ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ “ಕಾಂತಾರಾ ಚಾಪ್ಟರ್ 1” ಚಿತ್ರದ ದೃಶ್ಯಗಳನ್ನು ಕೆಟ್ಟದಾಗಿ ಅಭಿನಯಿಸಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ತಮ್ಮ ತಪ್ಪಿನ ಅರಿವಾಗಿ ಕನ್ನಡಿಗರ ಕ್ಷಮೆ ಯಾಚಿಸಿದ್ದಾರೆ.

ನವೆಂಬರ್‌ 28ರಂದು ಗೋವಾದ ಪಣಜಿಯಲ್ಲಿ ನಡೆದಿದ್ದ ಐಎಫ್ಎಫ್ಐ ಸಮಾರೋಪದಲ್ಲಿ ರಣವೀರ್‌ ಸಿಂಗ್ 'ಕಾಂತಾರ' ಚಿತ್ರದ ನಾಯಕ ರಿಷಬ್ ಶೆಟ್ಟಿ ಎದುರೇ ವೇದಿಕೆಯ ಮೇಲೆ ಹೋಗಿ ಚಿತ್ರದಲ್ಲಿ ರಿಷಬ್ ಅವರ ಅಭಿನಯವನ್ನು ಹೊಗಳಲು ಆರಂಭಿಸಿದ್ದರು. ಹೊಗಳುವ ಭರದಲ್ಲಿ ತೆರೆಯ ಮೇಲೆ ತೋರಿಸಲಾಗಿದ್ದ ದೈವಗಳನ್ನು ಅನುಕರಿಸವಾಗ ವ್ಯಂಗ್ಯವಾಗಿ ಅಭಿನಯಿಸಿದ್ದರು. ಅಲ್ಲದೆ, ದೈವಗಳನ್ನು ದೆವ್ವ ಎಂದು ಉಲ್ಲೇಖಿಸಿದ್ದರು.

ಕರಾವಳಿಯ ಅಳಿಯನಿಂದಲೇ ತುಳುನಾಡು ದೈವದ ಬಗ್ಗೆ ಅವಮಾನವಾಗಿದ್ದು, ಕರಾವಳಿಗರ ಕಣ್ಣು ಕೆರಳಿಸಿತ್ತು. ರಣವೀರ್ ಸಿಂಗ್​ಗೆ​​​​ ದೆವ್ವಕ್ಕೂ, ದೈವಕ್ಕೂ ವ್ಯತ್ಯಾಸವೇ ಗೊತ್ತಿಲ್ಲ ಎಂದು ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಕ್ಲಾಸ್‌ ತೆಗೆದುಕೊಂಡಿದ್ದರು. ಚಾವುಂಡಿ ದೇವಿಯೇ ಹೊರತು ದೆವ್ವ ಅಲ್ಲ ದೊಡ್ಡ ವೇದಿಕೆಯಲ್ಲಿ ಹೀಗೆ ಅಪಹಾಸ್ಯ ಮಾಡುವುದು ಎಷ್ಟು ಸರಿ ಅಂತ ನೆಟ್ಟಿಗರು ಪ್ರಶ್ನಿಸಿದರು.

ಅತಿ ಮುಖ್ಯವಾದ ವೇದಿಕೆಯಲ್ಲಿ ನಟ ರಣವೀರ್​​ ಸಿಂಗ್ ದೈವದ ಬಗ್ಗೆ ಅಣಕಿಸುವಾಗ ವೀಕ್ಷಕರಾಗಿ ಕುಳಿತಿದ್ದ ನಟ ರಿಷಭ್ ಶೆಟ್ಟಿ ಕೂಡಾ ನಗುತ್ತಿರುತ್ತಾರೆ. ಈ ವಿಚಾರ ಕೂಡ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಮಾತನಾಡುವ ಭರದಲ್ಲಿ ಹೀಗೆ ಮಡೋದು ಸರಿಯಲ್ಲ ಎಂದು ರಣವೀರ್​​ ಸಿಂಗ್ ವಿರುದ್ಧ ಆಕ್ರೋಶಕ್ಕೆ ವ್ಯಕ್ತವಾಗಿತ್ತು.

ಈ ವಿವಾದಕ್ಕೆ ರಣವೀರ್ ಸಿಂಗ್ ಅವರು ನಿನ್ನೆ ತಮ್ಮ ಇನ್‌ಸ್ಟಾದಲ್ಲಿ "ಗೋವಾ ಸಮಾರೋಪದಲ್ಲಿ ಮಾತನಾಡುವಾಗ ನನಗೆ ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ. ನನ್ನ ಉದ್ದೇಶ ರಿಷಬ್ ಅವರ ಅದ್ಭುತ ನಟನೆಯನ್ನು ಎತ್ತಿ ತೋರಿಸುವುದಾಗಿತ್ತು. ಒಬ್ಬ ನಟನಾಗಿ, ಆ ನಿರ್ದಿಷ್ಟ ದೃಶ್ಯವನ್ನು ನಿರ್ವಹಿಸಲು ಎಷ್ಟು ಶ್ರಮ ಬೇಕಾಗುತ್ತದೆ ಎಂಬುದು ನನಗೆ ತಿಳಿದಿದೆ. ಅದಕ್ಕಾಗಿ ಅವರಿಗೆ ನನ್ನ ಸಂಪೂರ್ಣ ಮೆಚ್ಚುಗೆ ಇದೆ" ಎಂದು ಬರೆದುಕೊಂಡಿದ್ದಾರೆ.

"ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಗಳಿಗೆ ನಾನು ಯಾವಾಗಲೂ ಗಾಢವಾಗಿ ಗೌರವ ನೀಡಿದ್ದೇನೆ. ಯಾರ ಭಾವನೆಗಳಿಗಾದರೂ ನಾನು ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ" ಎಂದು ರಣವೀರ್‌ ಸಿಂಗ್ ಹೇಳಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ