ಒಂದು ಸಮೀಕ್ಷೆಯ ಪ್ರಕಾರ, ವಿಶ್ವದಲ್ಲಿನ ಸಾವಿನ ಪ್ರಮಾಣ ಹೆಚ್ಚಲು ಹೃದ್ರೋಗಗಳೇ ಕಾರಣವಂತೆ! ಋತು ಬದಲಾವಣೆಯ ಕಾರಣ, ಹೆಚ್ಚು ಕೊರೆಯುವ ಚಳಿ ಅಥವಾ ಅತಿಯಾಗಿ ಕಾಡುವ ಬಿಸಿಲು, ನಮ್ಮ ಹೃದಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂಕಿ ಸಂಖ್ಯೆ ಗಮನಿಸಿದರೆ, ಇತರ ರೋಗಗಳಾದ ಸ್ಟ್ರೋಕ್, ಕ್ಯಾನ್ಸರ್, ಉಸಿರಾಟದ ತೊಂದರೆ ಇತ್ಯಾದಿಗೆ ಹೋಲಿಸಿದಾಗ ಅವುಗಳಲ್ಲಿ ಹಾರ್ಟ್ ಅಟ್ಯಾಕ್ ನ ಪಾಲೇ ಹೆಚ್ಚು.
ಅಧಿಕ ತಾಪಮಾನದ ತೊಂದರೆಗಳು
ಈ ಕುರಿತಾಗಿ ದೇಶದ ಖ್ಯಾತ ಹೃದ್ರೋಗ ತಜ್ಞರ ಅಭಿಪ್ರಾಯ ಎಂದರೆ, ನಮ್ಮ ದೇಹದಲ್ಲಿ ತಾಪಮಾನವನ್ನು ನಿಯಂತ್ರಿಸುವಂಥ ಪ್ರಾಕೃತಿಕ ಸಾಮರ್ಥ್ಯ ಇದ್ದೇ ಇರುತ್ತದೆ, ಇದನ್ನೇ ಥರ್ಮೋ ರೆಗ್ಯುಲೇಶನ್ ಅಂತಾರೆ. ಇದನ್ನು ಹೈಪೊಥ್ಯಾಲಮಸ್ ಮೂಲಕ ನಿಯಂತ್ರಿಸಲಾಗುತ್ತದೆ. ಮೆದುಳಿನ ಒಂದು ಭಾಗ, ದೇಹದ ಆಂತರಿಕ ಭಾಗದ ತಾಪಮಾನವನ್ನು ಸದಾ ಕಾಯ್ದುಕೊಳ್ಳಲು, ಥರ್ಮೋಸ್ಟ್ಯಾಟ್ ರೂಪದಲ್ಲಿ ಸತತ ಕೆಲಸ ನಿರ್ವಹಿಸುತ್ತಲೇ ಇರುತ್ತದೆ. ವ್ಯಾಯಾಮ ಅಥವಾ ಬೇಸಿಗೆ ಕಾರಣ ದೇಹದ ತಾಪಮಾನ ಹೆಚ್ಚಿದಾಗ, ಹೈಪೊಥ್ಯಾಲಮಸ್ ಬೆವರು ಹಾಗೂ ವಾಸೊಡಿಲೇಶನ್ (ರಕ್ತನಾಳಗಳ ಹಿಗ್ಗಿಸುವಿಕೆ) ಮೂಲಕ, ದೇಹದ ಅಧಿಕ ತಾಪಮಾನವನ್ನು ಹೊರ ದಬ್ಬುತ್ತದೆ. ಹೀಗೆ ದೇಹ ತಣ್ಣಗಾಗಲು ಸಾಧ್ಯವಾಗುತ್ತದೆ.
ತೀವ್ರ ಚಳಿಯ ವಾತಾವರಣದಲ್ಲಿ ದೇಹದ ಉಷ್ಣತೆ ತೀರಾ ತಗ್ಗಿದಾಗ, ಹೈಪೊಥ್ಯಾಮಸ್, ದೇಹದ ಉಷ್ಣತೆ ಕಾಪಾಡಲು, ಅದನ್ನು ಬಿಸಿ ಮಾಡಿಸಲು, ನಡುಕ ಮೂಡಿಸುತ್ತದೆ! ರಕ್ತನಾಳಗಳನ್ನು ತುಸು ಸಂಕುಚಿತಗೊಳಿಸುತ್ತದೆ. ಈ ಸ್ವಯಂಚಾಲಿಕ ಪ್ರಕ್ರಿಯೆ ದೇಹದ ಒಂದು ಸ್ಥಿರ ತಾಪಮಾನ ಕಾಯ್ದುಕೊಳ್ಳಲು ನೆರವಾಗುತ್ತದೆ, ದೇಹದ ಅಂಗಾಂಗ ಮತ್ತು ಪ್ರಣಾಳಿಕೆ (ಸಿಸ್ಟಂ) ಸರಿಯಾಗಿ ಕೆಲಸ ಮಾಡತ್ತಿದೆ ತಾನೇ ಎಂದು ಗಮನಿಸಿಕೊಳ್ಳುತ್ತದೆ.
ತಾಪಮಾನದ ಮೇಲೆ ಪರಿಣಾಮ
ನಮ್ಮ ದೇಹದ ತಾಪಮಾನದ ಮೇಲೆ ಆದ ಆಕಸ್ಮಿಕ ಪರಿಣಾಮ, ಹೃದಯದ ಮೇಲೆ ಒತ್ತಡ ಬೀರುತ್ತದೆ. ಅತ್ಯಧಿಕ ತಾಪಮಾನದಲ್ಲಿ ದೇಹ ತಂಪು ಅಥವಾ ಬಿಸಿ ಹೆಚ್ಚಿಸಲು, ರಕ್ತ ಸಂಚಾರವನ್ನು ಚರ್ಮದ ತಲೆಯಿಂದ ಒತ್ತಡಪೂರ್ವಕ ತಿರುಗಿಸುತ್ತದೆ. ಇದರಿಂದ ರಕ್ತನಾಳಗಳು ಹಿಗ್ಗಿ ಅಥವಾ ಕುಗ್ಗಿ ದಣಿಯುತ್ತವೆ, ಇದರಿಂದಾಗಿ ಹೃದಯದ ಮೇಲೆ ಅತ್ಯಧಿಕ ಒತ್ತಡ ಬೀಳುತ್ತದೆ. ಉದಾ : ಬೇಸಿಗೆಯಲ್ಲಿ, ದೇಹವನ್ನು ತಂಪಾಗಿಸಲು, ಚರ್ಮಕ್ಕೆ ರಕ್ತ ಪಂಪ್ ಮಾಡಲು, ಹೃದಯ ಅತ್ಯಧಿಕ ಕಷ್ಟ ಪಡಬೇಕಾಗುತ್ತದೆ. ಇದರಿಂದ ಹೃದಯದ ಬಡಿತ, BPಸಹಜವಾಗಿಯೇ ಹೆಚ್ಚುತ್ತದೆ.
ಇಷ್ಟು ಮಾತ್ರವಲ್ಲದೆ, ಬೇಸಿಗೆಯಲ್ಲಿ ತೀವ್ರ ಧಗೆ ಹೆಚ್ಚಿದಾಗ, ಅತಿ ಸುಸ್ತು, ಸನ್ ಸ್ಟ್ರೋಕ್ ನ ಅಪಾಯ ಹೆಚ್ಚುತ್ತದೆ. ಜೊತೆಗೆ ಹೃದಯಕ್ಕೆ ಅತ್ಯಧಿಕ ಟ್ಯಾಕ್ಸ್ ಹೇರಲಾಗುತ್ತದೆ. ಇದರಿಂದಾಗಿ ಹೃದಯದ ಬಡಿತದಲ್ಲಿ ಏರುಪೇರು, ಹೃದ್ರೋಗ, ಹಾರ್ಟ್ ಅಟ್ಯಾಕ್ ಹೆಚ್ಚುತ್ತದೆ. ಇದೇ ತರಹ ಕೊರೆಯುವ ಚಳಿಯಲ್ಲಿ, ಹೃದಯ ದೇಹಕ್ಕೆ ಅಗತ್ಯ ಶಾಖ ನೀಡಲು ಹೆಚ್ಚುವರಿ ದುಡಿಯಬೇಕಾಗಿ ಬರುತ್ತದೆ, ಇದರಿಂದಲೂ BPಯಲ್ಲಿ ಏರುಪೇರು ಮಾಮೂಲಿ.
ಅಧ್ಯಯನಗಳಿಂದ ತಿಳಿದ ವಿಚಾರ ಎಂದರೆ, ಹೆಚ್ಚುತ್ತಿರುb ತಾಪಮಾನ ಮತ್ತು ಕಾರ್ಡಿಯೊ ವ್ಯಾಸ್ಕ್ಯುಲಾರ್ ಕಾರಣಗಳಿಂದ ಆಗುವ ಅಪಾಯ, ಸಾವುಗಳಿಗೆ ಒಂದು ಲಿಂಕ್ ಇದೆ. ಅಧಿಕ ಕಾರ್ಡಿಯೋ ವ್ಯಾಸ್ಯುಲಾರ್ ಸಾವು 35-45 ಡಿಗ್ರಿ ತಾಪಮಾನದಲ್ಲೇ ಆಗುತ್ತದೆ. ಇತ್ತೀಚಿನ ಒಂದು ಅಧ್ಯಯನದಿಂದ ತಿಳಿದುಬಂದದ್ದು, ಪ್ರತಿ 100 ಕಾರ್ಡಿಯೋ ವ್ಯಾಸ್ಕ್ಯುಲಾರ್ ಸಾವುಗಳಲ್ಲಿ 1-2 ಕೇಸುಗಳಲ್ಲಿ ಸ್ಕ್ಯಾಮಿಕ್ ಹೃದ್ರೋಗ, ಸ್ಟ್ರೋಕ್, ಹಾರ್ಟ್ ಫೇಲ್ಯೂರ್ ಅಥವಾ ಅರಿಥ್ ಮಿಯಾಗಳ ಕಾರಣ ಅತ್ಯಧಿಕ ಉಷ್ಣತೆ ಅಥವಾ ತೀವ್ರ ಕೊರೆಯುವ ಶೀತದಿಂದಾಗಿ ಆಗಿರುತ್ತದೆ.