– ರಾಘವೇಂದ್ರ ಅಡಿಗ ಎಚ್ಚೆನ್.
ನೈಜ ಘಟನೆಯನ್ನಾಧರಿಸಿ ನವಿಲುಗರಿ ನವೀನ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವ ’ಜನರಿಂದ ನಾನು ಮೇಲೆ ಬಂದೆ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಹಿರಿಯ ನಿರ್ದೇಶಕ ಸುನಿಲ್ಕುಮಾರ್ ಸಿಂಗ್ ಟ್ರೇಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ’ಗಜ’ ನಿರ್ಮಾಪಕ ಸುರೇಶ್ಗೌಡ ಉಪಸ್ತಿತರಿದ್ದರು. ನೆಟ್ಟಿಗೆರೆ ಬೋಳಾರ ಗ್ರಾಮದ ಬಿ.ಹೇಮಾವತಿ ಅವರು ಮಂಜುನಾಥ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರವ ಈ ಚಿತ್ರದಲ್ಲಿ ಗಂಧರ್ವರಾಜ್ ಶಂಕರ್ ನಾಯಕನಾಗಿ ಅಭಿನಯಿಸಿದರೆ, ಮಂಗಳೂರು ಮೂಲದ ಅಪ್ತಿ ಪಟವರ್ಧನ್ ಮತ್ತು ಮೈಸೂರಿನ ಕೃತಿಕಾ ದಿವಾಕರ್ ನಾಯಕಿಯರಾಗಿದ್ದಾರೆ.

ಹಿರಿಯ ಕಲಾವಿದರಾದ ವಿನೋದ್ ರಾಜ್, ಅಭಿಜಿತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶೈಲಜ ದ್ವಾರಕೀಶ್(ಹಿರಿಯ ನಟ ದ್ವಾರಕೀಶ್ ಎರಡನೇ ಪತ್ನಿ) ಶಿವಕುಮಾರ್ ಆರಾಧ್ಯ ಮುಂತಾದವರು ಅಭಿನಯಿಸಿದ್ದಾರೆ.

ಪ್ರಣವ್ ಸತೀಶ್ ಸಂಗೀತ, ಟಿ.ಆರ್.ಗೌತಮ್ ಛಾಯಾಗ್ರಹಣ ಹಾಗೂ ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರು, ಮೇಲುಕೋಟೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರವು ನವೆಂಬರ್ ಎರಡನೇ ವಾರದಲ್ಲಿ ತೆರೆ ಕಾಣುತ್ತಿದೆ.





