ಬೂಕರ್‌ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಾನು ಮುಷ್ತಾಕ್ ಕಾರ್ಯಕ್ರಮವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರಕ್ಕೆ ಚಪ್ಪಲಿ ಧರಿಸಿಕೊಂಡು ಪುಷ್ಪ ನಮನ ಸಲ್ಲಿಸಿದ್ದು ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ ವಿವಾದಕ್ಕೆ ಕಾರಣವಾಗಿದೆ.

ಮಂಡ್ಯದ ಅಂಬೇಡ್ಕರ್ ಭವನದಲ್ಲಿ, ರಾಜ್ಯ ದಲಿತ ಸಂಘರ್ಷ ಸಮಿತಿ, ಎಂ.ಬಿ.ಶ್ರೀನಿವಾಸ್‌ ಪ್ರತಿಷ್ಠಾಪನಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಅವರು ಚಪ್ಪಲಿ ಧರಿಸಿಕೊಂಡು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ. ಭಾನು ಅವರು ಚಪ್ಪಲಿ ಹಾಕಿರುವುದನ್ನು ಗಮನಿಸಿದ ಕಾರ್ಯಕ್ರಮ ಸಂಘಟಕರು, ಚಪ್ಪಲಿಯನ್ನ ತೆಗೆದು ಪುಷ್ಪನಮನ ಸಲ್ಲಿಸುವಂತೆ ಹೇಳಿದರು.

ಆದರೆ ಬಾನುಮುಷ್ತಾಕ್‌ ಅದಕ್ಕೆ ಒಪ್ಪದೆ ಹಾಗೆಯೇ ಪುಷ್ಪನಮನ ಸಲ್ಲಿಸಿದ್ದಾರೆ ಎಂದು ವರದಿಯಾಗಿತ್ತು. ಅಲ್ಲದೆ ಚಪ್ಪಲಿ ಹೊಲಿಯುವುದು ನಮ್ಮ ವೃತ್ತಿ. ಅದು ನಮ್ಮ ಮನೆ ದೇವರು. ನಮ್ಮ ಅಸ್ಮಿತೆಯ ಸಂಕೇತ, ನಾವು ಚಪ್ಪಲಿ ಹೊಲಿಯುವವರು. ನಮಗೆ ಅದರ ಬಗ್ಗೆ ಅಪಾರ ಗೌರವ ಇದೆ. ನಾನು ಚಪ್ಪಲಿ ಬಿಚ್ಚುವುದಿಲ್ಲ ಎಂದು ಹೇಳಿದ್ದರು ಎಂದು ಸಹ ಸುದ್ದಿಯಾಗಿತ್ತು.

ಬಾನು ಸ್ಪಷ್ಟನೆ:  ಚಪ್ಪಲಿ ಮನೆ ದೇವರು ಎಂದು ನಾನು ಹೇಳಿಲ್ಲ, ಮಾಧ್ಯಮದ ವರದಿಗಾರರು ಕಪೋಲಕಲ್ಪಿತ ವರದಿ ಮಾಡಿದ್ದಾರೆ. ನಾವು ಹಾಗೆ ಹೇಳಿದ್ದರೆ ಪುರಾವೆಗಳನ್ನು ನೀಡಲಿ ಎಂದು ಬಾನು ಮುಷ್ತಾಕ್ ಫೇಸ್ ಬುಕ್ ನಲ್ಲಿ ಸವಾಲು ಹಾಕಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ