ನೀರು ತುಂಬುವ ಹಬ್ಬ (ಜಲಪೂರಣ ತ್ರಯೋದಶಿ) ಗಂಗಾಪೂಜೆ ಮಾಡುವುದು..
ಗಂಗಾ ಪೂಜೆ ಮಾಡುವಾಗ ಹೇಳುವ ಮಂತ್ರ
*ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಚಂದ್ರಭಾಗೇ ಚ ಕೌಶಿಕಿ ಸ್ವರ್ಣ ಲೇಖೆ ಕನಖಲೇ ಪಾರಿಭದ್ರೇ ಚ ಗಂಡಕೀ ಶ್ವೇತಗಂಗೇ ಚಂದ್ರರೇಖೇ ಪಂಪೇ ಚಂಪೇ ಚ ಗೋಮತಿ ಪದ್ಮಾವತಿ ವಿಪಣ್ಣಾರ್ಶೇ ವಿಪಾಶೇ ವಿರಜೇ ಪ್ರಭೇ ಶತಹ್ರದೇ ಚೇಲಗಂಗೇ ಜಲೇಸ್ಮಿನ್ ಸನ್ನಿಧಿಂ ಕುರು!!*
*ವರುಣೋ ಧವಳೋ ಜಿಷ್ಣುಃ ನಕ್ರಸ್ಥೋ ನಿಮ್ಮಗಾಧಿಪಃ ನಕ್ರ ಪಾಶಹಸ್ತೋ ಮಹಾಬಾಹುಃ ತಸ್ಮೈ ನಿತ್ಯಂ ನಮೋ ನಮಃ*
*ನೀರು ತುಂಬುವ ಹಬ್ಬದ ದಿನ ಮಾಡುವ ಕ್ರಮ*
1) ಹಂಡೆತುಂಬಿ ಕಾಯಿಸಿ ಸ್ನಾನ ಮಾಡುವ ಅನುಕೂಲ ಇದ್ದವರು ಅದನ್ನು ತಿಕ್ಕಿ ತೊಳೆದು ಅಲಂಕರಿಸಿ ಶುದ್ಧವಾದ ನೀರನ್ನು ಮುಕ್ಕಾಲು ಭಾಗ ತುಂಬಿ ಇಡಿ.
2) ಅನಂತರ ಬಾವಿ ಇದ್ದವರು ತಮ್ಮ ಮನೆಯ ಸಂಪ್ರದಾಯದಂತೆ ನೀರು ಸೇದಿ ತಂದು ಒಂದು ಕಲಶದಲ್ಲಿ ದೇವರ ಕೊಣೆಯೊಳಗೋ ಹೊರಗೋ ಶುದ್ಧವಾದ ಜಾಗದಲ್ಲೋ ಇಡಿ
3) ಅಕ್ಷತೆ, ಹೂವು, ಹಣ್ಣು , ಗಂಧ, ಅರಸಿಣ ಪುಡಿ, ಕುಂಕುಮ ಇತ್ಯಾದಿ ಸಿದ್ಧಪಡಿಸಿ.
4) ಮಂತ್ರಾಕ್ಷತೆ , ಹೂವು ಕೈಯಲ್ಲಿ ಹಿಡಿದು ನೀರು ತುಂಬಿದ ಕಲಶದಲ್ಲಿ ತನ್ನ ಅಂಗುಷ್ಟದಿಂದ ಗಂಗೆಗೆ ಜನ್ಮವಿತ್ತ ರಮಾಪತಿ ತ್ರಿವಿಕ್ರಮನನ್ನು ಅವಾಹಿಸಿ.
*ಮಮ ಸಮಸ್ತ ಗುರ್ವಂತರ್ಗತ ವರುಣಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಗಂಗಾಜನಕಂ ರಮಾಸಹಿತ ತ್ರಿವಿಕ್ರಮಂ ಆವಾಹಯಾಮಿ. ಪ್ರಸೀದ ಪ್ರಸೀದ ಭಗವನ್ ಆಗಚ್ಛ ಆಗಚ್ಛ*
ಎಂದು ಕಲಶದಲ್





