ಕೆಲಸದ ಗಡುವನ್ನು ಹೆಚ್ಚಿಸಬೇಕು
ಬೆಳಗ್ಗೆ 9 ಗಂಟೆಯಿಂದ ರಾತ್ರಿ 9ರವರೆಗೆ, ಕೆಲಸದ ಗುಡುವು ವಾರದಲ್ಲಿ 6 ದಿನ ಇದ್ದರೆ ಅದು ಸರಿಯೋ ತಪ್ಪೋ ಎಂಬುದರ ಬಗ್ಗೆ ವಿಶ್ವದಲ್ಲಿ ಎಲ್ಲೆಡೆ ವಿವಾದ ಎದ್ದಿದೆ. ಇದು ಕಾರ್ಮಿಕರ ಹಿತಾಸಕ್ತಿಗಳಿಗೆ ವಿರುದ್ಧ ಎಂದು ಭಾವಿಸಲಾಗುತ್ತಿದೆ. ಹೀಗಾಗಿ ಬಹಳಷ್ಟು ಮ್ಯಾನೇಜರ್ಸ್, ಕ್ವಾಲಿಟಿ ವರ್ಕ್‌ಕ್ವಾಂಟಿಟಿ ಟೈಂ ಹೋಲಿಸಿ, ಈ ಕಾನ್ಸೆಪ್ಟ್ ನ್ನು ತಿರಸ್ಕರಿಸುತ್ತಿದ್ದಾರೆ.
ಒಂದೇ ಸಮನೆ ದುಡಿಮೆ ಎಂಥವರನ್ನೂ ದಣಿಸುತ್ತದೆ ಎಂಬುದು ನಿಜ. ಆದರೆ ಇಂದಿನ ಗಟ್ಟಿ ಮನೆಗಳು, ಸಾಮಗ್ರಿ ಸರಂಜಾಮು ತುಂಬಿದ ಮನೆಗಳು, ವಿದ್ಯುತ್, ಇಂಟರ್ ನೆಟ್, ಗಾಡಿಗಳು, ರೈಲು, ವಿಮಾನ.... ಇತ್ಯಾದಿ ಎಲ್ಲವೂ 9/9/6 ಕೊಡುಗೆ ಎಂಬುದನ್ನು ಮರೆಯಬಾರದು.
ಎಲ್ಲಾ 365 ದಿನಗಳಲ್ಲೂ 24 ಗಂಟೆ ಸತತ ಸಿಗಲಿರುವ ಸೌಲಭ್ಯಗಳು ತಮಗೆ ತಾವೇ ಆಕಾಶದಿಂದ ಇಳಿದು ಬರಲಿಲ್ಲ. ಎಷ್ಟೋ ಜನರ ಸತತ ದುಡಿಮೆಯಿಂದಲೇ ಇದೆಲ್ಲ ಸಿಕ್ಕಿದ್ದು. ಕೆಲವರು ಬಲವಂತದಿಂದ ಗುಲಾಮರಾದರೆ, ಹಲವರು ತಾವೇ ಒಪ್ಪಿಕೊಂಡು ಹೀಗೆ ದುಡಿದಿದ್ದರಿಂದ ಇಂದು ಎಲ್ಲರಿಗೂ ಸುಖ ಸೌಲಭ್ಯ ಸಿಗುತ್ತಿದೆ.
ಹೀಗೆ ಎಲ್ಲಾ ಸೌಲಭ್ಯ ಪಡೆದ ಮಂದಿ ಹೇಳುವುದೆಂದರೆ, ಅವರ ಜೀವನ ರಾಜ, ಅವನ ಸಭಿಕರು, ಪುರೋಹಿತರಂತೆಯೇ ಆಗಿಬಿಡಬೇಕು ಅಂತ. ಯೂರೋಪಿನಲ್ಲಂತೂ ವಾರಕ್ಕೆ 4 ದಿನಗಳಷ್ಟೇ ಕೆಲಸ ಇರಬೇಕು ಎಂದು ಬೇಡಿಕೆ ಮುಂದಿಡುತ್ತಾರೆ. ಕಾನ್ಸೆಪ್ಟ್ ಅವರಿಗೆ ಬೇಕಿಲ್ಲ. ಧಾರಾಳ ಸುಖ ಸೌಲಭ್ಯಗಳು ತುಂಬಿರಬೇಕೆಂದೇ ಬೇಡಿಕೆ ಇಡುತ್ತಾರೆ. ಮನೆಗಳಲ್ಲಿ ಕುಳಿತು ವಿಡಿಯೋ ಗೇಮ್ಸ್ ಆಡುತ್ತಾ, ಬಾರ್ ಗಳಲ್ಲಿ ಪೆಗ್ ಮೇಲೆ ಪೆಗ್ ಏರಿಸುತ್ತಾ ಇರಬೇಕೆಂದು ಬಯಸುತ್ತಿದ್ದಾರೆ.
9/9/6 ಯಾ 90 ಗಂಟೆಗಳ ಕೆಲಸ ಅವ್ಯವಹಾರಿಕ ಎನಿಸುತ್ತದೆ, ಪ್ರಾಕ್ಟಿಕ್ ಅಲ್ಲ. ಆದರೆ ಕೆಲಸದ ಗಡುವು ಹೆಚ್ಚಬೇಕು ಎಬುದೇನೋ ಸರಿ, ಅದರಲ್ಲೂ ಹೆಚ್ಚಿನ ಸುಖ ಸೌಲಭ್ಯ ಕೇಳುವವರಿಗೆ ಇದು ಕಡ್ಡಾಯ. ಶಿಲಾಯುಗದಲ್ಲಿ ಮಾನವ ಬೆಂಕಿ ಕಂಡುಹಿಡಿದ, ಪ್ರಾಣಿಗಳನ್ನು ಪಳಗಿಸಿಕೊಂಡು, ತನ್ನ ಜೊತೆ ದುಡಿಮೆಗೆ ಹಚ್ಚಿದ. ಇಂದು ಕಾರ್ಖಾನೆಗಳು ಎಲ್ಲೆಲ್ಲೂ ಹೆಚ್ಚಿನ ಲಾಭ ಧಾರಾಳವಾಗಿದೆ. ಈ ಕಾರ್ಖಾನೆಗಳು ಪ್ರಕೃತಿಯ ಕಂಟ್ರೋಲ್ ಮೀರಿದಂತೆ, ಪ್ರಕೃತಿ ಇದಕ್ಕೆ ಜವಾಬು ನೀಡತೊಡಗಿದೆ. ಹೀಗಾಗಿ ಇದೇ ಲೈಫ್ ಸ್ಟೈಲ್ ಉಳಿಸಿಕೊಳ್ಳಲು ಹೆಚ್ಚು ಹೆಚ್ಚು ಕೆಲಸ ಅನಿವಾರ್ಯವಾಗಿದೆ.
ಕಳೆದ 40 ವರ್ಷಗಳಲ್ಲಿ ಚೀನಾ ಅತಿ ಹೆಚ್ಚು ಪ್ರಗತಿ ಸಾಧಿಸಿತು, ಬಲವಂತ, ಗುಲಾಮಗಿರಿ ಹೇರದೆ ಕಾರ್ಮಿಕರಿಂದ ಕೆಲಸ ತೆಗೆಯಿತು. ಇದು ಹೆಚ್ಚಿನ ಗಡುವಿನ ಕೆಲಸದಿಂದ ಸಾಧ್ಯವಾಯಿತು. ಯೂರೋಪ್ ವಿಶ್ವವನ್ನೇ ಗೆಲ್ಲಲು ಕಾರಣ, ಅಲ್ಲಿನ ಮಂದಿ ಹಡಗು ಹತ್ತಿ, ಗಂಟೆಗಳನ್ನು ಲೆಕ್ಕಿಸದೆ ಸತತ ದುಡಿದರು. ಅಮೆರಿಕಾ ಅಲ್ಲಿನ ಗುಲಾಮರಿಂದ 90 ಗಂಟೆಗಳ ಕಾಲ ಸತತ ದುಡಿಸಿತು, ಆಗ ಅದಕ್ಕೆ ಯಶಸ್ಸು ದಕ್ಕಿತು. ಶ್ರಮಿಕರ ಹಿತ ಬಯಸುವ ರಷ್ಯಾದ ಕಮ್ಯುನಿಸ್ಟ್ ಪಕ್ಷ, ಕೆಲಸಕ್ಕೆ ಆದ್ಯತೆ ನೀಡದೆ, ಬಾಯಿ ಮುಚ್ಚಿಕೊಂಡಿರುವ ನೀತಿ ಅನುಸರಿಸಿತು. ಹೀಗಾಗಿ ಅದು ಯೂರೋಪಿನ ದೇಶಗಳಂತೆ ಮುಂದುವರಿಯಲಿಲ್ಲ.





