ಮಳೆಗಾಲಕ್ಕೆಂದೇ ಡಯೆಟಿಶಿಯನ್ಪ್ರತಿ ವ್ಯಕ್ತಿಗೂ ತಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯ ಅಂದ್ರೆ ಮಿಲೆಟ್ಸ್ ಬೆರೆಸಿಕೊಳ್ಳಲು ಹೇಳುತ್ತಾರೆ. ಏಕೆಂದು ವಿವರವಾಗಿ ತಿಳಿಯೋಣವೇ.....?

ಇತ್ತೀಚೆಗೆ ಆರೋಗ್ಯದ ಕುರಿತಾಗಿ ಜನ ಹೆಚ್ಚು ಜಾಗ್ರತೆ ವಹಿಸ ತೊಡಗಿದ್ದಾರೆ. ನಿಯಮಿತವಾಗಿ ವ್ಯಾಯಾಮ, ಜಿಮ್ ಪ್ರಾಕ್ಟೀಸ್‌ ಅವರ ದೈನಂದಿನ ಅಭ್ಯಾಸವಾಗಿದೆ. ಅದೇ ತರಹ ಅವರು ತಮ್ಮ ಡಯೆಟ್‌ ನಲ್ಲೂ ಎಚ್ಚರಿಕೆ ವಹಿಸಬೇಕಿದೆ. ಇಂದಿನ ಯುವ ಜನತೆಗೆ ಜಂಕ್‌ ಫುಡ್‌ ಯಾ ಫಾಸ್ಟ್ ಫುಡ್‌ ಒಂದೇ ಇಷ್ಟ. ಹೀಗಾಗಿಯೇ ಇಂದಿನ ಯುವಜನತೆ ಬಹು ಬೇಗ ಸ್ಥೂಲತೆ, ಬಿ‌ಪಿ, ಕೊಲೆಸ್ಟ್ರಾಲ್ ಇತ್ಯಾದಿಗಳಿಗೆ ಬಲಿಯಾಗುತ್ತಿದ್ದಾರೆ. ಅದರಿಂದ ಹೊರಬರುವುದು ಕಷ್ಟವಾಗುತ್ತಿದೆ. ಹೀಗಾಗಿ ಇಂದಿನ ಡಯೆಟಿಶಿಯನ್ಸ್ ಮಿಲೆಟ್ಸ್ ಅಂದ್ರೆ ಸಿರಿಧಾನ್ಯವನ್ನು ನಮ್ಮ ದೈನಂದಿನ ಆಹಾರದಲ್ಲಿ ಬೆರೆಸಿಕೊಳ್ಳಲು ಮತ್ತೆ ಮತ್ತೆ ಹೇಳುತ್ತಾರೆ. ಸಿರಿಧಾನ್ಯದಲ್ಲಿ 2 ಬಗೆ. ದಪ್ಪ ಕಾಳು, ಸಣ್ಣ ಕಾಳು. ಸಿರಿ ಧಾನ್ಯದಲ್ಲಿ ಬರುವ ಪ್ರಮುಖ ಧಾನ್ಯಗಳು ಎಂದರೆ ರಾಗಿ, ಜೋಳ, ನವಣೆ, ಸಾಮೆ, ಸಜ್ಜೆ, ಹಾರಕ (ಅರ್ಕ), ಕೊರಿ, ಬರುಗು, ಊದಲು ಇತ್ಯಾದಿ.

ಜಾಗರೂಕತೆ ಅತ್ಯಗತ್ಯ

ಈ ಕುರಿತಾಗಿ ತಜ್ಞರ ಅಭಿಪ್ರಾಯ ಎಂದರೆ ಸಿರಿಧಾನ್ಯಗಳು ಇಮ್ಯುನಿಟಿಯ ಬೂಸ್ಟರ್‌ ಗಳಾಗಿವೆ. ಕಳೆದ 2023ನೇ ವರ್ಷವನ್ನು ಕೇಂದ್ರ ಸರ್ಕಾರ `ಸಿರಿಧಾನ್ಯ ವರ್ಷ' ಎಂದು ಘೋಷಿಸಿತ್ತು, ಆ ಮೂಲಕ ಸಾಮಾನ್ಯ ಜನರಲ್ಲಿ ಮಿಲೆಟ್ಸ್ ಕುರಿತು ಹೆಚ್ಚಿನ ಜಾಗರೂಕತೆ ಮೂಡಿಸಿತು. ಸಿರಿಧಾನ್ಯಗಳಲ್ಲಿ  ಕ್ಯಾಲ್ಶಿಯಂ, ಸತು, ರಂಜಕ, ಮೆಗ್ನಿಶಿಯಂ, ಪೊಟ್ಯಾಶಿಯಂ, ನಾರು, ವಿಟಮಿನ್ಸ್‌, ಕಬ್ಬಿಣಾಂಶಗಳು ಹೇರಳವಾಗಿ ಅಡಗಿವೆ.

ಅಸಿಡಿಟಿ ಸಮಸ್ಯೆಯಿಂದ ನೀವು ಪಾರಾಗಬೇಕೇ? ಸಿರಿಧಾನ್ಯಗಳಲ್ಲಿನ ವಿಟಮಿನ್ಸ್ ನಿಂದಾಗಿ ದೇಹದ ಮೆಟಬಾಲಿಸಂ ಬ್ಯಾಲೆನ್ಸ್ ಗೊಳಿಸಲು ಹೆಚ್ಚು ಪೂರಕ. ಮಿಲೆಟ್ಸ್ ನಲ್ಲಿನ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್‌, ಫೈಬರ್‌ ಹೆಚ್ಚಾಗಿದ್ದು ಪೌಷ್ಟಿಕಾಂಶಗಳ ಗಣಿ ಎನಿಸಿದೆ. ಇದು ಗ್ಲುಟೆನ್‌ ಫ್ರೀ ಎಂಬುದು ಮತ್ತೊಂದು + ಪಾಯಿಂಟ್‌. ಸಿರಿಧಾನ್ಯಗಳಲ್ಲಿ ಇದರ ರಗಳೆ ಇಲ್ಲದ ಕಾರಣ, ಸಹಜವಾಗಿ ಜೀರ್ಣಶಕ್ತಿ ಹೆಚ್ಚಿಸುತ್ತದೆ.

ಮಳೆಗಾಲದಲ್ಲಿ ಹೆಚ್ಚು ಉಪಯೋಗಿ

ಮಳೆಗಾಲದಿಂದಾಗಿ ಇಡೀ ಕಾಲಮಾನ ಬದಾಗಿ ಹೋಗುತ್ತದೆ. ಆಬಾಲವೃದ್ಧರಾದಿಯಾಗಿ ಎಲ್ಲರನ್ನೂ ಕಾಡು ಮಾಮೂಲಿ ನೆಗಡಿ, ಶೀತ, ಕೆಮ್ಮು, ಕಫ, ಡಯೇರಿಯಾ ಇತ್ಯಾದಿಗಳು ಈ ಸೀಸನ್ ನಲ್ಲಿ ಬಹಳ ಹಿಂಸಿಸುತ್ತವೆ. ಈ ಸೀಸನ್‌ ನಲ್ಲಿ ಸಹಜವಾಗಿ ನಮ್ಮ ಇಮ್ಯುನಿಟಿ ತಗ್ಗುತ್ತದೆ. ಕುಡಿಯುವ ನೀರು ಲೇಶ ಮಾತ್ರ ಬದಲಾದರೂ ಹಿಂಸೆಗಳು ಆರಂಭ. ತುಂತುರ ಮಳೆ ಕಾರಣ ಜನ ಖಾರ ಖಾರದ ಗರಿಮುರಿ ವ್ಯಂಜನ ಬಯಸುತ್ತಾರೆ. ಇದರಿಂದ ಸಹಜವಾಗಿ ಹೊಟ್ಟೆ ಬೇಗ ಕೆಡುತ್ತದೆ. ಆದ್ದರಿಂದ ಈ ಮಳೆಯ ದಿನಗಳಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ವ್ಯಂಜನಗಳನ್ನು ಅಧಿಕ ಸೇವಿಸಿ. ನಮ್ಮ ರಾಜ್ಯದಲ್ಲಂತೂ ದೈನಂದಿನ ಆಹಾರವಾಗಿ ರಾಗಿ ಮುದ್ದೆ ಅನಾದಿ ಕಾಲದಿಂದಲೂ ಹೆಸರುವಾಸಿ. ಹಾಗೆಯೇ ಇದರ ರೊಟ್ಟಿ, ಗಂಜಿ, ರಾಗಿ ಮಾಲ್ಟ್, ಡ್ರೈ ಫ್ರೂಟ್ಸ್ ಬೆರೆತ ರಾಗಿ ಲಡ್ಡು ಇತ್ಯಾದಿಗಳೂ ಮಳೆಗಾಲಕ್ಕೆ ಸೊಗಸಾಗಿ ಹೊಂದುತ್ತವೆ. ಮಳೆಗಾಲದಲ್ಲಿ ನೀವು ಹೊರಗಿನ ಊಟಕ್ಕೆ ಶರಣಾದರೆ ಹೊಟ್ಟೆ ಉಬ್ಬರ, ಮಲಬದ್ಧತೆ ಗ್ಯಾರಂಟಿ. ಹೀಗಾಗಿ ಈ ಕಾಲದಲ್ಲಿ ಸಿರಿ ಧಾನ್ಯಗಳಲ್ಲಿ ಯಾವುದೇ ಬಗೆಯನ್ನು ಬದಲಾಯಿಸುತ್ತಾ ನಿಮ್ಮ ಆಹಾರದಲ್ಲಿ ಬಳಸಿಕೊಳ್ಳಿ. ಮಿಲೆಟ್ಸ್, ಮಾನ್ ಸೂನಿನ ಆಪ್ತಮಿತ್ರ ಎಂದರೆ ತಪ್ಪಾಗಲಾರದು!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ