ಬರದ ಹಿನ್ನೆಲೆಯಲ್ಲಿ ಒಂದು ದಿನಕ್ಕೆ ಸೀಮಿತಗೊಳಿಸಲು ಉದ್ದೇಶಿಸಿದ್ದ ಬೆಂಗಳೂರು ಕೃಷಿ ಮೇಳವನ್ನು ಕೃಷಿ ಸಚಿವರ ಸೂಚನೆಯಂತೆ ನವೆಂಬರ್ 16 ರಿಂದ 18 ರವರೆಗೆ ಮೂರು ದಿನಗಳ ಕಾಲ ಆಯೋಜಿಸಲು ತೀರ್ಮಾನಿಸಲಾಗಿದೆ.

ರೈತರಿಗೆ ಬರ ನಿರ್ವಹಣಾ ತಂತ್ರಜ್ಞಾನಗಳ ಪರಿಚಯದೊಂದಿಗೆ, ಬರ ಸಹಿಷ್ಣು ರಾಗಿ (ಜಿಪಿಯು 101), ಬೀಜದ ದಂಟು ಹಾಗೂ ಹೈಬ್ರಿಡ್ ಮುಸುಕಿನ ಜೋಳದ ಮೂರು ನೂತನ ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರ ಸೂಚನೆ ಮೇರೆಗೆ ಮೂರು ದಿನಗಳ ಕಾಲ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ.

ಪ್ರತಿ ವರ್ಷ ನಾಲ್ಕು ದಿನಗಳ ಮೇಳ ನಡೆಸಲಾಗುತ್ತಿತ್ತು. ಈ ಬಾರಿ ಮೂರು ದಿನಗಳಿಗೆ ಸೀಮಿತಗೊಳಿಸಲಾಗಿದೆ. ಬರದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು ಕೃಷಿ ಮೇಳವನ್ನು ಒಂದು ದಿನಕ್ಕೆ ನಿಗದಿಪಡಿಸಿದ್ದರು. ಇದಕ್ಕೆ ರೈತರು ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿಮೂರು ದಿನಗಳ ಕಾಲ ಮೇಳ ಆಯೋಜಿಸಲು ತೀರ್ಮಾನಿಸಲಾಗಿದೆ.ರಾಜ್ಯಾದ್ಯಂತ ಭೀಕರ ಬರ ಆವರಿಸಿರುವ ಹಿನ್ನೆಲೆ ಕೃಷಿ ಮೇಳವನ್ನು ನ.13ರಂದು ಒಂದೇ ದಿನಕ್ಕೆ ಸೀಮಿತಗೊಳಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ, ಕೃಷಿ ಸಚಿವರ ನಿರ್ದೇಶನದಂತೆ ಮೂರು ದಿನ ಕೃಷಿ ಮೇಳ ನಡೆಸಲಾಗುತ್ತಿದೆ. ತಾಕುಗಳ ಪ್ರದರ್ಶನ, ಹೊಸ ತಳಿಗಳು ಹಾಗೂ ಕೃಷಿ ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಲಾಗುವುದು. ರೈತರಿಗೆ ಬರ ನಿರ್ವಹಣಾ ಕ್ರಮಗಳನ್ನು ಪರಿಚಯಿಸಲಾಗುವುದು ಎಂದು ವಿವಿ ಪ್ರಕಟಣೆ ತಿಳಿಸಿದೆ.

ಮೂರು ಹೊಸ ತಳಿಗಳ ಬಿಡುಗಡೆ

ರಾಗಿ: ಬರ ಸಹಿಷ್ಣು ಜಿಪಿಯು 101 ರಾಗಿ ಮಧ್ಯಮಾವಧಿ ತಳಿಯಾಗಿದ್ದು ಕಡಿಮೆ ನೀರಿನಲ್ಲೂಉತ್ತಮವಾಗಿ ಬೆಳೆಯುತ್ತದೆ. ಬೆಂಕಿರೋಗ ನಿರೋಧಕತೆ ಹೊಂದಿದ್ದು ಬಾಗುವಿಕೆಗೆ ಪ್ರತಿರೋಧ ಸಾಮರ್ಥ್ಯ ಹೊಂದಿದೆ. ಇದರಲ್ಲಿಕಬ್ಬಿಣದ ಅಂಶ ಅಧಿಕವಾಗಿದ್ದು, ಮುದ್ದೆ ಬೇಗ ಹಳಸುವುದಿಲ್ಲ.

ಬೀಜದ ದಂಟು: ‘ಹೆಚ್ಚು ಪ್ರೋಟೀನ್‌ ಇರುವ ಕೆಬಿಜಿಎ 18 ಬೀಜದ ದಂಟನ್ನು ಸಂಶೋಧನೆ ಮಾಡಿದ್ದು ಹೆಕ್ಟೇರ್‌ಗೆ 22 ರಿಂದ 24 ಕ್ವಿಂಟಾಲ್‌ ಇಳುವರಿ ಸಿಗಲಿದೆ. ಸದೃಢ ಕಾಂಡ ಹೊಂದಿದ್ದು ಬಾಗುವಿಕೆಗೆ ನಿರೋಧತೆ ಹೊಂದಿದೆ. ಎಲೆ ಚುಕ್ಕೆ ರೋಗ, ಪ್ರಮುಖ ಕೀಟಗಳಿಗೆ ನಿರೋಧಕ ಶಕ್ತಿ ಹೊಂದಿದೆ.

ಮುಸುಕಿನ ಜೋಳ: ಮುಸುಕಿನ ಜೋಳದ ಎಂಎಎಚ್‌ 20-45 ಹೈಬ್ರಿಡ್‌ ತಳಿಯನ್ನು ಸಂಶೋಧಿಸಲಾಗಿದ್ದು 125 ರಿಂದ 130 ದಿನದಲ್ಲಿಕಟಾವಿಗೆ ಬರಲಿದೆ. ಹೆಕ್ಟೇರ್‌ಗೆ 110 ರಿಂದ 115 ಕ್ವಿಂಟಾಲ್‌ ಇಳುವರಿ ಬರಲಿದೆ. ಗಟ್ಟಿಯಾದ ಹಾಗೂ ಬಲಿಷ್ಠ ಕಾಂಡ, ಅಗಲ ಮತ್ತು ಮಂದ ಎಲೆಗಳನ್ನು ಹೊಂದಿದ್ದು ಮೇವಿಗೂ ಸಹಕಾರಿಯಾಗಲಿದೆ. ಎಥೆನಾಲ್‌ ಉತ್ಪಾದನೆಗೂ ಇದನ್ನು ಬಳಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ