ಮೇಕಪ್ ಅಥವಾ ಫೇಶಿಯಲ್ ಮಾಡಿಕೊಳ್ಳುವಾಗ ಸರಿಯಾದ ಕ್ರಮವನ್ನು ಅನುಸರಿಸದಿದ್ದರೆ ನಿರೀಕ್ಷಿಸಿದ್ದ ಹೊಳಪು ತೋರುವುದಿಲ್ಲ. ಅನೇಕ ಸಲ ಮಹಿಳೆಯರು ತಮ್ಮ ಬಿಝಿ ಶೆಡ್ಯೂಲ್‌ನಿಂದಾಗಿ ಪಾರ್ಲರ್‌ಗೆ ಹೋಗಲು ಸಾಧ್ಯವಾಗದೆ ಮನೆಯಲ್ಲೇ ಕ್ಲೆನ್ಸಿಂಗ್ ಅಥವಾ ಫೇಶಿಯಲ್ ಮಾಡಿಕೊಳ್ಳಲು ತೊಡಗುತ್ತಾರೆ. ಆದರೆ ಮಾಹಿತಿಯ ಅಭಾವದಿಂದಾಗಿ ತಪ್ಪು ಕ್ರಮ ಕೈಗೊಂಡು ಒಳ್ಳೆಯ ಪರಿಣಾಮ ಬಾರದಿದ್ದಾಗ ಹೀಗೆ ಯೋಚಿಸುತ್ತಾರೆ. ಒಳ್ಳೆ ಕಂಪನಿಯ ಪ್ರಾಡಕ್ಟ್ ಬಳಸಿದ್ದರೂ ಒಳ್ಳೆಯ ರಿಸಲ್ಟ್ ಏಕೆ ಬರಲಿಲ್ಲ?
ವಾಸ್ತವವಾಗಿ ತಪ್ಪು ಪ್ರಾಡಕ್ಟ್ ನದಲ್ಲ. ಬದಲಾಗಿ ಪ್ರಾಡಕ್ಟ್ ಮೇಲೆ ಬರೆದಿರುವ ಇನ್‌ಸ್ಟ್ರಕ್ಷನ್ಸ್ ಅನುಸರಿಸದಿದ್ದುದು ಹಾಗೂ ಚರ್ಮಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಅಲಕ್ಷಿಸಿದ್ದೇ ಇದಕ್ಕೆ ಕಾರಣವಾಗಿರುತ್ತದೆ.
ಮತ್ತೆ ಇಂತಹ ತಪ್ಪುಗಳಾಗದಿರಲು ಸ್ಕಿನ್ ಮಿರಾಕ್ ಯಾ ಮ್ಯಾರಿನಿಯರ್ (ಫ್ರಾನ್ಸ್)ನ ಟೆಕ್ನಿಕ್ ಸ್ಕಿನ್ ಎಕ್ಸ್ ಪರ್ಟ್ ಗುಲ್ಶನ್ ಹೇಳಿರುವ ವಿಷಯಗಳನ್ನು ಅನುಸರಿಸಲು ಮರೆಯದಿರಿ.
ಚರ್ಮದ ಮೇಲೆ ಏನನ್ನಾದರೂ ಹಚ್ಚುವ ಮೊದಲು ನಿಮ್ಮ ಸ್ಕಿನ್ ಟೈಪ್ ಎಂಥದು ಎಂದು ಹೀಗೆ ಅರ್ಥ ಮಾಡಿಕೊಳ್ಳಿ :
– ನಿಮ್ಮದು ನಾರ್ಮಲ್ ಸ್ಕಿನ್ ಆಗಿದ್ದರೆ ನಿಮ್ಮ ಮುಖ ಕೋಮಲವಾಗಿಯೂ ತೈಲರಹಿತಾಗಿಯೂ ತೋರುತ್ತದೆ.
– ಆಯ್ಲೀ ಸ್ಕಿನ್ ಆಗಿದ್ದರೆ ನಿಮ್ಮ ಹಣೆ, ಮೂಗು ಮತ್ತು ಕೆನ್ನೆಗಳ ಮೇಲೆ ತೈಲಾಂಶ ಇರುತ್ತದೆ.
– ಡ್ರೈ ಸ್ಕಿನ್‌ನಲ್ಲಿ ಅಗತ್ಯವಾದ ತೈಲದ ಕೊರತೆಯಿಂದಾಗಿ ಚರ್ಮ ಶುಷ್ಕವಾಗಿ ಕಾಣುತ್ತದೆ.
– ಕಾಂಬಿನೇಶನ್ ಸ್ಕಿನ್‌ನಲ್ಲಿ ತೈಲಾಂಶ `ಟೀ ಝೋನ್’ ಅಂದರೆ ಹಣೆ ಮತ್ತು ಮೂಗಿನ ಮೇಲೆ ಸಂಗ್ರಹವಾಗಿರುತ್ತದೆ.
– ಸೆನ್ಸಿಟಿವ್ ಸ್ಕಿನ್ ಅಂದರೆ ಚರ್ಮ ಇದ್ದಕ್ಕಿದ್ದಂತೆ ಕೆಂಪಾಗುತ್ತದೆ. ಇಂತಹ ಚರ್ಮಕ್ಕೆ ಯಾವುದೇ ಪ್ರಾಡಕ್ಟ್ ಬಳಸುವ ಮುನ್ನ ಯೋಚಿಸಬೇಕಾಗುತ್ತದೆ.
ನಿಮ್ಮ ಸ್ಕಿನ್ ಟೈಪ್ ತಿಳಿದ ನಂತರ ನೀವು ಅದರ ಪ್ರಕಾರ ಕ್ಲೆನ್ಸಿಂಗ್ ಅಥವಾ ಫೇಶಿಯಲ್ ಮಾಡಿಸಿಕೊಳ್ಳಿ. ಕ್ಲೆನ್ಸಿಂಗ್ ಸರಿಯಾಗಿದ್ದರೆ ಮಾತ್ರ ಫೇಶಿಯಲ್ ಚೆನ್ನಾಗಿರುತ್ತದೆ. ಇಲ್ಲವಾದರೆ ಫಲಿತಾಂಶ ಸರಿಯಿರುವುದಿಲ್ಲ ಎಂಬುದನ್ನು ವಿಶೇಷವಾಗಿ ಗಮನದಲ್ಲಿಟ್ಟಿರಿ.
ಕ್ಲೆನ್ಸಿಂಗ್
ಪ್ರತಿಯೊಬ್ಬರ ಮುಖಕ್ಕೂ ಕ್ಲೆನ್ಸಿಂಗ್‌ನ ಅವಶ್ಯಕತೆ ಇರುತ್ತದೆ. ಏಕೆಂದರೆ ನಾವು ಮನೆಯಲ್ಲಿರಲಿ ಅಥವಾ ಹೊರಗಿರಲಿ, ಸದಾ ಧೂಳಿನ ಸಂಪರ್ಕದಲ್ಲಿರುತ್ತೇವೆ. ಮುಖದ ಮೇಲೆ ಕಣ್ಣಿಗೆ ಕಾಣಿಸದಂತಿರುವ ಕೊಳೆಯನ್ನು ಕ್ಲೆನ್ಸಿಂಗ್ ಮೂಲಕ ತೆಗೆಯುವುದರಿಂದ ಮುಖಕ್ಕೆ ಹೊಳಪು ಬರುತ್ತದೆ. ಜೊತೆಗೆ ನಾವು ಬಳಸುವ ಇತರೆ ಪ್ರಾಡಕ್ಟ್ ಗಳು ಚರ್ಮದಾಳಕ್ಕೆ ತಲುಪಲು ಅನುಕೂಲವಾಗುತ್ತದೆ.
ಕ್ಲೆನ್ಸಿಂಗ್ ಕ್ರೀಮ್ ನ್ನು ಮುಖಕ್ಕೆ ಹಚ್ಚಿ. 10-15 ನಿಮಿಷಗಳ ಕಾಲ ಕ್ಲೆನ್ಸಿಂಗ್ ಮಾಡಿ. ನಂತರ ಟಿಶ್ಶು ಪೇಪರ್‌ನಿಂದ ಮುಖವನ್ನು ಶುಚಿಗೊಳಿಸಿ.
ತಜ್ಞರ ಪ್ರಕಾರ, ಡಿಫರೆಂಟ್ ಪೀಲ್ ಆ್ಯಸಿಡ್‌ನ ಕಾಂಬಿನೇಶನ್ ಹೊಂದಿರುವ ಎಎಚ್‌ಎ ಅಂದರೆ ಅಲ್ಫಾ ಹೈಡ್ರಾಕ್ಸಿ ಆ್ಯಸಿಡ್ ಮೊದಲು ಚರ್ಮವನ್ನು ಮತ್ತು ಎರಡನೆಯದಾಗಿ ಅದರ ಪಿಎಚ್ ಲೆವೆಲ್‌ನ್ನು ಕಾಪಾಡುತ್ತದೆ. ಇದು ಕ್ಲೆನ್ಸಿಂಗ್ ಮೂಲಕವೇ ಸಾಧ್ಯವಾಗುತ್ತದೆ.
ಎಎಚ್‌ಎ ಚರ್ಮದ ಬ್ಲಾಕೇಜ್‌ನ್ನು ದೂರವಾಗಿಸುತ್ತದೆ. ಇದು ಅನೇಕ ಬಗೆಯಲ್ಲಿ ಸಿಗುವುದಾದರೂ ಹೆಚ್ಚಾಗಿ ಗ್ಲೈಕೋಲಿಕ್ ಆ್ಯಸಿಡ್ ದೊರೆಯುತ್ತದೆ. ಇದು ಚರ್ಮದ ಮೇಲ್ಪದರದಲ್ಲಿ ಕೆಲಸ ಮಾಡಿ ಜೀವಕೋಶಗಳನ್ನು ಆರೋಗ್ಯಪೂರ್ಣವಾಗಿಡುತ್ತದೆ.
ಚರ್ಮದ ಪಿಎಚ್ ಲೆವೆಲ್ ಅಂದರೆ ಪೊಟೆನ್ಶಿಯಲ್ ಆಫ್ ಹೈಡ್ರೋಜನ್ ಎಂದರ್ಥ. ನಿಮ್ಮ ಶರೀರದ ಪಿಎಚ್ ಲೆವೆಲ್ 7 ಆಗಿದ್ದರೆ, ನಿಮ್ಮ ಚರ್ಮ ಬೇಸಿಕ್ ಲೆವೆಲ್‌ನಲ್ಲಿದೆ ಎಂದರ್ಥ. ಆದರೆ ನಿಮ್ಮ ಪಿಎಚ್ ಲೆವೆಲ್ 5.5ಕ್ಕಿಂತ ಕಡಿಮೆ ಇದ್ದರೆ ನಿಮ್ಮ ಚರ್ಮದ ಸ್ಥಿತಿ ಸರಿಯಿಲ್ಲ ಎಂದರ್ಥ.
ಚರ್ಮದ ಪಿಎಚ್ ಲೆವೆಲ್ ಸುಸ್ಥಿತಿಯಲ್ಲಿರಬೇಕು. ಏಕೆಂದರೆ ಇದು ಚರ್ಮ ಮತ್ತು ಶರೀರದೊಳಗೆ ಬ್ಯಾಕ್ಟೀರಿಯಾ ಪ್ರವೇಶಿಸದಂತೆ ತಡೆಯುತ್ತದೆ. ಪಿಎಚ್ ಲೆವೆಲ್‌ನ್ನು ಸರಿಯಾಗಿರಿಸಲು ಚರ್ಮದ ತೊಂದರೆಗಳಾದ ತುರಿಕೆ, ಡ್ರೈಸ್ಕಿನ್ ಮುಂತಾದ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನೀವು ಮುಖಕ್ಕೆ ಪಿಎಚ್ ಬ್ಯಾಲೆನ್ಸ್ಡ್ ಸ್ಕಿನ್ ಕೇರ್ ಪ್ರಾಡಕ್ಟ್ ಗಳನ್ನು ಬಳಸಿ ನಂತರ ಬೆಚ್ಚನೆಯ ನೀರಿನಿಂದ ಮುಖ ತೊಳೆಯಿರಿ.
ಎಂಜೈಮ್ ಮಾಸ್ಕ್
ಕ್ಲೆನ್ಸಿಂಗ್ ನಂತರ ಮುಖಕ್ಕೆ ಎಂಜೈಮ್ ಮಾಸ್ಕ್ ಹಚ್ಚಬೇಕು. ಇದು ಚರ್ಮದಿಂದ ಡೆಡ್ ಸೆಲ್‌ಗಳನ್ನು ದೂರಗೊಳಿಸುತ್ತದೆ. ಇದನ್ನು ಮುಖಕ್ಕೆ ಹಚ್ಚಿ. 10 ನಿಮಿಷಗಳ ನಂತರ ಮಸಾಜ್ ಮಾಡುತ್ತಾ ತೆಗೆದುಹಾಕಿ.
ಎಂಜೈಮ್ ಮಾಸ್ಕ್ ಹಚ್ಚುವಾಗ ಯಾವಾಗಲೂ ಹಣೆಯಿಂದ ಪ್ರಾರಂಭಿಸಿ. ನಂತರ ಮುಖಕ್ಕೆ ಹಚ್ಚಿ. ಆದರೆ ತೆಗೆಯುವಾಗ, ವಿರುದ್ಧವಾಗಿ ಅಂದರೆ, ಮೊದಲು ಮುಖದಿಂದ ನಂತರ ಹಣೆಯಿಂದ ತೆಗೆಯಿರಿ. ಎಂಜೈಮ್ ಮಾಸ್ಕ್ ನ್ನು ಸೆನ್ಸಿಟಿವ್ ಸ್ಕಿನ್‌ಗೆ ಸಹ ಬಳಸಬಹುದಾಗಿದೆ.
ಅಲ್ಫಾ ಹೈಡ್ರಾಕ್ಸಿ ಆ್ಯಸಿಡ್ ಪೀಲಿಂಗ್ ಮಾಸ್ಕ್ ತೆಗೆದ ನಂತರ ಅಲ್ಫಾ ಹೈಡ್ರಾಕ್ಸಿ ಆ್ಯಸಿಡ್‌ನಿಂದ ಪೀಲಿಂಗ್ ಮಾಡಿ. ಇದು ಚರ್ಮದ ಟೆಕ್ಸ್ ಚರ್‌ನ್ನು ಉತ್ತಮಗೊಳಿಸುವುದಲ್ಲದೆ, ಕೋಮಲವನ್ನಾಗಿಯೂ ಮಾಡುತ್ತದೆ. ಮೊದಲು ತಿಳಿಯಾದ ಮಿಕ್ಸ್ ಚರ್‌ನಿಂದ ಪ್ರಾರಂಭಿಸಿ. ಅಂದರೆ ಮೊದಲು ಎಎಚ್‌ಎನ ಪ್ರಮಾಣ 10%, ಆಮೇಲೆ 20%, ನಂತರ 30% ಇರಲಿ. ಇದರಿಂದ ನಿಮಗೆ ನಿಮ್ಮ ಚರ್ಮದ ಗುಣವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ.
ಈ ಮಿಶ್ರಣವನ್ನು ತಯಾರಿಸುವ ಪ್ರಕ್ರಿಯೆ ಹೀಗಿದೆ. 10%ಗಾಗಿ 3 ಹನಿ ನೀರಿಗೆ 1 ಹನಿ ಎಎಚ್‌ಎ, 20%ಗಾಗಿ 2 ಹನಿ ನೀರಿಗೆ 2 ಹನಿ ಎಎಚ್‌ಎ, 30%ಗಾಗಿ 3 ಹನಿ ನೀರಿಗೆ 3 ಹನಿ ಎಎಚ್‌ಎ ಸೇರಿಸಿ.
ಟೀ ಝೋನ್‌ನಿಂದ ಹಚ್ಚಲು ಪ್ರಾರಂಭಿಸಿ. ಎಎಚ್‌ಎ ಹಚ್ಚಿದ 10-15 ಸೆಕೆಂಡ್‌ಗಳ ನಂತರ ಚರ್ಮದ ಮೇಲೆ ಏನಾದರೂ ಅನುಭವಾಗುತ್ತಿದೆಯೇ ಎಂದು ನೋಡಿಕೊಳ್ಳಿ. ಇದನ್ನು 3 ನಿಮಿಷಗಳಿಗಿಂತ ಹೆಚ್ಚು ಕಾಲ ಚರ್ಮದ ಮೇಲೆ ಇರಿಸಿಕೊಳ್ಳಬಾರದು.
ಎಎಚ್‌ಎ ಹಚ್ಚಿದ ನಂತರ ಮುಖಕ್ಕೆ ಕೋಲ್ಡ್ ಕಂಪ್ರಶನ್ ನೀಡಲು ಮರೆಯದಿರಿ. ಇದರಿಂದ ಮುಖದ ಮೇಲೆ ಉಂಟಾದ ಊತ, ಕೆಂಪಾಗುವಿಕೆ ಮುಂತಾದವು ಇಲ್ಲವಾಗುತ್ತದೆ. ಕೋಲ್ಡ್ ಕಂಪ್ರೆಶನ್‌ಗೆ ಮಂಜುಗಡ್ಡೆಯನ್ನು ಬಳಸಬಹುದು ಅಥವಾ ಟವೆಲನ್ನು ತಣ್ಣೀರಿನಲ್ಲಿ ಅದ್ದಿ ಕೊಂಚ ಕಾಲ ಮುಖದ ಮೇಲೆ ಇರಿಸಿಕೊಳ್ಳಿ. ಇದರಿಂದ ಮುಖ ತಂಪಾಗುತ್ತದೆ.
ಸ್ಕ್ರಬ್
ಈ ಪ್ರಕ್ರಿಯೆಯ ನಂತರ 8 ನಿಮಿಷಗಳ ಕಾಲ ಮುಖದ ಮೇಲೆ ಸ್ಕ್ರಬ್ ಮಾಡಿ. ಸ್ಕ್ರಬ್ ಮಾಡುತ್ತಾ ಸ್ಟೀಮ್ ಸಹ ಕೊಡಿ. ಇದರಿಂದ ರೋಮರಂಧ್ರಗಳು ತೆರೆದುಕೊಂಡು ಡೆಡ್‌ಸ್ಕಿನ್ ದೂರವಾಗುತ್ತದೆ. ನಂತರ ಟಿಶ್ಶೂನಿಂದ ಮುಖವನ್ನು ಶುಚಿಗೊಳಿಸಿ. ಕಣ್ಣುಗಳ ಮೇಲೆ ಸ್ಕ್ರಬ್ ಮಾಡದಂತೆ ಎಚ್ಚರವಹಿಸಿ.
ಬೀಟಾ ಹೈಡ್ರಾಕ್ಸಿ ಆ್ಯಸಿಡ್
ಬಿಎಚ್‌ಎ ಎಂದರೆ ಬೀಟಾ ಹೈಡ್ರಾಕ್ಸಿ ಆ್ಯಸಿಡ್. ಇದರ ಕಣಗಳು ಕೊಂಚ ದೊಡ್ಡದಾಗಿರುತ್ತವೆ. ಇದೂ ಸಹ ಎಎಚ್‌ಎನಂತೆ ಚರ್ಮದ ಮೇಲ್ಪದರದ ಮೇಲೆ ಕೆಲಸ ಮಾಡುತ್ತದೆ. ಇದರ ಮುಖ್ಯ ಕಾರ್ಯವೆಂದರೆ, ಡೆಡ್‌ಸ್ಕಿನ್‌ನ್ನು ತೆಗೆದು ಹಾಕಿ ಚರ್ಮವನ್ನು ಆರೋಗ್ಯಕರವಾಗಿಸುವುದು.
ನಿಮಗೆ ಮೊಡವೆ, ಬ್ಲ್ಯಾಕ್ ಹೆಡ್ಸ್ ಅಥಾ ವೈಟ್‌ಹೆಡ್ಸ್ ಇದ್ದರೆ ಇದು ಬಹಳ ಪ್ರಯೋಜನಕಾರಿಯಾಗುತ್ತದೆ. ಇದನ್ನು ಯಾವಾಗಲೂ ಕಟ್ಟಕಡೆಯದಾಗಿ ನಡೆಸಬೇಕು. ಇದರಿಂದ ಚರ್ಮದಲ್ಲಿರುವ ಯಾವುದೇ ಇನ್‌ಫೆಕ್ಷನ್ ದೂರವಾಗುತ್ತದೆ.
ಈ ಎಲ್ಲ ಪ್ರಕ್ರಿಯೆಗಳೂ ನಿಮ್ಮ ಮುಖಕ್ಕೆ ಕಾಂತಿಯನ್ನು ನೀಡಿ, ನಿಮ್ಮ ಚರ್ಮ ತಾರುಣ್ಯದ ಕಳೆಯಿಂದ ಶೋಭಿಸುವಂತೆ ಮಾಡುತ್ತದೆ.
– ಬಿ. ಪಾರ್ವತಿ ಭಟ್
ಈ ವಿಷಯನ್ನು ಅಲಕ್ಷಿಸದಿರಿ
– ನಿಮ್ಮದು ಸೆನ್ಸಿಟಿವ್ ಸ್ಕಿನ್ ಆಗಿದ್ದರೆ ಎಎಚ್‌ಎ ಪೀಲಿಂಗ್ ಬಳಸಬೇಡಿ.
– 21 ದಿನಗಳಿಗೆ ಮೊದಲು ಕ್ಲೆನ್ಸಿಂಗ್ ಅಥವಾ ಫೇಶಿಯಲ್ ಮಾಡಬೇಡಿ.
– ಮುಖಕ್ಕೆ ಬ್ಲೀಚ್ ಬಳಸಬೇಡಿ.
– ಮುಖದಲ್ಲಿ ಆರ್ದ್ರತೆ ಇರಲು ಹೆಚ್ಚು ಹೆಚ್ಚು ನೀರು ಕುಡಿಯಿರಿ.
– ಪೌಷ್ಟಿಕ ಆಹಾರ ಸೇವಿಸಿ
ಮುಖಕ್ಕೆ ಯಾವುದಾದರೂ ಅಲರ್ಜಿ ಇದ್ದರೆ ಬ್ಯೂಟಿ ಪ್ರಾಡಕ್ಟ್ಸ್ ಬಳಸಬೇಡಿ. ಏಕೆಂದರೆ ಅದರಿಂದ ಅಲರ್ಜಿ ಹೆಚ್ಚುವ ಸಾಧ್ಯತೆ ಇರುತ್ತದೆ.