಾಗಿ ಸಮಯ ಕಳೆಯುವುದರಿಂದ ಹಿಡಿದು, ಹೊಸ ಅನುಭವಗಳನ್ನು ಅನ್ವೇಷಿಸುವುದು ಹಾಗೂ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸುವವರೆಗೆ ಎಲ್ಲವೂ ಈ ಸಂಭ್ರಮದ ಭಾಗವಾಗಿದೆ. ಈ ವರ್ಷ, ಬೆಂಗಳೂರಿನಲ್ಲಿರುವ ನಮ್ಮ ತಾಣಗಳಲ್ಲಿ ಸಾಂಪ್ರದಾಯಿಕ ಹಬ್ಬದ ಆಚರಣೆಗಳು, ಮನಮೋಹಕ ಅನುಭವಗಳು ಮತ್ತು ಸಮಕಾಲೀನ ಮನರಂಜನೆಯ ರೋಚಕ ಸಂಯೋಜನೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ. ಹಬ್ಬದ ವಿಶೇಷ ಅಲಂಕಾರಗಳಿಂದ ನಮ್ಮ ತಾಣಗಳಿಗೆ ಹೊಸ ರೂಪ ನೀಡುವುದರಿಂದ ಹಿಡಿದು, ಉತ್ಸಾಹಭರಿತ ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಸಂಭ್ರಮಗಳವರೆಗೆ, ಪ್ರತಿಯೊಂದು ಭೇಟಿಯೂ ಒಂದು ವಿಶೇಷ ಸಂದರ್ಭದ ಅನುಭವವನ್ನು ನೀಡಬೇಕು ಎಂಬುದು ನಮ್ಮ ಆಶಯ. ಬೆಳಕು, ಬಣ್ಣ, ಉತ್ಸಾಹ ಮತ್ತು ಸಂಭ್ರಮದಿಂದ ಕಂಗೊಳಿಸುವ ಈ ಹಬ್ಬದ ಋತುವಿನಲ್ಲಿ ಬೆಂಗಳೂರಿನ ಜನರನ್ನು ಸ್ವಾಗತಿಸಲು ನಾವು ಕಾತರರಾಗಿದ್ದೇವೆ” ಎಂದು ಹೇಳಿದರು.





