ಸಾಮಾನ್ಯವಾಗಿ ಜನ ಈ ಎರಡರ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಚಿಂತಸದೆ, ಎರಡೂ ಒಂದೇ ಎಂದುಕೊಳ್ಳುತ್ತಾರೆ. ಇವೆರಡರ ನಡುವಿನ ಅಂತರ ಹಾಗೂ ಪಾರಾಗುವ ಬಗೆ ಹೇಗೆಂದು ತಿಳಿಯೋಣವೇ......?
ಇತ್ತೀಚಿನ ಆಧುನಿಕ ಜೀವನಶೈಲಿ ಹಾಗೂ ಅನಾರೋಗ್ಯಕರ ಅಭ್ಯಾಸಗಳಿಂದಾಗಿ, ವಿಶ್ವವಿಡೀ ಜನ ಬೇರೆ ಬೇರೆ ತರಹದ ಗಂಭೀರ ಹೃದ್ರೋಗಗಳಿಗೆ ಈಡಾಗುತ್ತಿದ್ದಾರೆ. ಇದರಲ್ಲಿ ಹಾರ್ಟ್ ಅಟ್ಯಾಕ್ ಕಾರ್ಡಿಯಾಕ್ ಅರೆಸ್ಟ್ ಗೆ ಸಂಬಂಧಿಸಿದ ಕೇಸುಗಳೇ ಹೆಚ್ಚು. ಸಾಮಾನ್ಯವಾಗಿ ಜನ ಇವೆರಡನ್ನೂ ಒಂದೇ ಎಂದು ಭಾವಿಸುತ್ತಾರೆ, ವ್ಯತ್ಯಾಸ ಗಮನಿಸುವುದಿಲ್ಲ.
ಕಾರ್ಡಿಯಾಕ್ ಅರೆಸ್ಟ್ ಇದು ಯಾರಿಗೆ ಯಾವಾಗ ಬೇಕಾದರೂ ದಿಢೀರ್ ಎಂದು ಕಾಣಿಸಿಕೊಳ್ಳಬಹುದು. ಈ ಪ್ರಕರಣದಲ್ಲಿ ಹೃದಯ ದೇಹಕ್ಕೆ ರಕ್ತವನ್ನು ಪಂಪ್ ಮಾಡುವುದನ್ನೇ ನಿಲ್ಲಿಸಿಬಿಡುತ್ತದೆ, ಆಗ ರೋಗಿ ತಕ್ಷಣ ಜ್ಞಾನ ತಪ್ಪುತ್ತಾನೆ. ಕೆಲವೇ ನಿಮಿಷಗಳಲ್ಲಿ ತಕ್ಷಣ ಚಿಕಿತ್ಸೆ ದೊರಕದೆ ಹೋದರೆ, ರೋಗಿ ಅಲ್ಲೇ ಸಾಯುತ್ತಾನೆ.
ಇದರ ಪ್ರಮುಖ ಲಕ್ಷಣವೆಂದರೆ ಜ್ಞಾನ ತಪ್ಪುವುದು. ಅದಕ್ಕೂ ಮೊದಲು ರೋಗಿ ಈ ಕೆಳಗಿನ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸತಕ್ಕದ್ದು : ಅಸಾಮಾನ್ಯ ಆಗುವ ಹೃದಯದ ಬಡಿತ, ತಲೆ ಸುತ್ತುವಿಕೆ, ಬಿದ್ದೇ ಬಿಡ್ತೀನಿ ಎನ್ನುವ ಆತಂಕ, ಎದೆನೋವು, ಉಸಿರಾಟದಲ್ಲಿ ತೊಂದರೆ, ವಾಂತಿ ಆಗುವಿಕೆ.
ಇದಾದ ನಂತರ ಈ ತರಹ ಆದ ತಕ್ಷಣ ರೋಗಿಗೆ ಉಸಿರಾಡುವುದೇ ಕಷ್ಟವಾಗುತ್ತದೆ, ಕೆಲವರಿಗೆ ಸ್ವಲ್ಪ ಹೊತ್ತಿಗೆ ಉಸಿರಾಟ ಮಮೂಲಿ ಆಗಬಹುದು, ಅತಿ ವೇಗವಾಗಿ ಉಸಿರಾಡುವುದು, ಪೂರ್ತಿ ಜ್ಞಾನ ಕಳೆದುಕೊಳ್ಳುವುದು ಇತ್ಯಾದಿ ಆಗಬಹುದು.
ನಿಮ್ಮ ಜೀವನಶೈಲಿ ಸರಿ ಇರದೆ ಇದ್ದರೆ, ಈ ಸ್ಥಿತಿ ಯಾರಿಗೆ, ಯಾವಾಗ ಬೇಕಾದರೂ ಬರಬಹುದು. ಆದರೆ ಕೆಲವರಿಗೆ ಇದರಿಂದ ಹೆಚ್ಚಿನ ಅಪಾಯ ತಟ್ಟಬಹುದು. ಇದು ಆನುವಂಶಿಕವಾಗಿದ್ದರೆ, ಅಂದರೆ ನಿಮ್ಮ ಹಿರಿಯರಿಗೆ ಹೀಗೇ ಆಗಿ ಸಾವು ಬಂದಿದ್ದರೆ, ನಿಮಗೆ ಭವಿಷ್ಯದಲ್ಲಿ ಈ ಕಷ್ಟ ಕಟ್ಟಿಟ್ಟ ಬುತ್ತಿ. ಅಂದ್ರೆ, ನಿಮ್ಮ ಹಿರಿಯರು ಯಾರಾದರೂ 50-60ರ ವಯಸ್ಸಿನಲ್ಲಿ ಈ ಕಾಟಕ್ಕೆ ತೀರಿಕೊಂಡಿದ್ದರೆ, ನೀವು ಅಧಿಕ ಎಚ್ಚರಿಕೆ ವಹಿಸಬೇಕು. ಏಕೆಂದರೆ ನಿಮಗೆ ಈ ಕಷ್ಟ ಯಾವಾಗ ಬೇಕಾದರೂ ಎದುರಾಗಬಹುದು.
ಇಷ್ಟು ಮಾತ್ರವಲ್ಲದೆ, ಯಾರಿಗೆ ಕೊರೋನರಿ ಆರ್ಟರಿ ಡಿಸೀಸ್ (ಹೃದಯದ ಧಮನಿಗಳಲ್ಲಿ ಬ್ಲಾಕೇಜ್) ಯಾವ ಹೈಪರ್ ಟೆನ್ಶನ್, ಶುಗರ್, ಧೂಮಪಾನ, ಮದ್ಯಪಾನಗಳಂಥ ದುಶ್ಚಟಗಳಿದ್ದರೆ ಅಂಥವರಿಗೆ ಇದು ತಪ್ಪದು.
ಹೇಗೆ ಎದುರಿಸುವುದು?
ಯಾವ ವ್ಯಕ್ತಿಗೆ ಹೀಗಾಗಿದೆಯೋ, ಡಾಕ್ಟರ್ ಬಳಿ ಹೋಗಲು ತಡವಾದರೆ, ತಕ್ಷಣ CPR ಕೊಡಬೇಕು. ಇಂಥ ಸ್ಥಿತಿಯಲ್ಲಿ ರೋಗಿಯ ಹೃದಯ ಪರೀಕ್ಷಿಸಿ, ವೈದ್ಯರು ಅದಕ್ಕೆ ಶಾಕ್ ಟ್ರೀಟ್ ಮೆಂಟ್ ನೀಡಿ ಸ್ಥಿತಿ ನಿಯಂತ್ರಿಸುತ್ತಾರೆ. CPR ಅಂದ್ರೆ ಆಪತ್ಕಾಲದಲ್ಲಿ ನೆರವಾಗುವ ಒಂದು ವೈಜ್ಞಾನಿಕ ಪ್ರಕ್ರಿಯೆ. ಇದು ಯಾವ ರೋಗಿಗೆ ಹೃದಯದ ಬಡಿತ ಅಥವಾ ಉಸಿರಾಟ ನಿಂತಿದೆಯೋ ಅಂಥವರಿಗೆ ಒದಗಿಸಲಾಗುತ್ತದೆ. CPR ಮೂಲಕ ವ್ಯಕ್ತಿಗೆ ಬೇರೆಯವರು ಬಾಯಿಂದ ಊದಿ ಊದಿ ಉಸಿರಾಡಲು ನೆರವಾಗುತ್ತಾರೆ. ಇದರಿಂದ ರೋಗಿಯ ಶ್ವಾಸಕೋಶಕ್ಕೆ ತಕ್ಷಣ ಆಮ್ಲಜನಕ ದೊರಕುತ್ತದೆ. ಜೊತೆಗೆ ರೋಗಿಯ ಹೃದಯದ ಮೇಲೆ ಮುಷ್ಟಿಯಿಂದ ಗುದ್ದಿ, ದೇಹದಲ್ಲಿನ ಆಕ್ಸಿಜನ್ ಸಂಚಾರ ಸುಗಮಗೊಳ್ಳಲು ನೆರವಾಗುತ್ತಾರೆ.





