ಬೇಸಿಗೆಯಲ್ಲಿ ಸಾಮಾನ್ಯವಾಗಿ ಜನ ಸೋಂಕು ಅಥವಾ ಫಂಗಲ್ ಇನ್‌ ಫೆಕ್ಷನ್‌ ಗೆ ಒಳಗಾಗಿ ಬಹಳ ಕಿರಿಕಿರಿ ಅನುಭವಿಸುತ್ತಾರೆ. ಇದು ಒಂದು ಬಗೆಯ ಚರ್ಮಕ್ಕೆ ಸಂಬಂಧಿಸಿದ ಸಾಂಕ್ರಾಮಿಕ ಸೋಂಕಾಗಿದೆ. ಯಾವಾಗ ಫಂಗಸ್‌ ಸೂಕ್ಷ್ಮಾಣು (ಮೈಕ್ರೋಬ್ಸ್) ನಮ್ಮ ದೇಹದ ಮೇಲೆ ಆಕ್ರಮಣ ನಡೆಸುತ್ತದೋ, ನಮ್ಮ ಇಮ್ಯುನಿಟಿ ಸಿಸ್ಟಂ ಇದರ ವಿರುದ್ಧ ಹೋರಾಡಲು ಆಗದಿದ್ದಾಗ, ಈ ಸೋಂಕಿನ ಪ್ರಭಾವಕ್ಕೆ ಒಳಗಾದ ಚರ್ಮ ಕೆಂಪು ಗುಳ್ಳೆ, ದದ್ದು, ನವೆ, ಉರಿ, ನೋವು, ಕಡಿತ, ಊತಗಳಿಗೆ ಗುರಿಯಾಗಿ ಹಿಂಸೆ ತರುತ್ತದೆ. ಸಾಮಾನ್ಯವಾಗಿ ಚರ್ಮದ ಅಧಿಕಾಂಶ ಸೋಂಕು ಸಮಸ್ಯೆಗಳು ಸಕಾಲಕ್ಕೆ ಸೂಕ್ತ ಚಿಕಿತ್ಸೆ ಒದಗಿಸುವುದರಿಂದ ಗುಣವಾಗುತ್ತದೆ.

IB125527_125527160642537_SM404204 (1)

ಇಂಥ ಸೋಂಕಿಗೆ ಕಾರಣವೇನು?

ಫಂಗಲ್ ಇನ್‌ ಫೆಕ್ಷನ್‌ ಉಂಟಾಗಲು ಅಥವಾ ಹೆಚ್ಚಲು ಅನೇಕ ಕಾರಣಗಳಿವೆ. ಆದರೆ ಇಮ್ಯುನಿಟಿ ಕುಂದುವಿಕೆ, ಅತಿಯಾದ ತಾಪ, ಬಿಸಿ ಗಾಳಿಯ ವಾತಾವರಣ ಇತ್ಯಾದಿ ಈ ಸೋಂಕು ಹೆಚ್ಚಲು ಕಾರಣ. ಇಷ್ಟು ಮಾತ್ರವಲ್ಲದೆ, ಏಡ್ಸ್, HIV ಸೋಂಕು, ಕ್ಯಾನ್ಸರ್‌, ಮಧುಮೇಹ ಇತ್ಯಾದಿ ಸಹ ಈ ಸೋಂಕು ಹೆಚ್ಚಾಗಲು ಕಾರಣಗಳಾಗಿವೆ. ಯಾವ ಜನ ಈ ಸೋಂಕು ತಗುಲಿದ ವ್ಯಕ್ತಿಯ ಸಂಪರ್ಕಕ್ಕೆ ಬರುತ್ತಾರೋ ಅವರಿಗೂ ಸೋಂಕಿನ ಭೀತಿ ತಪ್ಪಿದ್ದಲ್ಲ.

ಸ್ಥೂಲಕಾಯ, ಅಧಿಕ ದೇಹ ತೂಕದ ಸಮಸ್ಯೆಯೂ ಇದರ ಮತ್ತೊಂದು ಕಾರಣ. ಇದರ ದೆಸೆಯಿಂದಾಗಿ ನಿತಂಬ ಹಾಗೂ ಅಧಿಕ ಮಾಂಸಲ ಭಾಗಗಳಲ್ಲಿ ಹೆಚ್ಚಿನ ಕೊಬ್ಬಿನ ಶೇಖರಣೆಯ ಕಾರಣ, ವ್ಯಾಯಾಮ, ಸೈಕ್ಲಿಂಗ್‌, ಜಾಗಿಂಗ್‌, ರನ್ನಿಂಗ್‌ ಇತ್ಯಾದಿಗಳಿಂದಾಗಿ ಸಂಧಿನ ಭಾಗಗಳಲ್ಲಿ ಅಧಿಕ ಬೆವರುವಿಕೆಯಿಂದ ಪರಸ್ಪರ ಹೆಚ್ಚಾಗಿ ತಿಕ್ಕಾಡುವ ಚರ್ಮದ ಕಾರಣ ರಾಶೆಸ್‌ಹೆಚ್ಚುತ್ತದೆ. ಇದರಿಂದ ಸೋಂಕು ತಪ್ಪಿದ್ದಲ್ಲ.

ಇದಕ್ಕೆ ಆನುವಂಶಿಕತೆಯೂ ಮತ್ತೊಂದು ಕಾರಣ ಆಗಬಹುದು. ಹೆಂಗಸರಿಗೆ ಸ್ಯಾನಿಟರಿ ಪ್ಯಾಡ್‌ ಗಳಿಂದಲೂ ನಿತಂಬಗಳ ಅಕ್ಕಪಕ್ಕ ಸೋಂಕು ತಗುಲು, ಸಾಧ್ಯತೆಗಳಿವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಫಂಗಸ್‌ ಉಂಟು ಮಾಡುವ ಕೀಟಾಣು ಎಷ್ಟೋ  ಪಾಲು ಹೆಚ್ಚುತ್ತದೆ. ಮಳೆಹನಿಗಳಲ್ಲಿ ನೆನೆದು ಬಂದ ಜನ, ಅದನ್ನು ನಿರ್ಲಕ್ಷಿಸಿ ಒರೆಸಿ ಒಣಗಿಸುವುದಿಲ್ಲ. ಈ ಸಣ್ಣ ನಿರ್ಲಕ್ಷ್ಯ ಮುಂದೆ ಸೋಂಕಿಗೆ ದಾರಿಯಾಗುತ್ತದೆ. ಶುಭ್ರತೆ ಶುಚಿತ್ವಗಳತ್ತ, ನಿರ್ಲಕ್ಷ್ಯ, ತಮ್ಮ ಕೊಳಕು ಸಾಕ್ಸ್, ಅಂಡರ್‌ ಗಾರ್ಮೆಂಟ್ಸ್ ಒಗೆಯದೆ ಮತ್ತೆ ಧರಿಸುವವರು ಇಂಥ ಸಮಸ್ಯೆಗೆ ಬೇಗ ಸಿಲುಕುತ್ತಾರೆ.

ಇದರಿಂದ ಪಾರಾಗುವ ಬಗೆ

ಜೀವನಶೈಲಿ ಹಾಗೂ ನಿಮ್ಮ ಆಹಾರದಲ್ಲಿ ಬದಲಾವಣೆ ತಂದುಕೊಂಡು, ಸಾಕಷ್ಟು ಸೀಸನ್‌ ಸೋಂಕು, ರೋಗಗಳನ್ನು ದೂರ ಇರಿಸಬಹುದಾಗಿದೆ. ಏಕೆಂದರೆ `ಊಟ ಬಲ್ಲವನಿಗೆ ರೋಗವಿಲ್ಲ' ಎಂಬಂತೆ, ನಿಮ್ಮ ಆಹಾರದಲ್ಲಿನ ಪೌಷ್ಟಿಕಾಂಶಗಳಿಂದ ನಿಮ್ಮ ಇಮ್ಯುನಿಟಿ ಸುಧಾರಿಸುತ್ತದೆ. ಅದರಲ್ಲೂ ಮಾನ್‌ ಸೂನ್‌, ಬೇಸಿಗೆ ಕಾಲದ ಹ್ಯೂಮಿಡಿಟಿಗಳಿಂದಾಗಿ ಈ ಫಂಗಲ್ ಇನ್‌ ಫೆಕ್ಷನ್ ಹೆಚ್ಚಾಗುತ್ತದೆ. ಹೀಗಾಗಿ ಆದಷ್ಟೂ ನಿಮ್ಮ ಚರ್ಮವನ್ನು ಡ್ರೈ ಹೈಜಿನಿಕ್‌ ಆಗಿ ಇರಿಸಿಕೊಳ್ಳಿ. ಸಾಧ್ಯವಾದಷ್ಟೂ ಕಾಟನ್‌ ಡ್ರೆಸೆಸ್‌ ಗೆ ಆದ್ಯತೆ ನೀಡಿ. ಅದರಲ್ಲೂ ಇನ್ನರ್‌ ವೇರ್‌ ಗಳಿಗೆ ಕಾಟನ್‌ ಕಡ್ಡಾಯ. ಇದರಿಂದ ನೀವು ಫಂಗಲ್ ಇನ್‌ ಫೆಕ್ಷನ್‌ ನಿಂದ ಎಷ್ಟೋ ಪಾರಾಗಬಹುದು. ಜೊತೆಗೆ ದಿನವಿಡೀ ಧಾರಾಳ ನೀರು, ಪಾನಕ, ಎಳನೀರು, ನೀರುಮಜ್ಜಿಗೆ ಇತ್ಯಾದಿ ಕುಡಿಯುತ್ತಲೇ ಇರಿ. ಇದರಿಂದ ಡೀಪೈಡ್ರೇಶನ್‌ ತೊಂದರೆ ತಪ್ಪುತ್ತದೆ, ಚರ್ಮ ಡ್ರೈ ಆಗದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ