ಚಿತ್ರದುರ್ಗದ ರೇಣುಕಾ ಪ್ರಕಾಶನ ಸಂಸ್ಥೆ ಹಾಗೂ ಚಿತ್ರದುರ್ಗ ಇತಿಹಾಸ ಕೂಟ , ಚಿತ್ರದುರ್ಗ ಸಂಶೋಧನ ತಂಡ , ಮದಕರಿನಾಯಕ ಸಾಂಸ್ಕೃತಿಕ ಕೇಂದ್ರ , Indian Medical Association  ಇವರ ಸಂಯುಕ್ತ ಆಶ್ರಯದಲ್ಲಿ

‘ *ಹುಲ್ಲೂರು* *ಶ್ರೀನಿವಾಸ* *ಜೋಯಿಸ* *ಸ್ಮಾರಕ* *ಉಪನ್ಯಾಸಮಾಲೆ*  – *2* ‘ ಅಂಗವಾಗಿ

*71* *ನೇ* *ಕನ್ನಡ* *ರಾಜ್ಯೋತ್ಸವ*

ಹಾಗೂ

‘ *ಎಂ* . *ಎಸ್* . *ಪುಟ್ಟಣ್ಣ* : *ಜೀವನ* – *ಸಾಧನೆ* ‘

ಕುರಿತು

*ಒಂದುದಿನದ* *ವಿಚಾರ* *ಸಂಕಿರಣ* ವನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ : 15.11.2026 ನೇ ಭಾನುವಾರ , ಬೆಳಗ್ಗೆ 10.30 ಗಂಟೆಗೆ

ಸ್ಥಳ : ಐ. ಎಂ. ಎ ಹಾಲ್ , ಮದಕರಿ ಸರ್ಕಲ್ , ಚಿತ್ರದುರ್ಗ

IMG-20261103-WA0086

ಚಿತ್ರದುರ್ಗದ ಆದ್ಯ ಇತಿಹಾಸಕಾರರಾದ ಶ್ರೀಯುತ ಹುಲ್ಲೂರು ಶ್ರೀನಿವಾಸ ಜೋಯಿಸರು ಚಿತ್ರದುರ್ಗ ಜಿಲ್ಲೆಯನ್ನು ಒಳಗೊಂಡಂತೆ ಇಡೀ ಕರ್ನಾಟಕದ  ಇತಿಹಾಸ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಅಪರೂಪದ ವಿದ್ವಾಂಸರು. ಅದರಲ್ಲೂ ನಮ್ಮ ಚಿತ್ರದುರ್ಗದ  ಇತಿಹಾಸಕ್ಕೆ ಇವರ ಕೊಡುಗೆ ಅಪಾರ. ಇಂತಹ ವಿದ್ವಾಂಸರನ್ನು ಚಿತ್ರದುರ್ಗದಲ್ಲಿ ಸದಾ ಸ್ಮರಿಸಬೇಕೆಂಬ ಸದಾಶಯದಿಂದ 2026 ರ ಮಾರ್ಚ್ ತಿಂಗಳಿನಿಂದ ಅವರ ಹೆಸರಲ್ಲಿ ಸ್ಮಾರಕ ಉಪನ್ಯಾಸಮಾಲೆಯನ್ನು ಆರಂಭಿಸಲಾಗಿದೆ . ಈ ಹಿನ್ನೆಲೆಯಲ್ಲಿ ಪ್ರಸ್ತುತ ಎರಡನೇ ಮಾಲಿಕೆಯ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದ್ದು  , 2 ನೇ ಉಪನ್ಯಾಸಮಾಲೆಯಲ್ಲಿ ‘ ಎಂ.ಎಸ್. ಪುಟ್ಟಣ್ಣ : ಜೀವನ – ಸಾಧನೆ ‘ ಕುರಿತು ಒಂದು ದಿನದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹೊಸಗನ್ನಡ ಸಾಹಿತ್ಯದ ಆರಂಭದ ಬರಹಗಾರರು ಮತ್ತು ಇತಿಹಾಸಕಾರರು ಆಗಿದ್ದ ಎಂ.ಎಸ್. ಪುಟ್ಟಣ್ಣ ನವರು ಕನ್ನಡ ನಾಡಿನ ಸಾಹಿತ್ಯ , ಇತಿಹಾಸ ಹಾಗೂ ಸಂಸ್ಕೃತಿಗೆ ಕೊಟ್ಟಿರುವ ಕೊಡುಗೆ ವಿಶೇಷಯುತವಾದುದು. ಕನ್ನಡ ಕಾದಂಬರಿ , ಗದ್ಯಸಾಹಿತ್ಯ, ಕಥಾಸಾಹಿತ್ಯ  , ಪತ್ರಿಕಾ ಸಾಹಿತ್ಯ ಮತ್ತು ಇತಿಹಾಸ ಬರವಣಿಗೆಯಲ್ಲಿ ಇವರ ಶ್ರಮ ಅಗಣಿತ. ವಿಶೇಷವಾಗಿ ಕರ್ನಾಟಕ ಪಾಳೆಯಗಾರ ಸಂಸ್ಥಾನಗಳ ಬಗ್ಗೆ ಮೊದಲ ಬಾರಿಗೆ ಮಹತ್ವದ ಕೃತಿಗಳನ್ನು ಬರೆದ ದೇಶೀಯ ಇತಿಹಾಸಕಾರ. *ಚಿತ್ರದುರ್ಗದ* *ಪಾಳಯಗಾರರು* ಇವರ ಮಹತ್ವದ ಕೃತಿ. ನಾಡು , ನುಡಿ, ಸಾಹಿತ್ಯ , ಇತಿಹಾಸ , ಸಂಸ್ಕೃತಿಗೆ ತಮ್ಮ ಬದುಕಿನುದ್ದಕ್ಕೂ ಸೇವೆ ಸಲ್ಲಿಸಿದ ಇಂತಹ ಮಹನೀಯ ವಿದ್ವಾಂಸರ ಬಗ್ಗೆ ಒಂದುದಿನದ ವಿಚಾರ ಸಂಕಿರಣದ ಮೂಲಕ ಸ್ಮರಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಬೆಳಗ್ಗೆ 10.30 ರಿಂದ ಪ್ರಾರಂಭವಾಗುವ ಕಾರ್ಯಕ್ರಮ ಸಂಜೆ 5.30ರ ವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಚಿವರು , ಗಣ್ಯ ವ್ಯಕ್ತಿಗಳು , ವಿದ್ವಾಂಸರು , ಸಂಶೋಧಕರು , ಇತಿಹಾಸ ಮತ್ತು ಸಾಹಿತ್ಯಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಎಂ. ಎಸ್. ಪುಟ್ಟಣ್ಣನವರ ಜೀವನ ಮತ್ತು ಸಾಧನೆ ಕುರಿತು ಒಟ್ಟು 4 ಸಂಶೋಧನ ಲೇಖನಗಳು ಮಂಡನೆಯಾಗಲಿವೆ.

ಪ್ರಸ್ತುತ ವಿಚಾರ ಸಂಕಿರಣ ನಾಡಿನ ಖ್ಯಾತ ಇತಿಹಾಸ ಸಂಶೋಧಕರಾದ ಡಾ. ಲಕ್ಮಣ್ ತೆಲಗಾವಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.

ಇಂತಹ ಸುಂದರ ಹಾಗೂ ಮಹತ್ವದ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ

ಡಾ. ಎನ್. ಎಸ್. ಮಹಂತೇಶ

ಸಂಚಾಲಕರು

ರೇಣುಕಾ ಪ್ರಕಾಶನ

ಚಿತ್ರದುರ್ಗ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ