ಸೂಪರ್‌ಸ್ಟಾರ್‌ ರಜನಿಕಾಂತ್ ನಟನೆಯ ಹಾಗೂ ಕಮಲ್ ಹಾಸನ್ ಅವರ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್’ ಸಂಸ್ಥೆ ಬಂಡವಾಳ ಹೂಡುತ್ತಿರುವ ಬಹುನಿರೀಕ್ಷಿತ ಧರ್ಮನ್ ಚಿತ್ರದ ತಾರಾಗಣಕ್ಕೆ ಕನ್ನಡತಿ ಶ್ರೀಲೀಲಾ ಸೇರ್ಪಡೆಗೊಂಡಿದ್ದಾರೆ.Sreeleela (5)ಕಮಲ್ ಹಾಸನ್ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸೋಶಿಯಲ್​ ಮೀಡಿಯಾದಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿ, ಶ್ರೀಲೀಲಾ ಅವರನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿದೆ. ಈ ವೇಳೆ, “ಅವರಲ್ಲಿ ಸ್ಪಾರ್ಕ್ ಇದೆ, ಪಟಾಕಾ ಸಿಕ್ಕಿದೆ. ಧರ್ಮನ್ ಚಿತ್ರಕ್ಕೆ ಶ್ರೀಲೀಲಾ ಅವರಿಗೆ ಆತ್ಮೀಯ ಸ್ವಾಗತ” ಎಂದು ಪೋಸ್ಟ್ ಹಂಚಿಕೊಂಡಿದೆ.

ಶ್ರೀಲೀಲಾ ಅವರು ತಲೈವಾ ಜೊತೆ ನಟಿಸುತ್ತಿರುವುದು ಇದೇ ಮೊದಲು. ಈ ಮೂಲಕ ತಮಿಳು ಚಿತ್ರರಂಗದಲ್ಲಿ ಶ್ರೀಲೀಲಾ ಅವರ ಮಾರುಕಟ್ಟೆ ವಿಸ್ತಾರಗೊಳ್ಳುತ್ತಿದೆ.

ರಜನಿಕಾಂತ್ ಅವರ 173ನೇ ಸಿನಿಮಾವಾಗಿ ಧರ್ಮನ್ ಮೂಡಿಬರುತ್ತಿದೆ. ಇದಕ್ಕೂ ಮೊದಲು ಈ ಸಿನಿಮಾವನ್ನು ಡ್ರ್ಯಾಗನ್ ಚಿತ್ರ ಖ್ಯಾತಿಯ ಅಶ್ವತ್ ಮಾರಿಮುತ್ತು ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ. ಚಿತ್ರದಲ್ಲಿ ರಜನಿಕಾಂತ್ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರವನ್ನು ಚಿತ್ರತಂಡ ಡೆಡ್ಲಿ ಡಾಕ್ಟರ್ ಎಂದು ಬಣ್ಣಿಸಿದೆ.

ಕಿಸ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಪರಿಚಿತರಾದ ಶ್ರೀಲೀಲಾ ನಂತರ ತೆಲುಗು ಮತ್ತು ತಮಿಳಿನಲ್ಲಿ ದೊಡ್ಡ ನಟಿಯಾಗಿ ಬೆಳೆದಿದ್ದಾರೆ. ರಜನಿಕಾಂತ್ ಜೊತೆ ನಟಿಸುವುದು ಅವರ ವೃತ್ತಿ ಜೀವನದಲ್ಲಿ ಇದೇ ಮೊದಲು. ಇತ್ತೀಚೆಗೆ ಸತತ ಸಿನಿಮಾಗಳು ನಿರೀಕ್ಷಿತ ಯಶಸ್ಸು ಕಾಣದಿದ್ದರೂ ಅವರಿಗೆ ಅವಕಾಶಗಳು ಹುಡುಕಿ ಬರುತ್ತಿವೆ. ಬಾಲಿವುಡ್ ನಲ್ಲಿ ಕಾರ್ತಿಕ್ ಆರ್ಯನ್ ಜೊತೆಗಿನ ಸಿನಿಮಾ ಕೂಡ ನಿರ್ಮಾಣ ಹಂತದಲ್ಲಿದೆ. ಧರ್ಮನ್ ಸಿನಿಮಾ 2027 ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ