ಪಾರ್ಟಿ ವೇರ್‌, ಹಬ್ಬ ಹರಿದಿನಗಳ ಸ್ಪೆಷಲ್ ಜ್ಯೂವೆಲರಿ ಯಾ ಕ್ಯಾಶ್ಯುಯೆಲ್ ‌ಇರಲಿ, ಪ್ರತಿ ಸಂದರ್ಭದಲ್ಲೂ ನಿಮ್ಮ ಸೌಂದರ್ಯ ಉಜ್ವಲಗೊಳಿಸಲೆಂದೇ ಬಂದಿದೆ ಹಸಲೀ ಜ್ಯೂವೆಲರಿ……!

ಹಿಂದಿನ ಕಾಲದಲ್ಲಿ ರಾಜಾಸ್ಥಾನ್‌ ರಾಜ್ಯದ ರಾಜಮನೆತನ ಯಾ ಪಂಜಾಬ್‌, ಹರಿಯಾಣಾದ ಹೆಂಗಸರಿರಲಿ, ಜ್ಯೂವೆಲರಿಯಲ್ಲಿ ಎಲ್ಲರ ಅಚ್ಚುಮೆಚ್ಚಿನ ಆಯ್ಕೆ ಎಂದರೆ ಅದು ಹಸಲೀ ಒಡವೆಗಳಾಗಿದ್ದವು. ಫ್ಯಾಷನ್‌ ರಿಟರ್ನ್ಸ್ ಎಂಬಂತೆ ಇದು ಮತ್ತೆ ಚಾಲ್ತಿಗೆ ಬಂದು ದ. ಭಾರತದಲ್ಲೂ ಇದೀಗ ಮನೆಮಾತಾಗಿದೆ.

ಸ್ವರ್ಣಾಭರಣಗಳಲ್ಲಿ ಹುದುಗಿಸಲಾದ ಈ ಹಸಲೀ ಘಟಕ, ರಾಜಕಳೆಯಿಂದ ರಾರಾಜಿಸುತ್ತದೆ. ಅದೇ ಸಮಯಕ್ಕೆ ಬೆಳ್ಳಿ ಹಾಗೂ ಆಕ್ಸಿಡೈಸ್ಡ್ ಮೆಟಲ್ ಗಳಲ್ಲಿ ತಯಾರಾದ ಹಸಲೀ ಸಹ ಜನಸಾಮಾನ್ಯರಲ್ಲಿ ಅಷ್ಟೇ ಪ್ರಸಿದ್ಧವಾಗಿದೆ. ಇತ್ತೀಚೆಗೆ ಜನ ತಮ್ಮ ಲುಕ್ಸ್ ಗೆ ತಕ್ಕಂತೆ ಯಾ ಪ್ರಾಚೀನ ಒಡವೆಗಳು ಸೆಟ್‌ ಆದೀತೆಂದು ಪ್ರಯೋಗ ನಡೆಸುತ್ತಿರುತ್ತಾರೆ. ಈ ಕಾರಣದಿಂದಲೇ ಇಂದಿನ ಜ್ಯೂವೆಲರಿ ಮಾರುಕಟ್ಟೆಯಲ್ಲಿ ಹಸಲೀ ಜ್ಯೂವೆಲರಿ ಹಿಂದಿನ ತನ್ನ ಐಡೆಂಟಿಟಿ ಮತ್ತೆ ಗಳಿಸಿಕೊಂಡಿದೆ! ಇದೀಗ ಕೇವಲ ಹಿರಿಯ ತಲೆಮಾರಿನರ ಜ್ಯೂವೆಲರಿ ಮಾತ್ರ ಆಗಿರದೆ, ಬದಲಿಗೆ ಆಧುನಿಕ ಸೆಲೆಬ್ರಿಟೀಸ್‌ ಸಹ ವಿವಿಧ ಪಾರ್ಟಿಗಳಿಗೆ ವಿಭಿನ್ನ ಡಿಸೈನಿನಲ್ಲಿ ಇವನ್ನು ಧರಿಸಿ ಬರುತ್ತಿದ್ದಾರೆ, ಜೆನ್‌ Z ಪೀಳಿಗೆಗೂ ಇದು ಇಷ್ಟವಾಗಿರುವುದೇ ಇದರ ಜನಪ್ರಿಯತೆಗೆ ಸಾಕ್ಷಿ!

ಹಸಲೀ ಜ್ಯೂವೆಲರಿ ಖರೀದಿಸಿದ್ದಾಯ್ತು, ಈಗ ಇದನ್ನು ಸ್ಟೈಲ್ ‌ಗೊಳಿಸುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಈ ತೊಂದರೆಗೆ ಸುಲಭ ಪರಿಹಾರವಿದೆ. ಈ ಮೂಲಕ ನಿಮಗೆ ಮಾರುಕಟ್ಟೆಯಲ್ಲಿ ಎಷ್ಟೆಲ್ಲ ಬಗೆಯ ಹಸಲೀ ಜ್ಯೂವೆಲರಿ ಡಿಸೈನ್ಸ್ ಲಭ್ಯ ಎಂಬುದೂ ತಿಳಿಯುತ್ತದೆ.

ಮೀನಾಕಾರೀ ಹಸಲೀ : ನೀವು ರಾಯ್‌ ಲುಕ್ಸ್ ಕ್ಯಾರಿ ಮಾಡಬಯಸಿದರೆ ಯಾ ನಿಮ್ಮ ಹಳೆಯ ರಿಚ್‌ ಗ್ರಾಂಡ್‌ ಡ್ರೆಸ್‌ ನ್ನು ಹೊಸ ರೀತಿಯಲ್ಲಿ ಸ್ಟೈಲ್ ‌ಮಾಡುತ್ತೀರಾದರೆ, ಜೊತೆಗೆ ಈ ಒಡವೆ ಬಹು ಚೆನ್ನಾಗಿ ಒಪ್ಪುತ್ತದೆ. ಇದು ಬಹು ಬಣ್ಣ ಹಾಗೂ ಡಿಸೈನ್‌ ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ. ಇದು ನೋಡಲಿಕ್ಕೆ ಮಾತ್ರ ಹೆವಿ ಎನಿಸುವಂತಿರುತ್ತದೆ, ಅಸಲಿಗೆ ಒಳಗಿನಿಂದ ಈ ಹಸಲೀ ಆಭರಣಗಳು ಟೊಳ್ಳಾಗಿರುತ್ತವೆ. ಹೀಗಾಗಿ ಇದು ಖಂಡಿತಾ ಲೈಟ್‌ ವೆಯ್ಟ್ ಆಭರಣಗಳು ಎಂದು ನಿರಾಳತೆ ಹೊಂದಬಹುದು. ಹೀಗಾಗಿ ಯುಗಾದಿ, ದೀಪಾವಳಿ, ನವರಾತ್ರಿಯಂಥ ದೊಡ್ಡ ಹಬ್ಬಗಳು ಮಾತ್ರವಲ್ಲದೆ, ಶುಭಸಮಾರಂಭಗಳು, ಪಾರ್ಟಿಗಳಿಗೂ ಇವನ್ನು ಸೀರೆ ಜೊತೆ ಧರಿಸಬಹುದು. ಒಡವೆಗಳಿಂದ ಬ್ಯೂಟಿ ಎಂದ ಮೇಲೆ ಎಲ್ಲೋ ಒಂದು ಕಡೆ ತುಸು ಕಾಂಪ್ರಮೈಸ್ ಮಾಡಿಕೊಳ್ಳಬೇಕಾಗುತ್ತದೆ.

Jadau-Hasli

ಪ್ಲೇನ್‌ ಹಸಲೀ ವಿತ್‌ ಪೆಂಡೆಂಟ್‌ : ಇದು ನಿಮಗೆ ಇಡಿಯಾಗಿ ಕಡಾ ಸ್ಟೈಲ್ ನಲ್ಲಿ ಸಹ ಸಿಗುತ್ತದೆ. ಇದನ್ನು ಕುತ್ತಿಗೆಯಲ್ಲಿ ಇಡಿಯಾದ ಕಡಾ ಆಗಿ ಧರಿಸಬಹುದಾಗಿದೆ. ಜೊತೆಗೆ ಹಾಫ್‌ ಕಡಾ ಸ್ಟೈಲ್ ‌ಸಹ ಲಭ್ಯ. ಇದರಲ್ಲಿ ಹಿಂಭಾಗದ ಹಸಲೀಗೆ ಚೇನಿನ ಅಳವಡಿಕೆ ಆಗಿರುತ್ತದೆ. ಜೊತೆಗೆ ಇದರಲ್ಲಿ ಹೇರಳವಾಗಿ ಸಣ್ಣದೊಡ್ಡ ಗಾತ್ರದ ಯಾ ಸ್ಟೇಟ್‌ ಮೆಂಟ್‌ ಪೆಂಡೆಂಟ್‌ ಆಪ್ಶನ್ಸ್ ಸಹ ಲಭ್ಯ. ಇದರಿಂದ ನಿಮ್ಮ ಪ್ಲೇನ್‌ ಔಟ್‌ ಫಿಟ್‌ ಸಹ ಆಕರ್ಷಣೆಯ ಕೇಂದ್ರಬಿಂದು ಆಗಲಿದೆ. ನೀವು ನಿಮ್ಮ ಮದುವೆ ಆರತಕ್ಷತೆಯ ಲೆಹಂಗಾದ ರೀಯೂಸ್‌ ಬಗ್ಗೆ ಯೋಚಿಸುತ್ತಿದ್ದರೆ, ಅದರ ಜೊತೆಗೆ ಒಂದು ಸ್ಯಾಟಿನ್ನಿನ ಶರ್ಟ್‌ ವೇರ್‌ ಮಾಡಿಕೊಳ್ಳಿ ಹಾಗೂ ಜೊತೆಗೆ ಧರಿಸಿ, ಸ್ಟೇಟ್‌ ಮೆಂಟ್‌ ಪೆಂಡೆಂಟ್‌ ನ ಹಸಲೀ! ಆಗ ನೋಡಿ, ನಿಮ್ಮನ್ನು ಹೊಗಳದವರೇ ಇಲ್ಲ! ನೀವು ಲೈಟ್‌ ಪೆಂಡೆಂಟ್‌ ನ ಯಾ ಗೋಲ್ಡ್, ಸಿಲ್ವರ್‌ ಯಾ ಆಕ್ಸಿಡೈಸ್ಡ್ ಮೆಟಲ್ ನಿಂದ ತಯಾರಾದ ಪ್ಲೇನ್‌, ರೌಂಡ್‌ ಹಸಲೀಯನ್ನು ಸುಲಭವಾಗಿ ವೆಸ್ಟರ್ನ್‌ ಡ್ರೆಸ್‌ ಯಾ ಆಫೀಸ್‌ ವೇರ್‌ ಜೊತೆ ಸಹ ಪೇರ್‌ ಮಾಡಿಕೊಳ್ಳಬಹುದು.

Hasli-with-pendent

ಫಿಕ್ಸ್ಡ್ (ಹುದುಗಿಸಲಾದ) ಹಸಲೀ : ಪ್ರಾಚೀನ ಕಾಲದಲ್ಲಿ ರಾಜ ಮನೆತನಗಳಲ್ಲಿ ಈ ತರಹದ ಹಸಲೀ ಬಹಳ ಜನಪ್ರಿಯವಾಗಿತ್ತು. ಇದು ಗೋಲ್ಡ್ ಯಾ ಸಿಲ್ವರ್‌ ನಲ್ಲಿ ತಯಾರಾಗುತ್ತಿತ್ತು. ಆದರೆ ಈಗ ಹಸಲೀಯ ಬ್ಯೂಟಿ ಎಂಜಾಯ್‌ ಮಾಡಲು ನಿಮ್ಮ ಬಜೆಟ್ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಮಾರ್ಕೆಟ್‌ ನಲ್ಲಿ ಇಂಥ ಫಿಕ್ಸ್ಡ್ ಹಸಲೀ ಸುಲಭವಾಗಿ ಸಿಗುತ್ತದೆ. ಇನ್ನು ನೀವು ಯುಗಾದಿಯಂಥ ದೊಡ್ಡ ಹಬ್ಬಗಳಲ್ಲಿ ನಿಮ್ಮ ಅಚ್ಚುಮೆಚ್ಚಿನ ಸಿಲ್ಕ್ ಸೀರೆ ಜೊತೆ ಧರಿಸಬಹುದು. ಇದು ನೋಡಲು ಬಲು ಬ್ಯೂಟಿಫುಲ್ ಆಗಿದ್ದು, ನಿಮ್ಮ ಡ್ರೆಸ್‌ ಗೆ ಪೂರಕವಾಗಿರುತ್ತದೆ.

Meenakari-hasli

ಕುಂದಣ ಹಸಲೀ : ಕುಂದಣದಿಂದ ಸುಸಜ್ಜಿತ ಹಸಲೀ ಸಹ ಎಲ್ಲಾ ವಯಸ್ಸಿನ ಹೆಂಗಸರಿಗೂ ಬಲು ಅಚ್ಚುಮೆಚ್ಚಿನದಾಗಿದೆ. ಇದನ್ನು ಧರಿಸಿ ನೀವು ಮಾಡ್‌ಸ್ಟೈಲಿಶ್‌ ಲುಕ್ಸ್ ನ್ನು ಸುಲಭವಾಗಿ ಪಡೆಯಬಹುದು. ಇದರಲ್ಲಿ ಡ್ರಾಪ್‌ ಸೆಲಿನಲ್ಲಿ ಕುಂದಣದ ಕೆಲಸ ಆಗಿರುತ್ತದೆ. ಇದರಲ್ಲಿ ನಿಮಗೆ ಬಗೆಬಗೆಯ ಬಣ್ಣಗಳ ಆಯ್ಕೆಗಳಿವೆ. ನೀವು ಇದನ್ನು ರೇಷ್ಮೆ ಸೀರೆ, ಲೆಹಂಗಾ, ಸೂಟ್‌ ಜೊತೆಯೂ ಧರಿಸಬಹುದು ಯಾ ಇಂಡೋವೆಸ್ಟರ್ನ್‌ ಜೊತೆಗೂ ಧರಿಸಬಹುದು. ಇದರ ಬಳಕೆ ನಿಮ್ಮನ್ನು ಮತ್ತಷ್ಟು ಸ್ಟೈಲಿಶ್‌ ಆಗಿಸಲಿದೆ.

Kundan-Hasli

ಟ್ರೆಡಿಶನಲ್ ಸ್ಟೈಲ್ ಹಸಲೀ : ಹೆಸರು ಹಳೆಯದಾಯಿತೆಂದು ಭಾವಿಸದಿರಿ. ಟ್ರೆಡಿಶನಲ್ ಹಸಲೀ ಈಗಲೂ ಸಹ ಜನರ ಅಚ್ಚುಮೆಚ್ಚಿನ ಮೊದಲ ಆಯ್ಕೆ ಆಗಿದೆ. ಏಕೆಂದರೆ ಇದನ್ನು ನೀವು ಇಂಡಿಯನ್‌ ಡ್ರೆಸೆಸ್‌ ಜೊತೆ ಕ್ಯಾರಿ ಮಾಡಿ ಯಾ ವೆಸ್ಟರ್ನ್‌ಜೊತೆ, ಇದು ಎಲ್ಲಾ ಲುಕ್ಸ್ ನಲ್ಲೂ ಜಬರ್ದಸ್ತ್ ಎನಿಸುತ್ತದೆ. ನೀವು ಬಯಸಿದರೆ ಸಾಲಿಡ್‌ ಪ್ಲೇನ್‌ ಹಸಲೀ ಸಹ ಕೊಳ್ಳಬಹುದು ಯಾ ಗೋದಾ ಸ್ಟೈಲ್ ‌ನ ಹಸಲೀ ಸಹ ಆರಿಸಿಕೊಳ್ಳಬಹುದು. ನಿಮ್ಮ ಬಜೆಟ್‌ ಗೆ ಒಗ್ಗುವಂತಿದ್ದರೆ, ನೀವು ಬೆಳ್ಳಿ ಚಿನ್ನದ ಹಸಲೀ ಆಭರಣ ಸಹ ಖರೀದಿಸಬಹುದು. ಏಕೆಂದರೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ, ಯಾವುದೇ ಜ್ಯೂವೆಲರಿಯ ಫ್ಯಾಷನ್‌ ಚೇಂಜ್ ಆಗಬಹುದು, ಆದರೆ ಇದು ಮಾತ್ರ ಜ್ಯೂವೆಲರಿ ಫ್ಯಾಷನ್‌ ನಲ್ಲಿ ಸದಾ ಇನ್‌ ಆಗಿರುತ್ತದೆ. ಹೀಗಾಗಿ ಏನೂ ಯೋಚಿಸದೆ ಇದರಲ್ಲಿ ಇನ್‌ ವೆಸ್ಟ್ ಮಾಡಿ.

Traditional-hasli

ಅಮೆರಿಕನ್‌ ಡೈಮೆಂಡ್‌ ನಿಂದ ಅಲಂಕೃತ ಹಸಲೀ : ನೀವು ಮಾರ್ಕೆಟ್‌ ನಲ್ಲಿ ಸಿಗುವಂಥ ಅಮೆರಿಕನ್‌ ಡೈಮಂಡ್‌ ಜ್ಯೂವೆಲರಿಯಿಂದ ಬೋರ್‌ ಆಗಿದ್ದರೆ, ನೀವು ಇದರಿಂದ ಅಲಂಕೃತ ಹಸಲೀ ಒಡವೆಗಳನ್ನು ಅಗತ್ಯ ಟ್ರೈ ಮಾಡಬಹುದು. ಇದು ಸಣ್ಣಪುಟ್ಟ ಡೈಮಂಡ್‌ ನಂಥ ಸ್ಟೋನ್ಸ್ ನಿಂದ ಸುಸಜ್ಜಿತಗೊಂಡ ಹಸಲೀ ಆಗಿ, ನಿಮ್ಮ ಎಲ್ಲಾ ಡ್ರೆಸೆಸ್‌ ಗೂ ಚೆನ್ನಾಗಿ ಮ್ಯಾಚ್ ಆಗುತ್ತದೆ. ನೀವು ಯಾವುದೇ ಆರತಕ್ಷತೆ ಯಾ ಕಾಕ್‌ ಟೇಲ್ ಪಾರ್ಟಿಗೆ ಹೋಗುತ್ತಿರುವಿರಾದರೆ, ಅದರಲ್ಲಿ ಇಂಡೋವೆಸ್ಟರ್ನ್‌ ಗೌನ್‌ ಧರಿಸ ಬಯಸಿದರೆ, ಇದು ನಿಮಗೆ ಬೆಸ್ಟ್ ಆದೀತು. ನೀವು ಬಯಸಿದರೆ ಪ್ಲೇನ್‌ ಮೈಸೂರು ಸಿಲ್ಕ್ ಸೀರೆಗೂ ಇನ್ನಷ್ಟು ಮೆರಗು ನೀಡಲು ಇವನ್ನೆಲ್ಲ ಧರಿಸಿ ಟ್ರೈ ಮಾಡಬಹುದು!

Americal-diomand

– ಆರ್‌. ಸೋನಿಯಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ