ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗುವುದು ಮಾಮೂಲಿ ವಿಷಯ. ರೋಗ ಬಂದಾಗ ಪ್ರತಿಯೊಬ್ಬರೂ ಧಾವಿಸಿ ವೈದ್ಯರ ಬಳಿ ತಪಾಸಣೆಗೆ ಹೋಗುತ್ತಾರೆ. ರೋಗಿಗಳಾಗಿ ನಾವು ಅಲ್ಲಿಗೆ ಹೋದ ಮೇಲೆ, ನಮ್ಮ ಅಸಹಾಯಕತೆಯನ್ನೇ ಆಸ್ತ್ರವಾಗಿಸಿಕೊಳ್ಳಬಾರದು. ಡಾಕ್ಟರ್‌ ಮುಂದೆ ಬೇಜವಾಬ್ದಾರಿಯುತರಾಗಿ ನಡೆದುಕೊಳ್ಳಬಾರದು. ಅಲ್ಲಿನ ನಿಯಮಕ್ಕೆ ಅನುಸಾರವಾಗಿ ವರ್ತಿಸಬೇಕು.

ಎಂದೂ ಸ್ನಾನ ಇಲ್ಲದೆ, ಹೇಗೋ ಗಲೀಜು ಗಲೀಜಾಗಿ ವೈದ್ಯರ ಬಳಿ ಹೋಗಲೇಬಾರದು. ಹೀಗೆ ಮಾಡುವುದರಿಂದ ನಿಮ್ಮ ದೇಹದ ದುರ್ಗಂಧದಿಂದಾಗಿ ನಿಮ್ಮ ಬಗ್ಗೆ ನಕಾರಾತ್ಮಕ ಭಾವನೆ ಮೂಡುತ್ತದೆ. ಸ್ನಾನ ಮಾಡಲಾಗದಿದ್ದರೆ, ಒದ್ದೆ ಬಟ್ಟೆಯಿಂದ ದೇಹಕ್ಕೆ ಸ್ಪಂಜ್‌ ಬಾತ್‌ ನೀಡಿ, ಒಂದಿಷ್ಟು ಡೀಯೋಡರೆಂಟ್‌ ಸಿಂಪಡಿಸಿಕೊಂಡು ಡಾಕ್ಟರ್‌ ಬಳಿ ಹೋಗಿ.

ಜೊತೆಗೆ ಬಾಯಿಂದ ದುರ್ವಾಸನೆ ಬರಬಾರದು ಎಂಬುದೂ ಅಷ್ಟೇ ಮುಖ್ಯ. ವೈದ್ಯರ ಮುಂದೆ ನಿಮ್ಮ ಸಮಸ್ಯೆಗಳನ್ನು ಖುಲ್ಲಂ ಖುಲ್ಲ ಚರ್ಚಿಸಬೇಕಿರುವುದರಿಂದ, ಬಾಯಿ ಬಿಟ್ಟರೆ, ಬಣ್ಣಗೇಡು ಎಂಬಂತೆ ಆಗಬಾರದು. ಈ ಕುರಿತಾಗಿಯೂ ಎಚ್ಚರವಹಿಸಿ, ವೈದ್ಯರ ಭೇಟಿಗೆ ಮುನ್ನ ಹಲ್ಲುಜ್ಜಿದ ನಂತರ, ಮೌತ್‌ ವಾಶ್‌ ನಿಂದ ಚೆನ್ನಾಗಿ ಬಾಯಿ ಮುಕ್ಕಳಿಸಿ ಹೋಗಿ, ಹಾಗೇ ನೀಟಾಗಿ ನಾಲಿಗೆಯನ್ನು ತಿಕ್ಕಿರಬೇಕು. ಅತಿ ಸುಸ್ತಿನಿಂದ ಇದೆಲ್ಲ ರೋಗಿ ಸ್ವತಃ ತಾನೇ ಮಾಡಿಕೊಳ್ಳಲು ಆಗದಿದ್ದರೆ, ಇತರರ ಸಹಾಯ ಪಡೆಯಲೇಬೇಕು.

ನೀವೇ ಡಾಕ್ಟರ್ಆಗಿಬಿಡಬೇಡಿ!

ನಿಮ್ಮ ಸ್ವಭಾವ ತುಸು ಡಿಫರೆಂಟ್‌ ಎಂದೇ ಇಟ್ಟುಕೊಳ್ಳಿ, ಏನೋ ಕಾರಣಕ್ಕೆ ಡಾಕ್ಟರ್‌ ಹೇಳಿದ ಸಲಹೆ ನಿಮಗೆ ಸರಿಹೋಗಲಿಲ್ಲ ಅಂತಿಟ್ಟುಕೊಳ್ಳಿ, ಆಗ ಕ್ಲಿನಿಕ್‌ ನಲ್ಲಿ ಜೋರು ಜೋರಾಗಿ ಈ ಬಗ್ಗೆ ಚರ್ಚಿಸಲು ಹೋಗಬೇಡಿ! ಅನಿವಾರ್ಯ ಎನಿಸಿದಾಗ, ಮತ್ತೊಬ್ಬ ವೈದ್ಯರನ್ನು ಕಂಡು, ಆ ಬಗ್ಗೆ ಸೆಕೆಂಡ್‌ ಒಪೀನಿಯನ್‌ ಪಡೆಯುವುದರಲ್ಲಿ ತಪ್ಪಿಲ್ಲ.

ನೀವು ಹಳೆಯ ರೋಗಿಯೇ ಇರಬಹುದು, ಹಾಗೆಂದ ಮಾತ್ರಕ್ಕೆ ರೋಗಗಳ ಕುರಿತು ನಿಷ್ಣಾತರಾದ ವೈದ್ಯರ ಮುಂದೆ, ನೀವೇ ಮತ್ತೊಬ್ಬ ಡಾಕ್ಟರ್‌ ಆಗಿ ಹಾಗೇ.... ಹೀಗೇ.... ಎಂದು ವಾದಿಸಲು ಹೋಗಬೇಡಿ. ಎಷ್ಟೋ ಮಂದಿ ಬಾಯಿ ಜೋರು ಮಾಡಿ, ಇಂಜೆಕ್ಷನ್‌ ಕೊಡಿ ಡಾಕ್ಟರ್‌, ಬೇಗ ವಾಸಿ ಆಗಲಿ, 3 ದಿನ ಬಿಟ್ಟು ಊರಿಗೆ ಹೋಗಬೇಕು, ಎಂದೆಲ್ಲ ದಬಾಯಿಸುವುದೂ ಇದೆ. ಎಷ್ಟೋ ಸೀನಿಯರ್‌ ರೋಗಿಗಳು ವೈದ್ಯರಿಗೇ ಸಲಹೆ ನೀಡುವ ಮಟ್ಟಕ್ಕೆ ವಾದ ಮಾಡುತ್ತಾರೆ.

ರಾಮಣ್ಣ ತಾವು FB‌, ಇನ್‌ ಸ್ಟಾ, ವಾಟ್ಸ್ ಆ್ಯಪ್‌ ಮೆಸೇಜ್‌ ಗಳಲ್ಲಿ ಗಮನಿಸಿದ ಔಷಧಿಗಳ ಬಗ್ಗೆ ಒತ್ತಾಯ ಮಾಡುತ್ತಾ, ಅದನ್ನೇಕೆ ತೆಗೆದುಕೊಳ್ಳಬಾರದು, ನೀವು ಹೇಳಿದ್ದೇ ಏಕೆ ಬೇಕು ಅಂತೆಲ್ಲ ವಾದಿಸುತ್ತಾರೆ. ಸೋಶಿಯಲ್ ಮೀಡಿಯಾದ ಎಷ್ಟು ಮಂದಿ ಅದನ್ನೇ ಬಳಸುತ್ತಾರೆ ಎಂಬ ಲೆಕ್ಕಾ ನೀಡಲಿಕ್ಕೂ ಅವರು ಹಿಂಜರಿಯುವುದಿಲ್ಲ.

ರಾಮಣ್ಣನ ಈ ಮಾತಿಗೆ, ಅವರ ವಯಸ್ಸು ಗಮನಿಸಿ ಡಾಕ್ಟರ್‌ ನಕ್ಕು ಸುಮ್ಮನಾಗಬಹುದು, ಬೇರೇನೋ ಸಮಜಾಯಿಷಿ ನೀಡಬಹುದು. ಆದರೆ ರಾಮಣ್ಣ ಮಾಡಿದ ಅವಾಂತರಕ್ಕೆ ವೈದ್ಯರ ಸಿಬ್ಬಂದಿ ಪೂರ್ತಿ ಅವರ ಮೇಲೆ ಕೋಪಗೊಳ್ಳಬಹುದು, ಏನೋ ತಿಳಿಯದವರು ಎಂದು ನಗಾಡಬಹುದು. ಆದ್ದರಿಂದ ಇಂಥ ಗೊಡವೆ ಬೇಡ, ಡಾಕ್ಟರ್‌ ಸಲಹೆ ಪಡೆಯಿರಿ, ಅವರಿಗೇ ಸಲಹೆ ನೀಡಬೇಡಿ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ