ಮೇಕಪ್‌ ಅಥವಾ ಫೇಶಿಯಲ್ ಮಾಡಿಕೊಳ್ಳುವಾಗ ಸರಿಯಾದ ಕ್ರಮವನ್ನು ಅನುಸರಿಸದಿದ್ದರೆ ನಿರೀಕ್ಷಿಸಿದ್ದ ಹೊಳಪು ತೋರುವುದಿಲ್ಲ. ಅನೇಕ ಸಲ ಮಹಿಳೆಯರು ತಮ್ಮ ಬಿಝಿ ಶೆಡ್ಯೂಲ್‌ನಿಂದಾಗಿ ಪಾರ್ಲರ್‌ಗೆ ಹೋಗಲು ಸಾಧ್ಯವಾಗದೆ ಮನೆಯಲ್ಲೇ ಕ್ಲೆನ್ಸಿಂಗ್‌ ಅಥವಾ ಫೇಶಿಯಲ್ ಮಾಡಿಕೊಳ್ಳಲು ತೊಡಗುತ್ತಾರೆ. ಆದರೆ  ಮಾಹಿತಿಯ ಅಭಾವದಿಂದಾಗಿ ತಪ್ಪು ಕ್ರಮ ಕೈಗೊಂಡು ಒಳ್ಳೆಯ ಪರಿಣಾಮ ಬಾರದಿದ್ದಾಗ ಹೀಗೆ ಯೋಚಿಸುತ್ತಾರೆ. ಒಳ್ಳೆ ಕಂಪನಿಯ ಪ್ರಾಡಕ್ಟ್ ಬಳಸಿದ್ದರೂ ಒಳ್ಳೆಯ ರಿಸಲ್ಟ್ ಏಕೆ ಬರಲಿಲ್ಲ?

ವಾಸ್ತವವಾಗಿ ತಪ್ಪು ಪ್ರಾಡಕ್ಟ್ ನದಲ್ಲ. ಬದಲಾಗಿ ಪ್ರಾಡಕ್ಟ್ ಮೇಲೆ ಬರೆದಿರುವ ಇನ್‌ಸ್ಟ್ರಕ್ಷನ್ಸ್ ಅನುಸರಿಸದಿದ್ದುದು ಹಾಗೂ ಚರ್ಮಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಅಲಕ್ಷಿಸಿದ್ದೇ ಇದಕ್ಕೆ ಕಾರಣವಾಗಿರುತ್ತದೆ.

ಮತ್ತೆ ಇಂತಹ ತಪ್ಪುಗಳಾಗದಿರಲು ಸ್ಕಿನ್‌ ಮಿರಾಕ್‌ ಯಾ ಮ್ಯಾರಿನಿಯರ್‌ (ಫ್ರಾನ್ಸ್)ನ ಟೆಕ್ನಿಕ್‌ ಸ್ಕಿನ್‌ ಎಕ್ಸ್ ಪರ್ಟ್‌ ಗುಲ್ಶನ್‌ ಹೇಳಿರುವ ವಿಷಯಗಳನ್ನು ಅನುಸರಿಸಲು ಮರೆಯದಿರಿ.

ಚರ್ಮದ ಮೇಲೆ ಏನನ್ನಾದರೂ ಹಚ್ಚುವ ಮೊದಲು ನಿಮ್ಮ ಸ್ಕಿನ್‌ ಟೈಪ್‌ ಎಂಥದು ಎಂದು ಹೀಗೆ ಅರ್ಥ ಮಾಡಿಕೊಳ್ಳಿ :

- ನಿಮ್ಮದು ನಾರ್ಮಲ್ ಸ್ಕಿನ್‌ ಆಗಿದ್ದರೆ ನಿಮ್ಮ ಮುಖ  ಕೋಮಲವಾಗಿಯೂ ತೈಲರಹಿತಾಗಿಯೂ ತೋರುತ್ತದೆ.

- ಆಯ್ಲೀ ಸ್ಕಿನ್‌ ಆಗಿದ್ದರೆ ನಿಮ್ಮ ಹಣೆ, ಮೂಗು ಮತ್ತು ಕೆನ್ನೆಗಳ ಮೇಲೆ ತೈಲಾಂಶ ಇರುತ್ತದೆ.

- ಡ್ರೈ ಸ್ಕಿನ್‌ನಲ್ಲಿ ಅಗತ್ಯವಾದ ತೈಲದ ಕೊರತೆಯಿಂದಾಗಿ ಚರ್ಮ ಶುಷ್ಕವಾಗಿ ಕಾಣುತ್ತದೆ.

- ಕಾಂಬಿನೇಶನ್‌ ಸ್ಕಿನ್‌ನಲ್ಲಿ ತೈಲಾಂಶ `ಟೀ ಝೋನ್‌' ಅಂದರೆ ಹಣೆ ಮತ್ತು ಮೂಗಿನ ಮೇಲೆ ಸಂಗ್ರಹವಾಗಿರುತ್ತದೆ.

- ಸೆನ್ಸಿಟಿವ್ ಸ್ಕಿನ್‌ ಅಂದರೆ ಚರ್ಮ ಇದ್ದಕ್ಕಿದ್ದಂತೆ ಕೆಂಪಾಗುತ್ತದೆ. ಇಂತಹ ಚರ್ಮಕ್ಕೆ ಯಾವುದೇ ಪ್ರಾಡಕ್ಟ್ ಬಳಸುವ ಮುನ್ನ ಯೋಚಿಸಬೇಕಾಗುತ್ತದೆ.

ನಿಮ್ಮ ಸ್ಕಿನ್‌ ಟೈಪ್‌ ತಿಳಿದ ನಂತರ ನೀವು ಅದರ ಪ್ರಕಾರ ಕ್ಲೆನ್ಸಿಂಗ್‌ ಅಥವಾ ಫೇಶಿಯಲ್ ಮಾಡಿಸಿಕೊಳ್ಳಿ. ಕ್ಲೆನ್ಸಿಂಗ್‌ ಸರಿಯಾಗಿದ್ದರೆ ಮಾತ್ರ ಫೇಶಿಯಲ್ ಚೆನ್ನಾಗಿರುತ್ತದೆ. ಇಲ್ಲವಾದರೆ ಫಲಿತಾಂಶ ಸರಿಯಿರುವುದಿಲ್ಲ ಎಂಬುದನ್ನು ವಿಶೇಷವಾಗಿ ಗಮನದಲ್ಲಿಟ್ಟಿರಿ.

ಕ್ಲೆನ್ಸಿಂಗ್

ಪ್ರತಿಯೊಬ್ಬರ ಮುಖಕ್ಕೂ ಕ್ಲೆನ್ಸಿಂಗ್‌ನ ಅವಶ್ಯಕತೆ ಇರುತ್ತದೆ. ಏಕೆಂದರೆ ನಾವು ಮನೆಯಲ್ಲಿರಲಿ ಅಥವಾ ಹೊರಗಿರಲಿ, ಸದಾ ಧೂಳಿನ ಸಂಪರ್ಕದಲ್ಲಿರುತ್ತೇವೆ. ಮುಖದ ಮೇಲೆ ಕಣ್ಣಿಗೆ ಕಾಣಿಸದಂತಿರುವ ಕೊಳೆಯನ್ನು ಕ್ಲೆನ್ಸಿಂಗ್‌ ಮೂಲಕ ತೆಗೆಯುವುದರಿಂದ ಮುಖಕ್ಕೆ ಹೊಳಪು ಬರುತ್ತದೆ. ಜೊತೆಗೆ ನಾವು ಬಳಸುವ ಇತರೆ ಪ್ರಾಡಕ್ಟ್ ಗಳು ಚರ್ಮದಾಳಕ್ಕೆ ತಲುಪಲು ಅನುಕೂಲವಾಗುತ್ತದೆ.

ಕ್ಲೆನ್ಸಿಂಗ್‌ ಕ್ರೀಮ್ ನ್ನು ಮುಖಕ್ಕೆ ಹಚ್ಚಿ. 10-15 ನಿಮಿಷಗಳ ಕಾಲ ಕ್ಲೆನ್ಸಿಂಗ್‌ ಮಾಡಿ. ನಂತರ ಟಿಶ್ಶು ಪೇಪರ್‌ನಿಂದ ಮುಖವನ್ನು ಶುಚಿಗೊಳಿಸಿ.

ತಜ್ಞರ ಪ್ರಕಾರ, ಡಿಫರೆಂಟ್‌ ಪೀಲ್ ಆ್ಯಸಿಡ್‌ನ ಕಾಂಬಿನೇಶನ್‌ ಹೊಂದಿರುವ ಎಎಚ್‌ಎ ಅಂದರೆ ಅಲ್ಫಾ ಹೈಡ್ರಾಕ್ಸಿ ಆ್ಯಸಿಡ್‌ ಮೊದಲು ಚರ್ಮವನ್ನು ಮತ್ತು ಎರಡನೆಯದಾಗಿ ಅದರ ಪಿಎಚ್‌ ಲೆವೆಲ್‌ನ್ನು ಕಾಪಾಡುತ್ತದೆ. ಇದು ಕ್ಲೆನ್ಸಿಂಗ್‌ ಮೂಲಕವೇ ಸಾಧ್ಯವಾಗುತ್ತದೆ.

ಎಎಚ್‌ಎ ಚರ್ಮದ ಬ್ಲಾಕೇಜ್‌ನ್ನು ದೂರವಾಗಿಸುತ್ತದೆ. ಇದು ಅನೇಕ ಬಗೆಯಲ್ಲಿ ಸಿಗುವುದಾದರೂ ಹೆಚ್ಚಾಗಿ ಗ್ಲೈಕೋಲಿಕ್‌ ಆ್ಯಸಿಡ್‌ ದೊರೆಯುತ್ತದೆ. ಇದು ಚರ್ಮದ ಮೇಲ್ಪದರದಲ್ಲಿ ಕೆಲಸ ಮಾಡಿ ಜೀವಕೋಶಗಳನ್ನು ಆರೋಗ್ಯಪೂರ್ಣವಾಗಿಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ