ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಪ್ರಖ್ಯಾತ ತಾರೆ ಜಯಲಲಿತ ಬದುಕಿದ್ದಾಗ ಎಂದೂ ದೀಪಾವಳಿ ಹಬ್ಬವನ್ನು ಆಚರಿಸುತ್ತಿರಲಿಲ್ಲ. ಏಕೆ ಗೊತ್ತೇ..?

1790 ರ #ನರಕಚತುರ್ದಶಿ . ಅರ್ಧ ರಾತ್ರಿ ಸಮಯ. ಟಿಪ್ಪು ಸುಲ್ತಾನ್ ತನಗೆ ಅತ್ಯಂತ ನಿಷ್ಠರೂ ಕ್ರೂರಿಗಳೂ ಆದ ಸಹಚರರೊಂದಿಗೆ ಸೈನ್ಯ ಸಮೇತ
ಮೇಲುಕೋಟೆಯ ಶ್ರೀ ಚೆಲುವರಾಯ ಸ್ವಾಮಿಯ ದೇವಾಲಯವನ್ನು ಪ್ರವೇಶಿಸುತ್ತಾನೆ.
ಅದೇ ಆಗ ಸುಮಾರು 1000 ಭಕ್ತರು ನರಕ ಚತುರ್ದಶಿಯ ನಿಮಿತ್ತವಾಗಿ ನಡೆದ ದೇವರ ಮೆರವಣಿಗೆ ಯಲ್ಲಿ ಭಾಗವಹಿಸಿ, ರಾತ್ರಿಯ ಪೂಜೆ ಮುಗಿಸಿ ಪ್ರಸಾದವನ್ನು ಸ್ವೀಕರಿಸಿ ವಿಶ್ರಾಂತಿ ಪಡೆಯಲು ತಯಾರಿ ನಡೆಸಿದ್ದರು.
ಟಿಪ್ಪು ಬಂದವನೇ ದೇವಾಲಯದ ಎಲ್ಲಾ ದ್ವಾರಗಳನ್ನೂ ಮುಚ್ಚಿಸಿ 1000 ಭಕ್ತರಲ್ಲಿ 800 ಜನರನ್ನು
ತನ್ನ ಸೈನ್ಯದ ಬಲದಿಂದ ಮಾರಣಹೋಮ ನಡೆಸಿ ನೆಲಕ್ಕೆ ಉರುಳಿಸುತ್ತಾನೆ. ಮಕ್ಕಳು-ಮರಿಗಳನ್ನು ಸಹ ಬಿಡುವುದಿಲ್ಲ. ಉಳಿದ 200 ಮಂದಿ ಸುಂದರ ಸ್ತ್ರೀಯರನ್ನು ಬಂಧಿಸುತ್ತಾನೆ, ತನ್ನ ಜನಾನಾ ಗಾಗಿ.
ಮರುದಿನ ಬೆಳಗ್ಗೆ ದೀಪಾವಳಿ ಪಾಡ್ಯದ ದಿನ. ಅವತ್ತು ಈ ನರಹಂತಕ ಮೇಲುಕೋಟೆ ದೇವಸ್ಥಾನವನ್ನು ಒಡೆದು, ಅದರಲ್ಲಿದ್ದ ಅಪಾರ ಸಂಪತ್ತನ್ನು ದೋಚುತ್ತಾನೆ.
ಕೊಳ್ಳೆ ಹೊಡೆದ ಸಂಪತ್ತನ್ನು ಸಾಗಿಸಲಿಕ್ಕೆ 26 ಆನೆಗಳು, 180 ಕುದುರೆಗಳು ಬೇಕಾದವು. ಅಷ್ಟಾದರೂ 3 ದಿನಗಳು ಹಿಡಿದವಂತೆ ಅಷ್ಟನ್ನೂ ಹೊತ್ತು ಸಾಗಿಸಲು.
ಆ ಕರಾಳ ದೀಪಾವಳಿಯ ದಾರುಣ ಘಟನೆಗಳಿಂದಾಗಿ ಇವತ್ತಿಗೂ ಸಹ ಮೇಲುಕೋಟೆಯ ಎಷ್ಟೋ ಕುಟುಂಬಗಳು ಈ ಹಬ್ಬವನ್ನು ಆಚರಿಸುತ್ತಿಲ್ಲ.
ಜಯಲಲಿತ ಕೂಡಾ ಅಲ್ಲಿಯವರೇ ಆದ್ದರಿಂದ ಆಕೆ ಸಹ ಯಾವತ್ತೂ ದೀಪಾವಳಿ ಹಬ್ಬವನ್ನು ಆಚರಿಸುತ್ತಿರಲಿಲ್ಲ. ಆಕೆಯ ಪೂರ್ವಜರೂ (ಮೇಲ್ಕೋಟೆ ಅಯ್ಯಂಗಾರ್) ಆ  ಕಗ್ಗೊಲೆಯಾದ 800 ಜನರಲ್ಲಿ ಇದ್ದರಲ್ಲ? ಹೇಗೆ ಮರೆಯಲು ಸಾಧ್ಯ ಆಕೆಗೆ?
ಚರಿತ್ರೆಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನನ್ನು ಸುಂದರ, ಗಂಭೀರ, ಶಾಂತಿಪ್ರಿಯ, ಧೀರೋದಾತ್ತ ವ್ಯಕ್ತಿಯಾಗಿ ಚಿತ್ರಿಸಲಾಗಿದೆಯಷ್ಟೆ. ಆದರೆ ಲಂಡನ್ ಲೈಬ್ರರಿ ಯಲ್ಲಿರುವ  ಟಿಪ್ಪುವಿನ ವಾಸ್ತವ ಚಿತ್ರಣ ಬೇರೆಯೇ ಆಗಿದೆ.
ಭಾರತದ ಚರಿತ್ರೆಯನ್ನು ಖಾನ್-ಗ್ರೇಸ್ ಮತ್ತು ಕುಮ್ಮಿ ಎನ್ನುವವರು ಹೇಗೆ ತಿರುಚಿಹಾಕಿ ದಾಖಲಿಸಿದ್ದಾರೆ ಎನ್ನುವುದಕ್ಕೆ ಟಿಪ್ಪು ಸುಲ್ತಾನ್ ಚರಿತ್ರೆ ಒಂದು ಉತ್ತಮ ನಿದರ್ಶನ.
ನರರೂಪ ರಾಕ್ಷಸನೆಂದೆನಿಸಿದ ಈ ಸುಲ್ತಾನ ಕೇವಲ ಮೇಲುಕೋಟೆ ದೇವಾಲಯ ಮಾತ್ರವಲ್ಲದೆ ದಕ್ಷಿಣ ಭಾರತದ ಸುಮಾರು 25 ದೇವಾಲಯಗಳ ಸಂಪತ್ತನ್ನೂ ಹೀಗೇ ದೋಚಿದ್ದಾನೆ.
ಟಿಪ್ಪು ಯಾವಾಗಲೂ ದೊಡ್ಡ ಹಬ್ಬಗಳು ಬಂದಾಗಲೇ ಕಗ್ಗೊಲೆ ಮತ್ತು ಸಂಪತ್ತಿನ ಲೂಟಿಗೆ ಮುಂದಾಗುತ್ತಿದ್ದುದು. ಏಕೆಂದರೆ ಆ ದಿನಗಳಲ್ಲಿ ಭಕ್ತಾದಿಗಳು ಹೆಚ್ಚು ಸಂಖ್ಯೆಯಲ್ಲಿ ನೆರೆದಿರುವುದೂ, ಅವರುಗಳೆಲ್ಲಾ  ಕಾಣಿಕೆಯ ರೂಪದಲ್ಲಿ ಹೆಚ್ಚು ಹಣ ಮತ್ತು ಬೆಳ್ಳಿ, ಬಂಗಾರ ತಂದೇ ಇರುವುದು ಅವನಿಗೆ ಚೆನ್ನಾಗಿ ತಿಳಿದಿತ್ತು. ಆಗಿನ ಕಾಲದಲ್ಲಿ ಧನ, ಧಾನ್ಯ ಸಂಪತ್ತುಗಳೆಲ್ಲ ದೇವಾಲಯದಲ್ಲಿಯೇ ಸಂಗ್ರಹವಾಗುವ ಪರಿಪಾಠವಿತ್ತು.
ಇನ್ನು ಅವನ ಇತರ ಹಿಂದೂಗಳ ಮಾರಣಹೋಮದ ಬಗ್ಗೆ ನೋಡುವುದಾದರೆ:

1. ಕಿತ್ತೂರು ಚೆನ್ನಮ್ಮನ ರಾಜ್ಯದಲ್ಲಿ ಮತಾಂತರಕ್ಕೆ ಒಪ್ಪದ 40,000 ಜನ ಹಿಂದೂಗಳ ವಧೆ
2. ಕೇರಳ ರಾಜ್ಯದಲ್ಲಿ ಮತಾಂತರಕ್ಕೆ ಒಪ್ಪದ 10,000 ಬ್ರಾಹ್ಮಣರನ್ನು ಹಿಡಿದು ಬಲವಂತದಿಂದ ‘ಸುನ್ನತಿ’ ಮಾಡಿಸಿದ್ದು
3. ಹಿಂದೂ ಸ್ತ್ರೀಯರನ್ನು ತನಗೆ ಬೇಕಾದಂತೆ ಬಳಸಿಕೊಂಡು ನಂತರ ಅವರನ್ನು ತನ್ನ ಸೈನಿಕರಿಗೆ ಬಹುಮಾನವಾಗಿ ಕೊಡುತ್ತಿದ್ದುದು
4. 20 ವರ್ಷ ವಯಸ್ಸಿನ ಹುಡುಗರನ್ನು ನಪುಂಸಕರನ್ನಾಗಿ ಮಾಡಿಸುತ್ತಿದ್ದುದು
5. ಕೊಡಗಿನ ಹಿಂದೂಗಳ ಮಾರಣ ಹೋಮ
6. ಕೊಡಗಿನ ಹಿಂದೂ ಸ್ತ್ರೀಯರ ಸ್ಥನಗಳನ್ನು ಕತ್ತರಿಸಿ ವಿರೂಪಗೊಳಿಸಿದ್ದು,
ಇನ್ನೂ ಬಾಲಕರ ಮೇಲೆ ನಡೆಸಿದ ಹಲವಾರು ದುರಾಚಾರಗಳು, ಬರೆಯಲಾರದಂತಹವು,

ಇವೆಲ್ಲವೂ ಟಿಪ್ಪುವಿನ  ಹೆಗ್ಗಳಿಕೆಯಾದರೆ  ತಿರುಪತಿ ಕಲ್ಯಾಣ ವೆಂಕಟೇಶ್ವರನ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದ ಕೀರ್ತಿ ಟಿಪ್ಪುವಿನ ಅಪ್ಪ ಹೈದರ್ ಆಲಿಯದು.
ಈ ವಿಚಾರದಲ್ಲಿ ಯಾರೂ ಯಾರಿಗಿಂತ ಕಡಿಮೆಯಲ್ಲ.
ನಮ್ಮ ದೇಶದ ಚರಿತ್ರೆಯನ್ನು ಹಿಂದೂಗಳಿಗೆ ವ್ಯತಿರಿಕ್ತವಾಗಿ ಬಿಂಬಿಸುತ್ತಲೇ ಬಂದ ಸಂಘಟನೆಗಳಿಗೆ ಟಿಪ್ಪು ಚರಿತ್ರೆಯೇ ಒಂದು ದೊಡ್ಡ ಉದಾಹರಣೆ. ಟೀವೀಯಲ್ಲಿನ ಧಾರಾವಾಹಿಗಳಲ್ಲಿ ಟಿಪ್ಪುವನ್ನು ಪರಮ ದೇಶಭಕ್ತ , ದಕ್ಷ ಪರಿಪಾಲಕ ಎಂದೆಲ್ಲಾ ರೂಪಿಸಿದ ಸೆಕ್ಯುಲರ್ ವಾದಿಗಳೇ,  ಟಿಪ್ಪುವಿನ ಪ್ರಸಿದ್ಧ ಖಡ್ಗದ ಮೇಲೆ  ಉರ್ದು ಭಾಷೆಯಲ್ಲಿ ಏನು ಕೆತ್ತಿದೆಯೆಂದು ಒಮ್ಮೆ ನೋಡಿ:

“ಕಾಫಿ಼ರ್ ಗಳ ಮಾರಣಹೋಮ ನಡೆಸಿದ ಮುಸ್ಲಿಂ ವೀರ”

ಅವರ ಭಾಷೆಯಲ್ಲಿ ‘ಕಾಫಿ಼ರ್’ ಎಂದರೆ ಹಿಂದೂಗಳು ಎನ್ನುವ ವಿಷಯ ಗೊತ್ತಷ್ಟೇ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ