–   ರಾಘವೇಂದ್ರ ಅಡಿಗ ಎಚ್ಚೆನ್.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಶುರುವಾಗಿರುವ  “ಓ ಮನಸೇ” ಎಂಬ ಹೊಸ ಧಾರಾವಾಹಿಯು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಶುರುವಾದ ಕೆಲವೇ ಕೆಲವು ವಾರಗಳಲ್ಲಿ ವೀಕ್ಷಕರ ಪ್ರೀತಿಗೆ ಪಾತ್ರವಾಗಿದೆ.

ಈ ನಿಟ್ಟಿನಲ್ಲಿ ‘ಓ ಮನಸೇ’ ಕಥೆಯ ಒಂದು ವಾರದ ಸಂಚಿಕೆಗಳನ್ನೆಲ್ಲಾ ಸೇರಿಸಿ, 1 ಗಂಟೆಯ ಸ್ಪೆಷಲ್ ಸಂಚಿಕೆಯನ್ನಾಗಿ ಮಾಡಿದ್ದು, ಇದೀಗ  ಸ್ಟಾರ್ ಸುವರ್ಣ ವಾಹಿನಿಯ ‘ಯುಟ್ಯೂಬ್ ಚಾನಲ್’ ನಲ್ಲಿ ಆ ಸಂಚಿಕೆ ಲಭ್ಯವಿದೆ.

1002031994

ಇನ್ನು ಕಥೆಯ ಬಗ್ಗೆ ಹೇಳೋದಾದ್ರೆ ಮೈಸೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಕಥಾ ನಾಯಕಿ ರಾಗಾಗೆ ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ, ಅದು ಸ್ವಾತಂತ್ರ್ಯದ ಹಾದಿಯೆಂದು ನಂಬಿರೋಳು. ರಾಗಾಳ ಬದುಕಿನ ಅತಿದೊಡ್ಡ ಸ್ಫೂರ್ತಿ ಅಂದ್ರೆ ಪ್ರೊಫೆಸರ್ ಕಲ್ಯಾಣಿ. ಆದರೆ ಮುಗಿಲು ಮುಟ್ಟೋ ಕನಸನ್ನು ಹೊಂದಿರೋ ರಾಗಾಳಿಗೆ ಸ್ವಂತ  ಅಪ್ಪನೇ ತಡೆಗೋಡೆ.

ಶ್ರೀಮಂತ ಕುಟುಂಬದಲ್ಲಿ ಬೆಳೆದಿರೋ ಕಥಾನಾಯಕ ರಿಷಿ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ. ತಾಯಿ ಕಲ್ಯಾಣಿಯ ಪ್ರೀತಿ, ಮಮತೆಯಿಂದ ದೂರವಾಗಿರುವ ರಿಷಿಗೆ ಅವಳ ಬಗ್ಗೆ ತೀವ್ರ ಅಸಹನೆ.

ತಂದೆಯ ಮಾತನ್ನು ಮೀರಿ ತನ್ನ ಕನಸನ್ನು ರಾಗಾ ಹೇಗೆ ನನಸು ಮಾಡುತ್ತಾಳೆ ? ವಿರುದ್ಧ ದಿಕ್ಕಿನ ವ್ಯಕ್ತಿತ್ವ ಹೊಂದಿರುವ ರಾಗಾ-ರಿಷಿ ಒಂದಾಗಲು ಸಾಧ್ಯನಾ ? ಎರಡು ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರುವ ರಾಗಾ-ರಿಷಿಯ ಬದುಕಿನ ಪಯಣದಲ್ಲಿ ವರ್ಷಗಳಿಂದ ಹೆಪ್ಪುಗಟ್ಟಿರುವ ಕಲ್ಯಾಣಿ ಮತ್ತು ಜಯರಾಮ್ ನಡುವಿನ ಮನಸ್ತಾಪ ದೂರವಾಗುತ್ತಾ? ಎಂಬುದೇ ಮುಖ್ಯ ಕಥಾ ಹಂದರ.

1002031993

ಕನ್ನಡ ಕಿರುತೆರೆಯಲ್ಲೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯ ಯುಟ್ಯೂಬ್ ಚಾನಲ್ ನಲ್ಲಿ ಅಪ್ಲೋಡ್  ಆಗಿರುವ “ಓ ಮನಸೇ” ಧಾರಾವಾಹಿಯ ಒಂದು ಗಂಟೆಯ Highlights ಅನ್ನು ತಪ್ಪದೇ ವೀಕ್ಷಿಸಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ